
ಬೆಂಗಳೂರು (ಅ.22): ಇಂದು ಗೋಲ್ಡನ್ ಸ್ಟಾರ್ ಆಗಿ ಜನಪ್ರಿಯರಾಗಿರುವ ನಟ ಗಣೇಶ್, ಒಂದು ಕಾಲದಲ್ಲಿ ಕಿರುತೆರೆಯ ಜನಪ್ರಿಯ ಸೆಲೆಬ್ರಿಟಿ. ತಮ್ಮ 20 ವರ್ಷಗಳ ಸಿನಿ ಜೀವನದ ಸಂಭ್ರಮವನ್ನು ಆಂಕರ್ ಅನುಶ್ರೀ ಅವರ ಯೂಟ್ಯೂಬ್ ಚಾನೆಲ್‌ನ ವಿಶೇಷ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಇಂದು ಸ್ಯಾಂಡಲ್‌ವುಡ್‌ನ ಸ್ಟಾರ್ ನಟನಾಗಿರುವ ಗಣೇಶ್, ಒಂದು ಕಾಲದಲ್ಲಿ ಉದಯ ಟಿವಿಯ ಕಾಮಿಡಿ ಟೈಮ್ ಗಣೇಶ್ ಆಗಿದ್ದರು. ಆ ನಂತರ ಬಂದ ಮುಂಗಾರು ಮಳೆ ಅವರ ಜೀವನವನ್ನೇ ಬದಲಿಸಿತು. ಈ ಎಲ್ಲಾ ನೆನಪುಗಳನ್ನು ಅವರು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಇದೇ ವೇಳೆ, ತಮಗೆ ಬಹಳ ಜನಪ್ರಿಯತೆ ತಂದುಕೊಟ್ಟಿದ್ದ ಉದಯ ಟಿವಿಯ ಕಾಮಿಡಿ ಟೈಮ್ ಪ್ರೋಗ್ರಾಮ್‌ಅನ್ನು ಮಾಡಲೇಬಾರದು ಎಂದು ಗಣೇಶ್ ಪಣ ತೊಟ್ಟಿದ್ದರಂತೆ. ಆದರೆ, ಏನೇ ಪ್ರಯತ್ನ ಮಾಡಿದ್ರೂ ಅದು ಸಾಧ್ಯವಾಗಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
'ನಾನು 20ನೇ ವರ್ಷಕ್ಕೆ ಬೆಂಗಳೂರಿಗೆ ಬಂದಿದ್ದೆ. ರಾಮಮಂದಿರಲ್ಲಿ ಕುಮಾರ್ ಎನ್ನುವವರ ಮನೆಯಲ್ಲಿ ಉಳಿದಿದ್ದೆ. 'ನಾನು ಮನೆ ಬಿಟ್ಟು ಬರ್ತಾ ಇದ್ದೇನೆ. ಸ್ವಲ್ಪ ದಿನ ನಿನ್ನ ರೂಮ್‌ನಲ್ಲಿ ಇರೋಕೆ ಜಾ ಕೊಡ್ತೀಯಾ ಅಂತಾ ಕೇಳಿದ್ದೆ'. ಎಲ್ಲವೂ ಆರಂಭವಾಗಿದ್ದು ಅಲ್ಲಿಂದ ಎಂದು ಗಣೇಶ್ ಹಳೇ ನೆನಪುಗಳಿಗೆ ಜಾರಿದ್ದಾರೆ. ಚಿಕ್ಕಪುಟ್ಟ ಸೀರಿಯಲ್ ಮೂಲಕ ಕೆರಿಯರ್ ಆರಂಭಿಸಿದೆ. ಆದರೆ, ಎಲ್ಲೇ ಸ್ಕ್ರೀನ್ ಟೆಸ್ಟ್‌ಗೆ ಕರೆದರೂ ನಾನು ಹೋಗುತ್ತಿದೆ. ತುಂಬಾ ಸೀರಿಯಸ್ ಆಗಿ ನೀಡ್ತಿದ್ದ ಸ್ಕ್ರೀನ್ ಟೆಸ್ಟ್‌ನಲ್ಲಿ ನಾನು ಪಾಸ್ ಆಗ್ತಾನೆ ಇರ್ಲಿಲ್ಲ. ಅದೇ ಸುಮ್ ಸುಮ್ನೆ ಹೋಗಿ ಕೊಟ್ಟಿದ್ದ ಸ್ಕ್ರೀನ್ ಟೆಸ್ಟ್‌ನಲ್ಲಿ ಪಾಸ್ ಆಗ್ತಿದ್ದೆ. 'ಆ ಹುಡುಗ ಚೆನ್ನಾಗಿ ಮಾಡ್ತಾನೆ. ಅವನನ್ನ ಕರೀರಿ' ಅಂತಾ ಹೇಳುತ್ತಿದ್ದರು.
ಇನ್ನು ಕಾಮಿಡಿ ಟೈಮ್ ಕೂಡ ಹಾಗೇ ನಾನು ಸೀರಿಯಸ್ ಆಗಿ ಮಾಡಬೇಕು ಅಂತಾ ಮಾಡಿದ್ದಲ್ಲ. ಅದಾಗಲೇ ನಾನು ಸಿನಿಮಾ ಕಡೆ ಬಂದು ಬಿಟ್ಟಿದ್ದೆ. ಮೊದಲ ಸಿನಿಮಾದಲ್ಲಿ ವಿಲನ್ ಆಗಿ ಮಾಡಿದ್ದೆ. ನಂತರದ ಸಿನಿಮಾದಲ್ಲಿ ಸ್ನೇಹಿತನ ರೋಲ್ ಮಾಡಿದ್ದೆ. ಹಾಗೇ ಕೆಲವೊಂದು ಪಾತ್ರಗಳು ಸಿಗ್ತಾ ಇದ್ದವು. ಆ ಟೈಮ್‌ನಲ್ಲಿ ಏನಾಯ್ತು ಅಂದ್ರೆ, ಉದಯ ಟಿವಿಯಿಂದ ನನಗೆ ಫೋನ್ ಬಂದಿತ್ತು. ಈ ಥರ ಒಂದು ಶೋ ಇದೆ. ನೀವು ನಡೆಸಿಕೊಡಬೇಕು ಅಂದರು.
ಮೊದಲಿಗೆ ಇದನ್ನ ರವಿಶಂಕರ್ ಗೌಡ ಮಾಡಬೇಕಿತ್ತು. ಅವರಿಗೆ ಮೊದಲು ಫೋನ್ ಮಾಡಿ. ನೀವು ಇದನ್ನು ಮಾಡ್ತೀರಾ ಅಂತಾ ಹೇಳಿದ್ದಾರೆ. ಆದರೆ, ಆಗ ಅವರು ಬಹಳ ಬ್ಯುಸಿ. ಸಿಲ್ಲಿ ಲಲ್ಲಿ ಸೇರಿದಂತೆ ಬಹಳ ಸೀರಿಯಲ್ ಮಾಡ್ತಿದ್ದರು. ಆಗ ಅವರನ್ನೇ ಚಾನೆಲ್‌ನವರು ಕೇಳಿದ್ದಾರೆ. ಒಳ್ಳೆ ಮಾತುಗಾರ ಆಗಿರಬೇಕು. ನೋಡೋಕೆ ಚೆನ್ನಾಗಿರಬೇಕು. ಆ ರೀತಿಯ ಹುಡುಗರು ಯಾರಾದರೂ ಇದ್ದರೆ ತಿಳಿಸಿ ಅಂತಾ ಹೇಳಿದಾಗ ಅವರು, 'ಗಣೇಶ್ ಅಂತಾ ಒನ್ನ ಇದ್ದಾನೆ. ಸರಿ ಮಾತಾಡ್ತಾನೆ. ಒಳ್ಳೆ ಕಿಲಾಡಿ. ಅವರನ್ನ ಕಾಂಟಾಕ್ಟ್ ಮಾಡಿ ಎಂದು ಹೇಳಿದ್ದರು.
ಅದರಂತೆ ಚಾನೆಲ್‌ನಿಂದ ನನಗೆ ಕರೆ ಬಂತು. ಈ ಥರ ಕಾಮಿಡಿ ಟೈಮ್ ಅನ್ನೋ ಕಾರ್ಯಕ್ರಮ. ಫೋನ್ ಮಾಡಿ ಪ್ರ್ಯಾಂಕ್ ಮಾಡಬೇಕು. ದೊಡ್ಡ ಶೋ ಆಗುತ್ತೆ. ಪ್ರೈಮ್ ಟೈಮ್‌ನಲ್ಲಿ ಹಾಕ್ತೇವೆ ಎಂದು ಹೇಳಿದರು. ಆಗ ನಾನು ಇಲ್ಲಿ ಟಿವಿ, ಸೀರಿಯಲ್‌ಗಳಿಗೆ ಕೆಲಸ ಮಾಡೋದಿಲ್ಲ. ಈಗಾಗಲೇ ಅಲ್ಲಿ ಮಾಡಿದ್ದೇನೆ. ಸಿನಿಮಾ ಕಡೆ ಗಮನ ಕೊಡಬೇಕು ಎಂದು ಹೇಳಿ ಬಂದಿದ್ದೆ. ಅದಾದ ಎರಡು ದಿನ ಕಾಲ ಅವರ ಫೋನ್ ಪಿಕ್ ಮಾಡಲೇ ಇಲ್ಲ.
ಹೀಗೇ ನಾನು ಹಾಗೂ ಶ್ರೀನಗರ ಕಿಟ್ಟಿ ನಮ್ಮ ರೂಮ್‌ನಲ್ಲಿ ಕುಳಿತಿದ್ವಿ. ಮಧ್ಯಾಹ್ನ ಮಳೆ ಬರ್ತಾ ಇತ್ತು. ಆಗ ಕಿಟ್ಟಿಗೆ ಹೇಳಿದೆ. ಏನೂ ಕೆಲಸ ಇಲ್ಲ. ಉದಯ ಟಿವಿ ಅವರು ತುಂಬಾ ಫೋನ್ ಮಾಡ್ತಾ ಇದ್ದಾರೆ. ನಾನು ಈವರೆಗೂ ಯಾವುದೇ ಚಾನೆಲ್ ನೋಡಿಲ್ಲ. ಇವತ್ತ ಉದಯ ಟಿವಿಗೆ ಹೋಗಿ ಚಾನೆಲ್ ಹೇಗಿರುತ್ತೆ ಅಂತಾ ನೋಡಿ ಬರೋಣ ಎಂದು ಹೇಳಿದೆ. ಆಗ ಹೋಗಿ ಎರಡು ಎಪಿಸೋಡ್ ಏನೋ ಮಾಡಿದ ನೆನಪು. ಇಷ್ಟೆಲ್ಲ ಮಾಡಿದ ಮೇಲೆ ಈಗ ಇಲ್ಲ ಅಂದ್ರೆ ತಪ್ಪಾಗುತ್ತೆ ಅಂತಾ, ಪೇಮೆಂಟ್ ಮಾತನಾಡಲು ಆರಂಭಿಸಿದೆ.
ಆವಾಗ ಆಂಕರ್‌ಗಳಿ ಹೆಚ್ಚೆಂದರೆ 150 ರೂಪಾಯಿ ಒಂದು ಎಪಿಸೋಡ್‌ಗೆ ಕೊಡ್ತಾ ಇದ್ದರು. ಪೇಮೆಂಟ್ ಜಾಸ್ತಿ ಹೇಳಿದ್ರೆ ಇವರು ನನ್ನ ಬಿಟ್ಟು ಬಿಡ್ತಾರೆ ಅನ್ನೋದು ನನ್ನ ಯೋಚನೆಯಾಗಿತ್ತು. ಆಗ ನಾನು, ಸರ್ ನನಗೆ 1 ಅಥವಾ ಒಂದೂವರೆ ಸಾವಿರ ಕೊಡಿ ಎಂದು ಹೇಳಿದೆ. ಇದನ್ನು ಕೇಳುತ್ತಿದ್ದ ಹಾಗೆ ಅವರು ನಕ್ಕುಬಿಟ್ಟರು. 'ನಮ್ಮ ಬಜೆಟ್‌ಅಲ್ಲಿ ಇಡೀ ದಿನಕ್ಕೂ ಅಷ್ಟು ಕೊಡೋದಿಲ್ಲ. ನಮ್ಮ ಪಾಪ್ಯುಲರ್ ಆಂಕರ್ ಇದ್ದಾರಲ್ಲ ಅವರಿಗೆ ನಾವು ಕೊಡ್ತಿರೋದೇ 200 ರೂಪಾಯಿ ಎಂದರು. ಆದರೆ, ನನಗೆ ಎಸ್ಕೇಪ್ ಆಗಬೇಕಿತ್ತು. ಅದಕ್ಕಾಗಿ ಪಟ್ಟು ಬಿಡಲಿಲ್ಲ. 1 ಸಾವಿರ ರೂಪಾಯಿಗೆ ಕೊಡೋಕೆ ಒಪ್ಪಿಕೊಂಡು ಬಿಟ್ರು.
'ಅಯ್ಯಯ್ಯೋ ಒಪ್ಪಿಕೊಂಡು ಬಿಟ್ರಲ್ಲ' ಅಂದು ಯೋಚನೆ ಮಾಡ್ತಿರೋವಾಗಲೇ, ತಿಂಗಳಿಗೆ 25 ಎಪಿಸೋಡ್ ಅಂದರೆ 25 ಸಾವಿರ ಬರುತ್ತೆ ಅನ್ನೋ ಯೋಚನೆ ಕೂಡ ತಲೇಲಿ ಓಡ್ತಾ ಇತ್ತು. ಆದರೆ, ನಾನು ಸಿನಿಮಾ ಮಾಡುವ ಕನಸಿಟ್ಟುಕೊಂಡವನು. ಮತ್ತೆ ಅವರ ಬಳಿ ಹೋದೆ. ಸರ್ ನಾನು ಸೀರಿಯಲ್ ಮಾಡ್ತಿರುವಾಗ ನನಗೆ ಕನ್ವೀನಿಯೆನ್ಸ್ ಅಂತಾ ಕೊಡ್ತಿದ್ರು ಅಂದೆ. ಎಷ್ಟು ಕೊಡಬೇಕು ಅಂತಾ ಹೇಳಿದರು. 50 ರೂಪಾಯಿ ಕೊಡ್ತೇವೆ ಎಂದರು. ಆಮೇಲೆ, ಸೀರಿಯಲ್‌ಗೆ ಹೋದ್ರೆ ಅಲ್ಲಿ ಊಟ ತಿಂಡಿ ಎಲ್ಲ ಫ್ರೀ ಇರುತ್ತೆ ಅಂದೆ. ಅದಕ್ಕೆ ಅವರು ಇಲ್ಲೇ ಕೆಳಗೆ ವೀರಲಕ್ಷ್ಮೀ ಅಂತಾ ಹೋಟೆಲ್ ಇದೆ. ಅಲ್ಲೇ ಫುಡ್ ಮಾಡಿ ಎಂದರು. ಅಲ್ಲಿಗೆ ನಾನು ಮತ್ತೆ ಮಾತನಾಡುವ ಹಾಗೆ ಇರಲಿಲ್ಲ ಎನ್ನುತ್ತಾ ಕಾಮಿಡಿ ಟೈಮ್ ಆರಂಭವಾದ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ.
ದೇವರು ನಿಮ್ಮ ಜೊತೆಯಲ್ಲಿ ಇದ್ರೆ, ನೀವು ಇದ್ದನ್ನೇ ಮಾಡಬೇಕು ಅಂತಾ ಆತ ತೀರ್ಮಾನ ಮಾಡಿದ್ರೆ. ನಿಮ್ಮ ತಲೆ ಮೇಲೆ ಹೊಡೆದಾದ್ರೂ ಆ ಕೆಲಸ ಮಾಡಿಸ್ತಾನೆ ಅಂತಾ ಆಗ ನನಗೆ ಅನಿಸಿತು. ನೀವು ಅಕ್ಕ-ಪಕ್ಕ ಹೋದ್ರೂ ವಾಪಾಸ್ ಅಲ್ಲೇ ತಂದು ಬಿಡ್ತಾನೆ ಅಂತಾ ಗೊತ್ತಾಯಿತು. ಇದೆಲ್ಲಾ ಆಗಿ ಒಂದು ಐದಾರು ಎಪಿಸೋಡ್ ಆಗಿರಬೇಕು. ಆಗ ನನ್ನ ಬಳಿ ಸುಜುಕಿ ಸಮುರಾಯ್ ಬೈಕ್ ಇತ್ತು. ಡಿವಿಜಿ ರೋಡ್‌ನಲ್ಲಿ ಹೋಗ್ತಾ ಇರೋವಾಗ. ಹೇ ಗಣೇಶ್ ಹೇ ಕಾಮಿಡಿ ಟೈಮ್ ಗಣೇಶ್ ಅಂತಾ ಕರಿಯೋಕೆ ಆರಂಭಿಸಿದ್ದರು. ನನ್ನನ್ನು ಜನ ಗುರುತಿಸೋಕೆ ಆರಂಭಿಸಿದ್ದು ಅಲ್ಲಿ ಗೊತ್ತಾಯಿತು ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.