ಶ್ರೀರಾಮನ ಅವಹೇಳನ ಮಾಡಿದವ, ಕ್ರಿಮಿನಲ್‌ ಕೇಸ್‌ನಲ್ಲಿ ಜೈಲಿಗೆ ಹೋದವನಿಗೆ ಬಿಗ್‌ಬಾಸ್‌ ಟ್ರೋಫಿ!

By Suvarna NewsFirst Published Jan 30, 2024, 2:12 PM IST
Highlights

ಶ್ರೀರಾಮನ ಅವಹೇಳನ ಮಾಡಿದವ, ಕ್ರಿಮಿನಲ್‌ ಕೇಸ್‌ನಲ್ಲಿ ಜೈಲಿಗೆ ಹೋದವನಿಗೆ ಬಿಗ್‌ಬಾಸ್‌ ಟ್ರೋಫಿ ಸಿಕ್ಕಿದ್ಯಾ? ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಆಕ್ರೋಶ 
 

ಬಿಗ್‌ಬಾಸ್‌ ಕನ್ನಡದ ಸೀಸನ್‌ 10ರ ಗ್ರಾಂಡ್‌ ಫಿನಾಲೆ ದಿನವೇ ಅತ್ತ ಬಿಗ್‌ಬಾಸ್‌ ಹಿಂದಿನ ಸೀಸನ್‌ 17ನೇ ಫಿನಾಲೆ ಕೂಡ ನಡೆದಿದ್ದು, ಒಂದೇ ದಿನ ಇಬ್ಬರು ಟ್ರೋಫಿ ಗೆದ್ದಿದ್ದಾರೆ. ಇತ್ತ ಕಾರ್ತಿಕ್‌ ಅವರು ಬಿಗ್‌ಬಾಸ್‌ ಟ್ರೋಫಿ ಗೆದ್ದು ಭರ್ಜರಿ ಬಹುಮಾನ ಗೆದ್ದಿದ್ದರೆ, ಅತ್ತ ಹಿಂದಿಯಲ್ಲಿ ಮುನಾವರ್ ಫರುಕಿ ಬಿಗ್ ಬಾಸ್ 17 ಗೆದ್ದು ಬೀಗಿದ್ದಾರೆ. ಆದರೆ ಇದೀಗ ಮುನಾವರ್‌ ಅವರ ಗೆಲುವಿನ ಬಗ್ಗೆ ತುಂಬಾ ಚರ್ಚೆ ನಡೆಯುತ್ತಿದೆ.  ಅಂದಹಾಗೆ, ಮುನಾವರ್ ಫರುಕಿ ಮುಂಬೈನ ಡೋಂಗ್ರಿ ಪ್ರದೇಶದಿಂದ ಬಂದವರು. ಇದು ಒಂದು ಕಾಲದಲ್ಲಿ ಮುಂಬೈನ ಭಯಾನಕ ಪ್ರದೇಶಗಳಲ್ಲಿ ಒಂದಾಗಿತ್ತು. ಹಿಂದೆ ಭೂಗತ ಜಗತ್ತಿನ ಕಂಟ್ರೋಲ್ ರೂಂ ಇತ್ತು, ಅದರ ರಿಮೋಟ್ ದಾವೂದ್ ಇಬ್ರಾಹಿಂ, ಛೋಟಾ ರಾಜನ್, ಅಬು ಸಲೇಂ ಮುಂತಾದ ಡಾನ್‌ಗಳ ಕೈಯಲ್ಲಿತ್ತು. ಅದೇ ಪ್ರದೇಶದವರ ಮುನಾವರ್‌.

ಅಂದಹಾಗೆ ಮುನಾವರ್‌ ಅವರು ಸ್ಟಾಂಡ್‌ಅಪ್‌ ಕಮೇಡಿಯನ್‌. ಇವರು  ಗೆದ್ದ ತಕ್ಷಣ, ಅವರಿಗೆ ತವರಿನಲ್ಲಿ  ಭವ್ಯವಾದ ಸ್ವಾಗತ ಸಿಕ್ಕಿತು. ಸಹಸ್ರಾರು ಅಭಿಮಾನಿಗಳು ಮುತ್ತಿಗೆ ಹಾಕಿ ಗ್ರಾಂಡ್‌ ಸೆಲೆಬ್ರೇಷನ್‌ ಮಾಡಿದರು. ಅದೇನೇ ಇದ್ದರೂ ಇವರ ಗೆಲುವಿನ ಬಗ್ಗೆ ಇದೀಗ ಭಾರಿ ಅನುಮಾನ ಶುರುವಾಗಿದೆ. ನಟ ಸಲ್ಮಾನ್‌ ಖಾನ್‌ ನಡೆಸಿಕೊಡುವ ಹಿಂದಿ ಬಿಗ್‌ಬಾಸ್‌ ಇದೀಗ ವಿವಾದದ ಗೂಡಾಗಿದೆ. ಅಷ್ಟಕ್ಕೂ ಆಗಿದ್ದೇನೆಂದರೆ ಇದೇ ಮುನಾವರ್‌ ಕೆಲ ದಿನಗಳ ಹಿಂದೆ ಶ್ರೀರಾಮನ ಬಗ್ಗೆ ಸಿಕ್ಕಾಪಟ್ಟೆ ಅವಹೇಳನ ಮಾಡಿರುವ ಆರೋಪ ಹೊತ್ತಿದ್ದಾರೆ. ಅಯೋಧ್ಯೆಯಲ್ಲಿ ಹಲವಾರು ಶತಮಾನಗಳ ಬಳಿಕ ಶ್ರೀರಾಮಲಲ್ಲಾ ಪ್ರಾಣಪ್ರತಿಷ್ಠೆಯ ಖುಷಿಯಲ್ಲಿ ಎಲ್ಲರೂ ಇರುವ ಸಂದರ್ಭದಲ್ಲಿ ಮುನಾವರ್‌ ಶ್ರೀರಾಮನ ಬಗ್ಗೆ ಗೇಲಿ ಮಾಡಿದ್ದಾರೆ. ಇಂಥ ಮುನಾವರ್‌ ಅವರನ್ನು ಸಲ್ಮಾನ್‌ ಖಾನ್‌ ಬಿಗ್‌ಬಾಸ್‌ ವಿಜೇತ ಮಾಡಿದ್ದು ಹೇಗೆ ಎನ್ನುವ ಪ್ರಶ್ನೆ ಸೋಷಿಯಲ್‌ ಮೀಡಿಯಾದಲ್ಲಿ ಬಹಳ ಚರ್ಚೆಗೆ ಗ್ರಾಸವಾಗುತ್ತಿದೆ. 

Latest Videos

ಬಿಗ್​ಬಾಸ್​ನಲ್ಲಿ ವಿನ್ನರ್​ ಕೂಡ ಮೊದ್ಲೇ ಫಿಕ್ಸ್​ ಆಗ್ತಿರ್ತಾರಾ? ಟ್ರೋಫಿ ವಿಜೇತ ಹೇಳಿದ್ದೇನು ಕೇಳಿ...
   
ಹಿರಿಯ ಪತ್ರಕರ್ತ ಸುಧೀರ್ ಚೌಧರಿ ಕೂಡ ಡೋಂಗ್ರಿ ಮತ್ತು ಹಿಂದೂ ದೇವತೆಗಳನ್ನು ಅವಮಾನಿಸುವ ಮುನಾವರ್‌ ಅವರ  ಕರಾಳ ಸತ್ಯವನ್ನು ತೋರಿಸಿದ್ದಾರೆ.   ಹಿಂದೂ ವಿರೋಧಿ ವ್ಯವಸ್ಥೆಯನ್ನು ಬಿಂಬಿಸಲು ಬಿಗ್‌ಬಾಸ್‌ನಂಥ ವೇದಿಕೆಯನ್ನು ಸಲ್ಮಾನ್‌ ಖಾನ್‌ನಂಥವರು ಎಷ್ಟು ಸಲೀಸಾಗಿ ಬಳಸಿಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಟೀಕೆಗಳು ಕೇಳಿಬರುತ್ತಿವೆ. ಅಷ್ಟೇ ಅಲ್ಲದೇ ಮುನಾವರ್‌ ಬಗ್ಗೆ  ಹುಡುಗಿಯರ ಜೀವನದ ಜೊತೆ ಆಟವಾಡುವಾತ ಎನ್ನುವ ಕಳಂಕವೂ ಹೊತ್ತಿದೆ. ಇಷ್ಟೇ ಸಾಲದು ಎನ್ನುವುದಕ್ಕೆ ಮುನಾವರ್‌ ಈ ಹಿಂದೆ ಅಪರಾಧ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿ ಕೂಡ ಬಂದವರು. ಬಿಗ್‌ಬಾಸ್‌ನಲ್ಲಿ ಯಾರು ಗೆಲ್ಲಬೇಕು ಎಂದು ಮೊದಲೇ ನಿಗದಿಯಾಗುತ್ತದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. 

ನನ್ನ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದೆ. ಬಿಗ್​ಬಾಸ್​ನಲ್ಲಿ ವಿನ್ನರ್​ ಮೊದಲೇ ಫಿಕ್ಸ್​ ಮಾಡಲಾಗುತ್ತದೆ ಎಂಬ ಆರೋಪವಿದೆ. ವೀಕ್ಷಕರ ವೋಟಿಂಗ್​ ಬಗ್ಗೆ ಹೇಳುವುದೂ ಸುಳ್ಳು, ಎಲ್ಲವೂ ಫಿಕ್ಸ್​ ಆಗಿರುತ್ತದೆ ಎಂದೂ ಹಲವರು ಆರೋಪ ಮಾಡುತ್ತಾರೆ. ಇಂಥ ಆರೋಪ ಸಾಮಾನ್ಯ ಎಂದಿರುವ ಮುನಾವರ್​,  ‘ನಾನು ಫಿಕ್ಸಿಂಗ್​ ವಿನ್ನರ್​ ಆಗಿದ್ದಿದ್ದರೆ ಫಿನಾಲೆಯವರೆಗೆ ಬಂದು ಕಪ್​ ಗೆಲ್ಲಲು ಇಷ್ಟೆಲ್ಲ ಕಷ್ಟ ಅನುಭವಿಸಬೇಕಿರಲಿಲ್ಲ. ಎಲ್ಲವೂ  ಸುಲಭವಾಗಿ ಸಿಗುತ್ತಿತ್ತಲ್ಲವೇ ಎಂದು ಪ್ರಶ್ನಿಸಿದ್ದಾರೆ.  ಇಡೀ ಸೀಸನ್​ನಲ್ಲಿ ನಾನು ಕಷ್ಟಪಟ್ಟಿದ್ದೇನೆ. ನನ್ನನ್ನು ಫಿಕ್ಸ್ಡ್​ ವಿನ್ನರ್​ ಎಂದು ಕರೆಯುವವರು ಕುಳಿತುಕೊಂಡು ಪೂರ್ತಿ ಸೀಸನ್​ನ ಸಂಚಿಕೆಗಳನ್ನು ನೋಡಲಿ. ಫಿಕ್ಸಿಂಗ್​ ಅಲ್ಲ ಎಂಬುದು ಆಗ ಗೊತ್ತಾಗುತ್ತದೆ’ ಎಂದು ಮುನಾವರ್ ಸವಾಲು ಹಾಕಿದ್ದಾರೆ. ಆದರೆ ಇಷ್ಟೆಲ್ಲಾ ಆರೋಪ ಇದ್ದ ಮೇಲೂ ಅವರನ್ನು ಗೆಲ್ಲಿಸಿದರೆ ಅದಕ್ಕೆ ಇನ್ನೇನು ಹೇಳಬೇಕು ಎನ್ನುತ್ತಿದ್ಧಾರೆ ಪ್ರೇಕ್ಷಕರು.

ಡ್ರೋನ್‌ ಪ್ರತಾಪ್‌ ರನ್ನರ್‌ ಅಪ್‌ಗೆ ಅರ್ಹರಿದ್ದರೆ ಎಂಬ ಫ್ಯಾನ್‌ ಪ್ರಶ್ನೆಗೆ ಸುದೀಪ್‌ ಹೀಗೊಂದು ಜಾಣ ಉತ್ತರ!
 

Senior Journalist Sudhir Chaudhary called out BLACK & WHITE and all hypocrite fans as well who voted for him.

Retweet If you Agree!pic.twitter.com/3ibtI5heq6

— #BiggBoss_Tak👁 (@BiggBoss_Tak)
click me!