ಸುದೀಪ್ ಸರ್ ಯಾಕೆ ಆ ವ್ಯಕ್ತಿನ ಪ್ರಶ್ನೆ ಮಾಡ್ತಿಲ್ಲ?; Scripted ಬಗ್ಗೆ ಸತ್ಯ ಬಿಚ್ಚಿಟ್ಟ ಕಿರಿಕ್ ಕೀರ್ತಿ

By Vaishnavi Chandrashekar  |  First Published Nov 4, 2023, 12:04 PM IST

ಪದೇ ಪದೇ ಸ್ಕ್ರಿಪ್ಟ್‌ಟೆಡ್‌ ಅಂತ ಮಾತನಾಡುವ ಜನರಿಗೆ ಸ್ಪಷ್ಟನೆ ಕೊಟ್ಟ ಕಿರಿಕ್ ಕೀರ್ತಿ. ನಿಜಕ್ಕೂ ಸುದೀಪ್‌ ಸರ್ ಪ್ರತಿಯೊಬ್ಬರ ಜೊತೆ ಮಾತನಾಡಲ್ವಾ?
 


ಬಿಗ್ ಬಾಸ್ ಸೀಸನ್ 4ರಲ್ಲಿ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದಿರುವ ಕಿರಿಕ್ ಕೀರ್ತಿ ಈಗ ಸೀಸನ್ 10ರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಪದೇ ಪದೇ ಇದು ಸ್ಕ್ರಿಪ್ಟ್‌ಟೆಡ್‌ ಅಂತ ಪ್ರಶ್ನೆ ಮಾಡುವ ಜನರಿಗೆ ಕ್ಲಾರಿಟಿ ಕೊಟ್ಟಿದ್ದಾರೆ. ಇನ್ನು ವೀಕೆಂಡ್‌ನಲ್ಲಿ ಸ್ಪರ್ಧಿಗಳ ಕಷ್ಟ ಸುಖಗಳನ್ನು ಚರ್ಚೆ ಮಾಡುವ ಸುದೀಪ್‌ ಯಾಕೆ ಎಲ್ಲರೋಟ್ಟಿಗೂ ಮಾತನಾಡುವುದಿಲ್ಲ? ಯಾಕೆ ಎಲ್ಲರ ತಪ್ಪುಗಳು ಅಥವಾ ಜನರ ಹಾಕುವ ಪ್ರಶ್ನೆಗಳನ್ನು ಕೇಳಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. 

'ಬಿಗ್ ಬಾಸ್ ರಿಯಾಲಿಟಿ ಶೊ ಸ್ಕ್ರಿಪ್ಟ್‌ಟೆಡ್ ಹೌದಾ ಅಲ್ವಾ ಅಂತ ಈಗಾಗಲೆ ಸಾಕಷ್ಟು ಸ್ಪರ್ಧಿಗಳು ಸ್ಪಷ್ಟನೆ ನೀಡಿದ್ದಾರೆ. ನನ್ನ ಪ್ರಕಾರ ಬಿಗ್ ಬಾಸ್ ಸ್ಕ್ರಿಪ್ಟ್‌ಟೆಡ್...ಹೇಗೆ ಅಂದ್ರೆ...ಒಬ್ಬರನ್ನು ಕನ್ಫೆಷನ್‌ ರೂಮ್‌ಗೆ ಕರೆದು ಟಾಸ್ಕ್‌ ಬಗ್ಗೆ ಬರೆದುಕೊಡುತ್ತಾರೆ ಅಲ್ವಾ ಅದು ಸ್ಕ್ರಿಪ್‌...ಅಲ್ಲಿ ಏನು ಮಾಡಬೇಕು ಅನ್ನೋದು ಬರೆದಿರುತ್ತಾರೆ ಹೇಗೆ ಮಾಡಬೇಕು ಅನ್ನೋದು ಬರೆದಿರುವುದಿಲ್ಲ. ಹೇಗೆ ಮಾಡುತ್ತಾರೆ ಅನ್ನೋದು ಸ್ಪರ್ಧಿಗಳಿಗೆ ಬಿಟ್ಟಿದ್ದು. ಇದನ್ನು ಬಿಟ್ಟು ಬೇರೆ ಯಾವ ರೀತಿ ಸ್ಕ್ರಿಪ್ಟ್‌ ಬರೆದಿರುವುದಿಲ್ಲ'ಎಂದು ಕಿರಿಕ್ ಕೀರ್ತಿ ಮಾತನಾಡಿದ್ದಾರೆ.  

Tap to resize

Latest Videos

35 ಕಂಪನಿ ಇಲ್ವೇ ಇಲ್ಲ, ಹಣ ತಗೊಂಡು ಮೋಸ ಮಾಡಿಲ್ಲ: ವಿನಯ್ ಪತ್ನಿ ಸ್ಪಷ್ಟನೆ

'ಈಗ ಸಾಕಷ್ಟು ಜನರಿಗೆ ಮತ್ತೊಂದು ಪ್ರಶ್ನೆ ಬರುತ್ತಿದೆ. ಯಾಕೆ ಸುದೀಪ್ ಸರ್ ಎಲ್ಲರನೂ ಪ್ರಶ್ನೆ ಮಾಡುತ್ತಿಲ್ಲ ಅಂತ. ನೀವು ಗಮನಿಸಿರುವುದು ಸುಳ್ಳು...ಬಿಗ್ ಬಾಸ್ ರಿಯಾಲಿಟಿ ಶೋ ಮನೋರಂಜನೆ ನೋಡಲು ಕೂರಿಸಿರುವುದು...ಅಲ್ಲಿ ಹೋಗೆ ಜೇನುಗೂಡು ನಾವೆಲ್ಲಾ ಅನ್ನೋ ರೀತಿ ಇರಲು ಕಳುಹಿಸಿರುವುದಿಲ್ಲ. ಈಗ ಆಗುತ್ತಿರುವ ಜಗಳಗಳು ನಡೆಯುತ್ತಿದ್ದರೆ ಮಾತ್ರ ಜನರು ನೋಡುವುದು. ನಮ್ಮ ಸೀಸನ್‌ನಲ್ಲಿ ಪ್ರತಮ್ ಇದ್ದ ಕಾರಣ ಹೆಚ್ಚು ವೀಕ್ಷಣೆ ಪಡೆಯಿತ್ತು. ಬಿಗ್ ಬಾಸ್ ಅಂದ್ರೆ ಟಾಸ್ಕ್‌ ಮಾತ್ರವಲ್ಲ ಮನೋರಂಜನೆ ಅಲ್ಲ ಡ್ಯಾನ್ಸ್ ಅಲ್ಲ. ಸುದೀಪ್ ಸರ್ ಕೆಲವೊಮ್ಮೆ ಒಬ್ಬೊಬ್ಬರನ್ನು ಸುಮ್ಮನೆ ಬಿಡುತ್ತಾರೆ..ಕೆಲವೊಮ್ಮೆ ಜ್ಯಾಕ್ ಎತ್ತುತ್ತಾರೆ. ಅವರು ಏನು ಮಾಡುತ್ತಾರೆ ಅವರ ಗುಂಡಿಗೆ ಅವರೇ ಬೇಳಬೇಕು ಆಗ ಮಾತ್ರ ಅವರಿಗೆ ಏನಾಗುತ್ತಿದೆ ಎಂದು ಗೊತ್ತಾಗುತ್ತದೆ. ಅದು ಜಾಣತನ' ಎಂದು ಕೀರ್ತಿ ಹೇಳಿದ್ದಾರೆ. 

ಮೈಸೂರ್ ಸಿಲ್ಕ್‌ ಆಯ್ತು ಈಗ ಬಾಂದಿನಿ ಸೀರೆಗೂ ಬ್ಲೌಸ್ ಹಾಕಿಲ್ಲ; ನಟಿ ನಿಹಾರಿಕಾ ಹಿಗ್ಗಾಮುಗ್ಗಾ ಟ್ರೋಲ್!

' ಕಳೆದ ವಾರ ಸುದೀಪ್ ಸರ್ ಮಾತನಾಡಿರುವುದು ಗಮನಿಸಿದರೆ. ನಾನು ಅನೆ ಅಲ್ವಾ ನನಗೆ ಶಕ್ತಿ ಇಲ್ವಾ ಎಂದು ಯೋಚನೆ ಮಾಡಿದ ಮೇಲೆ ಈ ವಾರ ಟಾಸ್ಕ್‌ ಚೆನ್ನಾಗಿ ನಡೆಯುತ್ತಿರುವುದು. ಆ ಶೋ ನೋಡಿ ನಿಮಗೆ ಮಜಾ ಸಿಗಬೇಕು ಕಿಕ್ ಸಿಗಬೇಕು ಅಂದ್ರೆ ಶೋ ಇದೇ ಇರ ಇರಬೇಕು..ಯಾರೂ ಜಗಳ ಮಾಡಿಲ್ಲ ಅಂದ್ರೆ ಯಾರೂ ನೋಡಲ್ಲ ಜಾಹಿತಾರು ಸಿಗಲ್ಲ ಟಿಆರ್‌ಪಿ ಬರಲ್ಲ. ಯಾರಿಗೂ ಹೀಗೆ ಮಾತನಾಬೇಕು ಹೀಗೆ ಇರಬೇಕು ಅನ್ನೋ ಹೇಳಿಕೊಟ್ಟಿಲ್ಲ. ಅಲ್ಲಿರುವ ಸ್ಪರ್ಧಿಗಳು ಒಳಗೆ ಅವರೇ ಗೋಡೆ ಕಟ್ಟಿಕೊಳ್ಳುತ್ತಿದ್ದಾರೆ ಅವರೇ ಗುಂಡಿ ತೋಡಿಕೊಳ್ಳುತ್ತಿದ್ದಾರೆ. ಕೇವಲ ಒಂದೇ ವಾರಕ್ಕೆ ಸ್ಪರ್ಧಿಗಳು ಕ್ಯಾಮೆರಾ ಇದೆ ಅನ್ನೋದು ಮರೆಯುತ್ತಾರೆ' ಎಂದಿದ್ದಾರೆ ಕೀರ್ತಿ. 

 

 

click me!