BBK10 ಪ್ರೇಮಿಗಳು ಶಾಕ್: 'ದೊಡ್ಮನೆ'ಯಲ್ಲಿ ನಡೆಯಿತಾ ಘೋರ ದುರಂತ, ಕಾರ್ತಿಕ್-ಸಂಗೀತಾ ಮಧ್ಯೆ ಬಿಗ್ ಫೈಟ್?!

By Shriram Bhat  |  First Published Oct 20, 2023, 1:18 PM IST

ಇದುವರೆಗೆ ಬೆಸ್ಟ್‌ ಫ್ರೆಂಡ್ಸ್ ಆಗಿ ಸದಾ ಜೊತೆಗೇ ಕಾಣಿಸಿಕೊಳ್ಳುತ್ತಿದ್ದ ಕಾರ್ತಿಕ್ ಮತ್ತು ಸಂಗೀತಾ ನಡುವೆ ಫೈಟ್‌ ಶುರುವಾಗಿದೆ! ಇದುವರೆಗೆ ಪರಸ್ಪರ ಕಾಂಪ್ಲಿಮೆಂಟರಿಯಾಗಿಯೇ ಒದಗಿಬರುತ್ತಿದ್ದ ಅವರ ನಡುವೆ ಫೈಟ್ ಹುಟ್ಟಿಕೊಂಡಿದ್ದ ಹೇಗೆ? ಅದಕ್ಕೆ ಕಾರಣವೇನು? ಹಾಗಾದ್ರೆ ಹೊಸದೊಂದು ಜಗಳಕ್ಕೆ ಬಿಗ್‌ಬಾಸ್‌ ಮನೆ ಸಾಕ್ಷಿಯಾಗುತ್ತಿದೆಯೇ?


ಬಿಗ್ ಬಾಸ್ ಮನೆಯಲ್ಲಿ ಹೊಸ ಮನಸ್ತಾಪವೊಂದು ಹುಟ್ಟಿಕೊಂಡಿದೆಯಾ? ಹೌದು ಅಥವಾ ಇಲ್ಲ ಎಂದು ನಾವು ಹೇಳುವ ಮೊದಲು ಅಥವಾ ನೀವು ನಿರ್ಧರಿಸುವ ಮೊದಲು ಇದನ್ನೊಮ್ಮೆ ಓದಿ ನೋಡಿ..! ವಿನಯ್ ಮತ್ತು ಸಂಗೀತಾ ನಡುವಿನ ಫೈಟ್‌ ಈ ಸಲದ ಬಿಗ್‌ಬಾಸ್‌ ಮನೆಯಲ್ಲಿ ಸಾಕಷ್ಟು ಏರುಪೇರುಗಳನ್ನು ಸೃಷ್ಟಿಸುತ್ತಿದೆ. ಪ್ರತಿಯೊಂದು ಹಂತದಲ್ಲಿಯೂ ಒಬ್ಬರು ಇನ್ನೊಬ್ಬರನ್ನು ಕೆಣಕುವುದು, ಮಾತಿನ ಚಕಮಕಿ ಮೊದಲಿನಿಂದಲೂ ನಡೆದೇ ಇತ್ತು. ಆಗೆಲ್ಲ ಸಂಗಿತಾಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಬೆಂಬಲಕ್ಕೆ ನಿಂತವರು ಕಾರ್ತಿಕ್. 

ಆದರೆ ಈಗ ವಿನಯ್‌ ಮತ್ತು ಸಂಗೀತಾ ರಾಜಿಯಾಗಿದ್ದಾರೆ. ಸಂಗೀತಾ ತಾವು ಆಡಿದ ‘ಥ್ರೆಟನಿಂಗ್’ ಎಂಬ ಪದವನ್ನು ಹಿಂಪಡೆದು ಕ್ಷಮೆ ಕೇಳಿದ್ದಾರೆ. ಹಾಗೆಯೇ ವಿನಯ್ ಕೂಡ, ತಮಗೆ ನಿಮ್ಮನ್ನು ಹರ್ಟ್‌ ಮಾಡುವ ಉದ್ದೇಶ ಇಲ್ಲ. ನಿಮ್ಮ ಬಗ್ಗೆ ಇನ್ನು ಎಂದಿಗೂ ಕೆಟ್ಟದಾಗಿ ಮಾತಾಡಲ್ಲ. ಹರ್ಟ್‌ ಮಾಡಲ್ಲ ಎಂದು ಹೇಳಿ ಕ್ಷಮೆ ಕೋರಿದ್ದಾರೆ. ಅಲ್ಲಿಗೆ ಅವರಿಬ್ಬರೂ ಹಗ್‌ ಮಾಡಿಕೊಳ್ಳುವುದರ ಮೂಲಕ, ಬಿಗ್‌ಬಾಸ್‌ ಮನೆಯೊಳಗಿನ ಬಹುದೊಡ್ಡ ಜಗಳವೊಂದು ಸುಖಾಂತ್ಯ ಕಂಡಿದೆ. 

Tap to resize

Latest Videos

ಆದರೆ ಇದುವರೆಗೆ ಬೆಸ್ಟ್‌ ಫ್ರೆಂಡ್ಸ್ ಆಗಿ ಸದಾ ಜೊತೆಗೇ ಕಾಣಿಸಿಕೊಳ್ಳುತ್ತಿದ್ದ ಕಾರ್ತಿಕ್ ಮತ್ತು ಸಂಗೀತಾ ನಡುವೆ ಫೈಟ್‌ ಶುರುವಾಗಿದೆ! ಇದುವರೆಗೆ ಪರಸ್ಪರ ಕಾಂಪ್ಲಿಮೆಂಟರಿಯಾಗಿಯೇ ಒದಗಿಬರುತ್ತಿದ್ದ ಅವರ ನಡುವೆ ಫೈಟ್ ಹುಟ್ಟಿಕೊಂಡಿದ್ದ ಹೇಗೆ? ಅದಕ್ಕೆ ಕಾರಣವೇನು? ಹಾಗಾದ್ರೆ ಹೊಸದೊಂದು ಜಗಳಕ್ಕೆ ಬಿಗ್‌ಬಾಸ್‌ ಮನೆ ಸಾಕ್ಷಿಯಾಗುತ್ತಿದೆಯೇ? ಈ ಬಗ್ಗೆ ನೀವು ಏನೋನೋ ಕಲ್ಪಿಸಿಕೊಳ್ಳಬೇಡಿ.. ಹೋಲ್ಡಾನ್! 

ನಿಮ್ಮ ಮನಸ್ಸಿನ ಕಲ್ಪನೆಗಳನ್ನು ಬೇಕಾಬಿಟ್ಟಿ ಹರಿಬಿಡುವ ಮೊದಲು 'JioCinema'ದಲ್ಲಿ ಉಚಿತವಾಗಿ ನೇರಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಕನ್ನಡದ 'Live Shorts'ನಲ್ಲಿನ ಈ ವಿಡಿಯೊ (https://jiocinema.onelink.me/fRhd/6biprynd)ನೋಡಿದರೆ ನಿಮ್ಮೆಲ್ಲ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆ! 

ಕಾರ್ತಿಕ್ ಮತ್ತು ಸಂಗೀತಾ ನಡುವೆ ಫೈಟ್‌ ಸಿಕ್ವೆನ್ಸ್‌ ನಡೆದಿದ್ದು ನಿಜವೇ! ಆದರದು ಕೋಪದಿಂದ ಹುಟ್ಟಿಕೊಂಡ ಫೈಟ್ ಅಲ್ಲ, ಸ್ನೇಹದಿಂದ, ಸಲಿಗೆಯಿಂದ ಹುಟ್ಟಿಕೊಂಡ ತಮಾಷೆಯ ಫೈಟ್‌. ಬಿಗ್‌ಬಾಸ್ ಮನೆಯ ಹಾಲ್‌ನಲ್ಲಿ ಕಾರ್ತಿಕ್ ಮತ್ತು ಸಂಗೀತಾ ಇಬ್ಬರೂ ನಿಂತಿದ್ದಾರೆ. ಸಂಗೀತಾ, 'ಸೋಲೊ ಪರ್ಫಾರ್ಮೆನ್ಸ್‌ ನಡೀತಿದ್ಯಾ?' ಎಂದು ಕೇಳುತ್ತಾರೆ. ಕಾರ್ತಿಕ್, 'ಸೋಲೊ ಎಲ್ಲೂ ಇಲ್ಲ' ಎಂದು ಉತ್ತರಿಸುತ್ತಾರೆ. ಹಾಗೆಯೇ, 'ಸ್ಕಿಟ್‌ ಸೌಂಡ್ ಅದು. ಅಲ್ನೋಡು' ಎಂದು ಸಂಗೀತಾ ಗಮನವನ್ನು ಬೇರೆ ಕಡೆಗೆ ಸೆಳೆಯುತ್ತಾರೆ. ಸಂಗೀತಾ ಅತ್ತ ನೋಡುತ್ತಿದ್ದ ಹಾಗೆಯೇ ಅವರಿಗೆ ಒಂದು ಒದೆ ಕೊಟ್ಟು ಓಡಿಹೋಗುತ್ತಾರೆ ಕಾರ್ತಿಕ್. 

ಸಂಗೀತಾ ಹುಸಿಮುನಿಸಿಂದ, 'ಕಾರ್ತಿಕ್…  ನೋ.. ನೋ..' ಎನ್ನುತ್ತಾರೆ. ಕಾರ್ತಿಕ್ ಮತ್ತ ಸಂಗೀತಾ ಹತ್ತಿರ ಬಂದು, 'ಯೆಸ್‌ ಯೆಸ್‌' ಎಂದು ಮತ್ತೆ ಒದೆಯಲು ಯತ್ನಿಸುತ್ತಾರೆ. ಆಗ ಸಂಗೀತಾ, ಕಾರ್ತಿಕ್ ಕೈ ಹಿಡಿದುಕೊಂಡು ತಾವೂ ತಿರುಗಿ ಒದೆಯುತ್ತ, 'ಎಲ್ಲಿಗೆ ಹೊಡಿತೀನಿ ಗೊತ್ತಿಲ್ಲ' ಎನ್ನುತ್ತಾರೆ. ಕಾರ್ತಿಕ್ ಫೈಟ್‌ ಮಾಡುವವರ ಹಾಗೆ ಹಾವಭಾವ ಮಾಡುತ್ತ ಅವರ ಎದುರಿಗೆ ನಿಲ್ಲುತ್ತಾರೆ. ಸಂಗೀತಾ ಅತ್ತ ಹೋಗುತ್ತಿದ್ದ ಹಾಗೆಯೇ, '
'ಬೇಜಾರಾಯ್ತಾ?' ಎಂದು ಹೆಗಲ ಮೇಲೆ ಕೈ ಹಾಕಲು ಹೋಗುತ್ತಾರೆ. ಆಗ ಸಂಗೀತಾ, 'ಆಫ್‌ಕೋರ್ಸ್‌' ಎನ್ನುತ್ತ ಕಾರ್ತಿಕ್‌ಗೆ ಇನ್ನಷ್ಟು ಹೊಡೆಯುತ್ತಾರೆ. 

ಆ ರಭಸಕ್ಕೆ ಅವರ ಕಾಲಲ್ಲಿನ ಚಪ್ಪಲಿ ಬಿದ್ದು ಹೋಗುತ್ತದೆ. ಕಾರ್ತಿಕ್ ಚಪ್ಪಲಿಯನ್ನು ಒದ್ದುಕೊಂಡು ಹೋಗುತ್ತಾರೆ. ಹೀಗೆ ಪರಸ್ಪರ ತಮಾಷೆಯಾಗಿ, ಮಾಕ್‌ ಫೈಟ್ ಮಾಡುತ್ತ ಕಳೆದ ಚಂದದ ಕ್ಷಣಗಳು ಈ ವಿಡಿಯೊದಲ್ಲಿ ಸೆರೆಯಾಗಿವೆ. ಈ ಫೈಟ್‌ ಸಂಗೀತಾ ಮತ್ತು ಕಾರ್ತಿಕ್ ಮಧ್ಯೆ ಬಿರುಕು ಮೂಡಿಸುವುದಲ್ಲ, ಅವರ ಸ್ನೇಹಸಂಬಂಧವನ್ನು ಇನ್ನಷ್ಟು ಗಟ್ಟಿಕೊಳಿಸುವಂತೆ ಕಾಣಿಸುತ್ತದೆ.

ಅಂದಹಾಗೆ, ಬಿಗ್ ಬಾಸ್ ಮನೆಯಲ್ಲಿ ನಡೆಯುವ ಎಲ್ಲ ಟಾಸ್ಕ್ ಹಾಗೂ 'ರಸನಿಮಿಷ'ಗಳನ್ನು, ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು 'Colors Kannada'ದಲ್ಲಿ ಪ್ರತಿ ರಾತ್ರಿ 9.30ಗೆ ವೀಕ್ಷಿಸಬಹುದು.

click me!