BBK10: ಫೀಮೇಲ್ ಬಿಗ್ ಬಾಸ್ ಏಕಿಲ್ಲ, ಎಲ್ಲಾ ಸೀಸನ್‌ 'ಮೇಲ್' ಮಾತ್ರ, 'ಬಿಗ್ ಬಾಸ್' ಮಹಿಳೆ ಧ್ವನಿ ಯಾಕೆ ಆಗ್ಬಾರ್ದು?

By Shriram Bhat  |  First Published Oct 19, 2023, 8:18 PM IST

ಹೌದು, ಉಳಿದೆಲ್ಲ ಕಡೆ ಮಹಿಳಾ ಸಬಲೀಕರಣ, ಮಹಿಳಾ ಮೀಸಲಾತಿ, ಸ್ತ್ರೀ ಶಕ್ತಿ ಎಂದೆಲ್ಲಾ ಭಾರೀ ಭಾರೀ ಬೊಬ್ಬೆಗಳು ಕೇಳಿ ಬರುತ್ತಿವೆ. ಈಗಂತೂ ಭಾರತದಲ್ಲಿ ಶೇ. 33% ಮೀಸಲಾತಿ ಘೋಷಣೆ ಕೂಡ ಆಗಿದೆ. ಅದಕ್ಕೆ ತಕ್ಕಂತೆ ಒಂದಷ್ಟು ಬದಲಾವಣೆಗಳು ಕೂಡ ಆಗಿ ಕೆಲವು ಮಹಿಳಾಮಣಿಗಳು ಹೊಸ ಸ್ಥಾನ ಅಲಂಕರಿಸಿದ್ದೂ ಆಗಿದೆ. 


ಬಿಗ್ ಬಾಸ್ ಕನ್ನಡ ಸೀಸನ್ 10 ಶುರುವಾಗಿ ಎರಡನೇ ವಾರ ನಡೆಯುತ್ತಿದೆ. ಸ್ನೇಕ್ ಶ್ಯಾಮ್ ಮೊದಲ ವಾರದ 'ಎಲಿಮಿನೇಶನ್' ಆಗಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದು, ಉಳಿದ ಸ್ಪರ್ಧಿಗಳು ಮನೆಯಲ್ಲಿ ತಾವು ಉಳಿದುಕೊಳ್ಳಲು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ಎರಡು ಬಣಗಳು ಏರ್ಪಟ್ಟಿವೆ. ಒಂದು 'ಕಾರ್ತಿಕ್ ಮಹೇಶ್ ಬಣ' ಎಂದು ಗುರುತಿಸಿಕೊಂಡಿದ್ದರೆ, ಇನ್ನೊಂದು 'ವಿನಯ್ ಗೌಡ ಬಣ'ವಾಗಿ ಗುರುತಿಸಿಕೊಂಡಾಗಿದೆ. 'ತನಿಷಾ-ವಿನಯ್' ಜಟಾಪಟಿ ಮುಗಿದು ಈಗ 'ಸಂಗೀತಾ-ವಿನಯ್' ಜಗಳ ಶುರುವಾಗಿದೆ. ಇದೆಲ್ಲ ಆಗಿರುವುದು ಆಯಿತು, ಆಗದಿರುವುದು ಒಂದಿದೆ, ಅದೇನು ಗೊತ್ತಾ? 

ಬಿಗ್ ಬಾಸ್ ಕನ್ನಡದ ಕಳೆದ 9 ಸೀಸನ್‌ಗಳು ಮತ್ತು 10ನೆಯ ಈ ಸೀಸನ್‌ಗಳಲ್ಲಿ ಬಿಗ್ ಬಾಸ್ 'ಹಿನ್ನೆಲೆ ಧ್ವನಿ' (Bigg Boss Background Voice) ಎಂದರೆ ಅದು 'ಪುರುಷ' ಧ್ವನಿಯೇ ಆಗಿದೆ. ಬಿಗ್ ಬಾಸ್ ಯಾರು ಎಂದು ರಿವೀಲ್ ಮಾಡದಿದ್ದರೂ, ಧ್ವನಿಯ ಮೂಲಕ ಗುರುತಿಸುವುದಾದರೆ ಅದು 'ಗಂಡು' ಎಂದು ಘಂಟಾಘೋಷವಾಗಿ ಹೇಳಬಹುದು. ಆದರೆ ಇಲ್ಲಿಯವರೆಗೆ ಒಂದೇ ಒಂದು ಸೀಸನ್‌ನಲ್ಲಿ ಬಿಗ್ ಬಾಸ್ 'ಮಹಿಳೆ' ಯಾಕೆ ಆಗಿಲ್ಲ?! ಯೋಚಿಸಬೇಕಾದ ಸಂಗತಿ ಎನಿಸುತ್ತಿಲ್ಲವೇ? ಸದ್ಯದಲ್ಲೇ, ಇವತ್ತೋ ನಾಳೆಯೋ ಈ ಬಗ್ಗೆ ಕೂಗು ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬರುಬಹುದು, ಕಣ್ಣು-ಕಿವಿ ತೆರೆದಿರಲಿ...

Tap to resize

Latest Videos

BBK10:ಯಾರ್ ಹೆಂಗಾದ್ರೂ ಸತ್ರೆ, ವೈ ಶುಡ್ ಐ ಕೇರ್.., ಸಂಗೀತಾಗೆ 'ಬೀಪ್' ಶಬ್ದಗಳಲ್ಲಿ ಬೈಯ್ದ ವಿನಯ್!

ಹೌದು, ಉಳಿದೆಲ್ಲ ಕಡೆ ಮಹಿಳಾ ಸಬಲೀಕರಣ, ಮಹಿಳಾ ಮೀಸಲಾತಿ, ಸ್ತ್ರೀ ಶಕ್ತಿ ಎಂದೆಲ್ಲಾ ಭಾರೀ ಭಾರೀ ಬೊಬ್ಬೆಗಳು ಕೇಳಿ ಬರುತ್ತಿವೆ. ಈಗಂತೂ ಭಾರತದಲ್ಲಿ ಶೇ. 33% ಮೀಸಲಾತಿ ಘೋಷಣೆ ಕೂಡ ಆಗಿದೆ. ಅದಕ್ಕೆ ತಕ್ಕಂತೆ ಒಂದಷ್ಟು ಬದಲಾವಣೆಗಳು ಕೂಡ ಆಗಿ ಕೆಲವು ಮಹಿಳಾಮಣಿಗಳು ಹೊಸ ಸ್ಥಾನ ಅಲಂಕರಿಸಿದ್ದೂ ಆಗಿದೆ. ಆದರೆ, ಎಲ್ಲಾ ಭಾಷೆಗಳ ಎಲ್ಲಾ ಸೀಸನ್‌ಗಳಲ್ಲಿ ಅದ್ಯಾಕೆ ಕೇವಲ ಪುರುಷ ಬಿಗ್ ಬಾಸ್‌ಗಳದೇ ಕಾರುಬಾರು?! ಯಾಕೆ ಹೀಗೆ..? ಬಿಗ್ ಬಾಸ್ ಮನೆಯ ಓನರ್ (ಮಾಲೀಕ) ಯಾಕೆ ಮಹಿಳೆ ಆಗಬಾರದು? ಬಿಗ್ ಬಾಸ್ ಮನೆಯ ಬಾಸ್ 'ಫೀಮೇಲ್' ಆಗುವುದು ಯಾವಾಗ?

BBK10: ಬಿಗ್ ಬಾಸ್ ಮನೆ ಈಜುಕೊಳದಲ್ಲಿ ಬಿದ್ದ ಸ್ನೇಹಿತ್.., ಮೈ ನಡುಗುತ್ತಿದ್ದರೂ ಕಣ್ಣಲ್ಲಿ ಚಿಮ್ಮುತ್ತಿದೆ ಖಾರದ ಪುಡಿ..!!

ಈ ಪ್ರಶ್ನೆಗೆ ಉತ್ತರ ಯಾವಾಗ ಸಿಗಬಹುದು ಗೊತ್ತಿಲ್ಲ!. ಆದರೆ, ಆದಷ್ಟು ಬೇಗ ಸಿಗಲಿ ಎಂದು ಮಹಿಳಾಮಣಿಗಳು, ಸ್ತ್ರೀ ಶಕ್ತಿ ಸಂಘಗಳು ಮಾತ್ರವಲ್ಲ, ಮನೆಮನೆಯಲ್ಲಿ ಮಹಿಳೆಯರು ಯೋಚಿಸುತ್ತಿರಬಹುದು. 'ಬಿಗ್ ಬಾಸ್' ಆಗಿ ಮಹಿಳೆ ಧ್ವನಿ ಕೇಳುವುದು ಯಾವಾಗ ಎಂದು ಸಾಕಷ್ಟು ಪುರುಷರು ಕೂಡ ಪ್ರಶ್ನಿಸುತ್ತಿರಬಹುದು, ಅಪೇಕ್ಷಿಸುತ್ತಿರಬಹುದು. ಯಾಕೆ ಅಟಲೀಸ್ಟ್ ಒಂದು ಚಾನ್ಸ್ ಕೊಟ್ಟು ನೋಡಬಾರದು? ಕಂಪಾರಿಸನ್‌ (ಹೋಲಿಕೆ) ಗಾದರೂ ಒಮ್ಮೆ ಬಿಗ್ ಬಾಸ್ ಹಿನ್ನೆಲೆ ಧ್ವನಿ ಮಹಿಳೆಯಾಗಿರಲಿ. ಈ ಆಸೆ ಕೆಲವರ ಮನಸ್ಸಿಗೆ ಒಮ್ಮೆಯಾದರೂ ಬರಲೇಬೇಕಾದ ಒಂದು ಆಸೆ, ಆಕಾಂಕ್ಷೆ ಎನ್ನಬಹುದೇ..? ಸಂಬಂಧಪಟ್ಟವರು ಈ ಬಗ್ಗೆ ಗಮನ ನೀಡಬಹುದೇ?  ಹಲವರ ಈ ಅಭಿಲಾಷೆ ಬಿಗ್ ಬಾಸ್ ಯಾವ ಸೀಸನ್‌ನಲ್ಲಿ ಈಡೇರಲಿದೆ ಎಂದು ಕಾದು ನೋಡಬೇಕು ಅಷ್ಟೇ..!!!

click me!