ಬಿಗ್‌ಬಾಸ್ ಸಂಭಾವನೆ ಬಗ್ಗೆ ಕಡೆಗೂ ಬಾಯ್ಬಿಟ್ರು ಕಿಚ್ಚ ಸುದೀಪ್!

By Web DeskFirst Published Oct 12, 2019, 11:03 AM IST
Highlights

ಕಿರುತೆರೆಯಲ್ಲಿ ಮತ್ತೆ ಬಿಗ್‌ಬಾಸ್ ಜ್ವರ ಶುರುವಾಗುತ್ತಿದೆ. ನಾಳೆಯಿಂದ(ಅ.13) ‘ಬಿಗ್‌ಬಾಸ್ ಸೀಸನ್ 7’ ಆರಂಭ. ಸೋಮವಾರದಿಂದ ಪ್ರತೀ ರಾತ್ರಿ 9 ಗಂಟೆಗೆ ಬಿಗ್‌ಬಾಸ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಬಿಗ್‌ಬಾಸ್ 7 ಕುರಿತು ನಿರೂಪಕ ಸುದೀಪ್ ಹೇಳಿದ 10 ಸಂಗತಿಗಳು ಇಲ್ಲಿವೆ.
 

1 ನಾನಿನ್ನೂ ಬಿಗ್‌ಬಾಸ್ ಮನೆಗೆ ಹೋಗಿಲ್ಲ

ವೀಕ್ಷಕರಲ್ಲಿರುವ ಪ್ರಶ್ನೆಗಳೇ ನನಗೂ ಇವೆ. ಯಾರೆಲ್ಲ ಇರುತ್ತಾರೆ ಅಂತ ನಾನು ಯಾವತ್ತೂ ಕೇಳಿಲ್ಲ. ಅದು ಚಾನೆಲ್ ಕಡೆಯಿಂದ ಆಗುವ ಒಪ್ಪಂದವೂ ಹೌದು. ನಾನಿನ್ನೂ ಬಿಗ್‌ಬಾಸ್ ಮನೆಗೆ ಹೋಗಿಲ್ಲ.

2 ಪ್ರತೀ ಸೀಸನ್‌ಗೂ ಬಿಗ್‌ಬಾಸ್ ಹೊಸತು

ಬಿಗ್‌ಬಾಸ್‌ಗೆ ಬರುವವರು ಹಿಂದಿನ ಸೀಸನ್‌ಗಳಲ್ಲಿ ಗೆದ್ದವರನ್ನು ಫಾಲೋ ಮಾಡಿದ್ರೆ, ಸುಲಭವಾಗಿ ಗೆಲ್ಲಬಹುದು, ಜನರ ಸಿಂಪಥಿ ಪಡೆಯಬಹುದು ಅಂದುಕೊಂಡಿರುತ್ತಾರೆ. ಅಂತಹ ವ್ಯಕ್ತಿತ್ವಗಳನ್ನು ನಾನು ನೋಡಿದ್ದೇನೆ. ಆದರೆ ಬಿಗ್‌ಬಾಸ್ ಹಾಗಿರುವುದಿಲ್ಲ. ಪ್ರತಿ ಸೀಸನ್‌ಗೂ ಸಾಕಷ್ಟು ವ್ಯತ್ಯಾಸ ಇರುತ್ತೆ. ಜನ ಹೊಸತನ ನೋಡಲು
ಇಚ್ಚಿಸುತ್ತಾರೆ. ನೀವು ನೀವಾಗಿ ಬನ್ನಿ. ನಿಮ್ಮ ತನವನ್ನು ತೋರಿಸಿ.

ಬಿಗ್ ಬಾಸ್ ಓಪನಿಂಗ್‌ಗೆ ಕ್ಷಣಗಣನೆ, ಬೆಳೆಗೆರೆ ಸೇರಿ ಕಂಟೆಸ್ಟಂಟ್ ಗಳ ಫೈನಲ್ ಲಿಸ್ಟ್

3 ಅದು ನನ್ನದೇ ಮನೆ

ಬಿಗ್‌ಬಾಸ್ ನನಗೆ ಯಾಕೆ ಇಷ್ಟ ಅಂದರೆ ಅದರೊಂದಿಗೆ ಬೆಸೆದುಕೊಂಡ ಒಡನಾಟ. ಬಿಗ್‌ಬಾಸ್ ಕಾರ್ಯಕ್ರಮವನ್ನು ಯಾವತ್ತಿಗೂ ನಾನು ಸಂಭಾವನೆಗೆ ತಳಕು ಹಾಕಿಲ್ಲ. ನಿಜ, ಅಲ್ಲಿ ತುಂಬಾ ಒತ್ತಡ ಇರುತ್ತೆ. ಎಲ್ಲಿಯೇ ಇದ್ದರೂ ಪ್ರತಿ ಶನಿವಾರ, ಭಾನುವಾರ ಬಂದು ಶೂಟಿಂಗ್ ಮುಗಿಸಬೇಕು. ಅದು ತಮಾಷೆ ಅಲ್ಲ. ಆದ್ರೆ ನನಗೆ ಅದು ಒತ್ತಡ ಅಂತ ಎನಿಸಿಲ್ಲ. ಅದು ಖುಷಿ ಕೊಟ್ಟಿದೆ, ಸಾಕಷ್ಟು ಕಲಿತಿದ್ದೇನೆ, ತಾಳ್ಮೆ ಬಂದಿದೆ. ನನ್ನನ್ನು ನಾನು ಕಂಡು ಕೊಂಡಿದ್ದೇನೆ. ಅದು ನನ್ನ ಮನೆ ಎಂದೆನಿಸುತ್ತದೆ.

4 ಫಸ್ಟ್ ಸೀಸನ್ ಫೇವರಿಟ್

ಆರು ಸೀಸನ್ ಮುಗಿದಿವೆ. ಹಲವಾರು ಮಂದಿ ಇಲ್ಲಿಗೆ ಬಂದು ಹೋಗಿದ್ದಾರೆ. ಹತ್ತಾರು ವ್ಯಕ್ತಿತ್ವಗಳನ್ನು ನಾನು ನೋಡಿದ್ದೇನೆ. ಆದರೆ ನನಗೆ ಫೇವರಿಟ್ ಮೊದಲ ಸೀಸನ್. ಆ ಹೊತ್ತಿಗೆ ಬಿಗ್‌ಬಾಸ್ ಬಗ್ಗೆ ಹೆಚ್ಚಾಗಿ ಯಾರಿಗೂ ಗೊತ್ತಿರಲಿಲ್ಲ. ಬಂದವರಿಗೆಲ್ಲ ಮೊದಲ ಅನುಭವ. ಅವರೆಲ್ಲ ಅಮಾಯಕರಂತೆಯೇ ಇದ್ದವರು. ನಿಜಕ್ಕೂ ಅವರು ಅಲ್ಲಿ ತಾವು ತಾವಾಗಿದ್ದರು. ತಮ್ಮ ತನಗಳನ್ನು ಉಳಿಸಿಕೊಂಡು ಆಟ ಆಡುತ್ತಾ ಬಂದರು. ಆನಂತರದ ಸೀಸನ್‌ಗಳಲ್ಲಿ ಬಂದವರೆಲ್ಲ ನಕಲು ಮಾಡಲು ಶುರು
ಮಾಡಿದರು. ತಾವು ತಾವಾಗಿರುವ ಬದಲಿಗೆ ನಕಲಿ ಆಟ ತೋರಿಸಿದರು.

ಸತ್ಯ ಬಹಿರಂಗ: ಬಿಗ್‌ಬಾಸ್ ಮನೆಯಲ್ಲಿ ಸಿಗರೇಟಿಗೂ ಇದೆ ಒಂದು ರೂಮ್!

5 ಕಳೆದ ಸೀಸನ್ನಲ್ಲಿ ಒಂದು ದಿನ ಶೂಟಿಂಗ್ ತಪ್ಪಿಸಿದೆ

ಬಿಗ್‌ಬಾಸ್ ಶುರುವಾದಾಗಿನಿಂದ ಈವರೆಗೂ ಪ್ರತಿ ಶನಿವಾರ ಮತ್ತು ಭಾನುವಾರ ಶೂಟಿಂಗ್ ಖಾಯಂ. ಒಂದು ಸಂಡೇ ಮಾತ್ರ ಶೂಟ್ ಮಾಡುವುದಕ್ಕೆ ಸಾಧ್ಯ ಆಗಲಿಲ್ಲ. ಅದಕ್ಕೆ ಕಾರಣ ಅಂಬರೀಶ್ ನಿಧನದ ಸುದ್ದಿ. ಬಿಗ್‌ಬಾಸ್ ಮನೆಯಲ್ಲಿದ್ದೆ, ಅಂಬರೀಶ್ ಇನ್ನಿಲ್ಲ ಎನ್ನುವ ಸುದ್ದಿ ಗೊತ್ತಾಯಿತು. ಸುದ್ದಿ ಕೇಳಿ ತುಂಬಾ ಅಘಾತವಾಯಿತು. ಕ್ಯಾಮರಾ ಎದುರಿಸುವ ಸ್ಥಿತಿಯಲ್ಲಿ ನಾನಿರಲಿಲ್ಲ. ಅವತ್ತು ಶೂಟಿಂಗ್ ನಿಲ್ಲಿಸಿಬಿಟ್ಟೆ.

6 ಆಯ್ಕೆಗೂ ಒತ್ತಡ ಇರುತ್ತೆ..

ತ್ತಡೆ ಬರುತ್ತದೆ, ಪರಿಚಿತ ವ್ಯಕ್ತಿಗಳು ಫೋನ್ ಮಾಡಿ ಕೇಳುತ್ತಾರೆ. ಆದರೂ ನಾನು ಯಾರನ್ನು ರೆಫರ್ ಮಾಡಿಲ್ಲ. ಕ್ರಿಕೆಟರ್ ಆಯ್ಯಪ್ಪ ಒಬ್ಬರನ್ನು ಬಿಟ್ಟು. ಆ ಸಂದರ್ಭದಲ್ಲಿ ಒಬ್ಬ ಸ್ಪೋರ್ಟ್ಸ್ ಪರ್ಸನ್ ಬೇಕು ಅಂತ ಹುಡುಕುತ್ತಿದ್ದರು. ಆಗ ನಾನೇ ಅಯ್ಯಪ್ಪ ಅವರ ಹೆಸರು ಹೇಳಿದೆ. ಸೂಕ್ತ ಎನಿಸಿದರೆ ನೋಡಿ ಎಂದೆ.

7 ವೆಂಕಟ್‌ಗೆ ಸಹಾಯದ ಅವಶ್ಯಕತೆ ಇದೆ..

ಬಿಗ್‌ಬಾಸ್‌ಗೆ ಹೋಗಿ ಬಂದವರು ಯಾರು ಕೆಟ್ಟವರಾಗಿಲ್ಲ. ಹೊರ ಬಂದ ನಂತರ ಕೆಲವರು ಸಮಯ, ಸಂದರ್ಭ ಗಳಲ್ಲಿ ತಾಳ್ಮೆ ಕಳೆದುಕೊಂಡಿರಬಹುದು. ಹುಚ್ಚ ವೆಂಕಟ್ ಕೂಡ ಯಾವುದೋ
ಮಾನಸಿಕ ಒತ್ತಡದಲ್ಲಿ ಅವರು ಹಾಗೆ ಮಾಡುತ್ತಿದ್ದಾನೆನ್ನುವ ಭಾವನೆ ನನ್ನದು. ಕೆಲವು ಸರಿ ಒಬ್ಬ ವ್ಯಕ್ತಿ ಒಳ್ಳೆಯವನಾಗಲು ಎಷ್ಟು ಜನ ಕಾರಣ ಆಗುತ್ತಾರೋ, ಕೆಟ್ಟವನಾಗಲು ಅನೇಕರು ಕಾರಣ ಆಗಿರುತ್ತಾರೆ. ಮಾತಲ್ಲಿ ಒರಟುತನ ಇದ್ದಿದ್ದು ಬಿಟ್ಟರೆ ಹುಚ್ಚ ವೆಂಕಟ್ ಒಳ್ಳೆಯ ಮನುಷ್ಯ. ಹುಚ್ಚ ವೆಂಕಟ್ ಅವರಿಗೆ ಸಹಾಯದ ಅವಶ್ಯಕತೆಯಿದೆ.

ನಿವೇದಿತಾ-ಚಂದನ್ ಶೆಟ್ಟಿ ಮದ್ವೆ; ಈ ಜೋಡಿ ಲವ್ ಸ್ಟೋರಿ ಕೇಳಿದ್ದೀರಾ?

8 ಅಭಿಪ್ರಾಯವೇ ಬದಲಾಯಿಸಿದೆ ಬಿಗ್‌ಬಾಸ್

ಬಿಗ್‌ಬಾಸ್ ಮೂಲಕ ಜನರಿಗೆ ನಾನು ಇನ್ನಷ್ಟು ಪರಿಚಯವಾದೆ. ಜನರಿಗೆ ನನ್ನ ಬಗೆಗಿನ ಅಭಿಪ್ರಾಯವೂ ಬದಲಾಗಿದೆ. ಸುದೀಪ್ ಅಂದ್ರೆಅಯ್ಯೋ ಹಾಗೆ, ಹೀಗೆ ಅಂತೆಲ್ಲ ಇದ್ದ ಅಭಿಪ್ರಾಯ ಈಗ ಕೊಂಚ ಬದಲಾಗಿದೆ.

9 ಸಂಭಾವನೆ ಗೊತ್ತಾಗಬೇಕಿರುವುದು ಹೆಂಡತಿಗೆ ಮಾತ್ರ...

ಸಂಭಾವನೆ ಅಷ್ಟು ಇಷ್ಟು ಅಂತೆಲ್ಲ ಹೇಳುವವರಿಗೆ ನಾನು ಕೇಳುವುದೊಂದೆ ಇದು ನಿಮಗ್ಯಾಕೆ ಗೊತ್ತಾಗಬೇಕು? ನಿಮ್ಮ ದುಡಿಮೆ ಗೊತ್ತಾಗಬೇಕಿರುವುದು ನಿಮ್ಮ ಪತ್ನಿ ಅಥವಾ ಮನೆಯವರಿಗೆ ಮಾತ್ರ. ಮನೆ ನಿಭಾಯಿಸುವವರು ಅವರು. ಇದು ನನಗೂ ಕೂಡ ಅನ್ವಯ. ಸಂಭಾವನೆ ಎಷ್ಟು ಅಂತ ನನ್ನ ಹೆಂಡತಿ ಕೇಳಿದ್ರೆ, ನಿಜ ಹೇಳುವೆ.

10 ಪೇಮೆಂಟ್‌ಕ್ಕಿಂತ ದೊಡ್ಡದು ಅಗ್ರಿಮೆಂಟ್

ನಿಮಗೆ ಗೊತ್ತಿದೆಯೋ ಇಲ್ಲವೋ, ನನ್ನ ಪೇಮೆಂಟ್ಕ್ಕಿಂತ ದೊಡ್ಡದು ಒಪ್ಪಂದ. ದೊಡ್ಡದೊಂದು ಪುಸ್ತಕದ  ಹಾಗಿರುತ್ತೆ ಅಗ್ರಿಮೆಂಟ್ ಕಾಪಿ. ಅದಕ್ಕೆ ನಾನು ಬದ್ಧನಾಗಿರುವಾಗ ಆ ಮನೆಯೊಳಗೆ ನೀವು ಹಾಗಿರಿ, ಹೀಗಿರಿ ಅಂತೆಲ್ಲ ಗೈಡ್ ಮಾಡುವುದಕ್ಕೆ ಆಗೋದಿಲ್ಲ. ಚಾನೆಲ್‌ನವರಗೇನೋ ಅಲ್ಲಿ ಕಂಟೆಂಟ್ ಸಿಗುತ್ತೆ ಅಂದಾಗ ನಾನು ಸುಮ್ಮನಿರಬೇಕು. ನನ್ನ ಕೆಲಸ ಏನು ಎನ್ನುವುದಷ್ಟನ್ನೇ ನಾನು ನೋಡಿಕೊಳ್ಳಬೇಕು.

click me!