ಲಕ್ಷ್ಮೀ ಬಾರಮ್ಮ ಕಾವೇರಿಗೆ ಹಿಡಿಶಾಪ ಹಾಕ್ತಿದ್ದಾರೆ ವೀಕ್ಷಕರು!

Published : Oct 24, 2023, 01:19 PM IST
ಲಕ್ಷ್ಮೀ ಬಾರಮ್ಮ ಕಾವೇರಿಗೆ ಹಿಡಿಶಾಪ ಹಾಕ್ತಿದ್ದಾರೆ ವೀಕ್ಷಕರು!

ಸಾರಾಂಶ

ಕಾವೇರಿ ಈಗ ನೀನು ನಿಜವಾಗಿ ನೇಣು ಹಾಕೊಂಡ್ರು ನಿನ್ನ ಮಗ ನೋಡೋಕೆ ಬರಲ್ಲ.. ಲಕ್ಷ್ಮೀ ಬಾರಮ್ಮ ಸೀರಿಯಲ್‌ನ ಅಮ್ಮ, ಅತ್ತೆ ಕಾವೇರಿ ಪಾತ್ರಕ್ಕೆ ದಿನ ಬೆಳಗಾದ್ರೆ ವೀಕ್ಷಕರು ಹಿಡಿಶಾಪ ಹಾಕ್ತಿದ್ದಾರೆ. ಅಂಥಾದ್ದು ಏನಾಗ್ತಿದೆ?  

ದಿನಾ ಬರೋ ಸೀರಿಯಲ್‌ಗಳು ಜನರಿಗೆ ಎಷ್ಟು ಹತ್ತಿರವಾಗಿ ಬಿಡ್ತವೆ ಅಂದರೆ ಅವರು ಈ ಪಾತ್ರಗಳಲ್ಲಿ ತಮ್ಮನ್ನು, ತಮ್ಮ ಮನೆಯವರನ್ನೇ ನೋಡಿ ಬಿಡ್ತಾರೆ. ಕೆಲವು ಪಾತ್ರಳು ಇರಿಟೇಟ್ ಮಾಡಿದಾಗ ಅದು ಕತೆ ಅನ್ನೋದನ್ನೂ ಮರೆತು ಹಿಡಿಶಾಪ ಹಾಕ್ತಾರೆ. ಸದ್ಯಕ್ಕೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಸೀರಿಯಲ್‌ನ ಹೀರೋ ತಾಯಿ, ಹೀರೋಯಿನ್ ಅತ್ತೆ ಕಾವೇರಿ ಅಂಥದ್ದೊಂದು ಶಾಪಕ್ಕೆ ಗುರಿಯಾಗಿದ್ದಾಳೆ. ಯಾರಿಗೂ ಕಾವೇರಿ ತರದ ತಾಯಿ ಸಿಗೋದು ಬೇಡ ಅಂತ ವೀಕ್ಷಕರು ಬೇಡಿಕೊಳ್ಳೋ ಲೆವೆಲ್‌ಗೆ ಹೋಗಿದ್ದಾರೆ. ಅಷ್ಟಕ್ಕೂ ಈ ಪಾತ್ರ ಸೊಸೆಯನ್ನು ವಿಷ ಹಾಕಿ ಕೊಲ್ಲೋ ಥರದ ವಿಲನ್ ಪಾತ್ರ ಅಲ್ಲ. ತನ್ನ ಮಗನ ಮೇಲಿನ ಅತಿಯಾದ ಪ್ರೀತಿ ಹೇಗೆ ಅವನ ಲೈಫನ್ನೇ ಸರ್ವನಾಶ ಮಾಡುತ್ತೆ ಅನ್ನೋದನ್ನು ತಿಳಿಸಿಕೊಡೋ ಪಾತ್ರ. ಈ ಥರ ರಿಯಲ್ ಲೈಫಲ್ಲೂ ಕೆಲವರು ಇರ್ತಾರೆ. ಜನ ಅಂಥವರನ್ನೂ ನೋಡಿರ್ತಾರೆ. ಹೀಗಾಗಿ ಈ ಪಾತ್ರಕ್ಕೆ ಇನ್ನಿಲ್ಲದಂತೆ ಹಿಡಿಶಾಪ ಹಾಕ್ತಿದ್ದಾರೆ.

ಸೀರಿಯಲ್ ಕಥೆಯಲ್ಲಿ ತಾನು ಅತಿಯಾಗಿ ಪ್ರೀತಿಸುವ ಮಗನೇ ತಾಯಿಯ ವಿರುದ್ಧ ತಿರುಗಿ ಬಿದ್ದಿದ್ದಾನೆ. ಇದು ತಾಯಿ ಕಾವೇರಿಗೆ ನುಂಗಲಾರದ ತುತ್ತಾಗಿದೆ. ಕೊಡಗಿನ ಹೆಣ್ಣುಮಗಳು ಸುಷ್ಮಾ ಈ ಪಾತ್ರವನ್ನು ಎಷ್ಟು ಮನೋಜ್ಞವಾಗಿ ಅಭಿನಯಿಸಿದ್ದಾರೆ ಅಂದರೆ ಬಹುಶಃ ಅವರೆಲ್ಲಾದರೂ ಈ ಸೀರಿಯಲ್‌ನ ಕೋರ್ ಅಭಿಮಾನಿಗಳ ಕಣ್ಣಿಗೆ ಬಿದ್ದರೆ ಹೊಡೆದೇ ಬಿಡಬಹುದೇನೋ. ಇದೀಗ ತನ್ನ ಮಗ-ಸೊಸೆ ಮಧ್ಯೆ ಸಮಸ್ಯೆ ಬಂದರೂ ಕೂಡ ಪರವಾಗಿಲ್ಲ, ನನ್ನ ಮಗ ಮಾತ್ರ ನನಗೆ ಸಿಗಬೇಕು ಎನ್ನುವ ತಾಯಿ ಕಾವೇರಿ ಕಂಡರೆ ವೈಷ್ಣವ್‌ಗೆ ಇಷ್ಟ ಆಗ್ತಿಲ್ಲ. ಇದನ್ನೇ ಅವನು ಪ್ರಶ್ನೆ ಮಾಡುತ್ತಿದ್ದಾನೆ. ಕಾವೇರಿಗೆ ಏನು ಮಾಡಿದ್ರೂ ಅವಳ ತಪ್ಪು ಅರ್ಥ ಆಗ್ತಿಲ್ಲ. ಯಾಕೆ ಇಷ್ಟೊಂದು ಸ್ವಾರ್ಥಿ ಆಗ್ತಿದ್ದೀಯಾ ಅಂತ ವೈಷ್ಣವ್ ಪದೇ ಪದೇ ಕೇಳ್ತಿದ್ರೂ ಕಾವೇರಿ ಮಾತ್ರ ಅರ್ಥ ಮಾಡಿಕೊಳ್ತಿಲ್ಲ. ತನ್ನ ಮಗ ತನ್ನ ಜೊತೆಯೇ ಇರಬೇಕು ಅಂತ ಅವಳು ಒಂದಾದ ಮೇಲೆ ಒಂದು ಸುಳ್ಳು ಹೇಳುತ್ತಿದ್ದಾಳೆ. ಇದು ಮಗ ವೈಷ್ಣವ್‌ಗೆ ಇಷ್ಟ ಆಗ್ತಿಲ್ಲ. ಅವನು ಪದೇ ಪದೇ ನಿನ್ನ ತಪ್ಪು ಅರ್ಥ ಮಾಡಿಕೊ ಅಂತ ಹೇಳಿದ್ರೂ ಕೂಡ ಅವಳು ಕೇಳುತ್ತಿಲ್ಲ.

ಇನ್ವಿಟೇಶನ್ ಜತೆಯಲ್ಲೇ ಅನೌನ್ಸ್‌ಮೆಂಟ್ ಕೂಡ ಮಾಡುತ್ತೇವೆ: ದಿವ್ಯಾ ಉರುಡುಗ-ಅರವಿಂದ್ ಕೆಪಿ

ವೈಷ್ಣವ್ ಹಾಗೂ ಕೀರ್ತಿ ಪ್ರೀತಿಸಿದ್ದು, ಮದುವೆಯಾಗಬೇಕು (marriage) ಅಂತ ಅಂದುಕೊಂಡಿದ್ದರು. ಕೀರ್ತಿ ತನ್ನ ಮಾತು ಕೇಳಲ್ಲ, ಅವಳು ನನ್ನ ಸೊಸೆಯಾದ್ರೆ ವೈಷ್ಣವ್ ನನ್ನ ಕೈತಪ್ಪಿ ಹೋಗ್ತಾನೆ ಅಂತ ತಾಯಿ ಕಾವೇರಿ ಲಕ್ಷ್ಮೀ ಎನ್ನುವ ಬಡವರ ಮನೆ ಹುಡುಗಿ ಜೊತೆ ಮಗನ ಮದುವೆ ಮಾಡಿದಳು. ವೈಷ್ಣವ್ ಲಕ್ಷ್ಮೀ ಮಧ್ಯೆ ಸ್ನೇಹ ಹುಟ್ಟಿದ್ದು ಕೂಡ ಕಾವೇರಿಗೆ ಇಷ್ಟ ಆಗ್ತಿಲ್ಲ. ಹಾಗಾಗಿ ಅವಳು ಸಾಯುವ ನಾಟಕ ಮಾಡಿದ್ದಳು. ಇದು ವೈಷ್ಣವ್‌ಗೆ ಗೊತ್ತಾಗಿದೆ.

ಸತ್ಯ ಗೊತ್ತಾದ ವೈಷ್ಣವ್ ಅಮ್ಮನ ವಿರುದ್ಧವೇ ಸಿಡಿದೆದ್ದಿದ್ದಾನೆ. ಇದು ವೀಕ್ಷಕರಿಗೂ ಸಖತ್ ಖುಷಿಯಾಗಿದೆ. ಎಲ್ಲಿ ಅವನಿಗೆ ಸತ್ಯವೇ ಗೊತ್ತಾಗದೇ ತನ್ನ ಹೆಂಡತಿಯನ್ನೇ ದ್ವೇಷಿಸಿಬಿಡುತ್ತಾನೋ ಎಂದು ಹೆದರಿಕೊಂಡಿದ್ದ ಜನರಿಗೆ ಇದರಿಂದ ಬಿಗ್ ರಿಲೀಫ್ (big relief) ಸಿಕ್ಕ ಹಾಗಾಗಿದೆ. ಹೀಗಾಗಿ ಅವರು, 'ವೈಷ್ಣವ್ ನಿಮ್ಮಮ್ಮನಿಗೆ ನೀನು ಸರಿಯಾಗಿ ಬುದ್ಧಿ ಕಲಿಸು, ಲಕ್ಷ್ಮೀ ಕೈ ಬಿಡಬೇಡ', 'ಕಾವೇರಿ..ಏನು ಮಾಡಬೇಡ, ಬಂದಿದ್ದನ್ನು ಅನುಭವಿಸು..', 'ಕಾವೇರಿ ನಿನ್ನ ಕನಸು (dream) ನನಸು ಹಾಗೋ ಟೈಂ ನಿನ್ನ ಮಗ ನಿನ್ನ ಬಿಟ್ಟು ಹೋಗೋ ಟೈಮ್ ಹತ್ತಿರದಲ್ಲೆ ಇದೆ ಬಿಡು' ಅಂತೆಲ್ಲ ಕಮೆಂಟ್ (comment) ಮಾಡ್ತಿದ್ದಾರೆ. ಅವರ ಈ ಕಮೆಂಟ್ ನೋಡಿದರೆ ಅವರೆಲ್ಲ ಎಷ್ಟರ ಮಟ್ಟಿಗೆ ಈ ಸೀರಿಯಲ್‌ಗೆ ಅಡಿಕ್ಟ್ ಆಗಿದ್ದಾರೆ ಅಂತ ಗೊತ್ತಾಗುತ್ತೆ. ಅತಿಯಾದ ತಾಯಿಯ ಪ್ರೀತಿಯೂ ಹೇಗೆ ವಿಷವಾಗುತ್ತೆ ಅನ್ನೋದನ್ನು ಈ ಸೀರಿಯಲ್ ತೋರಿಸಿಕೊಟ್ಟಿದೆ.

ಗೀತಾಗೆ ಮಕ್ಳಾಗಿ ಆ ಮಕ್ಳಿಗೆ ಮಗು ಆಗೋವರೆಗೂ ಈ ಸೀರಿಯಲ್ ನಡಿತಿರುತ್ತೆ ಅನ್ಸುತ್ತೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Karna Serial ನಿಧಿ ಅರೆಸ್ಟ್​: ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದೇಕೆ? ಅಷ್ಟಕ್ಕೂ ಆಗಿದ್ದೇನು?
ಅಬ್ಬಬ್ಬಾ! ಟ್ವಿಸ್ಟ್‌ ಅಂದ್ರೆ ಇದಪ್ಪಾ- ಎದ್ದು ಬಂದ ಸತ್ತ ಸಂಧ್ಯಾ: ಲಾಯರ್‌ ಭಾರ್ಗವಿನೇ ಜೈಲಿಗೆ ಹೋಗ್ತಾಳಾ?