ಕುಂಟುತ್ತ ರಾಮಾಚಾರಿ ಮನೆಗೆ ಬಂದ ಕಿಟ್ಟಿ; ಚಾರು ಮೈ-ಕೈ ಮುಟ್ಟಲು ಕಿಟ್ಟಿಗೆ ಶಾಕ್!

By Shriram Bhat  |  First Published Jan 3, 2024, 2:59 PM IST

ರಾಮಾಚಾರಿ ಕಾರು ಇಳಿಯುತ್ತಿದ್ದಂತೆ ಖುಷಿಗೊಂಡ ರಾಮಾಚಾರಿ ತಾಯಿ ಹಾಗೂ ಚಾರು ಇಬ್ಬರೂ ರಾಮಾಚಾರಿಯನ್ನು ಎದುರುಗೊಳ್ಳಲು ಕಾಯುತ್ತಿದ್ದಾರೆ. ಆದರೆ ರಾಮಾಚಾರಿ ರೂಪದಲ್ಲಿರುವ ಕಿಟ್ಟಿಗೆ ಭಾರೀ ಆತಂಕ ಶುರುವಾಗಿದೆ.


ರಾಮಾಚಾರಿ ಮನೆಗೆ ಕಿಟ್ಟಿ ಬರುತ್ತಿದ್ದಾನೆ. ಕಾರ್‌ನಲ್ಲಿ ಬಂದು ಮನೆ ಮುಂದೆ ಇಳಿದ ಕಿಟ್ಟಿಗೆ ತಾನು ಇನ್ಮುಂದೆ ಈ ಮನೆಯಲ್ಲಿ, ಮನೆಯವರ ಮುಂದೆ ರಾಮಾಚಾರಿ ತರಹವೇ ನಟನೆ ಮಾಡಬೇಕು ಎಂಬ ಆತಂಕ ಶುರುವಾಗಿದೆ. ಕಾರಣ, ಮನೆಯವರು ಕಿಟ್ಟಿಯನ್ನು ರಾಮಾಚಾರಿ ಅಂತಲೇ ಅಂದುಕೊಂಡಿದ್ದಾರೆ. ಕಾರಣ,ಅವರಿಗೆ ರಾಮಾಚಾರಿಯಂತೆ ಇರುವ ಕಿಟ್ಟಿ ಅಂತ ಇನ್ನೊಬ್ಬನಿದ್ದಾನೆ ಎಂಬ ಸಂಗತಿಯೇ ಗೊತ್ತಿಲ್ಲ. ಆದರೆ, ಕಿಟ್ಟಿಗೆ ಎಲ್ಲವೂ ಗೊತ್ತು. ತಾನು ರಾಮಾಚಾರಿ ಬದಲು ಕಿಡ್ನಾಪ್ ಆಗಿ ಏಟು ತಿಂದು ಬಂದಿದ್ದಾನೆ. 

ರಾಮಾಚಾರಿ ಕಾರು ಇಳಿಯುತ್ತಿದ್ದಂತೆ ಖುಷಿಗೊಂಡ ರಾಮಾಚಾರಿ ತಾಯಿ ಹಾಗೂ ಚಾರು ಇಬ್ಬರೂ ರಾಮಾಚಾರಿಯನ್ನು ಎದುರುಗೊಳ್ಳಲು ಕಾಯುತ್ತಿದ್ದಾರೆ. ಆದರೆ ರಾಮಾಚಾರಿ ರೂಪದಲ್ಲಿರುವ ಕಿಟ್ಟಿಗೆ ಭಾರೀ ಆತಂಕ ಶುರುವಾಗಿದೆ. ಬಾಯಿ ಒಣಗುತ್ತಿದೆ, ಕೈಕಾಲು ನಡುಗುತ್ತಿದೆ. ಕಾರಣ, ಕಿಟ್ಟಿಗೆ ಈ ಮನೆ, ಈ ಜನರು ಹೊಸದು. ಅವರೇನು ಮಾತನಾಡಬಹುದು, ತಾನೇನು ಮಾತನಾಡಬೇಕು ಎಂಬ ಗೊಂದಲದಲ್ಲಿ ಕಿಟ್ಟಿ ಸಿಕ್ಕಿಹಾಕಿಕೊಂಡಿದ್ದಾನೆ. ಆತ ಕಾರು ಇಳಿದವನೇ ನಿಧಾನಕ್ಕೆ ಕುಂಟುತ್ತ ಬರುತ್ತಿದ್ದಾನೆ. 

Tap to resize

Latest Videos

ಅವನು ತಮ್ಮ ಪರಿಚಯವೇ ಇಲ್ಲದಂತೆ ನಡೆದುಕೊಂಡು ಬರುತ್ತಿರುವುದನ್ನು ನೋಡಿದ ರಾಮಾಚಾರಿ ತಾಯಿ ಹಾಗೂ ಚಾರು ಅಚ್ಚರಿಗೆ ಒಳಗಾಗುತ್ತಾರೆ. ನಿಧಾನಕ್ಕೆ ತಮ್ಮ ಬಳಿ ಬಂದ ಕಿಟ್ಟಿ ಮುಖ ಹಾಗೂ ಮೈಮೇಲೆ ಗಾಯಗಳನ್ನು ನೋಡಿದ ಅವರಿಬ್ಬರೂ ಗಾಬರಿಯಿಂದ 'ರಾಮಾಚಾರಿ, ಏನಾಯ್ತೋ? ಯಾಕೆ ನಿನ್ನ ಮುಖ-ಮೈಮೇಲೆಲ್ಲ ಹೀಗೆಲ್ಲಾ ಗಾಯಗಳಾಗಿವೆ?' ಎಂದು ಕೇಳುತ್ತಾರೆ. ಅವರ ಪ್ರಶ್ನೆಗೆ ಏನು ಹೇಳಬೇಕೆಂದು ತೋಚದೇ ಕಂಗಾಲಾಗಿರುವ ಕಿಟ್ಟಿ, 'ಅದಾ, ಏನಿಲ್ಲ  ಬಿದ್ಬಿಟ್ಟೆ' ಎನ್ನುವನು 'ಎಲ್ಲಿ ಬಿದ್ದೆ ' ಎಂಬ ಚಾರು ಪ್ರಶ್ನೆಗೆ ಕಿಟ್ಟಿ 'ರಸ್ತೆಯಲ್ಲಿ ಬಿದ್ದೆ' ಎನ್ನಲು ಚಾರು 'ನೀನು ಕಾರಿನಲ್ಲಿ ಹೋಗಿದ್ದಲ್ವಾ, ಟೂ ವೀಲರ್‌ ತರ ಹೇಗೆ ಬೀಳೋಕೆ ಸಾಧ್ಯ?' ಎಂದು ಕೇಳುವಳು. 

ನಿನ್ನ ಲೈಫೂ ಹಲ್ವಾದಂತೇ ತಳ ಹಿಡಿದು ಹೋಗಲಿದೆ; ಭವಿಷ್ಯವಾಣಿ ಪುಷ್ಪಾ ಪಾಲಿಗೆ ನಿಜ ಆಗಿಬಿಡುತ್ತಾ?!

ಚಾರು ಪ್ರಶ್ನೆಗೆ ಕಂಗಾಲಾಗುವ ರಾಮಾಚಾರಿ ' ಓ, ಅದೂ.. ಅದೂ ದೇವಸ್ಥಾನದಿಂದ ಹೊರಗೆ ಕಾರು ಹತ್ತುವ ಮೊದಲು ರಸ್ತೆಯಲ್ಲಿ ಬಿದ್ದೆ ಎಂದು ಹೇಳಲು ಚಾರುಗೆ ಹಾಗೂ ರಾಮಾಚಾರಿ ತಾಯಿಗೆ ಕಿಟ್ಟಿ ಮಾತುಗಳು ವಿಚಿತ್ರ ಎನಿಸುತ್ತವೆ. ಆದರೆ, ಅವರಿಗೆ ಆತ ರಾಮಾಚಾರಿ ಅಲ್ಲ, ಕಿಟ್ಟಿ ಎಂಬುದು ಗೊತ್ತಾಗಿಲ್ಲ. ಆದರೆ, ರಾಮಾಚಾರಿ ಅತ್ತೆಯ ಮಗಳು ಇದಾಳಲ್ಲ, ಅದೇ ವಿಲನ್, ಆಕೆಗೆ ಕಿಟ್ಟಿಯ ಮಾತುಗಳನ್ನು, ಹಾವಭಾವಗಳನ್ನು ನೋಡಿ ಆತ ಮನೆಯವರು ಅಂದುಕೊಂಡಂತೆ ರಾಮಾಚಾರಿ ಅಲ್ಲ, ಕಿಟ್ಟಿ ಎಂಬುದು ತಿಳಿಯುತ್ತದೆ. 

ಹೊಸ ವರ್ಷಕ್ಕೆ JR ಎನ್‌ಟಿಆರ್ ಗುಡ್ ನ್ಯೂಸ್; ಪ್ರಿಯಾಂಕಾ ಚೋಪ್ರಾ ಜತೆ ರೊಮ್ಯಾನ್ಸ್‌ಗೆ ರೆಡಿನಾ?

ಆದರೆ, ಆಕೆಗೆ ಬೇಕಾಗಿದ್ದು ಅದೇ. ರಾಮಾಚಾರಿ ಬದಲು ಈ ಮನೆಗೆ ಕಿಟ್ಟಿ ಬರಲೆಂಬುದೇ ಆಕೆಯ ಆಶಯ. ಅದರಂತೆ ಆಗಿದೆ. ಈಗ ಮುಂದಿನ ಕಥೆ ಏನು? ಚಾರು ಹಾಗೂ ತಾಯಿಗೆ ಮನೆಗೆ ಬಂದವನು ರಾಮಾಚಾರಿ ಅಲ್ಲ, ಕಿಟ್ಟಿ ಎಂಬುದು ತಿಳಿಯುತ್ತದೆಯೇ? ರಾಮಾಚಾರಿ ಕಥೆ ಏನಾಗಲಿದೆ? ಕಿಟ್ಟಿ ಈ ಮನೆಯಲ್ಲಿ ಸೇಫ್ ಆಗಿ ಇರಲಿದ್ದಾನೆಯೇ? ಮುಂತಾದ ಹತ್ತುಹಲವು ಪ್ರಶ್ನೆಗಳಿಗೆ ರಾಮಾಚಾರಿ ಸಂಚಿಕೆಯಲ್ಲಿ ಉತ್ತರ ಸಿಗಲಿದೆ. ಒಟ್ಟಿನಲ್ಲಿ, ಕಿಟ್ಟಿ-ರಾಮಾಚಾರಿ ಕಥೆ ಒಗಟಿನಂತೆ ಇನ್ನೆಷ್ಟು ದಿನ ನಡೆಯಲಿದೆ ಎಂಬುದು ಸದ್ಯಕ್ಕೆ ಸಸ್ಪೆನ್ಸ್!

 

 

click me!