ರೊಮಾನ್ಸ್ ಸೀನ್​ ಮಾಡುವಾಗ ಕೆಲವು ನಟಿಯರು ಕೊಡೋ ಕಾಟದ ಬಗ್ಗೆ ಕಿಚ್ಚ ಸುದೀಪ್​ ಓಪನ್​ ಮಾತು!

Published : Dec 23, 2024, 09:55 PM ISTUpdated : Dec 24, 2024, 09:59 AM IST
 ರೊಮಾನ್ಸ್ ಸೀನ್​ ಮಾಡುವಾಗ ಕೆಲವು ನಟಿಯರು ಕೊಡೋ ಕಾಟದ ಬಗ್ಗೆ ಕಿಚ್ಚ ಸುದೀಪ್​ ಓಪನ್​ ಮಾತು!

ಸಾರಾಂಶ

ಸುದೀಪ್​ 'ಮ್ಯಾಕ್ಸ್​' ಚಿತ್ರ ಬಿಡುಗಡೆ ನಿರೀಕ್ಷೆಯಲ್ಲಿದ್ದು, ಅನುಶ್ರೀ ಯೂಟ್ಯೂಬ್​ ಚಾನೆಲ್​ಗೆ ಸಂದರ್ಶನ ನೀಡಿದ್ದಾರೆ. ಚಿತ್ರದಲ್ಲಿನ ರೊಮ್ಯಾನ್ಸ್​, ನೃತ್ಯದ ಕಷ್ಟಗಳನ್ನು ಹಾಸ್ಯಮಯವಾಗಿ ವಿವರಿಸಿದ್ದಾರೆ. ಬಿಗ್​ಬಾಸ್​ ಬಿಟ್ಟಿದ್ದಕ್ಕೆ ತೀವ್ರ ಶ್ರಮ, ಅದರ ಗುರುತಿಸುವಿಕೆ ಇಲ್ಲದಿರುವುದೇ ಕಾರಣ ಎಂದಿದ್ದಾರೆ.

ಬರುವ ಸೀಸನ್​ಗಳ ಬಿಗ್​ಬಾಸ್​ಗೆ ಗುಡ್​ಬೈ ಹೇಳಿರೋ ಕಿಚ್ಚ ​ ಸುದೀಪ್​ ಅವರು ಸದ್ಯ ಮ್ಯಾಕ್ಸ್​ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಇದೇ 25ರಂದು ಚಿತ್ರ ಬಿಡುಗಡೆಯಾಗಲಿದೆ. ಇದೇ ಸಂದರ್ಭದಲ್ಲಿ ಅವರು ಹಲವರು ಮಾಧ್ಯಮಗಳಿಗೆ ಇದಾಗಲೇ ತಮ್ಮ ಬದುಕು, ಬಿಗ್​ಬಾಸ್​ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೀಗ ನಟ, ಆ್ಯಂಕರ್​ ಅನುಶ್ರೀ ಅವರ ಯೂಟ್ಯೂಬ್​ ಚಾನೆಲ್​ಗೆ ಸಂದರ್ಶನ ನೀಡಿದ್ದು, ಅದರಲ್ಲಿಯೂ ವಿಭಿನ್ನ ರೀತಿಯ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.  ಅನುಶ್ರೀ ಅವರ ಅಭಿಮಾನಿಗಳು ಕಾಯುತ್ತಿದ್ದ ಆ ದಿನ ಕೊನೆಗೂ ಬಂದು ಬಿಟ್ಟಿದೆ. ಸುದೀಪ್​ ಸರ್​ರನ್ನು ಯಾವಾಗ ಕರೆಸ್ತೀರಾ ಎಂದು ಕೇಳುವ ಪ್ರೊಮೋ ಒಂದನ್ನು ಅನುಶ್ರೀ ಅವರು ಮೊನ್ನೆ ಶೇರ್​ ಮಾಡಿಕೊಂಡಿದ್ದರು. ಇದರಲ್ಲಿ  ಬೇರೆ ಬೇರೆ ಗಲ್ಲಿಗಳಲ್ಲಿ, ವಿಭಿನ್ನ ರೀತಿಯ ಅಭಿಮಾನಿಗಳು ಈ ಪ್ರಶ್ನೆಯನ್ನು ಅನುಶ್ರೀ ಅವರ ಮುಂದಿಟ್ಟಿದ್ದರು.  ಇದೀಗ ಆ ಸಂದರ್ಶನವನ್ನು ಅನುಶ್ರೀ ಅವರು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಶೇರ್​  ಮಾಡಿಕೊಂಡಿದ್ದಾರೆ.

ಇದರಲ್ಲಿ ಹಲವಾರು ವಿಷಯಗಳ ಬಗ್ಗೆ ಆ್ಯಂಕರ್​ ಅನುಶ್ರೀ ಮಾತನಾಡಿದ್ದಾರೆ. ಅದರಲ್ಲಿ ಅವರು ಸರ್​ ನಿಮಗೆ ತುಂಬಾ ಕಷ್ಟ ಎನ್ನಿಸುವುದು ಯಾವುದು? ಆ್ಯಕ್ಷನ್ನಾ, ರೊಮಾನ್ಸಾ ಅಥ್ವಾ ಡಾನ್ಸಾ ಎಂದು ಪ್ರಶ್ನಿಸಿದ್ದಾರೆ. ಆಗ ಜೋರಾಗಿ ನಕ್ಕಿರೋ ಸುದೀಪ್​ ಅವರು ರೊಮಾನ್ಸ್​ ಬಗ್ಗೆ ಕ್ಲಾರಿಫಿಕೇಷ್​ ಕೊಟ್ಟು ಅದನ್ನು ಮಾಡುವುದು ಎಷ್ಟು ಕಷ್ಟ ಎನ್ನುವುದನ್ನು ತಿಳಿಸಿದ್ದಾರೆ. ನಟಿಯರ ಜೊತೆ ರೊಮಾನ್ಸ್​ ಮಾಡುವಾಗ ತಮಗೆ ಏನಾಲ್ಲಾ ಕಷ್ಟ ಆಗುತ್ತದೆ ಎನ್ನುವುದನ್ನು ಅವರು ಇದರಲ್ಲಿ ಹೇಳಿದ್ದಾರೆ.  ರೊಮಾನ್ಸ್ ಅನ್ನೋದು ಎದುರಿಗಿರುವ ಕಾಸ್ಟಿಂಗ್ ಅಂದರೆ ನಟಿಯರ ಮೇಲೆ ಹೋಗತ್ತೆ. ಕೆಲವೊಮ್ಮೆ ನಟಿಯರು ಫ್ರೆಂಡ್ಸ್​​ ಆಗಿರ್ತಾರೆ, ಈಸಿಯಾಗಿ ನಡೆದು ಹೋಗುತ್ತೆ. ಆದರೆ ಕೆಲವರು ಮೇಕಪ್​ ಮೇಲೆ ಸಿಕ್ಕಾಪಟ್ಟೆ ಕಾನ್ಶಿಯಸ್​ ಆಗ್ತಿರ್ತಾರೆ. ಅದೇನೂ ತಪ್ಪು ಅನ್ನೋಕೆ ಆಗಲ್ಲ. ಆದರೆ ಆಗ ಸ್ವಲ್ಪ ಕಷ್ಟ ಆಗುತ್ತೆ ಎನ್ನುತ್ತಲೇ ಅವರು ರೊಮಾನ್ಸ್​ ಮಾಡಲು ಹೋಗುವಾಗ ಮೇಕಪ್​ ಹಾಳಾಗತ್ತೆ, ಕೂದಲು ಹಾಳಾಗತ್ತೆ ಎಂದು ಇಲ್ಲಿ ಮುಟ್ಟಿ, ಅಲ್ಲಿ ಮುಟ್ಟಬೇಡಿ ಎಂದೆಲ್ಲಾ ಹೇಳ್ತಾರೆ, ಆಗ ತುಂಬಾ ಕಷ್ಟವಾಗಿ ಬಿಡುತ್ತೆ ಎಂದು ತಮಾಷೆ ಮಾಡಿದ್ದಾರೆ.

ಬಿಗ್​ಬಾಸ್​ನಿಂದ ಹೊರಬರಲು ಕೊನೆಗೂ ಕಾರಣ ನೀಡಿದ ಸುದೀಪ್​: ಅಭಿಮಾನಿಗಳ ಪ್ರಶ್ನೆಗೆ ಸಿಕ್ಕಿತು ಉತ್ತರ...
 
ಇದೇ ಸಂದರ್ಶನದಲ್ಲಿ ತಾವು ಡಾನ್ಸ್​ ಮಾಡೋದು ನನಗೆ ಆಗಿ ಬರಲ್ಲ ಎನ್ನುತ್ತಲೇ ಅದಕ್ಕೂ ಉದಾಹರಣ ಕೊಟ್ಟಿದ್ದಾರೆ. ನನ್ನಿಂದ ಡಾನ್ಸ್​ ಮಾಡಿಸಲೇ  ಬೇಕು ಅಂದಾಗ ನಿರ್ದೇಶಕರು ಡಾನ್ಸ್ ಬರದ ನಟರ ವಿಡಿಯೋ ತೋರಿಸಿ, ಇವರು ಹೀಗೆ ಮಾಡ್ತಾರೆ, ನೀವು ಚೆನ್ನಾಗಿ ಮಾಡಬಹುದು ಅಂತ ಹುರಿದುಂಬಿಸ್ತಾರೆ. ಅದರೆ ಅಪ್ಪು ಅವರಂಥವರ ಡಾನ್ಸ್​ ನೋಡಿದಾಗ ನಾನು ಡಾನ್ಸ್​ ಮಾಡುವ ಗೋಜಿಗೆ ಹೋಗಲ್ಲ. ಆದ್ದರಿಂದ ಡಾನ್ಸ್​ ಸೀನ್​ ಬಂದಾಗಲೆಲ್ಲಾ ಮೂಡ್​ ಡಿಫರೆಂಟ್​ ಆಗಿರುತ್ತೆ. ಒಂದು ವೇಳೆ ಯಾವುದಾದರೂ ಸಿನಿಮಾದಲ್ಲಿ ಒಳ್ಳೆಯ ಡಾನ್ಸ್​ ಮಾಡಿದ್ದೆ ಅಂದ್ರೆ, ಆಗ ಯಾರೋ ಒಬ್ಬ ಡಾನ್ಸ್ ಬರದ ನಟನ ವಿಡಿಯೋ ತೋರಿಸಿ ಡಾನ್ಸ್​ ಮಾಡಿಸಿದ್ದಾರೆ ಎಂದೇ ಅರ್ಥ ಎಂದಿದ್ದಾರೆ. 

ಈ ಹಿಂದೆ ಸಂದರ್ಶನವೊಂದರಲ್ಲಿ ಸುದೀಪ್​ ಅವರು ತಾವು ಬಿಗ್​ಬಾಸ್​ ಬಿಟ್ಟ ಕಾರಣವನ್ನು ನೀಡಿದ್ದರು.   'ಎಲ್ಲರನ್ನೂ ರಿಪೇರಿ ಮಾಡ್ತಾ ಕುಳಿತುಕೊಳ್ಳಲು ನಾನು ಬಂದಿಲ್ಲ, ಎಷ್ಟು ಅಂತ ಮಾಡೋದು, ಸಾಕಾಗಿದೆ ಇಷ್ಟು ವರ್ಷ ಮಾಡಿದ್ದು ಸಾಕು.  ಬಿಗ್​ಬಾಸ್​ ಎಂದರೆ ಸುಮ್ಮನೇ ಅಲ್ಲ, ಸಿಕ್ಕಾಪಟ್ಟೆ ಎಫರ್ಟ್​ ಹಾಕಬೇಕು. ಈ ಎಫರ್ಟ್​ ಯಾರಿಗೂ ಅರ್ಥ ಆಗಲ್ಲ ಎಂದು ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ಸಲದ ಉದಾಹರಣೆಯನ್ನೇ ಕೊಡುತ್ತೇನೆ ನೋಡಿ. ಚೆನ್ನೈನಿಂದ ಒಂದೂವರೆ ಗಂಟೆ ದೂರ ಇರುವ ಮಹಾಬಲಿಪುರಂನಲ್ಲಿ ಶೂಟಿಂಗ್ ನಡೆಯುತ್ತಿತ್ತು. ಬೆಂಗಳೂರಿನಿಂದ ನಾನು ಹೋಗುವ ವಿಷಯ ಹೇಳುವುದಾದರೆ, ಮನೆಯಿಂದ  ಏರ್​ಪೋರ್ಟ್​ಗೆ ಒಂದೂವರೆ ಗಂಟೆ. ಬಳಿಕ ಒಂದು ಗಂಟೆ ವಿಮಾನಕ್ಕಾಗಿ ವೇಟಿಂಗ್​. ಅಲ್ಲಿಂದ ಚೆನ್ನೈಗೆ ಹೋಗಲು ನಲವತ್ತು ನಿಮಿಷ. ಅಲ್ಲಿಂದ ಒಂದೂವರೆ ಗಂಟೆ ಮತ್ತೆ ಪ್ರಯಾಣ. ಅಲ್ಲಿ ಶೂಟಿಂಗ್​ ನಡೆಯುತ್ತಿತ್ತು. ಇಷ್ಟು ಕಷ್ಟ ಪಡಬೇಕಾಗಿತ್ತು' ಎನ್ನುವ ಮೂಲಕ ಬಿಗ್​ಬಾಸ್​ ಪಯಣಕ್ಕೆ ಸುದೀಪ್​ ಅವರು ವಿದಾಯ ಹೇಳಿದ್ದಾರೆ. ಮುಂದೆ ಯಾರ ನೇತೃತ್ವದಲ್ಲಿ ಬಿಗ್​ಬಾಸ್​ ಬರುತ್ತೆ ಎಂದು ವೀಕ್ಷಕರು ಕಾಯುತ್ತಿದ್ದಾರೆ.

ಉಪೇಂದ್ರ ಇರೋ ಕಡೆ ಬಿಗ್​ಬಾಸ್ ಯಾಕೆ? ಅವ್ರೊಂದು ಹೇಳಿದ್ರೆ, ಇವ್ರೊಂದು ಹೇಳ್ತಾರೆ- ಸುದೀಪ್​ ಮಾತು ಕೇಳಿ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?