ಆ್ಯಂಕರ್​ ಅನುಶ್ರೀ ಜೊತೆ ಕಿಚ್ಚ ಸುದೀಪ್! ಅಭಿಮಾನಿಗಳು ಕಾತರದಿಂದ ಕಾಯ್ತಿರೋ ದಿನ ಬಂದೇ ಬಿಡ್ತು...

Published : Dec 20, 2024, 04:51 PM ISTUpdated : Dec 20, 2024, 04:59 PM IST
ಆ್ಯಂಕರ್​ ಅನುಶ್ರೀ ಜೊತೆ ಕಿಚ್ಚ ಸುದೀಪ್! ಅಭಿಮಾನಿಗಳು ಕಾತರದಿಂದ ಕಾಯ್ತಿರೋ ದಿನ ಬಂದೇ ಬಿಡ್ತು...

ಸಾರಾಂಶ

ಬಿಗ್‌ಬಾಸ್‌ ನಿಂದ ಹೊರಬಂದ ಕಿಚ್ಚ ಸುದೀಪ್, ನಿರೂಪಕಿ ಅನುಶ್ರೀ ಅವರ ಸ್ಟುಡಿಯೋಗೆ ಭೇಟಿ ನೀಡಿದ್ದಾರೆ. ಅಭಿಮಾನಿಗಳ "ಯಾವಾಗ ಸುದೀಪ್ ಬರ್ತಾರೆ?" ಎಂಬ ಪ್ರಶ್ನೆಗೆ ಅನುಶ್ರೀ ಪ್ರೊಮೊ ಬಿಡುಗಡೆ ಮಾಡುವ ಮೂಲಕ ಉತ್ತರಿಸಿದ್ದಾರೆ. ಸಂದರ್ಶನ ಮುಗಿದಿದ್ದು, ಶೀಘ್ರದಲ್ಲೇ ಪ್ರಸಾರವಾಗುವ ಸಾಧ್ಯತೆ ಇದೆ. 

ಕಿಚ್ಚ ಸುದೀಪ್​ ಅವರು ಸದ್ಯ ಬಿಗ್​ಬಾಸ್​ನಲ್ಲಿ ಬಿಜಿಯಾಗಿದ್ದಾರೆ. ಇದು ಅವರ ಕೊನೆಯ ಸೀಸನ್​ ಎಂದು ಇದಾಗಲೇ ಘೋಷಿಸಿ ಆಗಿದೆ. 11 ಸೀಸನ್​ಗಳ ಬಿಗ್​ಬಾಸ್​ ಅನ್ನು ಯಶಸ್ವಿಯಾಗಿ ನಿರ್ವಹಿಸಿರುವ ಸುದೀಪ್​ ಅವರು ಅದರಿಂದ ಹೊರಕ್ಕೆ ಬರುವುದಾಗಿ ಹೇಳಿದ ಮೇಲೆ ಸ್ವಲ್ಪ ರಿಲಾಕ್ಸ್​ ಆದಂತಿದೆ. ಬಿಗ್​ಬಾಸ್​ನಿಂದ ಹೊರಕ್ಕೆ ಬಂದಿರುವ ಕಾರಣ, ಮುಂದಿನ ಪ್ಲ್ಯಾನಿಂಗ್​, ಪತ್ನಿ-ಮಕ್ಕಳ ವಿಷಯ ಹೀಗೆ ಮಾಧ್ಯಮಗಳ ಹಾಗೂ ಅಭಿಮಾನಿಗಳ ಹಲವಾರು ಪ್ರಶ್ನೆಗಳಿಗೆ ಸುದೀಪ್​ ಅವರು ಇದಾಗಲೇ ಉತ್ತರ ಕೊಟ್ಟಿದ್ದಾರೆ. ಅದೇ ಇನ್ನೊಂದೆಡೆ, ಆ್ಯಂಕರ್​ ಅನುಶ್ರೀ ಅವರ ಸ್ಟುಡಿಯೋಗೆ ಸುದೀಪ್​ ಅವರು ಯಾವಾಗ ಬರ್ತಾರೆ ಎನ್ನುವುದು ಅನುಶ್ರೀ ಅವರ ಅಸಂಖ್ಯ ಅಭಿಮಾನಿಗಳ ಪ್ರಶ್ನೆಯಾಗಿದೆ. ಅದಕ್ಕೆ ಈಗ ಉತ್ತರ ಸಿಕ್ಕಿದೆ.

ಹೌದು.  ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ ಕಮ್ ಸ್ಯಾಂಡಲ್‌ವುಡ್‌ ನಟಿ (Sandalwood star) ಅನುಶ್ರೀ ಮನೆಮಾತಾಗಿರುವ ನಟಿ. ಅದ್ಭುತವಾಗಿ ಕಾರ್ಯಕ್ರಮ ನಿರೂಪಣೆಯ ಜೊತೆಗೆ ಸಂಗೀತ, ನೃತ್ಯದಿಂದಲೂ ಮನರಂಜಿಸುವ ಅನುಶ್ರೀ ಸದ್ಯ ಸರಿಗಮಪ ಸಂಗೀತದ ರಿಯಾಲಿಟಿ ಷೋನಲ್ಲಿ ಬಿಜಿಯಾಗಿದ್ದಾರೆ.  ತಮ್ಮ ಚಟಪಟ ಮಾತಿನಿಂದಾಗಿ ಅನುಶ್ರೀ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ. ಅವರು ಟಿವಿ ಶೋಗಳನ್ನು ನಡೆಸಿಕೊಡುವ ಶೈಲಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಕಿರುತೆರೆಯಲ್ಲಿ ಅನುಶ್ರೀ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಹಲವು ರಿಯಾಲಿಟಿ ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಖ್ಯಾತಿ ಅವರಿಗಿದೆ. ತಮ್ಮ ಅದ್ಭುತ ನಿರೂಪಣಾ ಶೈಲಿಯಿಂದ ಇದಾಗಲೇ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇವೆಲ್ಲವುಗಳ ನಡುವೆಯೇ, ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿರುವ ಅನುಶ್ರೀ ಅವರು ಇದಾಗಲೇ ಹಲವು ಸೆಲೆಬ್ರಿಟಿಗಳ ಜೊತೆ ಸಂದರ್ಶನ ಮಾಡಿದ್ದಾರೆ.

ಕನ್ನಡದಲ್ಲಿ ಕೊನೆಯ ಶೋ ಎಂದ ಸುದೀಪ್ ತೆಲುಗು ಬಿಗ್‌ಬಾಸ್‌ನಲ್ಲಿ! ವೈರಲ್‌ ವಿಡಿಯೋಗೆ ಫ್ಯಾನ್ಸ್‌ ಶಾಕ್

ಯಾವುದೇ ಚಿತ್ರದ ಪ್ರೊಮೋಷನ್​ ಇದ್ದರೂ ಸಾಮಾನ್ಯವಾಗಿ ಚಿತ್ರ ತಾರೆಯರು ಅನುಶ್ರೀ ಅವರ ಜೊತೆಗಿನ ಸಂದರ್ಶನದಲ್ಲಿ ಭಾಗಿಯಾಗುವುದು ಸಾಮಾನ್ಯ. ಇವರ ಚಾನೆಲ್​ ಜೊತೆ ಮಾತನಾಡಿದರೆ ಚಿತ್ರ ಯಶಸ್ವಿಯಾಗುತ್ತದೆ ಎಂದೂ ಹಿಂದೆ ಕೆಲವು ನಟರು ಹೇಳಿದ್ದುಂಟು. ಅದೇನೇ ಇದ್ದರೂ ಅನುಶ್ರೀ ಅವರು ಇದಾಗಲೇ ಸಾಕಷ್ಟು ಚಿತ್ರ ತಾರೆಯರ ಜೊತೆ ಸಂದರ್ಶನ ಮಾಡಿದ್ದು, ಇದೀಗ ಸುದೀಪ್​ ಅವರ ಜೊತೆ ಸಂದರ್ಶನ ಮಾಡುತ್ತಿದ್ದಾರೆ. ಸುದೀಪ್​ ಅವರನ್ನು ಸ್ಟುಡಿಯೋಗೆ ಕರೆಸುವುದು ಯಾವಾಗ, ಅವರ ಜೊತೆ ಸಂದರ್ಶನ ಯಾವಾಗ ಎಂದು ಅನುಶ್ರೀ ಅವರ ಹಲವು ಅಭಿಮಾನಿಗಳು ಕೇಳುತ್ತಿದ್ದ ಪ್ರಶ್ನೆಗಳ ವಿಡಿಯೋ ಶೇರ್​ ಮಾಡಿರುವ ಅವರು, ಇದಕ್ಕೆ ಉತ್ತರ ಇಲ್ಲಿದೆ ಎಂದಿದ್ದಾರೆ.

ಈಗ ಬಿಡುಗಡೆಯಾಗಿರುವ ಪ್ರೊಮೋದಲ್ಲಿ, ಅನುಶ್ರೀ ಅವರ ಅಭಿಮಾನಿಗಳು ಸುದೀಪ್​ ಸರ್​ರನ್ನು ಯಾವಾಗ ಕರೆಸ್ತೀರಾ ಎಂದು ಕೇಳುವುದನ್ನು ನೋಡಬಹುದು. ಬೇರೆ ಬೇರೆ ಗಲ್ಲಿಗಳಲ್ಲಿ, ವಿಭಿನ್ನ ರೀತಿಯ ಅಭಿಮಾನಿಗಳು ಈ ಪ್ರಶ್ನೆಯನ್ನು ಅನುಶ್ರೀ ಅವರ ಮುಂದಿಟ್ಟಿದ್ದಾರೆ. ಇವೆಲ್ಲವನ್ನೂ ವಿಡಿಯೋದಲ್ಲಿ ತೋರಿಸಿರುವ ಅನುಶ್ರೀ ಅವರು ಕೊನೆಗೆ ಸುದೀಪ್​ ಅವರು ಸ್ಟುಡಿಯೋಗೆ ಕಾರಿನಲ್ಲಿ ಆಗಮಿಸುತ್ತಿರುವ ಝಲಕ್​ ತೋರಿಸಿದ್ದಾರೆ. ಬಹುಶಃ ಇದಾಗಲೇ ಸಂದರ್ಶನ ಕೂಡ ಮುಗಿದಿದಂತೆ ಇದ್ದು, ಅದನ್ನು ಶೀಘ್ರದಲ್ಲಿ ಪ್ರಸಾರ ಮಾಡಲಾಗುವುದು ಎನ್ನುವಂತೆ ಕಮಿಂಗ್​ ಸೂನ್​ ಎಂದು ಪ್ರೊಮೋದಲ್ಲಿ ತೋರಿಸಿದ್ದಾರೆ. ಇದಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 

ಬಿಗ್​ಬಾಸ್​ನಿಂದ ಹೊರಬರಲು ಕೊನೆಗೂ ಕಾರಣ ನೀಡಿದ ಸುದೀಪ್​: ಅಭಿಮಾನಿಗಳ ಪ್ರಶ್ನೆಗೆ ಸಿಕ್ಕಿತು ಉತ್ತರ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!