ಬಿಗ್ ಬಾಸ್ ವೇದಿಕೆಯಲ್ಲಿ ನಟ ಮೋಹನ್ ಲಾಲ್‌ಗೆ ಅಗೌರವ; ತಾಳ್ಮೆ ಕಳೆದುಕೊಂಡು ಇದ್ದಕ್ಕಿದ್ದಂತೆ ಹೊರ ನಡೆದ ನಟ

Published : Apr 11, 2023, 03:13 PM IST
ಬಿಗ್ ಬಾಸ್ ವೇದಿಕೆಯಲ್ಲಿ ನಟ ಮೋಹನ್ ಲಾಲ್‌ಗೆ ಅಗೌರವ; ತಾಳ್ಮೆ ಕಳೆದುಕೊಂಡು ಇದ್ದಕ್ಕಿದ್ದಂತೆ ಹೊರ ನಡೆದ ನಟ

ಸಾರಾಂಶ

ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಸಲ ಶೋ ನಡುವೆ ಹೊರ ನಡೆದ ನಟ ಮೋಹನ್ ಲಾಲ್. 

ಮಲಯಾಳಂ ಕಿರುತೆರೆಯಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಬಿಗ್ ಬಾಸ್ ರಿಯಾಲಿಟಿ ಶೋ ಇತಿಹಾಸದಲ್ಲೇ ಮೊದಲ ಬಾರಿಗೆ ನಂಬಲಾಗದ ಘಟನೆ ನಡೆದಿದೆ. ಸ್ಟಾರ್ ನಟ, ನಿರೂಪಕ ಮೋಹನ್ ಲಾಲ್ ಶೋ ಅರ್ಧದಲ್ಲಿ ಹೊರ ನಡೆದಿದ್ದಾರೆ. ಸ್ಪರ್ಧಿಗಳಿಂದ ಅವಮಾನವಾಗಿ ಎಂದು ಹೇಳಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. 

2021ರಲ್ಲಿ Oru Thathvika Avalokanam ಚಿತ್ರದ ಮೂಲಕ ನಿರ್ದೇಶಕನಾಗಿ ಜರ್ನಿ ಆರಂಭಿಸಿದ ಅಖಿಲ ಮಾರಾರ್ ಸೀಸನ್ 5ರಲ್ಲಿ ಸ್ಪರ್ಧಿಸುತ್ತಿದ್ದಾರೆ. ಈಸ್ಟರ್ ಹಬ್ಬದ ಪ್ರಯುಕ್ತ Egg xiting ಎಂದು ಟಾಸ್ಕ್‌ ನೀಡಲಾಗಿತ್ತು. ಗೇಮ್ ಸೂಪರ್ ಆಗಿತ್ತು ಆದರೆ ಸ್ಪರ್ಧಿಗಳು ಅದನ್ನು ತುಂಬಾ ಕೆಟ್ಟ ರೀತಿಯಲ್ಲಿ ಅಂತ್ಯ ಮಾಡಿದರು. ನಿರ್ದೇಶಕ ಅಖಿಲ್ ಮಾರಾರ್‌ ತಾಳ್ಮೆ ಕಳೆದುಕೊಂಡು ಅಸಭ್ಯವಾಗಿ ವರ್ತಿಸುತ್ತಿರುವುದು ಕಂಡು ಬಂದಿದೆ. ಟಿವಿಯಲ್ಲಿ ಪ್ರಸಾರ ಮಾಡಲಾಗದ ಪದಗಳನ್ನು ಏಂಜಲಿನಾ, ಸಾಗರ್ ಮತ್ತು ಜುನೈಜ್‌ ಮೇಲೆ ಬಳಸಿದ್ದಾರೆ. ಈ ಘಟನೆ ಮೋಹನ್ ಲಾಲ್ ಮುಂದೆ ಚರ್ಚೆ ಆಗುವ ಮುನ್ನವೇ  ಸೋಷಿಯಲ್ ಮೀಡಿಯಾದಲ್ಲಿ ವಾದ- ವಿವಾದ ಸೃಷ್ಟಿ ಆಗಿತ್ತು. ಈ ಘಟನೆಯನ್ನು ಇನ್ನಿತರ ಸ್ಪರ್ಧಿಗಳು ಮೋಹನ್‌ ಲಾಲ್‌ ಮುಂದೆ ಚರ್ಚೆ ಮಾಡಿದ್ದರು. 

ಸಮೋಸಾ-ಕಚೋರಿ ತಿನ್ನೋದು ಬಿಟ್ಟೆ; ಇದ್ದಕ್ಕಿದ್ದಂತೆ ಸಣ್ಣಗಾಗಿರುವ ಶುಭಾ ಪೂಂಜಾ ಬಿಚ್ಚಿಟ್ಟ ಸೀಕ್ರೆಟ್

ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿ ಅಸಭ್ಯವಾಗಿ ವರ್ತಿಸುತ್ತಿರುವುದು ತಪ್ಪು ಹೀಗಾಗಿ ಕ್ಯಾಪ್ಟನ್ ಬ್ಯಾಡ್ಜ್‌ನ ಸಾಗರ್‌ಗೆ ನೀಡುವಂತೆ ಮೋಹನ್ ಲಾಲ್ ಹೇಳಿದ್ದಾರೆ. ಕ್ಯಾಪ್ಟನ್ ಬ್ಯಾಂಡ್‌ನ ಕೊಡುವುದಿಲ್ಲ ಎಂದು ಅಖಿಲ್ ವಾದ ಮಾಡುತ್ತಾರೆ ಆದರೆ ಮೋಹನ್ ಲಾಲ್ ಒತ್ತಾಯ ಮಾಡಿದ ಕಾರಣ ಬ್ಯಾಂಡ್‌ನ ಕಿತ್ತು ಬಿಸಾಡುತ್ತಾರೆ ಆದರೆ ಕ್ಷಮೆ ಕೇಳುವುದಿಲ್ಲ ಎನ್ನುತ್ತಾರೆ. ಆ ಕ್ಷಣವೇ ಮೋಹನ್ ಲಾಲ್‌ಗೆ ಕೋಪ ಹೆಚ್ಚಾಗುತ್ತದೆ ಕಂಟ್ರೋಲ್ ಮಾಡಿಕೊಳ್ಳುತ್ತಾರೆ ಅಷ್ಟರಲ್ಲಿ ಬಿಗ್ ಬಾಸ್ ಇಬ್ಬರನ್ನು ಕನ್ಫೆಶನ್‌ ರೂಮ್‌ಗೆ ಬರುವಂತೆ ಅನೌನ್ಸ್ ಮಾಡುತ್ತಾರೆ. 

ಕನ್ಫೆಷನ್‌ ರೂಮ್‌ನಲ್ಲೂ ಆಖಿಲ್ ಕ್ಷಮೆ ಕೇಳುವುದಕ್ಕೆ ಒಪ್ಪಿಕೊಳ್ಳುವುದಿಲ್ಲ. ಇಡೀ ಚರ್ಚೆಯಲ್ಲಿ ಸಾಗರ ಸುಮ್ಮನೆ ಕುಳಿತಿರುತ್ತಾರೆ. ಮೋಹನ್ ಲಾಲ್ ಪರ ನಿಂತುಕೊಂಡ ಸಾಗರ್ ಕ್ಷಮೆ ಕೇಳಬೇಕು ಎಂದು ಒತ್ತಾಯ ಮಾಡುತ್ತಾರೆ. ಎಷ್ಟೇ ಚರ್ಚೆ ಮಾಡಿದ್ದರೂ ಅಖಿಲ್ ವಾದ ನಿಲ್ಲಿಸದ ಕಾರಣ ಮೋಹನ್ ಲಾಲ್ ಬೇಸರ ಮಾಡಿಕೊಂಡು ಕಾಲ್ ಕಟ್ ಮಾಡುವಂತೆ ಹೇಳಿ ಶೋ ನಡುವೆ ವಾಕ್ ಔಟ್ ಮಾಡುತ್ತಾರೆ. 'ಕ್ಯಾಪ್ಟನ್ ಬ್ಯಾಡ್ಜ್‌ನ ನಾನು ಸಾಗರ್‌ಗೆ ಕೊಡುವಂತೆ ಗೌರವದಿಂದ ನಿಮಗೆ ಹೇಳಿದೆ ಆದರೆ ನೀವು ನನ್ನ ಮಾತಿಗೆ ಗೌರವ ಕೊಡದೆ ಅದನ್ನು ಬಿಸಾಡಿದ್ದೀರಿ. ತುಂಬಾ ಖುಷಿಯಿಂದ ಈಸ್ಟರ್‌ ಹಬ್ಬವನ್ನು ನಿಮ್ಮೆಲ್ಲರ ಜೊತೆ ಆಚರಿಸಬೇಕು ಎಂದು ಬಂದೆ ಆದರೆ ಇಡೀ ಪ್ಲ್ಯಾನ್ ನಿಮ್ಮಿಂದ ಹಾಳಾಗಿದೆ. ಜೈಸಲ್ಮೇರ್‌ನಲ್ಲಿದ್ದ ನಾನು ಏರ್‌ಪೋರ್ಟ್‌ಗೆ 4-5 ಗಂಟೆ ಪ್ರಯಾಣ ಮಾಡಿ ಅಲ್ಲಿಂದ ಫ್ಲೈಟ್ ತೆಗೆದುಕೊಂಡು ಇಲ್ಲಿದೆ ಬಂದು ಚಿತ್ರೀಕರಣ ಮುಗಿಸಿ ಮತ್ತೊಮ್ಮೆ ಫ್ಲೈಟ್‌ನಲ್ಲಿ ಅಲ್ಲಿಗೆ ಪ್ರಯಾಣ ಮಾಡಿ ಆನಂತರ ಮತ್ತೆ 5 ಗಂಟೆ ಜರ್ನಿ ಮುಗಿಸಿದ ಮೇಲೆ ನನ್ನ ಜಾಗ ಸೇರುವೆ. ಇಷ್ಟು ಶ್ರಮ ಹಾಕಿ ಬಂದಿರುವ ವ್ಯಕ್ತಿಗೆ ನೀವು ಈ ರೀತಿ ಅಗೌರವ ಕೊಡಬಾರದಿತ್ತು. ಹೀಗಾಗಿ ಈ ಎಪಿಸೋಡ್‌ನ ಇಲ್ಲಿದೆ ನಿಲ್ಲಿಸುತ್ತಿರುವೆ' ಎಂದು ಮೋಹನ್ ಲಾಲ್ ಹೇಳಿ ಅರ್ಧಕ್ಕೆ ಹೊರ ನಡೆದಿದ್ದಾರೆ. 

ಈಗ ಸೀಸನ್ 5 ನಡೆಯುತ್ತಿದೆ, ಇದೇ ಮೊದಲ ಮೋಹನ್ ಲಾಲ್ ಶೋಯಿಂದ ಬೇಸರ ಮಾಡಿಕೊಂಡು ಹೊರ ನಡೆದಿರುವುದು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?