‘ಲಕ್ಷ್ಮೀ ನಿವಾಸ’ ನಟಿ ಶ್ವೇತಾ ದಾಂಪತ್ಯ ಜೀವನಕ್ಕೆ16 ವರ್ಷ... ಮದುವೆಯ ಅಪರೂಪದ ಫೋಟೊಗಳು ಇಲ್ಲಿವೆ

Published : Feb 23, 2025, 03:35 PM ISTUpdated : Feb 23, 2025, 04:25 PM IST
‘ಲಕ್ಷ್ಮೀ ನಿವಾಸ’ ನಟಿ ಶ್ವೇತಾ ದಾಂಪತ್ಯ ಜೀವನಕ್ಕೆ16 ವರ್ಷ... ಮದುವೆಯ ಅಪರೂಪದ ಫೋಟೊಗಳು ಇಲ್ಲಿವೆ

ಸಾರಾಂಶ

ಚೈತ್ರದ ಪ್ರೇಮಾಂಜಲಿ ಖ್ಯಾತಿಯ ನಟಿ ಶ್ವೇತಾ, ತಮ್ಮ 16ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಈ ಸಂಭ್ರಮದಲ್ಲಿ, ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪತಿ ಶ್ರೀಧರ್ ಜೊತೆಗಿನ ದಾಂಪತ್ಯ ಜೀವನದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.  

ಚೈತ್ರದ ಪ್ರೇಮಾಂಜಲಿ, ಕರ್ಪೂರದ ಗೊಂಬೆ ಮೊದಲಾದ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ, ಕನ್ನಡ ಸಿನಿಮಾಗಳಿಂದಲೇ ದೂರ ಉಳಿದು, ಇದೀಗ ಲಕ್ಷ್ಮೀ ನಿವಾಸ ಸೀರಿಯಲ್ (Lakshmi Nivasa Serial)ಮೂಲಕ ಕನ್ನಡಿಗರಿಗೆ ತಮ್ಮ ಅಭಿನಯದ ಮೂಲಕ ಮನರಂಜನೆ ನೀಡುತ್ತಿರುವ ನಟಿ ಶ್ವೇತಾ ಆಲಿಯಾಸ್ ವಿನೋಧಿನಿ. ನಟಿ ಶ್ವೇತಾ ಇಂದು ತಮ್ಮ 16ನೇ ವಿವಾಹ ವಾರ್ಷಿಕೋತ್ಸವವನ್ನು (wedding anniversary) ಆಚರಿಸುತ್ತಿದ್ದು, ತಮ್ಮ ಮದುವೆ ದಿನದ ಸಂಭ್ರಮದ ಕ್ಷಣಗಳಲ್ಲಿ ತೆಗೆದಿರುವ ಫೋಟೊಗಳನ್ನು ನಟಿ ವಿಡಿಯೋ ಮಾಡಿ ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಶೇರ್ ಮಾಡಿದ್ದಾರೆ. 

ಲಕ್ಷ್ಮೀ ನಿವಾಸ ಸೀರಿಯಲ್ ಲಕ್ಷ್ಮೀ ರಿಯಲ್‌ ಲೈಫಲ್ಲೂ ಕಷ್ಟಗಳ ಕಾರ್ಮೋಡ, ಆ ದುರಂತದ ಬಗ್ಗೆ ನಟಿ ಶ್ವೇತಾ ಏನು ಹೇಳ್ತಾರೆ ಕೇಳಿ..

ಶ್ವೇತಾ ತಮ್ಮ ಮದುವೆಯ ಹಳೆಯ ಫೋಟೋಗಳನ್ನ ಶೇರ್ ಮಾಡಿದ್ದಾರೆ. ಮದುವಣಗಿತ್ತಿಯಾಗಿ ಶ್ವೇತಾ (Shwetha), ಅಯ್ಯಂಗಾರ್ ಶೈಲಿಯ ಧಿರಿಸಿನಲ್ಲಿ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ಹಲವು ಫೋಟೊಗಳನ್ನು ಜೊತೆಯಾಗಿ ಸೇರಿಸಿ ವಿಡಿಯೋ ಮಾಡಿರುವ ನಟಿ ಈ ಕುರಿತು ವಿಡೀಯೋ ಜೊತೆ ಕ್ಯಾಪ್ಶನ್ ಕೂಡ ಹಾಕಿರುವ ಶ್ವೇತಾ ಹ್ಯಾಪಿ ಆನಿವರ್ಸರಿ, 16 ವರ್ಷದ ದಾಂಪತ್ಯ ಜೀವನ. ನಾವು ನಿಮ್ಮನ್ನು ಪ್ರೀತಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ. ನಟಿ ಶ್ವೇತಾ ಅವರ ಪತಿಯ ಹೆಸರು ಶ್ರೀಧರ್. ಈ ದಂಪತಿಗಳು ಇಬ್ಬರು ಮಕ್ಕಳು ಕೂಡ ಇದ್ದಾರೆ. ಪತಿ ಶ್ರೀಧರ್ ಗೆ ಅಪಘಾತವಾಗಿ ಹಲವು ಸಮಯ ಹಾಸಿಗೆ ಹಿಡಿದಿದ್ದು, ನಟಿ ತುಂಬಾನೆ ಕಷ್ಟ ಪಟ್ಟಿದ್ದರು. ಸದ್ಯ ಅವರು ಚೇತರಿಸಿಕೊಂಡಿದ್ದಾರೆ. ಸದ್ಯಕ್ಕೆ ನಟಿ ಸಿನಿಮಾ, ಸೀರಿಯಲ್ ನಟನೆಗಳಲ್ಲಿ ಬ್ಯುಸಿಯಾಗಿದ್ದಾರೆ. 

Lakshmi Nivasa : ಇದರಲ್ಲಿ ಎಲ್ಲ ಓಕೆ, ಲಕ್ಷ್ಮಿ ಮಾತಿಗೂ, ಆ್ಯಕ್ಟಿಂಗ್ ಗೂ ಸಿಂಕ್ ಆಗ್ತಿಲ್ಲ ಬದಲಾಯಿಸಿ ಅಂತಿದ್ದಾರೆ ಫ್ಯಾನ್ಸ್!

ನಟಿ ಶ್ವೇತಾ ತಮಿಳು ಮೂಲದವರಾಗಿದ್ದು, 1992 ರಲ್ಲಿ ಚೈತ್ರದ ಪ್ರೇಮಾಂಜಲಿ (Chaithrada Premanjali) ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು, ನಂತರ ಗೆಜ್ಜೆ ನಾದ, ಹೆತ್ತವರು, ಕರ್ಪೂರದ ಗೊಂಬೆ, ಮಿನುಗುತಾರೆ, ಲಕ್ಷ್ಮೀ ಮಹಾಲಕ್ಷ್ಮೀ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಇವರು ಕನ್ನಡದ ಜೊತೆಗೆ ತಮಿಳು ಹಾಗೂ ಮಲಯಾಲಂ ಸಿನಿಮಾಗಳಲ್ಲೂ ನಟಿಸಿದ್ದಾರೆ. ತಮಿಳು ಕಿರುತೆರೆಯಲ್ಲೂ ಸಹ ಈ ನಟಿ ನಟಿಸಿದ್ದಾರೆ. 


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?