Kwatle Kitchen ಸೇರಿದ ಬಿಗ್ ಬಾಸ್ ರಕ್ಷಿತಾ ಶೆಟ್ಟಿ, ಸೂರಜ್ ಸಿಂಗ್… Promo ನೋಡಿ ಫ್ಯಾನ್ಸ್ ಖುಷ್

Published : May 17, 2026, 02:35 PM IST
Kwatle kitchen

ಸಾರಾಂಶ

Kwatle Kitchen: ಕುಕ್ಕ್ ಮತ್ತು ಕಿರಿಕ್ ಗಳು ಜೊತೆಯಾಗಿ ಸೇರಿ ಅಡುಗೆ ಮಾಡಿವ ರಿಯಾಲಿಟಿ ಶೋ ‘ಕ್ವಾಟ್ಲೆ ಕಿಚನ್’ ಸೀಸನ್ 2 ಪ್ರೊಮೋ ಇದೀಗ ರಿಲೀಸ್ ಆಗಿದ್ದು, ಪ್ರೊಮೋದಲ್ಲಿ ರಕ್ಷಿತಾ ಶೆಟ್ಟಿ, ಸೂರಜ್ ಸಿಂಗ್ ಹಾಗೂ ನಂದಗೋಕುಲದ ಮೀನಾ ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. 

ಶೀಘ್ರದಲ್ಲಿ ಶುರುವಾಗಲಿದೆ ಕ್ವಾಟ್ಲೆ ಕಿಚನ್ ಸೀಸನ್ 2

ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಈಗಾಗಲೇ ಕ್ವಾಟ್ಲೆ ಕಿಚನ್ ಸೀಸನ್ 1 ಭರ್ಜರಿ ಮನರಂಜನೆ ನೀಡಿತ್ತು. ಇದೀಗ ಶೀಘ್ರದಲ್ಲಿ ‘ಕ್ವಾಟ್ಲೆ ಕಿಚನ್ ಸೀಸನ್ 2’ ಶುರುವಾಗುವ ಸೂಚನೆ ಸಿಕ್ಕಿದ್ದು, ಈಗಾಗಲೇ ಪ್ರೊಮೋ ರಿಲೀಸ್ ಆಗಿದ್ದು, ಪ್ರೊಮೋದಲ್ಲಿ ರಕ್ಷಿತಾ ಶೆಟ್ಟಿ, ಸೂರಜ್ ಸಿಂಗ್ ಮೊದಲಾದವರನ್ನು ನೋಡಿ ವೀಕ್ಷಕರು ಸಿಕ್ಕಾಪಟ್ತೆ ಖುಷಿಯಾಗಿದ್ದಾರೆ. ಈ ಬಾರಿಯ ಕ್ವಾಟ್ಲೆ ಕಿಚನ್ ಭರ್ಜರಿ ಮನರಂಜನೆ ನೀಡಲಿದೆ ಎನ್ನುತ್ತಿದ್ದಾರೆ ಜನ.

ಏನಿದೆ ಪ್ರೊಮೋದಲ್ಲಿ?

ಪ್ರೊಮೋ ಸಖತ್ ಮಜವಾಗಿದೆ ಬಂದಿದೆ. ಸೂರಜ್ ಸಿಂಗ್, ರಕ್ಷಿತಾ ಶೆಟ್ಟಿ, ನಂದ ಗೋಕುಲದ ಮೀನಾ ಪಾತ್ರಧಾರಿ ಮೇಘಾ, ಓಂ ಪ್ರಕಾಶ್ ರಾವ್, ಮಂಗಳ ಗೌರಿ ಖ್ಯಾತಿಯ ಕಾವ್ಯಾಶ್ರೀ ಗೌಡ ಒಂದು ಗುಂಪು ಕಟ್ಟಿಕೊಂಡು, ತಮಗೆ ತೊಂದರೆ ಕೊಡುವವರನ್ನು ಹೇಗೆ ಸದೆ ಬಡೆಯೋದು ಎನ್ನುವ ಪ್ಲ್ಯಾನ್ ಮಾಡುತ್ತಿರುತ್ತಾರೆ. ಆವಾಗ ರಕ್ಷಿತಾ ಎಂತ ಗೊತ್ತುಂಟಾ ಗಯ್ಸ್ ನಾವು ಹೆದರುವ ತನಕ ಅವರು ನಮಗೆ ಹೆದರಿಸ್ತಾ ಇರ್ತಾರೆ, ಚಾಕು ಇದೆ ಅಂತ ಕೈಯಲ್ಲಿ ತೆಗೋಬಾರ್ದು, ಕಾದು ಕಚ ಕಚ ಮಾಡಿ ಕತ್ತರಿಸಬೇಕು ಎನ್ನುತ್ತಾರೆ. ಆವಾಗ ಕಾವ್ಯಾ ಬೆಂಕಿಯಲ್ಲಿ ಬೆಂದೋಗ್ತೀವಿ ಅಂತ ಭಯ ಬೇಡ, ನಾವೇ ಸುಟ್ಟಾಕ್ ಬಿಡೋಣ ಎನ್ನುತ್ತಾರೆ. ಇನ್ನು ಮೇಘಾ ಕಣ್ಣಲ್ಲಿ ನೀರು ಬರಿಸಿದ್ರೆ ಸಿಗ್ತಾಕ್ ಬಿಡೋಣ ಎನ್ನುತ್ತಾರೆ. ಅದೇ ಸಂದರ್ಭದಲ್ಲಿ ಇನ್ನೊಂದು ಕಡೆ ಕ್ವಾಟ್ಲೆಗಳ ಗ್ಯಾಂಗ್ ತುಕಾಲಿ ಸಂತೋಷ್, ಟ್ಯಾಲೆಂಟ್ ಕಲಾವಿದ, ಕರಿಬಸಪ್ಪ ಮಾತನಾಡುತ್ತಾ, ಅವರು ಶುಂಠಿ, ಈರುಳ್ಳಿ ಕತ್ತರಿಸೋದು ಹೇಗೆ ಎಂದು ಯೋಚ್ನೆ ಮಾಡ್ತಿದ್ದಾರೆ. ನಮ್ಮ ಏರಿಯಾಗೆ ಬರ್ತಾರಲ್ಲ ಆವಾಗ ನೋಡ್ಕೊಳ್ಳೋಣ ಎನ್ನುತ್ತಾ ಜೋರಾಗಿ ನಗುತ್ತಾರೆ. ಇದು ಹೊಸ ಸೀಸನ್ ಪ್ರೊಮೋ.

ರಕ್ಷಿತಾ, ಸೂರಜ್ ನೋಡಿ ವೀಕ್ಷಕರು ಫುಲ್ ಖುಷ್

ಕ್ವಾಟ್ಲೆ ಕಿಚನ್ ನಲ್ಲಿ ರಕ್ಷಿತಾ ಶೆಟ್ಟಿಯನ್ನು ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ರಕ್ಷಿತಾ ಬಿಗ್ ಬಾಸ್ ಬಳಿಕ ಬೇರೆಲ್ಲೂ ಕಾಣಿಸಿಕೊಂಡಿಲ್ಲ. ಹಾಗಾಗಿ ಇದೀಗ ಮತ್ತೆ ಕನ್ನಡ ಕಿರುತೆರೆಯಲ್ಲಿ ಅವರನ್ನು ಅದರಲ್ಲೂ ಕಿಚನ್ ನಲ್ಲಿ ನೋಡಿ ಸಂಭ್ರಮಿಸಿದ್ದಾರೆ. ಇನ್ನು ಸೂರಜ್ ಸಿಂಗ್, ಮೇಘಾ ಅಂತೂ ಧಾರಾವಾಹಿಗಳ ಮೂಲಕ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಅವರನ್ನು ಮತ್ತೆ ರಿಯಾಲಿಟಿ ಶೋನಲ್ಲಿ ನೋಡಿ ಖುಷಿ ಪಟ್ಟಿದ್ದಾರೆ ಫ್ಯಾನ್ಸ್.

ಏನಿದು ಕುಕ್ಕಿಂಗ್ ಶೋ?

ಕ್ವಾಟ್ಲೆ ಕಿಚನ್ (Kwatle Kitchen) ಎನ್ನುವುದು ಕ್ವಾಟ್ಲೆಗಳ ಜೊತೆಗೆ ಕುಕ್ ಗಳು ಅಡುಗೆ ಮಾಡುವಂತಹ ರಿಯಾಲಿಟಿ ಶೋ. ಇದರಿಂದ ಕಾಮಿಡಿಯೇ ಹೆಚ್ಚು, ಸೀರಿಯಸ್ ನೆಸ್ ಕಡಿಮೆ. ಕ್ವಾಟ್ಲೆ ಕೊಡ್ತಾನೇ ಕುಕ್ಕಿಂಗ್ ಮಾಡಿಸೋದು ಈ ಶೋದ ಪ್ರಾಮುಖ್ಯತೆ. ಇಲ್ಲಿ ಕುಕ್ಕಿಂಗ್ ಮಾಡೋದಕ್ಕೆ ಜನಪ್ರಿಯ ಹಾಗೂ ಅಡುಗೆ ಗೊತ್ತಿರುವ ಕಲಾವಿದರು ಇರುತ್ತಾರೆ. ಇನ್ನು ಇವರಿಗೆ ಸಹಾಯ ಮಾಡೋದಕ್ಕೆ ಅಡುಗೆಯ ಬಗ್ಗೆ ಗೊತ್ತೇ ಇರದ ಕ್ವಾಟ್ಲೆಗಳು ಇರುತ್ತಾರೆ. ಕಳೆದ ವರ್ಷ ಕನ್ನಡದ ಹಿರಿಯ ನಟಿ ಶೃತಿ ತೀರ್ಪುಗಾರರಾಗಿದ್ದರು, ಜೊತೆಗೆ ಪ್ರಸಿದ್ದ ಚೆಫ್ ಕೌಶಿಕ್ ಈ ಶೋದಲ್ಲಿ ತೀರ್ಪುಗಾರರು ಆಗಿದ್ದರು. ಅಲ್ಲದೇ ಅನುಪಮಾ ಗೌಡ ಕಾರ್ಯಕ್ರಮ ನಿರೂಪಣೆ ಮಾಡಿದ್ದರು. ಈ ಬಾರಿ ಅವರೇ ಇರುತ್ತಾರೋ? ಅಥವಾ ಬದಲಾಗುತ್ತಾರೋ ಕಾದು ನೋಡಬೇಕು.

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಜ್ಜಿ ಹೆಸ್ರೂ ಅಲ್ಲ, ಏನೂ ಅಲ್ಲ: ಮಗಳಿಗೆ ಶಾರದಾ ಹೆಸರು ಇಟ್ಟಿರುವ ಹಿಂದಿನ ಕುತೂಹಲ ತೆರೆದಿಟ್ಟ ನಟಿ Neha Gowda
PHOTOS: ರಿಯಲ್‌ ಆಗಿ ಹೊಸಜೀವನಕ್ಕೆ ಕಾಲಿಟ್ಟ Amruthadhaare Serial ನಟಿ; ದಿಯಾ ಥರ ಅಂತೂ ಇಲ್ವೇ ಇಲ್ಲ!