
ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರು ಅಕುಲ್ ಬಾಲಾಜಿ (Anchor Akul Balaji) ನಡೆಸಿಕೊಡುವ ಶೋಗೆ ತಮ್ಮ 'ಯುಐ' ಸಿನಿಮಾ ಪ್ರೊಮೋಶನ್‌ಗೆ ಹೋಗಿದ್ದಾರೆ. ಅಲ್ಲಿ ಅಕುಲ್ ಬಾಲಾಜಿಯನ್ನು ಅಕ್ಷರಶಃ ಗೊಂದಲದ ಗೂಡನ್ನಾಗಿಸಿದ್ದಾರೆ. ಕಾರಣ, ಹೊರಜಗತ್ತಿನಲ್ಲಿ ಓಡಾಡುತ್ತಿರುವ ನಟ-ನಿರೂಪಕ ಅಕುಲ್ ಬಾಲಾಜಿಯವರಿಗೆ ಒಳಜಗತ್ತಿನ ಬಗ್ಗೆ ಹೇಳಿದ್ದಾರೆ. ಅದು ಅರ್ಥವಾಗದೇ ಕಣ್ ಕಣ್ ಬಿಟ್ಟಗು ಕಂಗಾಲಾಗಿದ್ದಾರೆ ಅಕುಲ್ ಬಾಲಾಜಿ. ಹಾಗಿದ್ರೆ, ನಟ ಉಪೇಂದ್ರ ಹೇಳಿದ್ಧೇನು? ಅಕುಲ್ ಬಾಲಾಜಿ ಕೇಳಿದ್ದೇನು? ಇಲ್ಲಿದೆ ಮಾಹಿತಿ..
ಅಕುಲ್ ಬಾಲಾಜಿ 'ಬಾಡಿ'ತೋರಿಸಿ ರಿಯಲ್ ಸ್ಟಾರ್ ಉಪೇಂದ್ರ ಅವರು 'ಇದೇನು?' ಅಂತ ಕೇಳಿದ್ದಕ್ಕೆ ಅಕುಲ್ 'ಬಾಡಿ' ಎಂದಿದ್ದಾರೆ. 'ಈ ಬಾಡಿ ಏನಿದು? ಇದು ಹೆಂಗೆ ಕ್ರಿಯೇಟ್ ಆಗಿದೆ ಹೇಳಿ? ನೀವು ತಿನ್ನೋ ಆಹಾರದಿಂದ.. ವೆಜ್ಜೋ ನಾನ್‌ವೆಜ್ಜೋ ಏನೋ ತಿಂತಿರಾ.. ಊಟನೇ ಮಾಡಿಲ್ಲ ಅಂದ್ರೆ ಈ ಬಾಡಿ ಏನಾಗುತ್ತೆ? ಅಂತ ಕೇಳಿದ್ದಾರೆ ಉಪೆಂದ್ರ. ಅದಕ್ಕೆ ಅಕುಲ್ ಅವರು 'ಒಣಗೊ ಹೋಗುತ್ತೆ' ಎಂದಿದ್ದಾರೆ. ಉಪ್ಪಿ 'ಅಂದ್ರೆ ಈ ಬಾಡಿ ಒಣಗೋಗುತ್ತೆ.. ಅಂದ್ರೆ, ಈ ಬಾಡಿ ನಿಮ್ಮದಲ್ಲ.. ಅಂದ್ರೆ, ಹೊರಗಡೆ ಬೆಳೆದಿರೋದು, ಕತ್ತರಿಸಿರೋದು ಎಲ್ಲಾನೂ ತಿಂದು ತಿಂದು ಈ ಬಾಡಿ ಕರೆಕ್ಟ್ ಅಲ್ವ?
ಪತ್ನಿ ಆಗಲಿಕೆ ಬಳಿಕ ಮಗನ 'ಮ್ಯಾಕ್ಸ್' ಸಿನಿಮಾ ನೋಡಿದ ಕಿಚ್ಚ ಸುದೀಪ್ ಅಪ್ಪ ಸಂಜೀವ್
ಇಲ್ಲಿರೋದು, ಮೈಂಡ್‌ನಲ್ಲಿರೋದು.? ಅಂದ ಉಪ್ಪಿಗೆ ಅಕುಲ್, 'ಸರ್, ಮೈಂಡ್ ಬೆಳೆಯಲ್ಲ ತಾನೇ?' ಅಂತ ಕೇಳಿದ್ದಕ್ಕೆ ಉಪೇಂದ್ರ ಅವರು 'ಇದೂ ಕೂಡ ನೀವೇನೋ ನೋಡಿರೋದು, ಕೇಳಿರೋದು ಅಲ್ವಾ?' ಅಂತ ಕೇಳಿದ್ದಾರೆ. ಅದಕ್ಕೆ ಅಕುಲ್ 'ವಿಚಾರಗಳನ್ನು ತುಂಬಿದೀನಿ ಅಂತ..' ಅಂದಿದ್ದಾರೆ. ಅದಕ್ಕೆ ರಿಯಲ್ ಸ್ಟಾರ್ 'ಅಲ್ಲಾಲ್ಲ, ಎಲ್ಲಾ ಹೊರಗಡೆಯಿಂದ ಹೊರಗಿಂದ ಬಂದಿರೋದೇ ಅಂತ. ಅಂದ್ರೆ ನಂದು ಅಂತ ಏನಿಲ್ಲ ಅಂತ.. ' ಅಂದಿದ್ದಾರೆ.
ನಟ ಉಪೇಂದ್ರ ಅವರು 'ಟುರ್ರ್ ಅಂದ್ರೆ ಹೆಂಗಿರುತ್ತೆ ಹೇಳಿ? ಟುರ್ ಅಂದ್ರೆ ಅದು ವಸ್ತುನಾ, ವ್ಯಕ್ತಿನಾ, ಏನದು? ಅಕುಲ್ ಅವರು 'ಶಬ್ದ' ಅಂದಿದ್ದಾರೆ. ಅದಕ್ಕೆ ಉಪೇಂದ್ರ ಅವರು 'ಅದು ನೋಡೋದಕ್ಕೆ ಹೆಂಗಿರುತ್ತೆ?' ಅಂತ ಕೇಳಿದ್ದಾರೆ. ಅದಕ್ಕೆ ಅಕುಲ್ ಅದನ್ನು ಬಳ್ಳಿ ತರ ಗಾಳಿಯಲ್ಲೇ ಚಿತ್ರಿಸೋಕೆ ಹೋಗಿ ಕಂಗಾಲ್ ಆಗಿದ್ದಾರೆ. ನಿಮ್ಗೆ ಹೆಂಗೆ ಅನ್ಸುತ್ತೆ ಅಂದ್ರೆ, ನೀವು ಏನೇ ಯೋಚ್ನೆ ಮಾಡಿದ್ರೂ ನೀವು ಕೇಳಿರೋದು, ನೋಡಿರೋದು ಇಷ್ಟೇ ಇರೋದು ನಮ್ ತಲೆ ಒಳಗೆ.. ನಮ್ದು ಅಂತ ಏನೂ ಇಲ್ಲ ನಿಜ ಹೇಳ್ಬೇಕು ಅಂದ್ರೆ..' ಅಂದಿದ್ದಾರೆ ಉಪ್ಪಿ. ಕೇಳುತ್ತಿರುವ ಅಕುಲ್‌ಗೆ ತಲೆ ತಿರುಗತೊಡಗಿದೆ!
ಸುಷ್ಮಿತಾ ಜೊತೆ ನ್ಯೂ ಇಯರ್ ಟೈಮಲ್ಲಿ'ಕಾಟನ್ ಕ್ಯಾಂಡಿ' ತಂದ ಚಂದನ್ ಶೆಟ್ಟಿ!
ಹಾಗಿದ್ರೆ 'ಸರ್ ನಮ್ದು ಅಂತ ಏನೂ ಇಲ್ವಾ? ಅಂತ ಕೇಳಿದ ಅಕುಲ್ ಬಾಲಾಜಿಗೆ 'ಏನೂ ಇಲ್ಲ' ಎಂದಿದ್ದಾರೆ ನಟ ಉಪೇಂದ್ರ. ಅದಕ್ಕೆ ಅಕುಲ್ ಬಾಲಾಜಿ 'ಹಾಗಿದ್ರೆ ನಾನ್ ಯಾರು ಸರ್ ಮತ್ತೆ?' ಎಂದು ಕೇಳಿದ್ದಕ್ಕೆ ರಿಯಲ್ ಸ್ಟಾರ್ ಅವರು ರಿಯಲ್ ಆಗಿ 'ನಿಮ್ದು ಅಂತ ಇರೋದು ಏನ್ ಗೊತ್ತಾ? ಈ ಬ್ಯೂಟಿಫಲ್ ಆಗಿ ಇರೋ ಕ್ಷಣ.., ಇದಷ್ಟೇ ನಮ್ದು' ಅಂದಿದ್ದಾರೆ. ಅದಕ್ಕೆ ಕಂಗಾಲಾಗಿ ಕೈ ಮುಗಿದು ಅಕುಲ್ ಬಾಲಾಜಿ ಅವರು ಉಪೇಂದ್ರರ ಕಾಲಿಗೆ ಬೀಳಲು ಹೋಗಿದ್ದಾರೆ.ಆಗ ಅಕುಲ್ ಕೈ ಹಿಡಿದು ಮೇಲೆತ್ತಿದ್ದಾರೆ ನಟ ಉಪೇಂದ್ರ ಅವರು. ಇವಿಷ್ಟು ಆಗಿದ್ದೂ ವೇದಿಕೆ ಮೇಲೆ ಕ್ಯಾಮೆರಾ ಎದುರಿನಲ್ಲೇ. ನಿಮಗೆ ಸಂದೇಹವಿದ್ದರೆ ವಿಡಿಯೋ ನೋಡಿ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.