103 ಡಿಗ್ರಿ ಜ್ವರ ಇದ್ರೆ ಕೈ ನಡುಗದೇ ಏನ್ ಆಗುತ್ತೆ?; ವಿಶಾಲ್ ಆರೋಗ್ಯದ ಬಗ್ಗೆ ಸ್ಪಷ್ಟನೆ ಕೊಟ್ಟ ನಟಿ ಖುಷ್ಬೂ

By Vaishnavi Chandrashekar  |  First Published Jan 11, 2025, 7:31 PM IST

ವಿಶಾಲ್‌ಗೆ ಏನಾಗಿದೆ? ಕುಡಿತದಿಂದ ಆರೋಗ್ಯ ಕೆಟ್ಟಿದೆ ಎಂದು ಕಾಮೆಂಟ್ ಮಾಡುತ್ತಿದ್ದವರಿಗೆ ಉತ್ತರ ಕೊಟ್ಟ ಖುಷ್ಬೂ...


ಕೆಲವು ದಿನಗಳ ಹಿಂದೆ ಮದಗಜರಾಜ ಸಿನಿಮಾ ಪ್ರೀ-ರಿಲೀಸ್ ಕಾರ್ಯಕ್ರಮ ನಡೆಯಿತ್ತು. ಚಿತ್ರನಟ ವಿಶಾಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸುಮಾರು 10 ವರ್ಷಗಳ ನಂತರ ಸಿನಿಮಾ ರಿಲೀಸ್ ಆಗುತ್ತಿದ್ದ ಸಂಭ್ರಮದಲ್ಲಿ ಇಡೀ ಚಿತ್ರತಂಡವಿದೆ ಆದರೆ ವಿಶಾಲ್ ಎಂಟ್ರಿ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಇದೇನು ವಿಶಾಲ್ ಕೈಯಲ್ಲಿ ಮೈ ಹಿಡಿಯಲು ಕಷ್ಟ ಪಡುತ್ತಿದ್ದಾರೆ, ಮಾತನಾಡಲು ಕಷ್ಟ ಪಡುತ್ತಿದ್ದಾರೆ ಎಂದು ಫ್ಯಾನ್ಸ್ ಶಾಕ್ ಆಗಿದ್ದಾರೆ. ವಿಶಾಲ್ ಆರೋಗ್ಯದ ಬಗ್ಗೆ ಸಾಕಷ್ಟು ಗಾಸಿಪ್‌ಗಳು ಹಬ್ಬಿತ್ತು ಆದರೆ ಖುಷ್ಬೂ ಮಾತ್ರ ಸತ್ಯವನ್ನು ವಿವರಿಸಿದ್ದಾರೆ.

'ವಿಶಾಲ್ ಅವರಿಗೆ ಡೆಂಗ್ಯೂ ಫೀವರ್ ಇತ್ತು. ಈ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಅವತ್ತು ಕಾರ್ಯಕ್ರಮದಲ್ಲಿ ನೋಡಿ ಶಾಕ್ ಆಗಿತ್ತು. 12 ವರ್ಷಗಳ ಹಿಂದಿನ 'ಮದಗಜರಾಜ' ಸಿನಿಮಾ ಬಿಡುಗಡೆ ಆಗುತ್ತಿದೆ. ಆ ಚಿತ್ರದಲ್ಲಿ ಎಷ್ಟು ಚೆನ್ನಾಗಿ ನಟಿಸಿದ್ದರು. ಎಷ್ಟು ಖಡಕ್ ಆಗಿದ್ದರು ಆದರೆ ಇವತ್ತು ಜ್ವರದಿಂದ ಬಳಲುತ್ತಿದ್ದರು. ಬಹಳ ಸುಸ್ತಾಗಿದ್ದರು. ಅಷ್ಟು ಜ್ವರ ಇದ್ದರೂ ಯಾಕೆ ಬಂದೆ ಎಂದು ಕೇಳಿದೆ. ಇಲ್ಲ 11 ವರ್ಷಗಳ ಬಳಿಕ ನನ್ನ ಸಿನಿಮಾ ಬರ್ತಿದೆ. ನಾನು ಇಲ್ಲದೆ ಇದ್ದರೆ ಹೇಗೆ ಎಂದು ಬಂದೆ. ಅವರನ್ನು ಆ ಸ್ಥಿತಿಯಲ್ಲಿ ನೋಡಿ ಬೇಸರ ಆಯ್ತು. ಕಾರ್ಯಕ್ರಮ ಮುಗಿದ ಬೆನ್ನಲ್ಲೇ ಆಸ್ಪತ್ರೆಗೆ ಕರೆದದೊಯ್ದು ಡ್ರಿಪ್ಸ್ ಹಾಕಿಸಿದ್ದೆವು. ಈಗ ಅರಾಮಾಗಿದ್ದಾರೆ. ಚೇತರಿಸಿಕೊಳ್ಳುತ್ತಿದ್ದಾರೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಖುಷ್ಬೂ ಮಾತನಾಡಿದ್ದಾರೆ.

Tap to resize

Latest Videos

ಹೊರ ರಾಜ್ಯಕ್ಕೆ ತೆರಳಲು ಅನುಮತಿ ಬೇಡಿದ ಪವಿತ್ರಾ ಗೌಡ; ಟ್ರಿಪ್ ಅಲ್ಲ ತೀರ್ಥಯಾತ್ರೆಗಂತೆ

ಡೆಂಗ್ಯೂ ಜ್ವರ ಆಗಿದ್ದರಿಂದ ನಡುಗುತ್ತಿದ್ದರು. 103% ಜ್ವರ ಇತ್ತು. ಇಷ್ಟು ಜ್ವರ ಇದ್ದರೆ ಖಂಡಿತಾ ಮೈ ನಡುಗುತ್ತದೆ ಎಂದು ಖುಷ್ಬು ಹೇಳಿದ್ದಾರೆ. 'ಅದೇನೋ ಗೊತ್ತಿಲ್ಲ ನಮ್ಮಿಬ್ಬರ ನಡುವೆ ಉತ್ತಮ ಒಟನಾಟವಿದೆ. ನಾವಿಬ್ಬರೂ ಯಾವುದೇ ಚಿತ್ರದಲ್ಲಿ ನಟಿಸಿಲ್ಲ. ಒಂದು ಪಾರ್ಟಿಯಲ್ಲಿ ಭೇಟಿ ಆಗಿದ್ದೆವು. ಬಳಿಕ ಸ್ನೇಹ ಮುಂದುವರೆಯಿತು. ಆತನ ನಟನೆ ಸಿನಿಮಾ ಅಂದ್ರೆ ಇಷ್ಟ' ಎಂದು ಖುಷ್ಬೂ ಹೇಳಿದ್ದಾರೆ. 

15 ನಿಮಿಷಗಳಲ್ಲಿ ತಿರುಪತಿ ಕಾಲ್ತುಳಿತದಿಂದ ಪಾರಾದ ನಟಿ ಶುಭ್ರ ಅಯ್ಯಪ್ಪ ದಂಪತಿ

ನಟ ವಿಶಾಲ್ ಅವರ ಅನಾರೋಗ್ಯದ ಬಗ್ಗೆ ನಟ ಜಯಂ ರವಿ ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ವಿಶಾಲ್ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ. "ವಿಶಾಲ್ ಮತ್ತೆ ಸಿಂಹದಂತೆ ಮರಳಿ ಬರುತ್ತಾರೆ. ವಿಶಾಲ್‌ಗೆ ಈಗ ಕಷ್ಟದ ಸಮಯ. ಆದರೆ ವಿಶಾಲ್‌ಗಿಂತ ಧೈರ್ಯವಂತರು ಯಾರೂ ಇಲ್ಲ. ಆ ಧೈರ್ಯ ಅವರನ್ನು ಕಾಪಾಡುತ್ತದೆ. ಅವರು ಅನೇಕರಿಗೆ ಸಹಾಯ ಮಾಡಿದ್ದಾರೆ. ಅವರ ಒಳ್ಳೆಯ ಮನಸ್ಸಿನಿಂದ ಅವರು ಶೀಘ್ರದಲ್ಲೇ ಮತ್ತೆ ಸಿಂಹದಂತೆ ಮರಳಿ ಬರುತ್ತಾರೆ" ಎಂದು ಜಯಂ ರವಿ ಹೇಳಿದ್ದಾರೆ. 

click me!