ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಪುಟ್ಟಕ್ಕನ ಕುರಿತಾದ ಹಾಡು ಪ್ರಸಾರವಾಗಿದೆ. ಪುಟ್ಟಕ್ಕ ಎಂಬ ಗಟ್ಟಿತನದ ಹಳ್ಳಿ ಹೆಂಗಸಿನ ಬಗೆಗಿನ ಈ ಹಾಡು ಎಲ್ಲ ಹಳ್ಳಿ ಹೆಂಗಸರ ಹಾಡಾಗಿ ಗಮನ ಸೆಳೆಯುತ್ತಿದೆ..
ಮಂಡ್ಯ ಕಳೆದ ಮೂರ್ನಾಲ್ಕು ದಿನಗಳಿಂದ ಎರಡು ಕಾರಣಕ್ಕೆ ಸುದ್ದಿಯಲ್ಲಿದೆ. ಒಂದು ಅಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನ. ಇನ್ನೊಂದು ಮಂಡ್ಯದಲ್ಲಿ ಸಹನಾ ಶುರು ಮಾಡ್ತಿರೋ ಮೆಸ್. ಇದಕ್ಕೆ ಅವಳು ತನ್ನ ತಾಯಿ ಪುಟ್ಟಕ್ಕನ ಹೆಸರನ್ನ ಇಟ್ಟಿದ್ದಾಳೆ. ಈ ಮೆಸ್‌ನ ನೆವದಲ್ಲಿ ಪುಟ್ಟಕ್ಕನನ್ನ ಗುಣಗಾನ ಮಾಡುವಂಥಾ ಹಾಡೊಂದನ್ನು ಜೀ ಕನ್ನಡ ಚಾನೆಲ್ ಪ್ರಸಾರ ಮಾಡಿದೆ. ಈ ಹಾಡನ್ನು ಬಹಳ ಮಂದಿ ಇಷ್ಟಪಟ್ಟಿದ್ದಾರೆ. 'ನಾನೇನ್ ಕೈಗೆ ಬಳೆ ತೊಟ್ಟಿಲ್ಲ' ಅನ್ನೋ ಡೈಲಾಗ್ ಹೊಡೆಯೋ ನಾಲಾಯಕ್ ಗಂಡಸರ ಮಧ್ಯೆ ಕೈಗೆ ಬಳೆ ತೊಟ್ಟು, ಸೀರೆ ಉಟ್ಟು ಗಟ್ಟಿ ಬದುಕು ಬದುಕೋ ಪುಟ್ಟಕ್ಕನಂಥ ಹೆಣ್ಣುಮಕ್ಕಳು ನಮ್ಮ ನಡುವೆ ಸಾಕಷ್ಟು ಮಂದಿ ಇದ್ದಾರೆ. ನಾನಾ ಕಥಾ ಎಳೆಗಳ ನಡುವೆ ಅಂಥ ಹಳ್ಳಿ ಹೆಣ್ಣುಮಕ್ಕಳ ಗಟ್ಟಿತನದ ಕಥೆಯಾಗಿ 'ಪುಟ್ಟಕ್ಕನ ಮಕ್ಕಳು' ಸೀರಿಯಲ್ ಬರುತ್ತಿದೆ.
ಆದರೆ ಇತ್ತೀಚೆಗೆ ಸ್ನೇಹ ಎಂಬ ಹೊಸ ಮಾತ್ರ ಮತ್ತವಳ ತಂದೆಯ ಪಾತ್ರವನ್ನು ತಂದು ಸೀರಿಯಲ್ ನೋಡದ ಹಾಗೆ ಮಾಡಿದ್ದಾರೆ ಎಂಬ ಟೀಕೆಗಳೂ ವೀಕ್ಷಕರ ವಲಯದಿಂದ ಬರುತ್ತಿವೆ. ಆದರೆ ಜನ ಪುಟ್ಟಕ್ಕ, ಸಹನ ಎಪಿಸೋಡ್ ಬಂದಾಗ ಅಂಥಾ ಕಿರಿಕಿರಿಗಳನ್ನೆಲ್ಲ ಸೈಡಿಗಿಟ್ಟು ಈ ಸೀರಿಯಲ್ ನೋಡುತ್ತಾರೆ. ಎಷ್ಟೋ ಹಳ್ಳಿ ಹೆಣ್ಣುಮಕ್ಕಳು ತಮ್ಮ ಬದುಕಿಗೆ ಪುಟ್ಟಕ್ಕನಿಂದ ಸ್ಫೂರ್ತಿ ಪಡೆಯುತ್ತಿದ್ದಾರೆ.
undefined
ಆ ಘಟನೆ ನಂತ್ರ ಹೆಂಡ್ತಿಗೆ ಸೀರೆ ಕೊಡಿಸೋ ಧೈರ್ಯ ಇಂದಿಗೂ ಮಾಡ್ಲಿಲ್ಲಾ ಸಾರ್... ನಾ.ಸೋಮೇಶ್ವರ್ ಹೇಳಿದ್ದು ಕೇಳಿ...
ಇನ್ನು ಈ ಸೀರಿಯಲ್‌ನಲ್ಲಿ ಸದ್ಯ ಸಹನಾ ಮಂಡ್ಯದಲ್ಲೊಂದು ಮೆಸ್ ತೆಗೆದಿದ್ದಾಳೆ. ಅವಳ ಜೊತೆಗೆ ಕಾಳಿ ನಿಂತಿದ್ದಾನೆ. ಫಾರಿನ್‌ನಿಂದ ಬಂದ ಯೂಟ್ಯೂಬರ್ ಮ್ಯಾಕ್ಸ್‌ಗೂ ಸಹನಾ ಎಂಬ ಈ ಹೆಣ್ಣುಮಗಳ ಬಗ್ಗೆ ಅಭಿಮಾನ. ಆತನೂ ಈ ಮೆಸ್‌ನಲ್ಲಿ ಸಹನಾ ಜೊತೆಗೆ ನಿಂತಿದ್ದಾನೆ. ಈ ಮೆಸ್ಸನ್ನು ತನ್ನ ಬದುಕಿಗೆ ಆದರ್ಶವಾಗಿರುವ ಪುಟ್ಟಕ್ಕನ ಹೆಸರಲ್ಲೇ ತೆಗೀಬೇಕು ಅಂತ ಮಗಳು ಸಹನಾ ಟೊಂಕಕಟ್ಟಿ ನಿಂತಿದ್ದಾಳೆ. ಸ್ವತಂತ್ರ್ಯ ಬದುಕು ಕಟ್ಟಿಕೊಳ್ಳೋದು ಅವಳ ಕನಸು. ಅದು ಸದ್ಯ ಕಾಳಿ ಹುಡುಕಿಕೊಟ್ಟಿರೋ ಈ ಮೆಸ್‌ನಿಂದಾಗಿ ಅವಳ ಕನಸು ಸಾಕಾರಗೊಳ್ಳೋದರಲ್ಲಿದೆ.
ಇನ್ನು ಈ ಸೀರಿಯಲ್ ಕೊನೆಯ ಹಂತದಲ್ಲಿದೆ ಎಂದು ಸೀರಿಯಲ್ ಟೀಮ್ ಹೇಳ್ತಿತ್ತು. 'ಪುಟ್ಟಕ್ಕನ ಗುರಿಗಳು ರೀಚ್ ಆಗುತ್ತವೆ. ಒಳ್ಳೆ ಎಂಡಿಂಗ್ ಅಂತು ಕೊಡ್ತೀವಿ. ಬೋರ್ ಹೊಡೆಸಿ ಸೀರಿಯಲ್ ಎಂಡ್ ಮಾಡಲ್ಲ. ಒಳ್ಳೆ ಟಿಆರ್‌ಪಿ, ಪೀಕ್‌ನಲ್ಲಿರುವಾಗಲೇ ಈ ಸೀರಿಯಲ್ ಕೊನೆ ಆಗುತ್ತೆ. ಇದಕ್ಕೆ ಇನ್ನೊಂದು ವರ್ಷ ಹೋಗಬಹುದು ಎಂದುಕೊಳ್ಳುತ್ತೇನೆ. ಸದ್ಯ ಈ ಸೀರಿಯಲ್ ಚೆನ್ನಾಗಿ ಹೋಗ್ತಾ ಇದೆ. ಇದು ಹೆಣ್ಣು ಮಕ್ಕಳದ್ದೇ ಧಾರಾವಾಹಿ. ಹೀಗಾಗಿ ಹೆಣ್ಣು ಮಕ್ಕಳೇ ಜಾಸ್ತಿ ಇದ್ದಾರೆ. ಅದ್ದೂರಿ ವೆಚ್ಚದಲ್ಲಿ ಮಾಡದೆ ಇದ್ದರೂ, ಕಂಟೆಂಟ್ ಇರುವಂಥಾ ಧಾರಾವಾಹಿ ಮಾಡಿದ್ರೆ, ಸಂಬಂಧಗಳಿಗೆ ಹತ್ತಿರವಾದ ಕಥೆ ಮಾಡಿದ್ರೆ ಖಂಡಿತ ಅದು ಹಿಟ್ ಆಗುತ್ತೆ. ಈ ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರ ಕೂಡ ಹಿಟ್ ಆಗಿದೆ. ಕಾಳಿ, ಗೋಪಾಲ, ರಾಜೀ, ಸಹನಾ, ಸ್ನೇಹಾ ಎಲ್ಲರ ಪಾತ್ರವೂ ಹಿಟ್ ಆಗಿದೆ. ಇನ್ನು ಕೊನೆಯ ಮಗಳು ಸುಮ ಪಾತ್ರವೊಂದು ಹಿಟ್ ಆಗಬೇಕಿದೆ. ಸುಮ ಪಾತ್ರಕ್ಕೂ ಒಂದು ತೂಕ ಬರುವಂತೆ ಮಾಡುತ್ತೀವಿ. ಕೊನೆಯಲ್ಲಿ ಅವಳ ಕನಸು ಏನಿದೆ ಪುಟ್ಟಕ್ಕನ ಮೂಲಕ ಈಡೇರಿಸುವಂತೆ ಮಾಡ್ತೀವಿ' ಅನ್ನುವ ಮಾತನ್ನು ಈ ಸೀರಿಯಲ್ ನಿರ್ದೇಶಕ ಜಗದೀಶ್ ಆರೂರು ಹೇಳಿದ್ದರು.
ಅರ್ಧದಲ್ಲೇ ಅನುಪಮಾ ಸೀರಿಯಲ್‌ನಿಂದ ಹೊರ ನಡೆದ ನಟಿ ಅಲಿಶಾ
ಸದ್ಯ ಇದರಲ್ಲಿ ಸಹನಾ ಹೊಸ ಮೆಸ್ಸಿನ ನೆವದಲ್ಲಿ ಪುಟ್ಟಕ್ಕನ ಗಟ್ಟಿತನ ಸಾರೋ ಹಾಡು ಸಖತ್ ವೈರಲ್ ಆಗ್ತಿದೆ. 'ಹೆಣ್ಣುಮಕ್ಕಳನು ಹೆತ್ತೋಳು, ಎಲ್ಲ ದೇವರಿಗೂ ದೊಡ್ಡೋಳು. ಸೀರೆ ಬಳೆಯನು ತೊಟ್ಟೋಳು, ಇವಳೆ ದೇಶವನು ಕಟ್ಟೋಳು' ಎಂಬ ಸಾಲುಗಳು ಜನರ ಫೇವರೆಟ್ ಆಗಿದೆ. ಈ ಸಿನಿಮಾ ಹಾಡಿಗೂ ಮೀರಿ ಉಮಾಶ್ರೀ ನಟನೆಯ ಈ ಹಾಡು ಜನಪ್ರಿಯವಾಗುತ್ತಿದೆ.