
ಅನೇಕರಿಗೆ ಮನೆ ಕಟ್ಟೋದು ಕನಸು. ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು ತಮ್ಮ ಕನಸಿನ ಗೂಡನ್ನು ಕಟ್ಟಿದ್ದಾರೆ. ಅಂದಹಾಗೆ ‘ಕಥೆಯೊಂದು ಶುರುವಾಗಿದೆ’ ಧಾರಾವಾಹಿ ಖ್ಯಾತಿಯ ನಟಿ ಅಕ್ಷತಾ ದೇಶಪಾಂಡೆ ಅವರು ಹೊಸ ಮನೆಗೆ ಕಾಲಿಟ್ಟಿದ್ದಾರೆ. ಈ ಬಗ್ಗೆ ಅವರು ವಿಶೇಷವಾದ ಪೋಸ್ಟ್ ಹಂಚಿಕೊಂಡಿದ್ದಾರೆ.
ಹೊಸ ಮನೆಯ ಬಗ್ಗೆ ಅಕ್ಷತಾ ದೇಶಪಾಂಡೆ ಏನಂದ್ರು?
ಅಕ್ಷತಾ ದೇಶಪಾಂಡೆ ಅವರು ಹೊಸ ಮನೆಗೆ ʼಶಾರದಾ ಕೃಷ್ಣ ನಿಲಯʼ ಎಂದು ಹೆಸರಿಟ್ಟಿದ್ದಾರೆ. “ನಮ್ಮ ಹೊಸ ಮನೆಗೆ ಜನವರಿ 31ರಂದು ಪ್ರವೇಶ ಮಾಡಿದ್ದೇವೆ. ಇದು ನನ್ನ ಜೀವನದ ತುಂಬ ನೆನಪಿಡುವ ದಿನ. ʼಕಠಿಣ ಶ್ರಮಕ್ಕೆ ಪ್ರತಿಫಲ ಇದೆ. ನನ್ನ ಪರಿಶ್ರಮದ ಪ್ರತಿಫಲವೇ ಈ ಮನೆ. ದೊಡ್ಡ ಕನಸು ಕಾಣಿ, ಕೆಲಸ ಮಾಡಿ, ಗಮನಕೊಡಿ. ಪ್ರತಿಯೊಂದು ಹಂತದಲ್ಲಿಯೂ ನನಗೆ ಸಹಕಾರ ಕೊಟ್ಟ ನನ್ನ ತಂಗಿ ಸೌಮ್ಯಾಗೆ ಧನ್ಯವಾದಗಳು” ಎಂದು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆʼ. ಅನೇಕರು ಅಕ್ಷತಾಗೆ ಶುಭಾಶಯ ತಿಳಿಸಿದ್ದಾರೆ.
ಕಪ್ಪು ಸೀರೆಯಲ್ಲಿ ಮಿಂಚಿದ ಅಕ್ಷತಾ ದೇಶಪಾಂಡೆ... ಕಿರುತೆರೆ ನಟಿಯ ಅಂದಕ್ಕೆ ಫ್ಯಾನ್ಸ್ ಫಿದಾ
ʼಕಥೆಯೊಂದು ಶುರುವಾಗಿದೆʼ ಕಥೆಯೇನು?
ಈ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಕ್ಷತಾ ದೇಶಪಾಂಡೆ, ಚಂದು ಬಿ ಗೌಡ ನಟನೆಯ ʼಕಥೆಯೊಂದು ಶುರುವಾಗಿದೆʼ ಒಳ್ಳೆಯ ಪ್ರತಿಕ್ರಿಯೆ ಪಡೆದಿತ್ತು. ಈ ಸೀರಿಯಲ್‌ನಲ್ಲಿ ಕೃತಿ ಪಾತ್ರದಲ್ಲಿ ಅಕ್ಷತಾ, ಯುವರಾಜ್ ಪಾತ್ರದಲ್ಲಿ ಚಂದು ಬಿ ಗೌಡ ನಟಿಸಿದ್ದರು. ಕೃತಿ ಹಾಗೂ ಯುವರಾಜ್ ಸಾಕಷ್ಟು ಜಗಳ ಆಡುತ್ತಿದ್ದರು. ಅವರು ಮದುವೆಯಾಗುವ ಪರಿಸ್ಥಿತಿ ಬಂದಾಗ ಮದುವೆಯಾದರು. ಆಮೇಲೆ ಈ ಜೋಡಿ ನಡುವೆ ಪ್ರೀತಿ ಶುರುವಾಯ್ತು. ಯುವರಾಜ್ ಕುಟುಂಬದ ರಹಸ್ಯಗಳನ್ನು ಕೃತಿ ಕಂಡುಹಿಡಿದಳು.
ಡೀಪ್ ನೆಕ್ ಬ್ಲೌಸ್, ಕೆಂಪು ಸೀರೆಯಲ್ಲಿ ಅಕ್ಷತಾ : ಚೆನ್ನಾಗಿ ಸೀರೆ ಉಡ್ತಿದ್ರಿ ಈಗೇನಾಯ್ತು ಎಂದ ನೆಟ್ಟಿಜನ್ಸ್
ʼಚಿಕ್ಕೆಜಮಾನಿʼ ಧಾರಾವಾಹಿ ಕಥೆ ಹೇಗಿದೆ?
ಈಗಾಗಲೇ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಅಕ್ಷತಾ ದೇಶಪಾಂಡೆ ʼಕಥೆಯೊಂದು ಶುರುವಾಗಿದೆʼ ಧಾರಾವಾಹಿ ಬಳಿಕ, ತಮಿಳು, ತೆಲುಗು ಭಾಷೆಯ ಧಾರಾವಾಹಿಗಳಲ್ಲಿ ನಟಿಸಿದ್ದರು. ಆನಂತರ ʼಚಿಕ್ಕೆಜಮಾನಿʼ ಸೀರಿಯಲ್‌ನಲ್ಲಿ ನಟಿಸಿದ್ದರು. ಈ ಧಾರಾವಾಹಿಯಲ್ಲಿ ಹೀರೋಯಿನ್ ಕಾವೇರಿ ಪಾತ್ರದಲ್ಲಿ ಅಕ್ಷತಾ ದೇಶಪಾಂಡೆ ಅಭಿನಯಿಸುತ್ತಿದ್ದಾರೆ.
ಧಾರಾವಾಹಿ ಬಗ್ಗೆ ಏನು ಹೇಳಿದ್ರು?
ʼಚಿಕ್ಕೆಜಮಾನಿʼ ಬಗ್ಗೆ ಮಾತನಾಡಿದ್ದ ಅಕ್ಷತಾ, “ನಾನು ಇನ್ಮುಂದೆ ಕಾವೇರಿಯಾಗಿ ನಿಮ್ಮ ಮನೆಗೆ ಬರುತ್ತಿದ್ದೇನೆ. ಹೆಣ್ಣು ಮಕ್ಕಳು ಎಂದರೆ ಜವಾಬ್ದಾರಿ, ಕಾಳಜಿ ಇರುವವರು ಅಂಥ ಹೇಳಲಾಗುತ್ತದೆ. ಕಾಳಜಿ ತೋರಿಸುವ, ಭಾವನಾತ್ಮಕ, ಜವಾಬ್ದಾರಿಯುತ ಪಾತ್ರದಲ್ಲಿ ನಾನು ನಟಿಸುತ್ತಿದ್ದೇನೆ. ಈ ಧಾರಾವಾಹಿಯಲ್ಲಿ ಚಿಕ್ಕೆಜಮಾನಿ ಅಂದ್ರೆ ನಾನು ನನ್ನ ಮನೆ ಯಜಮಾನಿ ಅಂತಲೂ ಅಲ್ಲ. ನಾನು ಈ ಧಾರಾವಾಹಿಯಲ್ಲಿ ಯಾರ ಮನೆಗೆ ಯಜಮಾನಿಯಾಗಿ ಹೋಗುವೆ, ಹೇಗೆ ಹೋಗುವೆ ಎನ್ನುವ ಕಥೆ ಇದೆ. ನನ್ನ ಕರಿಯರ್‌ನಲ್ಲಿ ತುಂಬ ಇಷ್ಟಪಟ್ಟು ಕಾವೇರಿ ಪಾತ್ರ ಮಾಡುತ್ತಿದ್ದೇನೆ" ಎಂದು ಹೇಳಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್!
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ಅಕ್ಷತಾ ದೇಶಪಾಂಡೆ ಅವರು ಟ್ರೆಡಿಷನಲ್, ವೆಸ್ಟರ್ನ್ ಡ್ರೆಸ್‌ನಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿರುತ್ತಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಸೀರಿಯಲ್‌ಗಳಲ್ಲಿ ನಟನೆ!
ಅಂದಹಾಗೆ ಅಕ್ಷತಾ ದೇಶಪಾಂಡೆ ಅವರು ʼಅಮೃತವರ್ಷಿಣಿʼ, ʼಕಾವ್ಯಾಂಜಲಿʼ, ʼಮತ್ತೆ ವಸಂತʼ, ʼಕಥೆಯೊಂದು ಶುರುವಾಗಿದೆʼ, ತಮಿಳಿನಲ್ಲಿ ʼಅನಾಮಿಕʼ ಧಾರಾವಾಹಿ, ತೆಲುಗಿನಲ್ಲಿ ʼನಿನ್ನ ಕೋರಿʼ ಧಾರಾವಾಹಿಯಲ್ಲಿಯೂ ನಟಿಸಿದ್ದಾರೆ. ಅಂದಹಾಗೆ ಅಕ್ಷತಾ ಅವರಿಗೆ ಈಗ 25 ವರ್ಷ ವಯಸ್ಸು. ಅಕ್ಷತಾ ಅವರು ಮೂಲತಃ ಬೆಳಗಾವಿಯವರು. ಬೆಳಗಾವಿಯಿಂದ ಅವರು ಬೆಂಗಳೂರಿಗೆ ಆಗಮಿಸಿ ಸೀರಿಯಲ್‌ಗಳಲ್ಲಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.