
ಬಿಗ್ ಬಾಸ್ ಮೂಲಕ ಕರ್ನಾಟಕದ ಮನೆಮನೆಗಳಲ್ಲೂ ಪರಿಚಿತರಾಗಿರುವ ಅರವಿಂದ್ ಕೆಪಿ ಹಾಗೂ ದಿವ್ಯಾ ಉರುಡಗ ಇದೀಗ ಅನೌನ್ಸ್‌ಮೆಂಟ್ ಮಾಡುವ ಹಂತಕ್ಕೆ ಬಂದಿದ್ದಾರೆ. ಅವರು ಅದೇನು ಘೋಷಣೆ ಮಾಡುತ್ತಾರೆ ಎಂಬುದನ್ನು ಮತ್ತೆ ಬಿಡಿಸಿ ಹೇಳಬೇಕಿಲ್ಲ ತಾನೇ? ಅದೇ ಅವರ ಎಂಗೇಜ್‌ಮೆಂಟ್ ಅಥವಾ ಡೈರೆಕ್ಟ್ ಮದುವೆ. ಮೊದಲು ಹುಳ ಬಿಟ್ಟು ಆಮೇಲೆ ವಿಷಯ ಹೇಳುವುದು ಇತ್ತೀಚಿನ ಟ್ರೆಂಡ್ ಆಗಿದೆ ಎನ್ನಬಹುದು. ಈ ಜೋಡಿ ಕೂಡ ಅದೇ ಹಾದಿ ಹಿಡಿದಿದೆ.
ಅರವಿಂದ್-ದಿವ್ಯಾ ಜೋಡಿ ಸದ್ಯವೇ ಮದುವೆ ಆಗಲಿದ್ದಾರೆ. ಅರವಿಂದ್ ಹಾಗೂ ದಿವ್ಯಾ ಬಿಗ್ ಬಾಸ್ ಶೋದಲ್ಲಿ ಪರಿಚಯವಾಗಿ, ಅಲ್ಲಿಯೇ ಲವ್ ಆಗಿ ಬಳಿಕ ಪ್ರೇಮುಗಳಾದವರು ಎಂಬುದು ಬಹುತೇಕರಿಗೆ ಗೊತ್ತಿರುವ ಸಂಗತಿ. ಈ ಇಬ್ಬರೂ ಈಗ ಜೋಡಿ ಹಕ್ಕಿಗಳಾಗಿದ್ದು, ಸದ್ಯವೇ ಅದಕ್ಕೆ ಮದುವೆ ಎಂಬ ಅಧಿಕೃತ ಮುದ್ರೆ ಬೀಳಲಿದೆ. ಈಗಾಗಲೇ ಎರಡೂ ಕುಟುಂಬಗಳೂ ಒಪ್ಪಿದ್ದು, ಮದುವೆ ಮಾತ್ರ ಬಾಕಿಯಿದೆ ಅಷ್ಟೇ.
ಗೀತಾಗೆ ಮಕ್ಳಾಗಿ ಆ ಮಕ್ಳಿಗೆ ಮಗು ಆಗೋವರೆಗೂ ಈ ಸೀರಿಯಲ್ ನಡಿತಿರುತ್ತೆ ಅನ್ಸುತ್ತೆ
ದಿವ್ಯಾ ಉರುಡುಗ ಇತ್ತೀಚೆಗೆ ಬಿಸನೆಸ್ ವುಮನ್ ಆಗಿ ಬದಲಾಗಿದ್ದು, ಅರವಿಂದ್ ಕೆಪಿ ನಟನೆ ಹಾಗೂ ಬಿಸನೆಸ್ ಎರಡರಲ್ಲೂ ತೊಡಗಿಸಿಕೊಂಡಿದ್ದಾರೆ. ಈ ಬಿಗ್ ಬಾಸ್ ಪ್ರೇಮಿಗಳಿಗೆ, ಕರುನಾಡಿನಲ್ಲಿ ಹಲವು ಅಭಿಮಾನಿಗಳಿದ್ದಾರೆ. ಅವರಿಬ್ಬರ ಲವ್ ಹಾಗೂ ಮದುವೆ ಬಗ್ಗೆ ಕುತೂಹಲ, ಮಾತುಕತೆ ನಡೆಸುವ ಮಟ್ಟಿಗೆ ಸೋಷಿಯಲ್ ಮೀಡಿಯಾದಲ್ಲಿ ಅವರಿಬ್ಬರಿಗೂ ಫ್ಯಾನ್ಸ್ ಫಾಲೋವಿಂಗ್ ಇದೆ. ದಿವ್ಯಾ ಉರುಡಗ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಭಾರಿ ಎಂಬಷ್ಟು ಆಕ್ಟಿವ್ ಆಗಿದ್ದು, ಯಾವುದೇ ವಿಷಯವನ್ನು ಕೂಡ ಅವರು ಸಾಮಾಜಿಕ ಮಾಧ್ಯಮಗಳ ಮೂಲಕವೇ ಅಭಿಮಾನಿಗಳಿಗೆ ತಲುಪಿಸುತ್ತಾರೆ.
ವಿನಯ್, ಮೈಕೆಲ್ ಮಾಡಿದ ತಪ್ಪಿಗೆ ಬಿಗ್ ಬಾಸ್ ಕೊಟ್ಟ ಶಿಕ್ಷೆ ನೋಡಿ ಹೌಹಾರಿದ ಸ್ಪರ್ಧಿಗಳು!
ಇದೀಗ, ತಮ್ಮ ಎಂಗೇಜ್ಮೆಂಟ್ ಮತ್ತು ಮದುವೆ ವಿಷಯಗಳಿಗೆ ಸಂಬಂಧಿಸಿ ತಾವಿಬ್ಬರೂ ಸೇರಿ ಅನೌನ್ಸ್‌ಮೆಂಟ್ ಮಾಡುತ್ತೇವೆ ಎಂದು ಫ್ಯಾನ್ಸ್‌ಗಳ ತಲೆಗೆ ಹುಳ ಬಿಟ್ಟಿದ್ದರು. ಆದರೆ, ಘೋಷಣೆ ಮಾಡದೇ ಸ್ವಲ್ಪ ಮುಂದಕ್ಕೆ ಹಾಕಿದ್ದಾರೆ. ಈಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ, ದಿವ್ಯಾ ಅರವಿಂದ್ ಜತೆಯಲ್ಲಿ ಕಾರಿನಲ್ಲಿ ಹೋಗುತ್ತಿರುವಾಗ, ಈ ಬಗ್ಗೆ ಪ್ರಶ್ನೆ ಕೇಳಿ ಅರವಿಂದ್ ಅವರಿಂದ ಉತ್ತರ ಪಡೆದಿದ್ದಾರೆ. ಉತ್ತರ ಏನೆಂದರೆ- "ಆಮಂತ್ರಣಂ ಪತ್ರಿಕೆ ಜೊತೆಯಲ್ಲೇ ಅನೌನ್ಸ್‌ಮೆಂಟ್ ಮಾಡುತ್ತೇವೆ" ಎಂದಿದ್ದಾರೆ. ಅವರ ಅಭಿಮಾನಿಗಳು ಕಾದು ನೋಡಬೇಕು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.