ಲಕ್ಷ್ಮೀ ಬಾರಮ್ಮ ಸೀರಿಯಲ್ ಖ್ಯಾತಿಯ ಅನಿಕಾ ಸಿಂಧ್ಯ, ತಮ್ಮ ಜೀವನ, ನಟ ದರ್ಶನ್ ಕುರಿತು ಸಂದರ್ಶನದಲ್ಲಿ ಹೇಳಿದ್ದೇನು?
ಲಕ್ಷ್ಮೀ ಬಾರಮ್ಮ ಸೇರಿದಂತೆ 50ಕ್ಕೂ ಅಧಿಕ ಸೀರಿಯಲ್ಗಳಲ್ಲಿ ನಟಿಸಿ, ಸುಮಾರು ಎಂಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿರೊ ನಟಿ ಅನಿಕಾ ಸಿಂಧ್ಯ. ಯಾಹೂ, ಜೊತೆಜೊತೆಯಲಿ, ನೆನಪಿರಲಿ ಮುಂತಾದ ಹಿಟ್ ಸಿನಿಮಾಗಳನ್ನು ನೀಡಿದ್ದರೂ, ನನ್ನಂಥವಳಿಗೆ ಸಿನಿಮಾ ಇಂಡಸ್ಟ್ರಿ ಉಸಾಬರಿಯೇ ಬೇಡ ಎಂದುಕೊಂಡು ಸಿನಿಮಾದಿಂದ ಹೊರಕ್ಕೆ ಬಂದು ಸೀರಿಯಲ್ಗಳಲ್ಲಿಯೇ ಮಿಂಚುತ್ತಿರುವ ಅನಿಕಾ ಅವರು ಸೀರಿಯಲ್ ಪ್ರೇಮಿಗಳ ಫೆವರೆಟ್ ವಿಲನ್ ಕೂಡ ಹೌದು. ಏಕೆಂದರೆ ಈಗ ನಟಿಸಿರುವ ಹಲವಾರು ಸೀರಿಯಲ್ಗಳಲ್ಲಿ ಇವರದ್ದು ನೆಗೆಟಿವ್ ರೋಲ್ಗಳೇ. ಒಂದು ನೆಗೆಟಿವ್ ರೋಲ್ ಹಿಟ್ ಆಯಿತು ಎಂದಾಕ್ಷಣ ಸಹಜವಾಗಿ ಅದೇ ರೋಲ್ಗಳು ನಟ-ನಟಿಯರನ್ನು ಹುಡುಕಿ ಬರುವುದು ಇದೆ. ಅವರಿಗೆ ಇಷ್ಟ ಇರಲಿ, ಇಲ್ಲದೇ ಇರಲಿ, ಇಂಥ ರೋಲ್ ಮಾಡುವುದು ಅನಿವಾರ್ಯ ಎನ್ನುವ ಸನ್ನಿವೇಶವೂ ಎದುರಾಗಿಬಿಡುತ್ತದೆ. ಅಂಥವರಲ್ಲಿ ಒಬ್ಬರು ಅನಿಕಾ.
ಇದೀಗ ಅವರು ರಾಜೇಶ್ ಗೌಡ ಅವರ ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಜೀವನದ ಕೆಲವು ವಿಷಯಗಳನ್ನು ಹಾಗೂ ಮನದಾಳದ ಮಾತುಗಳನ್ನು ತೆರೆದಿಟ್ಟಿದ್ದಾರೆ. ಅಂದಹಾಗೆ ನಟಿ, ಮೊದಲು ನಟಿಸಿದ್ದು, ಯಾಹೂ ಚಿತ್ರದಲ್ಲಿ. ಮಂಗಳೂರಿನ ದೈವದ ಕುರಿತು ಈ ಚಿತ್ರದಲ್ಲಿ ನಟಿಸಿ ಫೇಮಸ್ ಆಗಿದ್ದರು ನಟಿ. ಬಳಿಕ ದರ್ಶನ್ ಅವರ ತೂಗುದೀಪ ಪ್ರೊಡಕ್ಷನ್ನಲ್ಲಿ ತೆರೆಕಂಡ ಜೊತೆ ಜೊತೆಯಲ್ಲಿ ಚಿತ್ರದಲ್ಲಿ ಶರಣ್ ಅವರ ನಾಯಕಿಯಾದರು. ನಟ ದರ್ಶನ್ ಜೊತೆಯೂ ಇವರು ಕೆಲಸ ಮಾಡಿದ್ದಾರೆ. ನಟ ದರ್ಶನ್ ಅವರನ್ನು ಸಿನಿಮಾ ಸಂದರ್ಭಗಳಲ್ಲಿ ತೀರಾ ಹತ್ತಿರದಿಂದ ನೋಡಿರುವ ಅನಿಕಾ ಅವರು ದರ್ಶನ್ ಅವರನ್ನು ಹಾಡಿ ಕೊಂಡಾಡಿದ್ದಾರೆ. ಅವರು ತುಂಬಾ ಒಳ್ಳೆಯ ವ್ಯಕ್ತಿ. ಅವರನ್ನು ನೋಡಿದಾಗಲೆಲ್ಲಾ ನನಗೂ ಇಂಥದ್ದೇ ಗಂಡ ಸಿಗಲಪ್ಪ ಎಂದುಕೊಳ್ಳುತ್ತಿದ್ದೆ, ಮದುವೆಯಾದರೆ ಇಂಥವರೇ ಸಿಗಲಿ ಎಂದು ಅಂದುಕೊಳ್ಳುತ್ತಿದ್ದೆ. ಅವರು ಪತ್ನಿಯನ್ನು ನಡೆಸಿಕೊಳ್ಳುತ್ತಿದ್ದ ರೀತಿ ನನಗೆ ತುಂಬಾ ಇಷ್ಟವಾಗಿತ್ತು ಎಂದಿದ್ದಾರೆ.
undefined
ನಿವೇದಿತಾ ಜೊತೆ ಸಂಬಂಧ ಹೀಗಿತ್ತಾ? ದಾಂಪತ್ಯದ ನೋವು ತೋಡಿಕೊಂಡಿದ್ದ ಚಂದನ್ ಶೆಟ್ಟಿ ವಿಡಿಯೋ ವೈರಲ್!
ಇದೇ ಸಂದರ್ಶನದಲ್ಲಿ ರಮ್ಯಾ ಸೇರಿದಂತೆ ಕೆಲವು ಚಿತ್ರ ತಾರೆಯರ ಬಗ್ಗೆಯೂ ಮಾತನಾಡಿರುವ ಅನಿಕಾ ಅವರು, ನಟಿ ರಮ್ಯಾ ಅವರ ಸಿಂಪ್ಲಿಸಿಟಿಯನ್ನು ತುಂಬಾ ಮೆಚ್ಚಿಕೊಂಡಿದ್ದಾರೆ. ನಾಯಕಿಯಾಗಿ ಚಿತ್ರರಂಗಕ್ಕೆ ಬಂದು ವಿಲನ್ ಆಗಿ ಮಿಂಚುತ್ತಿರುವ ಬಗ್ಗೆ ತಿಳಿಸಿರುವ ಅನಿಕಾ, "ನಾನು ನಾಯಕಿ ಆಗಬೇಕು ಎಂದು ಸಿನಿಮಾಕ್ಕೆ ಬಂದಿದ್ದೆ. ಆದರೆ ಅಲ್ಲಿ ನಡೆದ ಕೆಲವು ಘಟನೆಗಳು ಹಾಗೂ ಅಲ್ಲಿಯೇ ಮುಂದುವರೆಯಲು ಹೆಣ್ಣೊಬ್ಬಳಿಗೆ ಬೇಕಾದ ಕ್ವಾಲಿಟಿ ಎಲ್ಲಾ ಗಮನಿಸಿ, ನನ್ನಂಥವಳಿಗೆ ಸಿನಿಮಾ ಆಗಿಬರಲ್ಲ ಎಂದು ಹೊರಕ್ಕೆ ಬಂದೆ. ಸೀರಿಯಲ್ನಲ್ಲಿ ವಿಲನ್ ರೋಲೇ ಹೆಚ್ಚಾಗಿ ಸಿಕ್ಕಿಬಿಟ್ಟವು. ಆರಂಭದಲ್ಲಿಯೇ ಕಾದಂಬರಿ ಧಾರಾವಾಹಿಯಲ್ಲಿಯೇ ನೆಗೆಟಿವ್ ಶೇಡ್ ಮಾಡಿದೆ. ಅಲ್ಲಿಂದ ಶುರುವಾದ ನೆಗೆಟಿವ್ ರೂಲ್ ನಿಲ್ಲಲೇ ಇಲ್ಲ. ಯಾವಾಗಲೂ ವಿಲನ್ ರೋಲ್ಗೇ ಅವಕಾಶ ಬರುತ್ತಿದೆ. ಇದರಿಂದ ನನ್ನ ನೈಜ ಜೀವನದ ಮೇಲೂ ಎಫೆಕ್ಟ್ ಆದಂಥ ಪ್ರಸಂಗಗಳೂ ನಡೆದಿವೆ ಎಂದಿದ್ದಾರೆ ನಟಿ.
ಈ ಹಿಂದೆ ಕೂಡ ಅನಿಕಾ ಈ ಬಗ್ಗೆ ನೋವು ತೋಡಿಕೊಂಡಿದ್ದರು. ರಿಯಲ್ ಲೈಫ್‌ನಲ್ಲಿ ಕೂಡ ನಾನು ಹೀಗೆ ಎಂದು ಹಲವರು ಅಂದುಕೊಂಡುಬಿಟ್ಟಿದ್ದಾರೆ. ಹೊರಗಡೆ ಜನ ನನ್ನ ಜೊತೆ ಮಾತನಾಡಲು ಹೆದರುವ ಪ್ರಸಂಮಗಗಳೂ ನಡೆದಿವೆ. ನನ್ನ ಸ್ನೇಹಿತರು ನನ್ನ ಬಳಿ ಬಂದು ನಮ್ಮ ಮನೆಯ ಹಿರಿಯರು ದ್ವೇಷಿಸುವ ರೀತಿ ಆಗಿಬಿಟ್ಟಿದೆ. ಸೀರಿಯಲ್ಗಳ ಪಾತ್ರ ವೀಕ್ಷಕರು ಶಾಪ ಹಾಕಿದ್ದೂ ಆಗಿದೆ. ಈಕೆ ವಿಲನ್, ನಮ್ಮ ಕುಟುಂಬಕ್ಕೆ ಹೊಂದಿಕೊಳ್ಳೋದಿಲ್ಲ ಎಂದು ಮದುವೆ ಪ್ರಪೋಸಲ್ಗಳೂ ತಿರಸ್ಕೃತಗೊಂಡಿವೆ ಎಂದು ಈ ಹಿಂದೆ ನಟಿ ಸಂದರ್ಶನದಲ್ಲಿ ಹೇಳಿದ್ದರು. ಅನಿಕಾ ಅವರು, ಅತ್ತೆ, ಅಕ್ಕ ಹಾಗೂ ಚಿಕ್ಕಮ್ಮನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇವೆಲ್ಲವುಗಳಲ್ಲಿಯೂ ನೆಗೆಟಿವ್ ರೋಲ್ಗಳೇ ಹೆಚ್ಚು.
ಬಿಗ್ಬಾಸ್ನಿಂದ ಹೊರಬರಲು ಕೊನೆಗೂ ಕಾರಣ ನೀಡಿದ ಸುದೀಪ್: ಅಭಿಮಾನಿಗಳ ಪ್ರಶ್ನೆಗೆ ಸಿಕ್ಕಿತು ಉತ್ತರ...