ಕಿರುತೆರೆಗೆ 'ರಾಣಿ' ಎಂಟ್ರಿ; ರಾಮ್‌ ಜಿ ಆಕ್ಷನ್‌ ಕಟ್‌ನಲ್ಲಿ ಮತ್ತೊಂದು ಸೀರಿಯಲ್

Published : Apr 12, 2023, 09:56 AM IST
 ಕಿರುತೆರೆಗೆ 'ರಾಣಿ' ಎಂಟ್ರಿ; ರಾಮ್‌ ಜಿ ಆಕ್ಷನ್‌ ಕಟ್‌ನಲ್ಲಿ ಮತ್ತೊಂದು ಸೀರಿಯಲ್

ಸಾರಾಂಶ

ಗಗನ್ ಎಂಟರ್‌ ಪ್ರೈಸಸ್‌ನಲ್ಲಿ ಮೂಡಿ ಬರುತ್ತಿದೆ ರಾಣಿ ಸೀರಿಯಲ್. ರಾಮ್‌ಜಿ ಸೂಪರ್ ಹಿಟ್ ಆಕ್ಷನ್ ಕಟ್ ಸೀರಿಯಲ್ ಆರಂಭ....  

ಗಗನ್ ಎಂಟರ್ ಪ್ರೈಸಸ್ ನ ಮೂಲಕ ಕೆ.ಎಸ್ ರಾಮ್ ಜಿ ಅವರು ಕಿರುತೆರೆಯಲ್ಲಿ ಸಾಕಷ್ಟು ವಿಭಿನ್ನ ಹಾಗೂ ವಿಶಿಷ್ಟ ಧಾರಾವಾಹಿಗಳನ್ನು ನಿರ್ಮಿಸಿ , ನಿರ್ದೇಶಿಸಿ ಎಲ್ಲರ ಮನ ಗೆದ್ದಿದ್ದಾರೆ. 'ಪುಟ್ಟ ಗೌರಿ ಮದುವೆ', 'ಗೀತಾ', 'ನಾಗಿಣಿ 2',  'ರಾಮಾಚಾರಿ' ಮುಂತಾದ ಜನಪ್ರಿಯ ಧಾರಾವಾಹಿಗಳು ಕೆ.ಎಸ್ ರಾಮ್ ಜಿ  ಅವರ ಸಾರಥ್ಯದಲ್ಲಿ ಬಂದಿದೆ ಹಾಗೂ ಬರುತ್ತಿದೆ. ಈಗ ಗಗನ್ ಎಂಟರ್ ಪ್ರೈಸಸ್ ಗೆ ಮತ್ತೊಂದು ಹೆಮ್ಮೆ. ಈಗಾಗಲೇ ವಿಶ್ವದ 22 ಕ್ಕೂ ಅಧಿಕ  ಹೆಸರಾಂತ ಕಂಪನಿಗಳ ಜೊತೆ ಸಹಭಾಗಿತ್ವ ಹೊಂದಿರುವ ಬನಿಜಯ್ ಏಷ್ಯಾ ಕಂಪನಿ, ಈಗ ರಾಮ್ ಜಿ ಅವರ ಗಗನ್ ಎಂಟರ್ ಪ್ರೈಸಸ್ ನ ಜೊತೆ ಕೈ ಜೋಡಿಸಿದೆ. ಈ ಎರಡು ಪ್ರಸಿದ್ದ ಕಂಪನಿಗಳ ಸಹಭಾಗಿತ್ವದಲ್ಲಿ 'ರಾಣಿ' ಧಾರಾವಾಹಿ ನಿರ್ಮಾಣವಾಗುತ್ತಿದ್ದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಏಪ್ರಿಲ್ ಮೂರರಿಂದ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ.‌ 

ಬಿಗ್ ಬಾಸ್ ವೇದಿಕೆಯಲ್ಲಿ ನಟ ಮೋಹನ್ ಲಾಲ್‌ಗೆ ಅಗೌರವ; ತಾಳ್ಮೆ ಕಳೆದುಕೊಂಡು ಇದ್ದಕ್ಕಿದ್ದಂತೆ ಹೊರ ನಡೆದ ನಟ

ನಮ್ಮ ಗಗನ್ ಎಂಟರ್ ಪ್ರೈಸಸ್ ಮೂಲಕ ಸಾಕಷ್ಟು ಜನಪ್ರಿಯ ಧಾರಾವಾಹಿಗಳು ಜನರ ಮನ ಗೆಲುತ್ತಿದೆ‌. ಈಗಾಗಲೇ 700ಕ್ಕೂ ಅಧಿಕ ಸಿಬ್ಬಂದಿಗಳು ನಮ್ಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈತನಕ  ಸ್ವಮೇಕ್ ಧಾರಾವಾಹಿಗಳೆ ನಮ್ಮ ಸಂಸ್ಥೆಯಿಂದ ಹೊರಬರುತ್ತಿದೆ.  ಈಗ ಪ್ರಪಂಚದ 120 ದೇಶಗಳಲ್ಲಿ ವಿವಿಧ ಜನಪ್ರಿಯ ಕಾರ್ಯಕ್ರಮಗಳನ್ನು ನಿರ್ಮಿಸುತ್ತಿರುವ ಬನಿಜಯ್ ಏಷ್ಯಾ ಕಂಪನಿ ನಮ್ಮ ಸಂಸ್ಥೆ ಜೊತೆ ಕೈಜೋಡಿಸಿದೆ. ನಮ್ಮೆರೆಡು ಸಂಸ್ಥೆಗಳ ಸಹಭಾಗಿತ್ವದ ಮೊದಲ ಹೆಜ್ಹೆಯಾಗಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ರಾಣಿ' ಧಾರಾವಾಹಿ ನಿರ್ಮಾಣವಾಗುತ್ತಿದೆ. ನಾನೇ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದೇನೆ. ಮುಂದೆ ನೂರು ಕೋಟಿಗೂ ಅಧಿಕ ವೆಚ್ಚದಲ್ಲಿ ವೆಬ್ ಸೀರೀಸ್ ಮಾಡುವ ಯೋಜನೆ ಕೂಡ ಇದೆ. ನಮ್ಮ ಎಲ್ಲಾ ಪ್ರಯತ್ನಗಳಿಗೂ ನಿಮ್ಮ ಬೆಂಬಲವಿರಲಿ ಎಂದರು ಕೆ.ಎಸ್ ರಾಮ್ ಜಿ.

ರಮ್ಯಾ ಇಂಗ್ಲಿಷ್‌, ಪ್ರಭುದೇವ್ ಚಾಮರಾಜನಗರ ಕನ್ನಡ ಬಗ್ಗೆ ವೈರಲ್ ಪೋಸ್ಟ್‌; ರಮೇಶ್ ಅರವಿಂದ್ ಪ್ರತಿಕ್ರಿಯೆ ವೈರಲ್

ಗಗನ್ ಎಂಟರ್ ಪ್ರೈಸಸ್ ಜೊತೆ ಸಹಭಾಗಿತ್ವ ಹೊಂದಿರುವುದು ನಮಗೆ ಖುಷಿ ತಂದಿದೆ. ರಾಮ್ ಜಿ ಅವರು ಹೇಳಿದಂತೆ ಮೊದಲ ಹೆಜ್ಜೆಯಾಗಿ "ರಾಣಿ" ಧಾರಾವಾಹಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿದೆ‌. ಮುಂದೆ ಸಾಕಷ್ಟು ಜನಪ್ರಿಯ  ಧಾರಾವಾಹಿಗಳು, ವೆಬ್ ಸೀರಿಸ್ ಹಾಗೂ ವೀಕೆಂಡ್ ಶೋಗಳನ್ನ ನಿರ್ಮಿಸುವ ಯೋಜನೆ ಇದೆ ಎಂದು ಬನಿಜಯ್ ಏಷ್ಯಾ ಕಂಪನಿಯ ಬ್ಯುಸಿನೆಸ್ ಹೆಡ್ ರಾಜೇಶ್ ಚಡ್ಡಾ ಮತ್ತು ಸೌತ್ ಅಸೋಸಿಯೇಟೆ ಪ್ರೆಸಿಡೆಂಟ್ ಜಗದೀಶ್ ಪಾಟೀಲ್ ಅವರು ತಿಳಿಸಿದರು.

'ರಾಣಿ' ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಕಲಾವಿದರು ಹಾಗೂ ತಂತ್ರಜ್ಞರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!