ಕೆಲವೇ ವರ್ಷಗಳಲ್ಲಿಯೇ ಈ ಇಬ್ಬರು ನಟಿಯರು ಸಂಪೂರ್ಣವಾಗಿ ಬದಲಾಗಿದ್ದಾರೆ. ಕಿನ್ನರಿ ಧಾರಾವಾಹಿಯ ವೀಕ್ಷಕರು ಅಂದು ನಾವು ನೋಡಿದ್ದು ಇವರೇನಾ? ಅಬ್ಬಾ ಏನಿದು ಬದಲಾವಣೆ ಅಂತ ಹೇಳುತ್ತಿದ್ದಾರೆ.
ಬೆಂಗಳೂರು: ಬ್ರಹ್ಮಗಂಟು ಧಾರಾವಾಹಿಯ ನಟಿ ದೀಪಾ ಮತ್ತು ಹಾಟ್ ಚೆಲುವೆ ಜ್ಯೋತಿ ರೈಗೂ ಲಿಂಕ್ ಇದೆ. ಕೆಲವೇ ವರ್ಷಗಳಲ್ಲಿ ಇಬ್ಬರ ಗೆಟಪ್ ಸಂಪೂರ್ಣ ಬದಲಾಗಿದೆ. ಕ್ಯೂಟ್ ಹುಡುಗಿಯಾಗಿ ಗಮನ ಸೆಳೆದಿದ್ದ ದೀಪಾ, ಇದೀಗ ಬ್ರಹ್ಮಗಂಟು ಸೀರಿಯಲ್‌ನಲ್ಲಿ ಹೊಸ ಲುಕ್ ಜೊತೆ ಪ್ರೇಕ್ಷಕರ ಬಂದಿದ್ದಾರೆ. ಇದೇನಾ ಆ ಕ್ಯೂಟ್ ಹುಡುಗಿ ಎಂದು ಧಾರಾವಾಹಿ ವೀಕ್ಷಕರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ದೀಪಾ ನಿಜವಾದ ಹೆಸರು ದಿಯಾ ಪಾಲಕ್ಕಲ್. ಇತ್ತ ಜ್ಯೋತಿ ರೈ ಸಹ ಧಾರಾವಾಹಿಗಳಲ್ಲಿ ಹೋಮ್ಲಿ ಪಾತ್ರದಲ್ಲಿಯೇ ಮಿಂಚಿದ್ದರು. ಆದರೆ ರಿಯಲ್ ಲೈಫ್‌ನಲ್ಲಿ ಸಂಪೂರ್ಣ ಭಿನ್ನವಾಗಿದ್ದಾರೆ. ತುಂಡುಡುಗೆ ಧರಿಸಿರುವ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಜ್ಯೋತಿ ರೈ ಸದ್ದು ಮಾಡುತ್ತಿರುತ್ತಾರೆ. ಕೆಲ ದಿನಗಳ ಹಿಂದೆಯಷ್ಟೇ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸಹ ವೈರಲ್ ಆಗಿತ್ತು. ಆನಂತರ ವೈರಲ್ ಆಗಿರುವ ವಿಡಿಯೋದಲ್ಲಿರೋದು ನಾನಲ್ಲ ಎಂದು ಜ್ಯೋತಿ ರೈ ಸ್ಪಷ್ಟಪಡಿಸಿದ್ದರು.
2015-19ರ ಅವಧಿಯಲ್ಲಿ ಪ್ರಸಾರಗೊಳ್ಳುತ್ತಿದ್ದ ಕಿನ್ನರಿ ಧಾರಾವಾಹಿಯಲ್ಲಿ ದಿಯಾ ಪಾಲಕ್ಕಲ್ ಮತ್ತು ಜ್ಯೋತಿ ರಾಯ್ ನಟಿಸಿದ್ದರು. ಸುಧಾ ಪಾತ್ರದಲ್ಲಿ ನಟಿಸಿದ್ದ ಜ್ಯೋತಿ ರಾಯ್ ಅವರನ್ನು ಕಂಡು ಗೃಹಿಣಿ ಅಂದ್ರೆ ಹೀಗಿರಬೇಕು ಎಂದು ಹೇಳುತ್ತಿದ್ದರು. ಸೌಮ್ಯ ಪಾತ್ರದಲ್ಲಿಯೇ ನಟಿಸಿದ್ದ ಜ್ಯೋತಿ ರೈ ಸಿಂಪಲ್ ಲುಕ್ ಸಹ ನೋಡುಗರಿಗೆ ಇಷ್ಟವಾಗಿತ್ತು. ಇದೇ ಧಾರಾವಾಹಿಯಲ್ಲಿ ಜ್ಯೋತಿ ರಾಯ್‌ಗೆ ಮಗಳಾಗಿ ದಿಯಾ ಪಾಲಕ್ಕಲ್ ನಟಿಸಿದ್ದರು. ಪುಟಾಣಿ ಹುಡುಗಿಯಾಗಿ ಮಿಂಚಿದ್ದ ದಿಯಾ ಇಂದು ಧಾರಾವಾಹಿಯ ಲೀಡ್ ರೋಲ್‌ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
Diya Palakkal : ಅಂದು ‘ಕಿನ್ನರಿ’ಯಲ್ಲಿ ಬಾಲನಟಿಯಾಗಿದ್ದ ಈಕೆ ಇಂದು ಬ್ರಹ್ಮಗಂಟು ಧಾರಾವಾಹಿ ನಾಯಕಿ
ಇನ್ನು ಜ್ಯೋತಿ ರಾಯ್ ಸಹ ತುಂಬಾನೇ ಬದಲಾಗಿದ್ದಾರೆ. ತೆಲಗು ಧಾರಾವಾಹಿಯ ನಿರ್ದೇಶಕನನ್ನು ಮದುವೆಯಾಗಿರುವ ಜ್ಯೋತಿ ರೈ ತಮ್ಮ ಬೋಲ್ಡ್ ಲುಕ್‌ನಿಂದಲೇ ಫೇಮಸ್ ಆಗುತ್ತಿದ್ದಾರೆ. ಈ ಬಾರಿಯ ಬಿಗ್‌ಬಾಸ್ ಶೋನ ಆಫರ್ ಸಹ ಜ್ಯೋತಿ ರೈ ಅವರನ್ನು ತಲುಪಿತ್ತು. ಆದ್ರೆ ಈ ಆಫರ್ ತಿರಸ್ಕರಿಸೋದಾಗಿ ಹೇಳಿದ್ದು, ನಾನು ಬಿಗ್‌ಬಾಸ್ ಸೇರಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.
ಬ್ರಹ್ಮಗಂಟು ಸೀರಿಯಲ್‌ನಲ್ಲಿ ದಿಯಾ ಪಾಲಕ್ಕಲ್ ಅವರನ್ನು ಕಪ್ಪಾಗಿ ತೋರಿಸಲಾಗಿದೆ. ಮದುವೆಯಲ್ಲಿ ಅಕ್ಕ ರೂಪಾ ಕೈಕೊಟ್ಟು ಓಡಿ ಹೋಗಿದ್ದರಿಂದ ಮನೆಯ ಮರ್ಯಾದೆ ಉಳಿಸಲು ದೀಪಾ ಹಸೆಮಣೆ ಏರುತ್ತಾಳೆ. ಗಂಡನ ಮನೆಯಲ್ಲಿ ಕಪ್ಪು ಎಂಬ ಕಾರಣಕ್ಕೆ ದೀಪಾ ಎಲ್ಲರಿಂದಲೂ ತಿರಸ್ಕಾರಕ್ಕೆ ಒಳಗಾಗುತ್ತಿರುತ್ತಾರೆ. ಪದೇ ಪದೇ ಎಲ್ಲರಿಂದಲೂ ದೀಪಾ ಅವಮಾನಕ್ಕೆ ಒಳಗಾಗುತ್ತಿರುತ್ತಾಳೆ. ಮನೆಯಲ್ಲಿರುವ ಎಲ್ಲಾ ಸದಸ್ಯರ ವಿಶ್ವಾಸವನ್ನು ದೀಪಾ ಹೇಗೆ ಗಳಿಸುತ್ತಾಳೆ ಎಂಬವುದು ಧಾರಾವಾಹಿಯ ಕಥೆಯಾಗಿದೆ.
ಹೆಜ್ಜೆಹೆಜ್ಜೆಗೂ ಬಾಡಿಶೇಮಿಂಗ್ ಅನುಭವಿಸ್ತಿರೋ ಬ್ರಹ್ಮಗಂಟು ನಾಯಕಿ ದೀಪಾ ನಿಜಜೀವನ ಗೊತ್ತಾ?