- Home
- Entertainment
- TV Talk
- ಕೃಷ್ಣಾ-ಮಿಲನಾ ಬಳಿಕ ಕವಿತಾ-ಚಂದನ್.... ಹುಟ್ಟಿದ ಕೆಲವೇ ದಿನಗಳಲ್ಲಿ ಮಗುವಿನ ಫೇಸ್ ರಿವೀಲ್ ಮಾಡಿದ ಜೋಡಿ
ಕೃಷ್ಣಾ-ಮಿಲನಾ ಬಳಿಕ ಕವಿತಾ-ಚಂದನ್.... ಹುಟ್ಟಿದ ಕೆಲವೇ ದಿನಗಳಲ್ಲಿ ಮಗುವಿನ ಫೇಸ್ ರಿವೀಲ್ ಮಾಡಿದ ಜೋಡಿ
ಇತ್ತೀಚೆಗಷ್ಟೇ ತಂದೆ ತಾಯಿಯಾಗಿ ಭಡ್ತಿ ಪಡೆದಿರೋ ಚಂದನ್ ಕುಮಾರ್ ಮತ್ತು ಕವಿತಾ ಗೌಡ ದಂಪತಿಗಳು ಇದೀಗ ಮಗುವಿನ ಮುಖ ರಿವೀಲ್ ಮಾಡಿದ್ದಾರೆ.

ಹೆಚ್ಚಾಗಿ ಸೆಲೆಬ್ರಿಟಿಗಳು ತಮ್ಮ ಮಗುವಿನ ಮುಖವನ್ನು ಸಾಧ್ಯವಾದಷ್ಟು ಕ್ಯಾಮೆರಾದಿಂದ ಮುಚ್ಚಿಟ್ಟಿರುತ್ತಾರೆ. ಮಗು ದೊಡ್ಡದಾಗೋವರೆಗೂ ಅದನ್ನ ಕ್ಯಾಮೆರಾ ಎದುರಿಗೆ ಕಾಣಿಸೋದೆ ಕಡಿಮೆ. ವಿರಾಟ್ -ಅನುಷ್ಕಾರಿಂದ (Virat -Anushka) ಹಿಡಿದು ಕನ್ನಡ ಕಿರುತೆರೆ-ಹಿರಿತೆರೆಯ ಹಲವು ಸೆಲೆಬ್ರಿಟಿಗಳು, ಮಕ್ಕಳಿಗೆ ಆರು ತಿಂಗಳು, ಒಂದು ವರ್ಷವಾಗೋವರೆಗೂ ಮುಖವನ್ನ ಕಾಣಿಸೋದೆ ಇಲ್ಲ, ದೃಷ್ಟಿಯಾಗುತ್ತೆ ಎನ್ನುವ ಭಯ ಹೆಚ್ಚಿನ ಪೋಷಕರಿಗೆ ಇದ್ದೆ ಇರುತ್ತೆ. ಯಾಕೆ ಇಷ್ಟು ಬೇಗ ರಿವೀಲ್ ಮಾಡೋದು ಅನ್ನೋ ಯೋಚನೆ ಕೂಡ ಇರುತ್ತೆ.
ಅದಕ್ಕೆ ವಿರುದ್ಧ ಎನ್ನುವಂತೆ ಇತ್ತೀಚೆಗೆ ಸ್ಯಾಂಡಲ್ ವುಡ್ ನ ಮುದ್ದಾದ ಜೋಡಿಯಾಗಿರುವ ಡಾರ್ಲಿಂಗ್ ಕೃಷ್ಣಾ ಮತ್ತು ಮಿಲನಾ ನಾಗರಾಜ್ (Darling Krishna and Milana Nagaraj) ದಂಪತಿಗಳು ಮಗು ಹುಟ್ಟಿ ಸ್ವಲ್ಪ ದಿನದಲ್ಲೇ ಮುದ್ದಾದ ವಿಡಿಯೋ ಮತ್ತು ಫೋಟೊ ಶೂಟ್ ಮಾಡಿಸುವ ಮೂಲಕ ತಮ್ಮ ಮುದ್ದಿನ ಮಗಳು ಪರಿಯನ್ನು ಲೋಕಕ್ಕೆ ಪರಿಚಯಿಸಿದ್ದರು.
ಇದೀಗ ಅದೇ ದಾರಿಯಲ್ಲಿ ಸಾಗುತ್ತಿದ್ದಾರೆ ಕಿರುತೆರೆಯ ಜೋಡಿಗಳಾದ ಚಂದನ್ ಕುಮಾರ್ ಮತ್ತು ಕವಿತಾ ಗೌಡ ಜೋಡಿಗಳು. ಇತ್ತೀಚೆಗಷ್ಟೇ ಪೋಷಕರಾಗಿ ಭಡ್ತಿ ಪಡೆದಿರುವ ಈ ಜೋಡಿಗಳು ಇಂದು ನವರಾತ್ರಿ ಹಬ್ಬದ ಶುಭ ಗಳಿಗೆಯಲ್ಲಿ ತಮ್ಮ ಮುದ್ದು ಮಗನ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಮ್ಮ ಹೃದಯ ನಾವು ಅಂದುಕೊಂಡದ್ದಕ್ಕಿಂತ ತುಂಬಾನೆ ಖುಷಿಯಾಗಿದೆ. ನಮ್ಮ ಲಿಟಲ್ ಸನ್ ಶೈನ್ (Our hearts are fuller than we ever imagined.” Our little Sunshine) ಎಂದು ಕ್ಯಾಪ್ಶನ್ ಹಾಕುವ ಮೂಲಕ ಮಗುವಿನ ಜೊತೆ ಕವಿತಾ ಮತ್ತು ಚಂದನ್ ನಿಂತಿರುವ ಮುದ್ದಾದ ಫ್ಯಾಮಿಲಿ ಫೋಟೋವನ್ನು ಶೇರ್ ಮಾಡಿದ್ದಾರೆ.
ಮುದ್ದಾದ ಫ್ಯಾಮಿಲಿ ಫೋಟೊಗೆ ಸಹಸ್ರಾರು ಸಂಖ್ಯೆಯಲ್ಲಿ ಲೈಕ್ಸ್ ಗಳು ಬಂದಿದ್ದು, ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಸಹ ವಿಶ್ ಮಾಡಿದ್ದಾರೆ. ಅಷ್ಟೇ ಅಲ್ಲ ಅಭಿಮಾನಿಗಳು ಮಗುವಿನ ಮುಖ ನೋಡಿ ಸಖತ್ ಖುಷಿಯಾಗಿದ್ದಾರೆ. ಮಗುವಿಗೆ ಶುಭ ಹಾರೈಕೆಯನ್ನೂ ಸಹ ಕೋರಿದ್ದಾರೆ.
ಚಂದನ್ ಕುಮಾರು ಮತ್ತು ಕವಿತಾ ಗೌಡ ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ಜೊತೆಯಾಗಿ ನಟಿಸಿದ್ದರು, ನಂತರ ಇಬ್ಬರೂ ಬೇರೆ ಬೇರೆ ಧಾರಾವಾಹಿಗಳಲ್ಲಿ ನಟಿಸಿದ್ದರು. ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಈ ಜೋಡಿ, ಮೂರು ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ಅಪ್ಪ-ಅಮ್ಮನ ಹುದ್ದೆ ಪಡೆದಿರುವ ಜೋಡಿ, ಮಗುವಿನ ಜೊತೆಗೆ ಸಮಯ ಕಳೆದು ಎಂಜಾಯ್ ಮಾಡ್ತಿದ್ದಾರೆ.