ಯಾರು ಮುಂದಿನ ನಿರೂಪಕ? ಬಿಗ್‌ಬಾಸ್‌ ವೇದಿಕೆಯಲ್ಲಿ ಕಿಚ್ಚ ಸುದೀಪ್ ಹೇಳಿದ್ದು ಇದು!

Published : Nov 02, 2024, 11:52 PM IST
ಯಾರು ಮುಂದಿನ ನಿರೂಪಕ?  ಬಿಗ್‌ಬಾಸ್‌ ವೇದಿಕೆಯಲ್ಲಿ ಕಿಚ್ಚ ಸುದೀಪ್ ಹೇಳಿದ್ದು ಇದು!

ಸಾರಾಂಶ

ಬಿಗ್‌ಬಾಸ್ 11ನೇ ಸೀಸನ್‌ನಲ್ಲಿ ಕಿಚ್ಚ ತಮ್ಮ ನಂತರ ಯಾರು ಶೋ ನಡೆಸಿಕೊಡಬಹುದು ಎಂಬ ಬಗ್ಗೆ ಮಾತನಾಡಿದ್ದಾರೆ. ಸ್ಪರ್ಧಿಗಳಿಗೆ ಸಲಹೆ ನೀಡಿದ ಕಿಚ್ಚ, ಮೋಕ್ಷಿತಾ ಮತ್ತು ತ್ರಿವಿಕ್ರಮ್‌ ನಡುವಿನ ಘರ್ಷಣೆಯ ಬಗ್ಗೆಯೂ ಚರ್ಚಿಸಿದರು.

ಕನ್ನಡ ಬಿಗ್‌ಬಾಸ್‌ 11 ನೇ ಸೀಸನ್‌ ಈ ಬಾರಿ ನಡೆಯುತ್ತಿದೆ. ಒಂದು ದಶಕಕ್ಕೂ  ಹೆಚ್ಚು ಶೋ ನಡೆಸಿಕೊಡುತ್ತಿರುವ ಕಿಚ್ಚ ಈ ಬಾರಿ 11 ನೇ ಸೀಸನ್‌ ನಡೆಸುತ್ತಿದ್ದಾರೆ. ಜೊತೆಗೆ ತಾನಿನ್ನು ಶೋ ನಡೆಸಲಾರೆ ಎಂದು ಘೋಷಣೆ ಕೂಡ ಮಾಡಿದ್ದಾರೆ. 

ಇದೆಲ್ಲದರ ವಾರದ ಕಥೆ ಕಿಚ್ಚನ ಜೊತೆ ನವೆಂಬರ್‌ 2ರ ಎಪಿಸೋಡ್‌ ನಲ್ಲಿ  ಇಂದು ತಮ್ಮ ನಂತರ ಯಾರು ಈ ಶೋ ನಡೆಸುತ್ತಾರೆ ಎಂಬ ಬಗ್ಗೆ ಹರಿದಾಡುತ್ತಿರುವ ಸುದ್ದಿಯ ಬಗ್ಗೆ ವೇದಿಕೆಯಲ್ಲಿ ಮಾತನಾಡಿದ್ದಾರೆ. ತಾಯಿ ಅಗಲಿದ ಬಳಿಕ ಮತ್ತೆ ವೇದಿಕೆಗೆ ಮರಳಿದ ಕಿಚ್ಚ ಮತ್ತೆ ಹಳೆಯ ರೀತಿಯಲ್ಲಿಯೇ ಖಡಕ್ ಆಗಿಯೇ ಸ್ಪರ್ಧಿಗಳನ್ನು ತಿದ್ದಿ, ಸರಿ-ತಪ್ಪುಗಳ ಪಾಠ ಮಾಡಿದರು.

ನೋವಿನಲ್ಲೂ ನಿರೂಪಣೆ, ವೇದಿಕೆಯಲ್ಲೇ ಕಣ್ಣೀರಿಟ್ಟು ಅಮ್ಮನಿಗೆ ಬಿಗ್‌ಬಾಸ್‌ ಇಷ್ಟ ಎಂದ ಕಿಚ್ಚ

ಈ ವೇಳೆ ತ್ರಿವಿಕ್ರಮ್ ವಿರುದ್ಧ ಕಳೆದವಾರ ಮೋಕ್ಷಿತಾ ಧ್ವನಿ ಎತ್ತಿಸಿ ಮಾತನಾಡಿದ ಬಗ್ಗೆ ಕ್ಲಾರಿಟಿ ತೆಗೆದುಕೊಂಡ ಕಿಚ್ಚ,  ಮೋಕ್ಷಿತಾ ಕುರಿತು, ನಿಮ್ಮ ಬಗ್ಗೆ ಅವರು ಏನೋ ಅಭಿಪ್ರಾಯ ಇಟ್ಟುಕೊಂಡಿದ್ದಾರೆ ಎಂದು ನೀವೇಕೆ ಅಷ್ಟು ತಲೆ ಕೆಡಿಸಿಕೊಳ್ಳುತ್ತೀರ? ತ್ರಿವಿಕ್ರಮ್ ನಿಮ್ಮ ಗೆಳೆಯರಾ? ನಿಮ್ಮ ಕುಟುಂಬದವರಾ? ಹಾಗಿದ್ದರೆ ಅವರು ಏನೋ ಮಾತನಾಡಿದ್ದಾರೆ ಅಂದರೆ ನೀವ್ಯಾಕೆ ತಲೆ ಕೆಡಿಸಿಕೊಳ್ಳುತ್ತೀರ?    ಸೈಲೆಂಟ್‌ ಆಗಿರುವುದು ನಿಮ್ಮದೇ ತಪ್ಪಾಗುತ್ತದೆ. ಯಾರೇ ನಿಮ್ಮ ಲಿಸ್ಟ್ ನೋಡಿಕೊಂಡು ಮನೆಯೊಳಗೆ ಬಂದಿರಲಿ. ಅವರಿಗೆ ನಿಮ್ಮ ವೈಯಕ್ತಿಕ ಜೀವನವಾಗಲಿ, ವ್ಯಕ್ತಿತ್ವವಾಗಲಿ, ನಿಮ್ಮ ಛಲ ಏನು? ಯಾವ ಕಾರಣಕ್ಕೆ ಈ ಬಗ್ಗೆ ಯಾವುದು ಅರಿವಿಲ್ಲ. 

ಒಳ್ಳೆತನಕ್ಕೆ ಸೈಲೆನ್ಸ್ ಗೆ ಬೆಲೆ ಬರೋದು ಯಾವಾಗ ಎಂದರೆ ನಮ್ಮ ಎದುರಾಳಿ ಮತ್ತು ಸಂದರ್ಭದ ಮೇಲೆ ಅವಲಂಭಿತ ಆಗಿರುತ್ತದೆ. ಯಾರ ಬಾಯಿಗೂ ಆಹಾರ ಆಗಬೇಡಿ ನಿಮ್ಮ ಯುದ್ಧ ನಿಮ್ಮದು.

ತಂದೆಯ ಮರಣದ ನಂತರ ಶಾರುಖ್ ಖಾನ್ ಅವರ ಮುಖ ನೋಡಲಿಲ್ಲ ಏಕೆ?

ಜೀವನದಲ್ಲಿ ಒಳ್ಳೆಯ ಹೆಸರು ಮಾಡಬೇಕು ಅಂದ್ರೆ ಒಳ್ಳೆಯ ಸ್ನೇಹಿತರನ್ನು ಹುಡುಕಬೇಕಂತೆ. ಇತಿಹಾಸದಲ್ಲಿ ಒಳ್ಳೆ ಹೆಸರು ಮಾಡಬೇಕೆಂದರೆ ಒಳ್ಳೆ ಶತ್ರುವನ್ನು ಹುಡುಕಬೇಕಂತೆ. ಈ ವೇದಿಕೆಯಲ್ಲಿ ನಾವು ಸಫೋಸ್‌ ಬಿಗ್‌ಬಾಸ್‌ ನಡೆಸಲು ಸುಸ್ತಾಗುತ್ತಿದೆ. ಸಾಕಪ್ಪ ನನ್ನ ಈ ವರ್ಷ ಬಿಟ್ಟು ಬಿಡಿ ಅಂದ್ರೆ, ಎರಡು ಮೂರು ಹೆಸರು ಓಡುತ್ತೆ. ಅವರು ಬರ್ತಾರೆ ಇವರು ಬರ್ತಾರೆ ಅಂತ.

ನಾನು ಇಲ್ಲಿ ನಿಂತುಕೊಂಡು ಯಾರು ಈ ಹೆಸರು ಹೇಳಿದ್ರು, ಅವರು ಬರ್ತಾರೆ ಇವರು ಬರ್ತಾರೆ ಅಂತ, ಅದನ್ನು ನೋಡುತ್ತಾ ಕೂರಲಾ? ವೇದಿಕೆ ಮೇಲೆ ನಿಂತು ಈ ವೇದಿಕೆಗೆ ನನ್ನಿಂದ ಎಷ್ಟು ತೂಕ ಅಂತ ಕಾನ್ಫಿಡೆಂಟ್‌ ಆಗಿರಲಾ? ಎಂದು ಸುದೀಪ್ ಹೇಳುತ್ತಿದ್ದಂತೆ ನೆರೆದಿದ್ದ ಎಲ್ಲರೂ ಚಪ್ಪಾಳೆ ತಟ್ಟಿದರು.

ಇದಿಷ್ಟರಲ್ಲೇ ನೀವು ಕಲಿಯಬೇಕಾಗಿರುವುದು ಒಂದು, ಮಂಜು ತ್ರಿವಿಕ್ರಮ್‌, ಸ್ನೇಹಿತರ ಬಳಿ ಹೋಗಿ ಹೇಳಿದಾಗ ಹೋಗಿ ಕೇಳು ಅಂತ ಕಾನ್ಫಿಡೆಂಟ್ ಆಗಿ ಹೇಳಿ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!