
ಬಿಗ್‌ಬಾಸ್ ಕನ್ನಡ ಸೀಸನ್ ಏಳನೇ ಆವೃತ್ತಿ ಮುಗಿದಿದೆ. ಹಲವು ವಾರಗಳವರೆಗೆ ದಿನ-ರಾತ್ರಿ ದುಡಿದ ಕಿಚ್ಚ ಸುದೀಪ್ ಅವರು ಸದ್ಯ ಬಿಗ್‌ಬಾಸ್‌ನಿಂದ ಮುಕ್ತಿ ಹೊಂದಿದ್ದಾರೆ. ಇದರ ನಡುವೆಯೇ ಅವರು ಆಸ್ಕ್‌ಕಿಚ್ಚ ಸುದೀಪ್ ಎನ್ನುವ ಸೆಷನ್ ಎಕ್ಸ್ ಖಾತೆಯಲ್ಲಿ ಶುರು ಮಾಡಿದ್ದಾರೆ. ಇಲ್ಲಿ ಅವರ ಅಭಿಮಾನಿಗಳು ಸುದೀಪ್ ಅವರಿಗೆ ಏನಾದರೂ ಪ್ರಶ್ನೆ ಕೇಳುವ ಸೆಷನ್ ಇದು. ನಿನ್ನೆ ಅಂದರೆ 29ನೇ ತಾರೀಖಿನಂದು ಕಿಚ್ಚ ಅಭಿಮಾನಿಗಳಿಗೆ ಏನು ಬೇಕಾದರೂ ಕೇಳಿ ಎನ್ನುವ ಸೆಷನ್ ಶುರುಮಾಡಿದ್ದರು. ಇದರಲ್ಲಿ ಸಹಸ್ರಾರು ಮಂದಿ ಸುದೀಪ್ ಅವರಿಗೆ ಹಲವಾರು ರೀತಿಯ ಪ್ರಶ್ನೆ ಕೇಳಿದ್ದಾರೆ. ಸುದೀಪ್ ಅವರು ಹಲವು ಪ್ರಶ್ನೆಗಳಿಗೆ ತಮ್ಮ ಎಂದಿನ ಹಾಸ್ಯದ ರೂಪದಲ್ಲಿ ಉತ್ತರ ನೀಡಿದ್ದಾರೆ.
ಬಾಲಿವುಡ್ ನಟ ಶಾರುಖ್ ಖಾನ್ ಕೂಡ ಹಲವು ವಾರಗಳಿಂದ ಇದೇ ರೀತಿಯ ಸೆಷನ್ ನಡೆಸುತ್ತಿದ್ದು, ಇದಾಗಲೇ ಲಕ್ಷಾಂತರ ಅಭಿಮಾನಿಗಳು ಅವರಿಗೆ ಪ್ರಶ್ನೆ ಕೇಳಿದ್ದಾರೆ. ಹಲವು ಪ್ರಶ್ನೆಗಳಿಗೆ ತಮಾಷೆಯಾಗಿ, ಇನ್ನು ಕೆಲವು ತಮಗೆ ಅಧಿಕಪ್ರಸಂಗ ಎನಿಸಿದ ಪ್ರಶ್ನೆಗಳಿಗೆ ಶಾರುಖ್ ಖಡಕ್ ಆಗಿ ಉತ್ತರ ಕೊಡುತ್ತಿದ್ದಾರೆ. ಸುದೀಪ್ ಅವರಿಗೆ ಅದೇ ರೀತಿಯಲ್ಲಿ ವಿಭಿನ್ನ ರೀತಿಯ ಪ್ರಶ್ನೆಗಳು ಎದುರಾಗುತ್ತಿವೆ. ಬಿಗ್‌ಬಾಸ್‌ಗೆ ಸಂಬಂಧಿಸಿದಂತೆ, ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ, ದರ್ಶನ್ ಕುರಿತ ವಿಷಯಕ್ಕೆ ಸಂಬಂಧಿಸಿದಂತೆ... ಹೀಗೆ ಹಲವಾರು ಪ್ರಶ್ನೆಗಳನ್ನು ಫ್ಯಾನ್ಸ್ ಕೇಳುತ್ತಿದ್ದಾರೆ. ಅದರಲ್ಲಿ ಒಂದು ಪ್ರಶ್ನೆಗೆ ಸುದೀಪ್ ಅವರು, ಅವ್ರ ಬಗ್ಗೆ ಯಾಕೆ ಗುರೂ? ಅವ್ರ ಫ್ಯಾನ್ಸ್ ಸರಿಯಿಲ್ಲ ಎಂದಿದ್ದಾರೆ. ಹಾಗಿದ್ದರೆ ಸರಿ ಇಲ್ಲದವರು ಯಾರು ಎನ್ನುವ ಪ್ರಶ್ನೆ ಹಲವರನ್ನು ಕಾಡಬಹುದು. ಹೆಚ್ಚಿನ ಮಂದಿ ಇದನ್ನು ನೋಡುತ್ತಿದ್ದಂತೆಯೇ ನೇರವಾಗಿ ಬಿಗ್‌ಬಾಸ್‌ಗೆ ಕನೆಕ್ಟ್ ಮಾಡುವುದೂ ಇದೆ.
ಡ್ರೋನ್ ಪ್ರತಾಪ್ ರನ್ನರ್ ಅಪ್‌ಗೆ ಅರ್ಹರಿದ್ದರೆ ಎಂಬ ಫ್ಯಾನ್ ಪ್ರಶ್ನೆಗೆ ಸುದೀಪ್ ಹೀಗೊಂದು ಜಾಣ ಉತ್ತರ!
ಅಷ್ಟಕ್ಕೂ ಸುದೀಪ್ ಅವರ ಅಭಿಮಾನಿಯೊಬ್ಬರು, ಕಿಚ್ಚ ಸುದೀಪ್ ಬಗ್ಗೆ ಒಂದು ವಾಕ್ಯದಲ್ಲಿ ಹೇಳಿ ಎಂದಿದ್ದಾರೆ. ಅದಕ್ಕೆ ತಮಾಷೆಯಾಗಿ ಸುದೀಪ್ ಅವರು ತಮಗೆ ತಾವೇ ಅವ್ರ ಬಗ್ಗೆ ಯಾಕೆ ಗುರೂ? ಅವ್ರ ಫ್ಯಾನ್ಸ್ ಸರಿಯಿಲ್ಲ ಎಂದು ಚಟಾಕಿ ಹಾರಿಸಿದ್ದಾರೆ. ಈ ಕಮೆಂಟ್‌ಗೆ ಸಾಕಷ್ಟು ಮಂದಿ ತಮಾಷೆಯ ಉತ್ತರ ಬರೆಯುತ್ತಿದ್ದಾರೆ. ಹಲವರು ಸೂಪರ್ ಗುರು, ನಿಮ್ಮ ತಮಾಷೆ ಸೆನ್ಸ್ ಚೆನ್ನಾಗಿದೆ ಎಂದೆಲ್ಲಾ ಸುದೀಪ್ ಅವರನ್ನು ಶ್ಲಾಘಿಸುತ್ತಿದ್ದಾರೆ.
ಇದಾಗಲೇ ಹಲವರು ಬಿಗ್‌ಬಾಸ್‌ಗೆ ಸಂಬಂಧಿಸಿದಂತೆಯೇ ಪ್ರಶ್ನೆ ಕೇಳಿದ್ದಾರೆ. ಅದಕ್ಕು ಕೂಡ ಸುದೀಪ್ ಅವರು ತಮಾಷೆಯ ರೂಪದಲ್ಲಿಯೇ ಉತ್ತರ ಕೊಟ್ಟಿದ್ದಾರೆ. ಡ್ರೋನ್ ಪ್ರತಾಪ್ ಅವರನ್ನು ಬಿಗ್‌ಬಾಸ್ ರನ್ನರ್ ಅಪ್ ಮಾಡಿರುವುದು ಸರಿಯೇ ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದಾಗ, ಅದಕ್ಕೂ ನೇರಾನೇರ ಏನೂ ಹೇಳದ ಸುದೀಪ್ ಅವರು, ಹಾರಿಕೆ ಉತ್ತರ ಕೊಟ್ಟಿದ್ದಾರೆ.
ಬಿಗ್ಬಾಸ್ನಲ್ಲಿ ವಿನ್ನರ್ ಕೂಡ ಮೊದ್ಲೇ ಫಿಕ್ಸ್ ಆಗ್ತಿರ್ತಾರಾ? ಟ್ರೋಫಿ ವಿಜೇತ ಹೇಳಿದ್ದೇನು ಕೇಳಿ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.