ರಾಮನಗರದ 560 ಮೀ. ಎತ್ತರದ 'ಹಂದಿಗುಂದಿ ಬೆಟ್ಟ' ಹತ್ತಿದ ಮಂಕಿಮ್ಯಾನ್ ಖ್ಯಾತಿಯ 'ಜ್ಯೋತಿರಾಜ್' ಬಂಧನ

By Sathish Kumar KH  |  First Published Mar 21, 2024, 7:16 PM IST

ರಾಮನಗರದ ಹಂದಿಗುಂದಿ ಬೆಟ್ಟವನ್ನು ಹತ್ತಿದ ಕರ್ನಾಟಕದ ಮಂಕಿಮ್ಯಾನ್ ಖ್ಯಾತಿ ಜ್ಯೋತಿರಾಜ್ ಅವರನ್ನು ಅರಣ್ಯ ಇಲಾಖೆಯಿಂದ ವಶಕ್ಕೆ ಪಡೆಯಲಾಗಿದೆ.


ರಾಮನಗರ (ಮಾ.21): ಕರ್ನಾಟಕದ ಮಂಕಿಮ್ಯಾನ್ ಎಂದೇ ಖ್ಯಾತಿಯಾಗಿರುವ ಚಿತ್ರದುರ್ಗದ ಜ್ಯೋತಿ ರಾಜ್ ಅವರು ದೊಡ್ಡ ದೊಡ್ಡ ಏಕಶಿಲಾ ಬೆಟ್ಟಗಳನ್ನು ಹತ್ತಿ ಸಾಧನೆ ಮಾಡಿದ್ದಾರೆ. ಮಾನವನಾಗಿದ್ದರೂ ವಿಶೇಷ ಸಾಮರ್ಥ್ಯ ಹೊಂದಿರುವ  ಜ್ಯೋತಿರಾಜ್ ರಾಮನಗರ ಜಿಲ್ಲೆಯ 560 ಮೀ. ಎತ್ತರವಿರುವ ಹಂದಿಗೊಂದಿ ಬೆಟ್ಟವನ್ನು ಹತ್ತಿದ್ದಕ್ಕೆ ಜಿಲ್ಲಾ ಅರಣ್ಯ ಇಲಾಖೆ ಅಧಿಕಾರಿಗಳು ಆತನನ್ನು ಬಂಧಿಸಿ ಕರೆದೊಯ್ದಿದ್ದಾರೆ.

ಹೌದು, ಸಾಮಾನ್ಯ ಮನುಷ್ಯರಿಗಿಂದ ವಿಭಿನ್ನ ಹಾಗಿ ವಿಶೇಷ ಸಾಮರ್ಥ್ಯವನ್ನು ಹೊಂದಿರುವ ಚಿತ್ರದುರ್ಗದ ಜ್ಯೋತಿ ರಾಜ್ ಎತ್ತರದ ಕಲ್ಲಿನ ಬೆಟ್ಟಗಳನ್ನು ಬರಿಗೈನಿಂದ ಹತ್ತುತ್ತಿದ್ದರು. ಆದರೆ, ಈತನಿಗೆ ಅರಣ್ಯ ಇಲಾಖೆ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಜೀವ ರಕ್ಷಕ ಸಾಮಗ್ರಿಗಳನ್ನು ಬಳಸಿ ಬೆಟ್ಟವನ್ನು ಹತ್ತುವಂತೆ ಸೂಚಿಸಲಾಗಿದೆ. ನಂತರ, ನುರಿತ ಚಾರಣಿಗರಿಂದ ವೈಜ್ಞಾನಿಕ ಜೀವನ ಸಂರಕ್ಷಕ ಸಾಧನಗಳನ್ನು ಬಳಸಿ ಬೆಟ್ಟ ಹತ್ತುತ್ತಿದ್ದಾರೆ. ಆದರೆ, ಯಾವುದೇ ಬೆಟ್ಟವನ್ನು ಹತ್ತುವಾಗಲೂ ಅಲ್ಲಿನ ಸ್ಥಳೀಯ ಆಡಳಿತ ಸಂಸ್ಥೆ ಅಥವಾ ಅರಣ್ಯದಲ್ಲಿದ್ದರೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ ಆಗಿರುತ್ತದೆ.

Latest Videos

undefined

ಆರ್‌ಸಿಬಿ ತಂಡ ಐಪಿಎಲ್‌ ಟ್ರೋಫಿ ಗೆಲ್ಲೋವರೆಗೂ ಮದುವೆಯಾಗೊಲ್ಲ; 16 ವರ್ಷದಿಂದ ಕಾಯುತ್ತಿರುವ ಯುವತಿ!

ರಾಮನಗರ ಜಿಲ್ಲೆಯಲ್ಲಿರುವ ಹಂದಿಗುಂದಿ ಬೆಟ್ಟವನ್ನು ಹತ್ತುವುದಕ್ಕೆ ಚಿತ್ರದುರ್ಗದಿಂದ ಬಂದು ಅರಣ್ಯ ಇಲಾಖೆಯಿಂದ ಅನುಮತಿ ಕೇಳಿದ್ದಾರೆ. ಆದರೆ, ಅರಣ್ಯ ಇಲಾಖೆಯ ಯಾವುದೇ ಅಧಿಕಾರಿಗಳು ಈತನ ಒಂದು ಮಾತನ್ನೂ ಕಿವಿಯ ಮೇಲೆ ಹಾಕಿಕೊಂಡಿಲ್ಲ. ಒಂದು ವಾರಗಳ ಕಾಲ ವಿವಿಧ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡರೂ ಅರಣ್ಯ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ಈಗ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ರಾಜಕೀಯ ಪ್ರತಿನಿಧಿಗಳೂ ಇವರಿಗೆ ಸಿಕ್ಕಿಲ್ಲ. ಆದ್ದರಿಂದ ಬೆಟ್ಟ ಹತ್ತಲು ಅನುಮತಿಗಾಗಿ ಒಂದು ವಾರ ಕಾದರೂ ಅನುಮತಿ ಸಿಗದೇ ಹೈರಾಣಾಗಿದ್ದರು.

ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ಜ್ಯೋತಿರಾಜ್ ಗುರುವಾರ ಬೆಳಗ್ಗೆ ಸುಮಾರು 540 ಮೀ. ಎತ್ತರವಿರುವ ಹಂದಿಗುಂದಿ ಬೆಟ್ಟವನ್ನು ಹತ್ತಲು ಆರಂಭಿಸಿದ್ದಾರೆ. ಆಗ, ಯಾರೋ ಚಾರಣ ಮಾಡುತ್ತಿದ್ದಾರೆಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆಗ ಅರಣ್ಯ ಇಲಾಖೆ ಅಧಿಕಾರಿಗಳು ಎದ್ದೆನೋ, ಬಿದ್ದೆನೋ ಎಂಬಂತೆ ಸ್ಥಳಕ್ಕೆ ಬಂದು ಆತನನ್ನು ಬೆಟ್ಟ ಹತ್ತಲೂ ಬಿಡದೇ ಆತನ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಆದರೆ, ಮುಕ್ಕಾಲುಭಾಗ ಬೆಟ್ಟ ಹತ್ತಿದ ನಂತರ ಇಳಿಯುವುದಕ್ಕೆ ಆಗುವುದಿಲ್ಲವೆಂದು ಜ್ಯೋತಿರಾಜ್ ಪೂರ್ಣ ಬೆಟ್ಟವನ್ನು ಹತ್ತಿ ತನ್ನ ಗುರಿಯನ್ನು ಸಾಧಿಸಿದ್ದಾನೆ. ನಂತರ, ಆತನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ.

ಜೊತೆಗೆ, ಅರಣ್ಯ ಇಲಾಖೆ ಅನುಮತಿ ಪಡೆಯದೇ ಬೆಟ್ಟ ಹತ್ತಿದ್ದರಿಂದ ನಿನ್ನ ಮೇಲೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ ಜೈಲಿಗೆ ಕಳಿಸುತ್ತೇವೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರಂತೆ. ಈ ಎಲ್ಲ ವಿವರವನ್ನು ಜ್ಯೋತಿರಾಜ್ ತನ್ನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಜ್ಯೋತಿರಾಜ್ ಅವರ ಅಭಿಮಾನಿಗಳು ಹಾಗೂ ಫಾಲೋವರ್ಸ್‌ಗಳು ನಾವು ನಿಮ್ಮ ಬೆಂಬಲಕ್ಕಿದ್ದೇವೆ ಎಂದು ಭರವಸೆ ನೀಡಿದ್ದಾರೆ. ಒಂದು ವೇಳೆ ಅರಣ್ಯಾಧಿಕಾರಿಗಳು ಆತನನ್ನು ಜೈಲಿಗೆ ಕಳಿಸಿದರೆ ಮುಂದೇನು ಗತಿ ಎಂಬ ಆತಂಕ ಎದುರಾಗಿದೆ. ಈ ಬಗ್ಗೆ ಕೂಡಲೇ ಸಂಬಂಧಪಟ್ಟವರು ಜ್ಯೋತಿರಾಜ್ ರಕ್ಷಣೆಗೆ ಮುಂದಾಗಬೇಕು ಎಂದು ಸಾಮಾಜಿಕ ಜಾಲತಾಣದ ಮೂಲಕ ಅವಲತ್ತುಕೊಂಡಿದ್ದಾರೆ.

ಹಿಂದು ಧರ್ಮ ರಕ್ಷಣೆಗಾಗಿ ಕಾಂಗ್ರೆಸ್ ಸೋಲಿಸಿ ಎಂದು ಕರೆಕೊಟ್ಟ ಸಿ.ಟಿ. ರವಿ ವಿರುದ್ಧ ಎಫ್‌ಐಆರ್ ದಾಖಲು!

ಇನ್ನು ಅರಣ್ಯ ಇಲಾಖೆ ಅಧಿಕಾರಿಗಳು ಜ್ಯೋತಿ ರಾಜ್ ಅವರನ್ನು ವಶಕ್ಕೆ ಪಡೆದ ಕೂಡಲೇ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಬೆಟ್ಟ ಹತ್ತಿದ್ದ ಬಗ್ಗೆ, ಅರಣ್ಯ ಇಲಾಖೆಗಳು ಬೆದರಿಕೆ ಹಾಕಿದ್ದ ಬಗ್ಗೆ ಹಾಗೂ ಬಂಧನ ಮಾಡುವ ಬಗ್ಗೆ ಹೇಳಿದ ಎಲ್ಲ ವಿಡಿಯೋಗಳನ್ನು ಡಿಲೀಟ್ ಮಾಡಿಸಿದ್ದಾರೆ. ಆದರೆ, ಬೆಟ್ಟ ಹತ್ತಿದ ಸಾಧನೆಯನ್ನು ಮರೆಯಲಾಗದೇ ಉಳಿಸಿಕೊಳ್ಳುವುದಕ್ಕೆ ದಾಖಲೆಯೇ ಇಲ್ಲದಂತೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

 

 
 
 
 
 
 
 
 
 
 
 
 
 
 
 

A post shared by Jothi Raj (@jothi.raj.564)

click me!