
ಎಷ್ಟೋ ಜನರಿಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರನ್ನು ಭೇಟಿಯಾಗೋದು, ಸೆಲ್ಫಿ ತಗೊಳ್ಳೋದು ದೊಡ್ಡ ಕನಸಾಗಿರುತ್ತದೆ. ಈ ಕನಸು ಕರ್ಣ ಧಾರಾವಾಹಿ ನಟಿ ಶ್ಯಾಮ್ ಪಾಲಿಗೆ ನನಸಾಗಿದೆ. ಹೌದು, ವಿರಾಟ್ ಕೊಹ್ಲಿ ಅವರನ್ನು ಶ್ಯಾಮ್ ಭೇಟಿಯಾಗಿದ್ದಾರೆ.
ಮೂವರು ಮಕ್ಕಳ ತಾಯಿ!
ʼಒಲವಿನ ನಿಲ್ದಾಣʼ ಧಾರಾವಾಹಿಯಲ್ಲಿ ನಿರುಪಮಾ ಪಾತ್ರದಲ್ಲಿ ನಟಿಸಿದ್ದ ಸಿಮ್ರನ್ ಅಥವಾ ಶ್ಯಾಮ್ ಈಗ ಕರ್ಣ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಗೃಹಿಣಿ, ಮಾಡೆಲ್, ಫ್ಯಾಷನ್ ಡಿಸೈನರ್ ಆಗಿರುವ ಸಿಮ್ರನ್‌ಗೆ ಮದುವೆಯಾಗಿ ಮೂವರು ಮಕ್ಕಳಿವೆ. ಸಿಮ್ರನ್ ಅವರು ವೇಗನ್ ಆಗಿದ್ದು, ಡಯೆಟ್, ಫಿಟ್‌ನೆಸ್ ಕಡೆಗೆ ತುಂಬ ಪ್ರಾಮುಖ್ಯತೆ ಕೊಡುತ್ತಾರೆ. ಯೋಗ, ಜಿಮ್‌ನಲ್ಲಿ ವರ್ಕೌಟ್ ಮಾಡುತ್ತ ಅವರು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡುತ್ತಾರೆ.
ವಿರಾಟ್ ಕೊಹ್ಲಿ ಭೇಟಿ ಮಾಡಿದ ನಟಿ!
2024ರ ಮೇ ತಿಂಗಳಿನಲ್ಲಿ ಸಿಮ್ರನ್ ಅವರು ವಿರಾಟ್ ಕೊಹ್ಲಿ ಜೊತೆ ಜಾಹೀರಾತು ಶೂಟಿಂಗ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಲ್ಲದೆ, “ಒಟ್ಟಿಗೆ ಕೆಲಸ ಮಾಡಿದ ಖುಷಿಯಿದೆ. ಜೀವನಪರ್ಯಂತ ಈ ಕ್ಷಣವನ್ನು ನೆನಪಿಡುವೆ” ಎಂದು ಬರೆದುಕೊಂಡಿದ್ದಾರೆ.
ಹಿಂದಿ ಧಾರಾವಾಹಿಯಲ್ಲಿಯೂ ನಟನೆ!
ಈ ಹಿಂದೆ ಶ್ಯಾಮ್ ಅವರು ʼಅಗ್ನಿಸಾಕ್ಷಿ ಏಕ್ ಸಮ್ಜೋತಾʼ ಎಂಬ ಹಿಂದಿ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಅಂದಹಾಗೆ 2018ರಲ್ಲಿ ಇವರು ಮೊದಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಅವರು ಒಂದಾದ ಮೇಲೆ ಒಂದರಂತೆ ಜಾಹೀರಾತುಗಳಲ್ಲಿ ಅಭಿನಯಿಸಿದ್ದಾರೆ, ಸಾಕಷ್ಟು ರ್ಯಾಂಪ್ ವಾಕ್ ಮಾಡಿದ್ದಾರೆ.
ಕರ್ಣ ಧಾರಾವಾಹಿಯಲ್ಲಿ ಅಭಿನಯ!
ಈಗ ಅವರು ʼಕರ್ಣʼ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಕರ್ಣ ದೇವಸ್ಥಾನ ಅಂತ ನಂಬಿರೋ ಆಸ್ಪತ್ರೆಯನ್ನು ತನ್ನ ಸ್ವಾರ್ಥಕ್ಕೆ ಬಳಸೋ ಕುತಂತ್ರಿ ನಯನತಾರಾ ಆಗಿ ಸಿಮ್ರನ್ ನಟಿಸುತ್ತಿದ್ದಾರೆ. ಎದುರಿದ್ದಾಗ ಕರ್ಣನೇ ಅತ್ತೆ ಅಂತಾಳೆ, ಬೆನ್ನ ಹಿಂದೆ ಕುತಂತ್ರ ಮಾಡ್ತಾಳೆ, ಕರ್ಣ ದೇವಸ್ಥಾನ ಎಂದು ನಂಬಿರೋ ಆಸ್ಪತ್ರೆಯನ್ನು ತನ್ನ ಸ್ವಾರ್ಥಕ್ಕೆ ಬಳಸ್ತಾಳೆ.
ಕರ್ಣ ಧಾರಾವಾಹಿ ಕಥೆ ಏನು?
ಕರ್ಣ ಅನಾಥ. ಅವನು ಡಾಕ್ಟರ್ ಕೂಡ ಹೌದು, ತನ್ನ ಮನೆಯಲ್ಲಿ ಎಲ್ಲರೂ ಇದ್ದರೂ ಕೂಡ ಅವನನ್ನು ಎಲ್ಲರೂ ಜೀತದಾಳು ಥರ ನೋಡ್ತಾರೆ. ಅಜ್ಜಿಗೆ ಮೊಮ್ಮಗನ ಮದುವೆ ನೋಡುವ ಆಸೆ, ಆದರೆ ಕರ್ಣ ಮದುವೆಯಾಗೋದು ಬೇಡ ಅಂತ ಅವನ ಅಪ್ಪ ಹೇಳಿದ್ದಾರೆ. ಬೀದಿಯಲ್ಲಿ ಬಿದ್ದಿದ್ದ ಮಗುವನ್ನು ನಾನು ನನ್ನ ಮಗ ಅಂತ ಒಪ್ಪೋದಿಲ್ಲ ಎಂದು ಕರ್ಣನ ತಂದೆ ಹೇಳಿದ್ದಾನೆ. ಇನ್ನೊಂದು ಕಡೆ ಕರ್ಣನನ್ನು ಮದುವೆ ಆಗಬೇಕು ಅಂತ ನಿಧಿ ಕನಸು ಕಾಣ್ತಿದ್ರೆ, ಹದಿನೈದು ದಿನದಲ್ಲಿ ಮದುವೆ ಆಗಬೇಕು ಅಂತ ನಿತ್ಯಾ ಬಯಸುತ್ತಿದ್ದಾಳೆ. ಹಾಗಾದರೆ ಮುಂದೆ ಏನಾಗುವುದು?
ಪಾತ್ರಧಾರಿಗಳು
ಕರ್ಣ- ಕಿರಣ್ ರಾಜ್
ನಿಧಿ- ಭವ್ಯಾ ಗೌಡ
ನಿತ್ಯಾ- ನಮ್ರತಾ ಗೌಡ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.