ಅಬ್ಬಬ್ಬಾ, Bigg Bossನಲ್ಲಿ ಏನಪ್ಪಾ ಎನರ್ಜಿ: ಮಸ್ತ್ ಗೊಬ್ಬೋಂದುಲ್ಲ ಮಗಾ, ಈ ಸಲ ಕಪ್​ ಇವ್ರದ್ದೇ- ವಿನ್ನರ್​ ಘೋಷಿಸಿದ ಕಿರಿಕ್​ ಕೀರ್ತಿ

Published : Oct 26, 2026, 05:37 PM IST
Kirik Keerthi about Bigg Boss 13 Winner

ಸಾರಾಂಶ

ಬಿಗ್‌ಬಾಸ್ 13ರಲ್ಲಿ ಸೌಂದರ್ಯ ಶೆಟ್ಟಿ ಒಂದೇ ವಾರದಲ್ಲಿ ಕ್ಯಾಪ್ಟನ್, ಬೆಸ್ಟ್ ಎಂಟರ್‌ಟೈನರ್ ಮತ್ತು ಕಿಚ್ಚನ ಚಪ್ಪಾಳೆ ಪಡೆದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಇವರ ಅದ್ಭುತ ಆಟವನ್ನು ಮೆಚ್ಚಿರುವ ಕಿರಿಕ್ ಕೀರ್ತಿ, ಈ ಬಾರಿ ಕಪ್ ಇವರದ್ದೇ ಎಂದು ಭವಿಷ್ಯ ನುಡಿದಿದ್ದಾರೆ.

ಬಿಗ್​ಬಾಸ್​ 13 (Bigg Boss 13) ಸೌಂದರ್ಯ ಶೆಟ್ಟಿ ಸದ್ಯ ಹವಾ ಸೃಷ್ಟಿಸುತ್ತಿದ್ದಾರೆ. ಮೊನ್ನೆಯಷ್ಟೇ ಇವರು, ಡಬಲ್​ ಅಲ್ಲ, ತ್ರಿಬಲ್​ ಧಮಾಕಾ ಮಾಡಿದ್ದಾರೆ. ಬಿಗ್​ಬಾಸ್​​ ಇತಿಹಾಸದಲ್ಲಿಯೇ ಇದೊಂದು ದಾಖಲೆ ಎನ್ನಲಾಗುತ್ತಿದೆ. ‘ಶೆಟ್ಟಿ ಡಾನ್‌’ ಎಂದೇ ಬಿರುದು ಪಡೆದುಕೊಂಡಿರುವ ಸೌಂದರ್ಯ ಶೆಟ್ಟಿ, ಒಂದೇ ಟಾಸ್ಕ್‌ನಲ್ಲಿ ಸೌಂದರ್ಯ ಶೆಟ್ಟಿ ಅವರು ದಿ ಬೆಸ್ಟ್‌ ಎಂಟರ್‌ಟೈನರ್‌ ಆಗಿ ವೀಕ್ಷಕರ ಮನಸ್ಸು ಗೆದ್ದರು, ಉತ್ತಮ ಪದಕ ಪಡೆದರು ಜೊತೆಗೆ ಟಾಸ್ಕ್‌ ಗೆದ್ದು 7 ನೇವಾರದ ಕ್ಯಾಪ್ಟನ್‌ ಆಗಿದ್ದಾರೆ. ಎಷ್ಷೇ ಅಲ್ಲದೆ “ಬ್ಲಾಕ್‌ ಬಾಸ್ಟರ್‌ ಎಂಟರ್‌ಟೈನರ್‌ ಆಫ್‌ ದಿ ವೀಕ್‌ ಈ ವಾರ ಎರಡನೇ ಕಿಚ್ಚನ ಚಪ್ಪಾಳೆ ಸೌಂದರ್ಯ ಶೆಟ್ಟಿ ಅವರೇ ನಿಮಗೆ” ಎಂದು ಕಿಚ್ಚ ಸುದೀಪ್‌ ಅವರ ಕಡೆಯಿಂದ ಮೆಚ್ಚುಗೆಯ ಚಪ್ಪಾಳೆ ಪಡೆದಿದ್ದಾರೆ! ಈ ರೀತಿ ಒಂದೇ ಬಾರಿ ಮೂರು ಮೂರು ಅವಾರ್ಡ್​ ಪಡೆದುಕೊಂಡಿರುವ ಸೌಂದರ್ಯ ಬಿಗ್​ಬಾಸ್​​ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಹೀಗೆ ಆಗ್ತಿರೋದು ಇದೇ ಮೊದಲು ಎನ್ನಲಾಗುತ್ತಿದೆ.

ಕಪ್​ ಇವರದ್ದೇ

ಇದಕ್ಕೀಗ Bigg Boss ಖ್ಯಾತಿಯ ಕಿರಿಕ್​ ಕೀರ್ತಿ ಅವರು, ಸೌಂದರ್ಯ ಅವರ ಎನರ್ಜಿಯ ಕುರಿತು ಸಿಕ್ಕಾಪಟ್ಟೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಕೀರ್ತಿ ಅವರು, ಈ ಹುಡುಗಿಗೆ ಭಗವಂತ ಅದೆಲ್ಲಿಂದಾ ಅಷ್ಟು ಎನರ್ಜಿ ಕೊಟ್ಟನೋ ಭಗವಂತನಿಗೇ ಗೊತ್ತು... ಈ ಸಲದ ಬಿಗ್ ಬಾಸ್ ಅಷ್ಟಕ್ಕಷ್ಟೆ ಅನ್ನೋ ಟೈಮಿಗೆ ಸರಿಯಾಗಿ ಬಿಗ್ ಬಾಸ್ ಕೊಟ್ಟ ಟಾಸ್ಕ್ ಮತ್ತು ತಾಂಡವ್ ಮತ್ತು ಈ ಹುಡುಗಿ ಸೌಂದರ್ಯ ಶೆಟ್ಟಿ ಆಡಿದ ಆಟ... ಯಬ್ಬಾ... ನಾನು ಆ ಮನೇಲಿ‌ ಇದ್ದವನು...ಈ ರೇಂಜಿಗೆ ಎನರ್ಜಿ ಕಾಪಾಡಿಕೊಳ್ಳೋದು ಕಷ್ಟ ಅಲ್ಲಿ...ಆದರೆ ಈಕೆ ಬರೀ ಸೌಂದರ್ಯ ಅಲ್ಲ... ಸುಸ್ತಾಗದ ಸೌಂದರ್ಯ... ಮಸ್ತ್ ಗೊಬ್ಬೋಂದುಲ್ಲ ಮಗಾ... ಕಪ್ ಬರೋಡೇ.... ಎಂದಿದ್ದಾರೆ. ಇದರ ಅರ್ಥ, ತುಂಬಾ ಚೆನ್ನಾಗಿ ಆಡುತ್ತಿದ್ದಾರೆ. ಈ ಸಲ್​ ಕಪ್​ ಗೆಲ್ಲೋದು ಖಚಿತ ಎಂದು ತುಳುವಿನಲ್ಲಿ ಹೇಳಿದ್ದಾರೆ.

ನಟಿಯ ಕುರಿತು

ಇನ್ನು ಸೌಂದರ್ಯ ಶೆಟ್ಟಿ (Bigg Boss Soundarya Shetty) ಕುರಿತು ಹೇಳುವುದಾದರೆ, ಅವರೇ ತಮ್ಮನ್ನು ಬಿಗ್​ಬಾಸ್​ನಲ್ಲಿ ಹೀಗೆ ಇಂಟ್ರಡ್ಯೂಸ್​ ಮಾಡಿಕೊಂಡಿದ್ದರು. ನಾನು ತುಂಬಾ ಕನ್ಫಿಡೆಂಟ್, ಸ್ಟೈಲಿಶ್ ಹುಡುಗಿ. ನಾನು ಹುಟ್ಟಿದ್ದು ಮಸ್ಕಟ್‌ನಲ್ಲಿ. ಬೆಳೆದಿದ್ದು ಮಂಗಳೂರಿನಲ್ಲಿ. ಸದ್ಯ ನಾನು ಇರೋದು ಮುಂಬೈನಲ್ಲಿ. ನಾನು ಕರ್ನಾಟಕದವಳು. ನನಗೆ ಕನ್ನಡಿಗರ ಸಪೋರ್ಟ್ ಬೇಕು. ಕನ್ನಡಿಗರ ಪ್ರೀತಿ ಬೇಕು. ನನ್ನನ್ನ ಕನ್ನಡಿಗರು ಇಷ್ಟ ಪಡ್ತಾರೆ ಅಂದುಕೊಳ್ತೀನಿ’’ ಎಂದಿದ್ದರು.

‘’ನನಗೆ ಚಿಕ್ಕವಯಸ್ಸಿನಿಂದಲೂ ಡ್ಯಾನ್ಸ್, ಸ್ಟೈಲಿಂಗ್ ಅಂದ್ರೆ ಇಷ್ಟ. ವೀಕೆಂಡ್‌ ಬಂತೂಂದ್ರೆ ಪಾರ್ಟಿ, ನೈಟ್ ಲೈಫ್, ಮ್ಯೂಸಿಕ್, ಡ್ಯಾನ್ಸ್ ನನ್ನ ವೈಬ್‌ ಎಂದಿದ್ದರು. ನನಗೆ ಟ್ರಾವೆಲ್ ಮಾಡೋದು ಇಷ್ಟ. ಎಲ್ಲೇ ಟ್ರಾವೆಲ್ ಮಾಡಿದರೂ, ಅಲ್ಲಿಂದ ಒಂದು ಮೆಮೊರಿ ತರ್ತೀನಿ. ನನ್ನ ಮೈಮೇಲೆ ಇರುವ ಒಂದೊಂದು ಟ್ಯಾಟೂಗೂ ಒಂದೊಂದು ಸ್ಟೋರಿ ಇದೆ’’ ಎಂದಿದ್ದರು ಸೌಂದರ್ಯ ಶೆಟ್ಟಿ. ‘’ನಾನು ಅನಿಸಿದ್ದನ್ನ ನೇರವಾಗಿ ಹೇಳಿಬಿಡ್ತೀನಿ. ಮೈಂಡ್‌ನಿಂದ ಆಡೋಕೆ ಇಳಿದರೆ, ಎಲ್ಲರನ್ನ ಖಂಡಿತ ಮ್ಯೂನಿಪುಲೇಟ್ ಮಾಡ್ತೀನಿ. ನಾನು ಇದ್ದ ‘ಸ್ಪ್ಲಿಟ್ಸ್ ವಿಲ್ಲಾ ಸೀಸನ್ 16’ ಬ್ಲಾಕ್ ಬಸ್ಟರ್ ಆಯ್ತು. ಈಗ ಕರ್ನಾಟಕದಲ್ಲೂ ನನಗೆ ಜನರ ಪ್ರೀತಿ ಬೇಕಿದೆ’’ ಅಂತಂದಿದ್ದಾರೆ ಸೌಂದರ್ಯ ಶೆಟ್ಟಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕರ್ಣನಿಗೆ ಪದೇ ಪದೇ ಆಘಾತ; ಇಷ್ಟು ದಿನ ತೊಂದ್ರೆ ಕೊಡ್ತಿದವರಿಂದಲೇ ಬಯಲಾಯ್ತು ರಹಸ್ಯ!
Amruthadhaare: ಬ್ರೋ ಅದು ಭೂಮಿಕಾ ಅಲ್ಲ, ದೀಪಿಕಾ; ಬಯಲಾಗಿದ್ದು ಅರ್ಧ ಸತ್ಯ ಮಾತ್ರ