ದರ್ಶನ್ ಸಾಂಗ್ಸ್ 'ಬಿಗ್ ಬಾಸ್' ಮನೇಲಿ ಯಾಕ್ ಹಾಕಲ್ಲ? 'ಓಪನ್ ಆಗಿ ಹೇಳ್ತಿನಿ' ಎಂದು ಸುದೀಪ್ ಹೇಳಿದ್ದೇನು?

Published : Aug 30, 2026, 06:41 PM ISTUpdated : Aug 30, 2026, 06:47 PM IST
Kichcha Sudeep Darshan Thoogudeepa

ಸಾರಾಂಶ

ದರ್ಶನ್ ಹಾಡು ಬಿಗ್ ಬಾಸ್ ಮನೆಯಲ್ಲಿ ಏಕೆ ಪ್ಲೇ ಆಗೋದಿಲ್ಲ ಅನ್ನೋ ವಿಚಾರಕ್ಕೆ ಸಂಬಂಧಿಸಿ ಬಂದ ಪ್ರಶ್ನೆಗೆ ಸ್ಯಾಂಡಲ್‌ವುಡ್ ನಟ, ಬಿಗ್ ಬಾಸ್ ಕನ್ನಡದ ನಿರೂಪಕ ಕಿಚ್ಚ ಸುದೀಪ್ ಖಡಕ್ ಉತ್ತರ ನೀಡಿದ್ದಾರೆ. "ಓಪನ್ ಆಗಿ ಹೇಳ್ತಿನಿ" ಎಂದು ಮಾತು ಶುರು ಮಾಡಿದ ಸುದೀಪ್ ಹೇಳಿದ್ದೇನು? ಈ ಸ್ಟೋರಿ ನೋಡಿ..

Darshan Songs in Bigg Boss question and Bigg Boss Kannada host Sudeep Open Answer is to know here. 'ದರ್ಶನ್ ಹಾಡು ಬಿಗ್ ಬಾಸ್ ಮನೆಯಲ್ಲಿ ಏಕೆ ಪ್ಲೇ ಆಗೋದಿಲ್ಲ?' ಈ ವಿಚಾರಕ್ಕೆ ಸಂಬಂಧಿಸಿ ಬಂದ ಪ್ರಶ್ನೆಗೆ ಸ್ಯಾಂಡಲ್‌ವುಡ್ ನಟ, ಬಿಗ್ ಬಾಸ್ ಕನ್ನಡದ ನಿರೂಪಕ ಕಿಚ್ಚ ಸುದೀಪ್ ಖಡಕ್ ಉತ್ತರ!

ಬಿಗ್ ಬಾಸ್ ಸೀಸನ್ 13ಕ್ಕೆ ಕೌಂಟ್ ಡೌನ್ ಶುರುವಾಗಿರೋದು ಗೊತ್ತೇ ಇದೆ.. ಇಂದು, ಅಂದರೆ 30 ಆಗಸ್ಟ್ 2026ರಂದು

ಬೆಂಗಳೂರಿನಲ್ಲಿ 'ಬಿಗ್ ಬಾಸ್' ಸುದ್ದಿ ಗೋಷ್ಠಿ ನಡೆದಿದೆ. ಇದರಲ್ಲಿ ನಟ ಕಿಚ್ಚ ಸುದೀಪ್‌ ಹಾಗೂ ಬಿಗ್ ಬಾಸ್ ಆಯೋಜಕರು‌ ಭಾಗಿಯಾಗಿದ್ದಾರೆ. ಇದರಲ್ಲಿ ನಟ ಸುದೀಪ್ ದರ್ಶನ್ ಬಗ್ಗೆ ಹೇಳಿದ ಹೇಳಿಕೆಯೊಂದು ಭಾರೀ ಸದ್ದು ಮಾಡುತ್ತಿದೆ.

ನಟ ಸುದೀಪ್ ಹೇಳಿದ್ದೇನು?

ದರ್ಶನ್ ಹಾಡು ಬಿಗ್ ಬಾಸ್ ಮನೆಯಲ್ಲಿ ಏಕೆ ಪ್ಲೇ ಆಗೋದಿಲ್ಲ ಅನ್ನೋ ವಿಚಾರಕ್ಕೆ ಸಂಬಂಧಿಸಿ ಬಂದ ಪ್ರಶ್ನೆಗೆ ಸ್ಯಾಂಡಲ್‌ವುಡ್ ನಟ, ಬಿಗ್ ಬಾಸ್ ಕನ್ನಡದ ನಿರೂಪಕ ಕಿಚ್ಚ ಸುದೀಪ್ ಖಡಕ್ ಉತ್ತರ ನೀಡಿದ್ದಾರೆ. 'ದರ್ಶನ್ ಸಾಂಗ್ಸ್ ಬಿಗ್ ಬಾಸ್ ಮನೆಯಲ್ಲಿ ಯಾಕೆ ಹಾಕಲ್ಲ ಎಂಬ ಬಗ್ಗೆ "ಓಪನ್ ಆಗಿ ಹೇಳ್ತಿನಿ" ಎಂದು ಮಾತು ಶುರು ಮಾಡಿದ ಸುದೀಪ್ ಅವರು- 'ನಮಗೆ ಪ್ರತಿಯೊಬ್ಬರ ಮೇಲೂ ಪ್ರೀತಿ ಇದೆ, ಯಾರ ಮೇಲೂ ದ್ವೇಷ ಇಲ್ಲ.. ಹಾಡು ಹಾಕದೇ ಇರೋಕೆ ಬೇರೆ ಕಾರಣ ಇರಬಹುದಲ್ವಾ?

'ಬೆದರಿಕೇನೂ ಇರಬಹುದು ಅಲ್ವಾ.. ಈ ಸಾಂಗ್ ಯಾಕೆ ಪ್ಲೇ ಮಾಡ್ತೀರಾ ಅನ್ನೋರು ಇರ್ತಾರೆ ಅಲ್ವಾ? ಇಲ್ಲಿ ಯಾರ್ ಮೇಲೆ ಯಾರಿಗೂ ದ್ವೇಷ ಇಲ್ಲ.. ಯಾರನ್ನ ತುಳಿಯೋದಕ್ಕೆ ಯಾವ ನನ್ನ ಮಗನಿಂದಲೂ ಆಗಲ್ಲ.. ಆದ್ರೆ ಇಲ್ಲಿ, ಇಂತಹ ವೇದಿಕೆಗಳಲ್ಲಿ ಇಂಥ ಪ್ರಶ್ನೆಗಲೇ ಬೇಡ.. ಇವೆಲ್ಲಾ ಈಗ ಇಲ್ಲಿ ಬೇಡವೇ ಬೇಡ.. we wish good for everybody in the industry' ಎಂದು ಹೇಳಿ ದರ್ಶನ್ ಹಾಡಿನ ಬಗ್ಗೆ ಕೇಳಿದ ಪ್ರಶ್ನೆಗೆ ನೇರ ಹಾಗೂ ದಿಟ್ಟ ಉತ್ತರ ನೀಡಿದ್ದಾರೆ.

'ಅಗ್ನಿ ಪರೀಕ್ಷೆ' ಪ್ರಶ್ನೆ, ಕಿಚ್ಚಸುದೀಪ್ ಉತ್ತರ-

ಇನ್ನು, ‘ಅಗ್ನಿ ಪರೀಕ್ಷೆ’ಯ ಒಂದು ಎಪಿಸೋಡ್ ನೋಡಿದ್ದೇನೆ.. ಆ ವೇದಿಕೆಯಲ್ಲಿ ರಿಜೆಕ್ಟ್ ಆದ್ರೂ ಕೂಡ ಅವರಿಗೊಂದು ಮತ್ತೊಂದು ವೇದಿಕೆ ಸಿಕ್ಕಿದೆ. ಅಗ್ನಿ ಪರೀಕ್ಷೆ ಅನ್ನೊದು ಇಂಡಿಯಾ ಟೀಮ್‌ಗೆ ಆಡೋಕು ಮುಂಚೆ ಐಪಿಎಲ್ ಇದ್ದ ಹಾಗೆ.. ಸಲೆಕ್ಟ್ ಮಾಡಿದ್ರೂ ಬೈಸಿಕೊಳ್ಳುತ್ತೇವೆ, ಮಾಡದೇ ಇದ್ರೂ ಬೈಸಿಕೊಳ್ಳುತ್ತೇವೆ' ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಬಿಗ್ ಬಾಸ್ ಸುದ್ದಿಗೋಷ್ಠಿ ಹಲವು ವಿಚಾರ, ಚರ್ಚೆ ಹಾಗೂ 'ಖಾರ-ಭಾರ'ದ ಪ್ರಶ್ನೆಗಳಿಗೆ ಸಾಕ್ಷಿಯಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

"ಈ ಪಾತ್ರ ನನಗಾಗಿಯೇ ಕಾದಿತ್ತು": 'ಜಗದ್ಧಾತ್ರಿ' ಆಫರ್, ಸಣ್ಣಗಾದ ಬಗ್ಗೆ ಮನಬಿಚ್ಚಿ ಮಾತನಾಡಿದ ಕವಿತಾ ಗೌಡ
PUC ಫೇಲ್‌ನಿಂದ ₹23 ಲಕ್ಷದ ಕಾರಿನವರೆಗೆ; ಕನ್ನಡ ಯೂಟ್ಯೂಬರ್ ತಾರೇಶ್-ಸ್ವಾತಿ ಈಗ ಸ್ವಂತ ಸೈಟ್‌ ಮಾಲೀಕರು