25 ವರ್ಷಗಳ ಬಣ್ಣದ ಪ್ರಪಂಚದಲ್ಲಿ ಹಲವಾರು ರೀತಿಯ ರೋಲ್ ನಿಭಾಯಿಸಿರೋ ಭಾಗ್ಯಲಕ್ಷ್ಮಿ ಕುಸುಮತ್ತೆ ಅರ್ಥಾತ್ ಪದ್ಮಜಾ ರಾವ್ ಅವರಿಗೆ ಇರುವ ಕನಸೇನು?
ಪದ್ಮಜಾ ರಾವ್ ಎಂದರೆ ಬಹುಶಃ ಈಗಿನ ಬಹುತೇಕರಿಗೆ ತಿಳಿಯಲಿಕ್ಕಿಲ್ಲ. ಆದರೆ, ಕಲರ್ಸ್ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮಿಯ ಕುಸುಮತ್ತೆ ಎಂದರೆ ಸಾಕು ಆದರ್ಶ ಮಾತೆ ಕಣ್ಣೆದುರಿಗೆ ಬರುತ್ತಾಳೆ. ಇದ್ದರೆ ಇಂಥ ಅತ್ತೆ ಇರಬೇಕು, ಎಲ್ಲರಿಗೂ ಇಂಥ ಅತ್ತೆ ಸಿಗಬೇಕು ಎನ್ನುವ ಕ್ಯಾರೆಕ್ಟರ್ ಕುಸುಮಳದ್ದು. ಸೊಸೆಗಾಗಿ ಮಗನ ವಿರುದ್ಧವೇ ತಿರುಗಿ ಬೀಳುವ ಅತ್ತೆಯಂದಿರು ಬಹಳ ಕಡಿಮೆ ಎಂದೇ ಹೇಳಬಹುದು. ಆದರೆ ರೆಬಲ್ ಅತ್ತೆ ಈಕೆ. ಸೊಸೆ ಭಾಗ್ಯಳಿಗಾಗಿ ಮಗ ತಾಂಡವ್ ವಿರುದ್ಧ ಅದೆಷ್ಟು ಬಾರಿ ತಿರುಗಿ ಬಿದ್ದಿದ್ದಾಳೋ ಗೊತ್ತಿಲ್ಲ. ಈಗ ಮನೆಯನ್ನೂ ಬಿಟ್ಟು ಹೋಗಿದ್ದಾಳೆ. ಕುಸುಮಳ ಪಾರ್ಟ್ ನೋಡಿ ಈಗಿನ ಅತ್ತೆಯಂದಿರು ಬದಲಾದರೆ ಅಷ್ಟೇ ನನಗೆ ಸಿಗುವ ಬಹುಮಾನ ಎಂದು ಹೇಳುವ ನಟಿಯೇ ಪದ್ಮಜಾ ರಾವ್.
ಕನ್ನಡ ಚಿತ್ರರಂದಲ್ಲಿಯೂ ಆ್ಯಕ್ಟೀವ್ ಆಗಿರೋ ಪದ್ಮಜಾ ಅವರು ಕಿರುತೆರೆಯಲ್ಲಿ ಅದ್ಭುತ ಕಲಾವಿದೆಯಾಗಿ ಗುರುತಿಸಿಕೊಂಡವರು. ಜೊತೆಗೆ ನಿರ್ದೇಶಕಿ ಕೂಡ. ಚಿತ್ರರಂಗಕ್ಕೆ ಬರುವ ಮುನ್ನ ಚಿತ್ರ ನಿರ್ಮಾಪಕ ಮತ್ತು ಕಿರುತೆರೆ ನಿರ್ದೇಶಕರ ಬಳಿ ಸಹಾಯಕರಾಗಿ ಕೆಲಸ ಮಾಡಿರೋ ಅನುಭವ ಇರುವ ನಟಿಗೆ ಬ್ರೇಕ್ ಸಿಕ್ಕಿದ್ದು, ವೈಶಾಲಿ ಕಾಸರವಳ್ಳಿಯವರ `ಮೂಡಲ ಮನೆ' ಸೀರಿಯಲ್ ಮೂಲಕ. ಇಲ್ಲಿಂದ ಅವರು ಮುಖ್ಯ ರೋಲ್ನಲ್ಲಿ ಹಲವು ಸೀರಿಯಲ್ಗಳಲ್ಲಿ ನಟಿಸಿದ್ದಾರೆ. ಬಳಿಕ ರವಿಚಂದ್ರನ್ ರವರ ಹಠವಾದಿ ಚಿತ್ರದ ಮೂಲಕ ಬೆಳ್ಳಿಪರದೆಗೂ ಎಂಟ್ರಿ ಕೊಟ್ಟರು. ಇವರಿಗೆ ತುಂಬಾ ಹೆಸರು ತಂದುಕೊಟ್ಟ ಚಿತ್ರ `ಮುಂಗಾರು ಮಳೆ'. ಬಳಿಕ ಸೀರಿಯಲ್ ನಿರ್ದೇಶನಕ್ಕೂ ಇಳಿದಿದ್ದಾರೆ. ಇದೀಗ ರೇಡಿಯೋ ಸಿಟಿ ಕನ್ನಡ ಜೊತೆ ಕೆಲವೊಂದು ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ ಪದ್ಮಜಾ ಅವರು.
undefined
ಭಾಗ್ಯಲಕ್ಷ್ಮಿ ಕುಸುಮತ್ತೆ ರಿಯಲ್ ಪುತ್ರಂಗೆ ಹಾವೆಂದ್ರೆ ಜೀವ: ಕುಕ್ಕೆಗೆ ಹೋದ್ರೂ ಬಗೆ ಹರಿದಿಲ್ಲ ಸಮಸ್ಯೆ!
ನಿನ್ನ ಎನರ್ಜಿಯ ಗುಟ್ಟೇನು ಎನ್ನುವ ಪ್ರಶ್ನೆಗೆ ಪದ್ಮಜಾ ಅವರು, ನಾನು ಎಂಜಾಯ್ ಮಾಡಿರುವ ರೋಲ್ನಲ್ಲಿ ಎನರ್ಜಿ ನೋಡ್ತೀರಾ ನೀವು. ಕೆಲವೊಮ್ಮೆ ಇಷ್ಟವಿಲ್ಲದೆಯೂ ನಟಿಸಿದ್ದೇನೆ. ಅದರಲ್ಲಿ ಎನರ್ಜಿ ಇರಲ್ಲ. 105ಕ್ಕೂ ಹೆಚ್ಚು ಸಿನಿಮಾ ಮಾಡಿದ್ದೇನೆ. ಆದರೆ ಅದರಲ್ಲಿ ಹಠವಾದಿ, ಮುಂಗಾರು ಮಳೆ, ಉಗ್ರಂ, ಗಾಳಿಪಟ... ಹೀಗೆ ಬೆರಳೆಣಿಕೆಷ್ಟು ಸಿನಿಮಾಗಳು ಮಾತ್ರ ನೆನಪಿಗೆ ಬರುತ್ತವೆ. ಅಂದರೆ ಇಷ್ಟಪಟ್ಟರೆ ಎನರ್ಜಿ ತಂತಾನೇ ಬರುತ್ತದೆ ಎಂದಿದ್ದಾರೆ. ಇನ್ನು ಬಣ್ಣದ ಲೋಕದಲ್ಲಿ 25 ವರ್ಷಗಳ ಜರ್ನಿ ಮಾಡಿದರೂ ಕೆಲವೊಂದು ರೋಲ್ ತಮಗೆ ಸಿಕ್ಕಿಲ್ಲ ಎನ್ನುವ ಕೊರಗು ಪದ್ಮಜಾ ಅವರಿಗೆ ಇದೆ. ಸೀರಿಯಲ್, ಸಿನಿಮಾದಲ್ಲಿ 25 ವರ್ಷಗಳ ಜರ್ನಿಯಲ್ಲಿ ಸಾಫ್ಟ್ ರೋಲ್ ಮಾಡಿದ್ದೇ ಹೆಚ್ಚು. ಘಟಾಣಿ ರೋಲ್ಸ್ ಜಾಸ್ತಿ ಸಿಗಲಿಲ್ಲ. ಅಲ್ಲೊಂದು ಇಲ್ಲೊಂದು ಸಿಕ್ಕಿದ್ದರೂ ಅಂಥದ್ದೇನೂ ಹೇಳಿಕೊಳ್ಳುವ ಹಾಗೆ ಇರಲಿಲ್ಲ. ಆದರೆ ಭಾಗ್ಯಲಕ್ಷ್ಮಿಯಲ್ಲಿ ಅಂಥದ್ದೊಂದು ಪಾತ್ರ ಸಿಕ್ಕಿದ್ದು ನನಗೆ ತುಂಬಾ ಖುಷಿಯಾಗಿ ಒಪ್ಪಿಕೊಂಡೆ. ಪರ್ಸನಲ್ ಲೈಫ್ನಲ್ಲಿಯೂ ನಾನು ತುಂಬಾ ಸಾಫ್ಟ್. ಅದಕ್ಕಾಗಿ ಕುಸುಮಾ ಪಾತ್ರದ ಮೂಲಕ ನಾನು ಬದಲಾಯಿಸಿಕೊಳ್ಳಲೂ ಅವಕಾಶ ಸಿಕ್ಕಿತು ಎಂದಿದ್ದಾರೆ.
ನನಗೆ ವಿಭಿನ್ನ ರೀತಿಯ ಪಾತ್ರ ಮಾಡುವ ಕನಸು ಇಂದಿಗೂ ಇದೆ. ಅದು ಕನಸಾಗಿಯೇ ಉಳಿದುಬಿಡುತ್ತೋ ಗೊತ್ತಿಲ್ಲ. ಘರ್ವಾಲಿ, ವೇಶ್ಯೆಯಂಥ ಪಾತ್ರ ಮಾಡುವ ಆಸೆ ಇದೆ. ಶಬನಾಜ್ಮಿ, ಉಮ್ರಾವ್ ಜಾನ್ನಲ್ಲಿ ರೇಖಾ ಮಾಡಿದ ರೀತಿಯಲ್ಲಿ ವೇಶ್ಯೆಯ ಪಾತ್ರ ಮಾಡುವ ಆಸೆ ಇದೆ ಎಂದಿದ್ದಾರೆ ಪದ್ಮಜಾ ರಾವ್. ಅದೇ ರೀತಿ ರೊಮಾಂಟಿಕ್ ಸೀನ್ನಲ್ಲಿಯೂ ಕಾಣಿಸಿಕೊಳ್ಳುವ ಆಸೆ ಇವರಿಗೆ ಇದೆಯಂತೆ. ಇನ್ನು ಇವರ ಪರ್ಸನಲ್ ಲೈಫ್ ಕುರಿತು ಹೇಳುವುದಾದರೆ, ಇವರು ಮನೆಯಲ್ಲಿ ಹಿರಿಯ ಮಗಳು. ಮೊದಲ ಮದುವೆ ಮುರಿದು ಬಿತ್ತು. ಗಂಡನ ಮನೆಯಲ್ಲಿ ಕಿರುಕುಳ ಆಗಿತ್ತು ಜೊತೆಗೆ ನಟನೆಗೆ ಅವಕಾಶ ಸಿಗಲಿಲ್ಲ ಎಂದು ಹಿಂದೊಮ್ಮೆ ಇವರು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಡಿವೋರ್ಸ್ ತೆಗೆದುಕೊಂಡು ಮತ್ತೊಂದು ಮದುವೆಯಾಗಿದ್ದಾರೆ. ಮೊದಲ ಮದುವೆಯಿಂದ ಸಂಜೀವ್ ಎನ್ನುವ ಮಗ ಇದ್ದಾರೆ. ಇವರು ಪ್ರಾಣಿ ಅಭಯ ಕೇಂದ್ರ ನಡೆಸುತ್ತಿದ್ದು, ನೂರಾರು ವಿವಿಧ ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಎರಡನೆಯ ಮದುವೆಯಾದ ಬಳಿಕವಷ್ಟೇ ಇವರು ಕಿರುತೆರೆಗೆ ಮತ್ತೆ ವಾಪಸಾದರು. ಮೂಡಲ ಮನೆ ಧಾರಾವಾಹಿಯಲ್ಲಿ ಪಾತ್ರ ಗಿಟ್ಟಿಸಿಕೊಂಡರು. ಅಲ್ಲಿಂದ ಅವರು ಸಾಕಷ್ಟು ಕಿರುಚಿತ್ರಗಳಲ್ಲಿ ನಟಿಸಿದ್ದು ಮನೆ ಮಾತಾಗಿದ್ದಾರೆ.
ಮಗಳಿಲ್ಲದೇ ಹುಚ್ಚಿ ಆಗಿರೋ ಸೀತಾ 'ಡೋಂಟ್ ವರಿ ಬೇಬಿಯಮ್ಮಾ'ಗೆ ಸಕತ್ ಸ್ಟೆಪ್: ಕಾಲೆಳಿತಿರೋ ನೆಟ್ಟಿಗರು