20 ವರ್ಷ ಹಿರಿಯನನ್ನು ವರಿಸಿದ ಕಿರುತೆರೆ ನಟಿ ದಿವ್ಯಾ-ಕ್ರಿಸ್ ಮದ್ವೆ ವೀಡಿಯೋ ವೈರಲ್

By Suvarna News  |  First Published Nov 3, 2024, 10:51 AM IST

ನಟ ಕ್ರಿಸ್ ವೇಣುಗೋಪಾಲ್ ಮತ್ತು ಕಿರುತೆರೆ ನಟಿ ದಿವ್ಯಾ ಶ್ರೀಧರ್ ವಿವಾಹದ ಬಗ್ಗೆ ನೆಟ್ಟಿಗರು ಮಾಡಿರುವ ಕಮೆಂಟ್ಸ್‌ಗೆ ಉತ್ತರಿಸಿದ್ದಾರೆ. 


ಕೊಚ್ಚಿ: ಕಳೆದ ದಿನಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಕಮೆಂಟ್ಸ್‌ಗೆ ಸಾಕ್ಷಿಯಾಗಿದ್ದ ನಟ ಕ್ರಿಸ್ ವೇಣುಗೋಪಾಲ್ ಮತ್ತು ನಟಿ ದಿವ್ಯಾ ಶ್ರೀಧರ್ ಅವರದ ಮದ್ವೆ ಬಗ್ಗೆ, ಜೋಡಿ ಇದೀಗ ಸ್ಪಷ್ಟನೆ ನೀಡಿದೆ. ಪತ್ತರಮಾತ್ ಎಂಬ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸುವಾಗ ಪರಿಚಯವಾದ  ಇವರಿಬ್ಬರೂ ಅರೆಂಜ್ಡ್ ಮ್ಯಾರೇಜ್ ಮೂಲಕವೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಪ್ತ ಬಂಧುಗಳು ಮತ್ತು ಸ್ನೇಹಿತರ ಸಮ್ಮುಖದಲ್ಲಿ ನಡೆದ ಈ ವಿವಾಹದ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಗಮನ ಸೆಳೆದಿವೆ. 

ಮದ್ವೆಯಾಗುವ ಮುನ್ನವೇ 20 ವರ್ಷಗಳ ಹಿರಿಯನನ್ನು ವರಿಸುತ್ತಿರುವ ಬಗ್ಗೆ ಹಲವರು ಹಲವಾರು ರೀತಿಯಲ್ಲಿ ಕಮೆಂಟ್ಸ್ ಮಾಡಿದ್ದರು. ಇದೀಗ ಕ್ರಿಸ್ ಮತ್ತು ದಿವ್ಯಾ ಸಂದರ್ಶನವೊಂದರಲ್ಲಿ ಈ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ವಿವಾಹಕ್ಕೆ ವ್ಯಕ್ತವಾದ ಟೀಕೆಗಳಿಗೆ ಉತ್ತರಿಸಿದ್ದಾರೆ. 

ಐಶ್ವರ್ಯಾ ರೈಗೆ ಮತ್ತೊಂದು ಮದ್ವೆ? ಇದೇನಿದು ಹೊಸ ಗಾಸಿಪ್?

Tap to resize

Latest Videos

undefined

ಬಹಳ ಏಜ್ ಗ್ಯಾಪ್ ಇರೋ ವಿವಾಹಕ್ಕೆ ಬಂದ ನಕಾರಾತ್ಮಕ ಕಾಮೆಂಟ್‌ಗಳ ಬಗ್ಗೆಯೂ ಮಾತನಾಡಿದ್ದಾರೆ. 'ಇಂತಹ ಕಾಮೆಂಟ್‌ಗಳು ಬರುತ್ತವೆಂದು ಮೊದಲೇ ಗೊತ್ತಿತ್ತು,' ಎಂದಿದ್ದಾರೆ. 'ಬೇರೆಯವರ ಜೀವನದಲ್ಲಿ ಏನೇನು ಸಮಸ್ಯೆಗಳಿವೆ, ಅದನ್ನು ಹೇಗೆ ಟೀಕಿಸಬಹುದು ಎಂದು ಯೋಚಿಸುವವರ ಬಗ್ಗೆ ನಮಗೆ ಸಹಾನುಭೂತಿ ಇದೆ. ಅವರು ಹೇಗಾದರೂ ಬದುಕಲಿ ಎಂದು ಯಾರೂ ಹೇಳುವುದಿಲ್ಲ. ಇದು ಎರಡು ದಿನ ಮಾತ್ರ, ಕಲಾವಿದರಲ್ಲವೇ ಎಂಬ ಕುಹಕ ಮಾತುಗಳೂ ಕೇಳಿ ಬಂದಿದ್ದವು, ಈ ಬಗ್ಗೆ ಸ್ಪಷ್ಟ ಅರಿವು ಇತ್ತು,' ಎಂದು ಸಂದರ್ಶನದಲ್ಲಿ ದಂಪತಿ ಹೇಳಿದ್ದಾರೆ. 

ಚಿತ್ರರಂಗದಲ್ಲೇ ಇರುವ ಕೆಲವರು ದಿವ್ಯಾ ಅವರಿಗೆ ಕರೆ ಮಾಡಿ, 'ಸರಿಯಾಗಿ ವಿಚಾರಿಸಿ ಮದುವೆ ಆಗ್ತಿದ್ದೀಯಾ? ಅವನು ಅಷ್ಟು ಸರಿಯಿಲ್ಲ, ' ಎಂದೆಲ್ಲ ಹೇಳಿದ್ದರು ಎಂದು ಕ್ರಿಸ್ ಹೇಳಿದ್ದಾರೆ. ಹೇಗಾದರೂ ನಮ್ಮ ಮದುವೆ ಮುರಿಯಲು ಅವರು ಪ್ರಯತ್ನಿಸಿದರು. ಈ ವಿಷಯವನ್ನು ದಿವ್ಯಾ ನನಗೆ ಹೇಳಿದ್ದರು ಎಂದು ಕ್ರಿಸ್ ಹೇಳಿದ್ದಾರೆ. 

ಶೀಘ್ರದಲ್ಲೇ ಮದ್ವೆ ಆಗ್ತಿದ್ದಾರೆ ಲಕ್ಷ್ಮೀ ಬಾರಮ್ಮ ವಿಧಿ… ಭಾವಿ ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೊ ವೈರಲ್

ನಾವು ಈಗ ಮದುವೆಯಾಗಿರುವುದಕ್ಕೆ ಸಾಕಷ್ಟು ಜನರು ಟೀಕಿಸುತ್ತಾರೆ. ಆದರೆ ಈ ವಿವಾಹ ನಮ್ಮಿಚ್ಛೆಯಂತೆ, ನಮ್ಮಿಷ್ಟ ಬಂದ ಹಾಗೆ ಆಗಿದೆ. ಹಾಗಾಗಿ ಬೇರೆಯವರು ಮೂಗು ತೂರಿಸುವ ಅಗತ್ಯವಿಲ್ಲ, ಕಲಾವಿದರ ಜೀವನದಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳಲು ಜನರಿಗೆ ಅಗತ್ಯಕ್ಕಿಂತ ಹೆಚ್ಚಾಗಿಯೇ ಆಸಕ್ತಿ ಇರುತ್ತದೆ. ಒಬ್ಬ ನಟಿ ಕೊರಳಲ್ಲಿ ತಾಳಿ ಕಟ್ಟಿಕೊಂಡಿಲ್ಲ. ಹಾಗಾಗಿ ಅವರು ವಿಚ್ಛೇದನ ಪಡೆಯುತ್ತಾರಾ ಎಂಬೆಲ್ಲ ಪ್ರಶ್ನೆಗಳು ಬರುತ್ತವೆ. ಇದನ್ನೆಲ್ಲಾ ಯಾಕೆ ವಿಚಾರಿಸಬೇಕು ಎಂದು ದಿವ್ಯಾ ಪ್ರಶ್ನಿಸಿದ್ದಾರೆ. ನಕಾರಾತ್ಮಕತೆ ಬಂದರೆ ಎದುರಿಸಲು ನಾವು ಸಿದ್ಧ ಎಂದು ನವದಂಪತಿ ಸ್ಪಷ್ಟಪಡಿಸಿದ್ದಾರೆ. 

ಇತ್ತೀಚೆಗೆ ಗುರುವಾಯೂರು ಮಂದಿರದಲ್ಲಿ ತಮ್ಮ ಆಪ್ತರ ಸಮ್ಮುಖದಲ್ಲಿ ಕ್ರಿಸ್ ದಿವ್ಯಾ ಜೋಡಿ ದಾಂಪತ್ಯಕ್ಕೆ ಕಾಲಿಟ್ಟಿತು. ಈ ಜೋಡಿ ನಡುವೆ 20 ವರ್ಷಗಳ ಅಂತರವಿರುವುದಲ್ಲದೇ, ದಿವ್ಯಾ ಅವರಿಗಿದು ಎರಡನೇ ಮದುವೆ. ಮೊದಲ ಮದುವೆಯಿಂದ ಎರಡು ಮಕ್ಕಳಿದ್ದು, ಮಕ್ಕಳು ಒಪ್ಪಿಗೆ ಪಡೆದು ಇದೀಗ ಮತ್ತೆ ಹಸೆಮಣೆ ಏರಿದ್ದಾರೆ. 

 

 

click me!