ಹೊಟ್ಟೆಲಿರೋದು ನಂದೆ ಮಗು ಅಂತ ಕೈ ಎತ್ತಿದ ತ್ರಿವಿಕ್ರಮ್: ಪಕ್ಕದಲ್ಲಿ ಇರೋ ಆ ಕೈ ಯಾಕೆ ಬಿಡ್ತಿಲ್ಲ ಎಂದ ಕಿಚ್ಚ ಸುದೀಪ್

By Govindaraj S  |  First Published Nov 3, 2024, 9:36 AM IST

ವಾರದ ಕತೆ ಕಿಚ್ಚನ ಜೊತೆಯಲ್ಲಿ ಒಂದಷ್ಟು ವಿಚಾರಗಳ ಬಗ್ಗೆ ಕಿಚ್ಚ ಸುದೀಪ್ ಅವರು ಚರ್ಚೆ ಮಾಡುತ್ತಾರೆ. ಹಾಗೆಯೇ ಇಂದಿನ ಸಂಚಿಕೆಯಲ್ಲಿ ಹಾಸ್ಯಪ್ರಸಂಗವೊಂದು ನಡೆದಿದ್ದು, ಕಲರ್ಸ್ ಕನ್ನಡ ವಾಹಿನಿ ಅದರ ಪ್ರೋಮೋವನ್ನು ಹಂಚಿಕೊಂಡಿದೆ.


ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ಬಿಗ್‌ ಬಾಸ್‌ ಸೀಸನ್‌ 11ರ ಕಿಚ್ಚನ ಪಂಚಾಯಿತಿಗೆ ಮತ್ತೆ ಸುದೀಪ್‌ ಅವರು ಕಮ್‌ ಬ್ಯಾಕ್‌ ಆಗಿದ್ದಾರೆ. ನಿನ್ನೆಯಷ್ಟೇ (ಶನಿವಾರ) ವಾರದ ಕತೆ ಕಿಚ್ಚ ಜೊತೆ ನಡೆದಿದೆ. ಈ ವೇಳೆ ಅಗಲಿದ ತಾಯಿಯನ್ನು ನೆನೆದು ಸುದೀಪ್ ವೇದಿಕೆಯಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಪ್ರೇಕ್ಷಕರನ್ನು ರಂಜಿಸುವ ಮಾಣಿಕ್ಯನಂತ ನಾಯಕನನ್ನು ಕರುನಾಡ ಮಡಿಲಿಕೆ ಹಾಕಿ, ತನ್ನ ಪ್ರೀತಿಯನ್ನು ಮನೆ ಮನೆಯ ಜೊತೆಗೂ ಹಂಚಿಕೊಂಡ ನಿಮ್ಮ ತಾಯಿಯ ಅಗಲಿಕೆ ಭರಿಸಲಾಗದ ಭಾರ ಎಂದು ಬಿಗ್‌ಬಾಸ್ ಸುದೀಪ್‌ಗೆ ಸಾಂತ್ವನ ಹೇಳಿದ್ದಾರೆ.

ವಾರದ ಕತೆ ಕಿಚ್ಚನ ಜೊತೆಯಲ್ಲಿ ಒಂದಷ್ಟು ವಿಚಾರಗಳ ಬಗ್ಗೆ ಕಿಚ್ಚ ಸುದೀಪ್ ಅವರು ಚರ್ಚೆ ಮಾಡುತ್ತಾರೆ. ಗೊತ್ತಿಲ್ಲದೆ ತಪ್ಪು ಮಾಡಿದವರಿಗೆ ಮತ್ತೊಮ್ಮೆ‌ ಮಾಡದಂತೆ ಸಲಹೆ ನೀಡುತ್ತಾರೆ. ಗೊತ್ತಿದ್ದು ತಪ್ಪು ಮಾಡಿದವರಿಗೆ ಎಚ್ಚರಿಕೆ ಕೊಡುತ್ತಾರೆ. ಇನ್ನು ಇಂದಿನ ಸಂಚಿಕೆಯಲ್ಲಿ ಹಾಸ್ಯಪ್ರಸಂಗವೊಂದು ನಡೆದಿದ್ದು, ಕಲರ್ಸ್ ಕನ್ನಡ ವಾಹಿನಿ ಅದರ ಪ್ರೋಮೋವನ್ನು ಹಂಚಿಕೊಂಡಿದೆ. ಉಗ್ರಂ ಮಂಜು ಅವರೇ ನೀವು ಭವ್ಯ, ಧನರಾಜ್ ನೀವು ಭನ್ಯಾ.. ನೀವಿಬ್ಬರು ಸೇರಿ ತ್ರಿವಿಕ್ರಮ್‌ನ ಲವ್ ಮಾಡ್ತಿದ್ದೀರಾ ಎಂದು ಸುದೀಪ್ ಹೇಳುತ್ತಾರೆ. ಆಗ

Tap to resize

Latest Videos

undefined

ಧನರಾಜ್: ನಾನು ಮೊದಲೇ ಹೇಳಿದೀನಿ ಅದು ನಂದು
ಉಗ್ರಂ ಮಂಜು: ಓಡೋ.. ಅತ್ತುಬುಡ್ತೀನಿ ನಿಂಕಲೋ ಓಟ
ಧನರಾಜ್: ನೀ ಮಾಡಿದ್ದೇನು.. ಅದೇ ತಾನೇ.. ಬಿಗ್‌ಬಾಸ್‌ನಲ್ಲಿ
ಉಗ್ರಂ ಮಂಜು: ಹೇ...
ಧನರಾಜ್: ನಾನು ಇಲ್ಲಿಯವರೆಗೂ ಒಂದು ವಿಷಯವನ್ನು ಹೇಳಿಲ್ಲ. ಹೊಟ್ಟೆಯಲ್ಲಿ ಒಂದು ಮಗು ಇದೆ ಎಂದರು. ಈ ವೇಳೆ ಇಡೀ ಮನೆಯಲ್ಲಿರುವ ಸ್ಫರ್ಧಿಗಳು ಹಾಗೂ ಕಿಚ್ಚ ಸುದೀಪ್‌ ಓಹ್... ಎಂದು ಕೇಕೆ ಹಾಕಿ ನಗುತ್ತಾರೆ.

ಅನಂತರ ಕಿಚ್ಚ ಸುದೀಪ್.. ತ್ರಿವಿಕ್ರಮ್ ಬಳಿ ಭವ್ಯಾನಾ.. ಭನ್ಯಾ ಎಂದು ಕೇಳಿದಾಗ, ಹೊಟ್ಟೆಲಿರೋದು ನಂದೆ ಎಂದು ತ್ರಿವಿಕ್ರಮ್ ಅವರು ಧನರಾಜ್ ಕೈ ಎತ್ತುತ್ತಾರೆ. ಆಗ ಸುದೀಪ್ ಹೊಟ್ಟೆಲಿರೋದು ನಂದೆ ಅಂತ ಕೈ ಎತ್ತಿದ್ರಿ.. ಪಕ್ಕದಲ್ಲಿ ಇರೋ ಆ ಕೈ ಯಾಕೆ ಬಿಡ್ತಿಲ್ಲ (ಉಗ್ರಂ ಮಂಜು ಕೈ) ಎಂದು ಕಿಚಾಯಿಸಿದರು. ಸದ್ಯ 'ತ್ರಿಕೋನ ಪ್ರೇಮಕತೆ ಮಿ.ತ್ರಿವಿಕ್ರಮ್ ಜೊತೆ' ಪ್ರೋಮೋವನ್ನು ಕಲರ್ಸ್ ವಾಹಿನಿ ಹಂಚಿಕೊಂಡಿದ್ದು, ಇಂದಿನ ಸೂಪರ್ ಸಂಡೇ ವಿತ್ ಬಾದ್​ಷಾ ಸುದೀಪದಲ್ಲಿ ಇಂದು ರಾತ್ರಿ 9ಕ್ಕೆ ಪ್ರಸಾರವಾಗಲಿದೆ.

ಪ್ರಪಂಚದ್ ಪಾಪದಲ್ಲಿ, ಎಲ್ರೂ ಪಾಲುದಾರರೂ ಎಂದ ಯುವ ರಾಜ್‌ಕುಮಾರ್: 'ಎಕ್ಕ' ಅಂದ್ರೆ ಏನು ಗೊತ್ತಾ?

ಕಳೆದ ವಾರ ಬಿಗ್ ಬಾಸ್ ವಾರಂತ್ಯದ ಸಂಚಿಕೆಗಳನ್ನು ಕಿಚ್ಚ ಸುದೀಪ್ ಅವರು ನಡೆಸಿಕೊಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ, ಆ ಸಂಚಿಕೆಗಳನ್ನು ವಿಕಟಕವಿ ನಿರ್ದೇಶಕ ಯೋಗರಾಜ್ ಭಟ್ ಮತ್ತು ನಟ ಸೃಜನ್ ಲೋಕೇಶ್ ಅವರು ನಡೆಸಿಕೊಟ್ಟಿದ್ದರು. ಶನಿವಾರದ ಸಂಚಿಕೆಯನ್ನು ಯೋಗರಾಜ್ ಭಟ್ ನಡೆಸಿಕೊಟ್ಟರೆ, ಭಾನುವಾರದ ಸಂಚಿಕೆಯನ್ನು ನಟ ಸೃಜನ್ ಲೋಕೇಶ್ ಅವರು ನಡೆಸಿಕೊಟ್ಟಿದ್ದರು. ಎಲಿಮಿನೇಷನ್ ಪ್ರಕ್ರಿಯೆಯೂ ಸಹ ನಡೆದಿತ್ತು. ಇನ್ನು ಈ ವಾರ ಕಿಚ್ಚ ಸುದೀಪ್ ಎದೆಯಲ್ಲಿ ನೋವಿದ್ದರೂ ಸಹ ತಮ್ಮ ಜವಾಬ್ದಾರಿಯನ್ನು ಸೂಕ್ತವಾಗಿ ನಿಭಾಯಿಸಿದ್ದಾರೆ.
 

click me!