
ಮುದ್ದಿನ ಸೊಸೆ ವಿದ್ಯಾ ವೀಕ್ಷಕರ ಮನಸ್ಸು ಗೆಲ್ಲೋದ್ರಲ್ಲಿ ಸಕ್ಸಸ್ ಆಗಿದ್ದಾರೆ. ಶಿವರಾಮೇಗೌಡನ ಮುದ್ದು ಸೊಸೆ (muddusose) ಅಂತ್ಲೇ ವಿದ್ಯಾ ಫೇಮಸ್ ಆಗ್ತಿದ್ದಾರೆ. ಆರಂಭದಲ್ಲಿ ವಿದ್ಯಾ ಹಾಗೂ ಭದ್ರೇಗೌಡ ಅಲಿಯಾಸ್ ಪ್ರತಿಮಾ ಠಾಕೂರ್ ಹಾಗೂ ತ್ರಿವಿಕ್ರಮ್ ಜೋಡಿಯನ್ನು ವೀಕ್ಷಕರು ಒಪ್ಪಿಕೊಂಡಿರಲಿಲ್ಲ. ಪ್ರತಿಮಾ ಬದಲು ವಿಕ್ರಮ್ ಗೆ ಭವ್ಯ ಗೌಡ ಇಲ್ಲ ಮೋಕ್ಷಿತಾ ಹೀರೋಯಿನ್ ಆಗ್ಬೇಕು ಎನ್ನುವ ವಾದ ಹೆಚ್ಚಾಗಿತ್ತು. ಆದ್ರೀಗ ಪ್ರತಿಮಾ ಹಾಗೂ ತ್ರಿವಿಕ್ರಮ್ ಬಾಡಿಂಗ್ ವೀಕ್ಷಕರಿ ಇಷ್ಟವಾಗಿದೆ. ಸೀರಿಯಲ್ ಜೊತೆ ರೀಲ್ಸ್ ಮೂಲಕವೂ ವೀಕ್ಷಕರನ್ನು ಸೆಳೆದಿಟ್ಟುಕೊಂಡಿರುವ ಪ್ರತಿಮಾ ಠಾಕೂರ್ ಈಗ ಹೊಸ ರೀಲ್ಸ್ ಪೋಸ್ಟ್ ಮಾಡಿದ್ದಾರೆ. ಈ ರೀಲ್ಸ್ ನಲ್ಲಿ ವಿದ್ಯಾ ತ್ರಿವಿಕ್ರಮ್ ಜೊತೆ ಮೊದಲ ಬಾರಿ ಡಾನ್ಸ್ ಮಾಡಿದ್ದಾರೆ.
ಪ್ರತಿಮಾ ಠಾಕೂರ್ (Pratima Thakur) ತಮ್ಮ ಇನ್ಸ್ಟಾ ಖಾತೆಯಲ್ಲಿ ತ್ರಿವಿಕ್ರಮ್ (trivikram ) ಜೊತೆಗಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಇಬ್ಬರೂ ಬ್ಯಾಂಗಲ್ ಬಂಗಾರಿ ಹಾಡಿಗೆ ಡಾನ್ಸ್ ಮಾಡಿದ್ದು, ಫಸ್ಟ್ ಟೈಂ ಡ್ಯಾನ್ಸ್ ವಿಥ್ ನಮ್ ಭದ್ರೇ ಗೌಡ ಅಂತ ಪ್ರತಿಮಾ ಶೀರ್ಷಿಕೆ ಹಾಕಿದ್ದಾರೆ. ಭದ್ರ ಹಾಗೂ ವಿದ್ಯಾ ಡಾನ್ಸ್ ಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ. ಜೋಡಿ ಸೂಪರ್, ತ್ರಿವಿಕ್ರಂ ಡಾನ್ಸ್ ನೋಡಿ ಖುಷಿಯಾಯ್ತು ಎನ್ನುವ ಕಮೆಂಟ್ ಗಳು ಬಂದಿವೆ. ಇದ್ರ ಜೊತೆ ಸೀರೆಯುಟ್ಟು, ಹೂ ಮುಡಿದಿರುವ ವಿದ್ಯಾ ಸೌಂದರ್ಯವನ್ನು ಫ್ಯಾನ್ಸ್ ಹೊಗಳಿದ್ದಾರೆ. ರಾಕಿಂಗ್ ಸ್ಟಾರ್ ರೋಹನ್ ಕಥೆ ಏನು ಎನ್ನುವ ಪ್ರಶ್ನೆಯನ್ನೂ ಅಭಿಮಾನಿಗಳು ಕೇಳಿದ್ದಾರೆ.
ಮುದ್ದು ಸೊಸೆ ಸೀರಿಯಲ್ ನಿಧಾನವಾಗಿ ರೋಮ್ಯಾಟಿಂಗ್ ಮೋಡ್ ಪಡೆಯುತ್ತಿದೆ. ಇಷ್ಟು ದಿನ ವಿದ್ಯಾ ತನ್ನದೇ ಲೋಕದಲ್ಲಿದ್ಲು. ಆದ್ರೀಗ ಭದ್ರನ ಕೇರ್ ಆಕೆಗೆ ಅರ್ಥವಾಗ್ತಿದೆ. ಅಡುಗೆ ಮಾಡುವ ಚಾಲೆಂಜ್ ಸ್ವೀಕರಿಸಿದ್ದ ವಿದ್ಯಾ ಮೊದಲ ಬಾರಿ ಎಡವಿದ್ದಳು. ಇದ್ರಿಂದ ಸೆಪ್ಪೆ ಊಟ ತಿನ್ನುವ ಸ್ಥಿತಿ ಬಂದಿತ್ತು. ಭದ್ರ ಕೂಡ ವಿದ್ಯಾಗಾಗಿ ಸೆಪ್ಪೆ ಊಟ ಮಾಡ್ತಿದ್ದಾನೆ ಎಂಬುದು ಗೊತ್ತಾಗ್ತಿದ್ದಂತೆ ಮನಸ್ಸನ್ನು ಗಟ್ಟಿ ಮಾಡ್ಕೊಂಡಿದ್ದ ವಿದ್ಯಾ, ಪುಸ್ತಕ ಓದಿಯೇ ಸಿಹಿಯೂಟ ಮಾಡಿ ಸಕ್ಸಸ್ ಆಗಿದ್ದಾಳೆ. ಅಜ್ಜಿ, ಶಿವರಾಮೇಗೌಡನಿಂದ ಮೆಚ್ಚುಗೆ ಗಳಿಸಿದ್ದಾಳೆ. ಕೊನೆಗೂ ವಿದ್ಯಾಗೆ ಆಷಾಡಕ್ಕೆ ತವರಿಗೆ ಬರುವ ಅವಕಾಶ ಸಿಕ್ಕಿದೆ. ಭದ್ರನ ಜೊತೆ ತವರಿಗೆ ಬಂದ ವಿದ್ಯಾಗೆ ಭರ್ಜರಿ ವೆಲ್ ಕಂ ಕೂಡ ಸಿಗ್ತಿದೆ.
ಇನ್ನು ವಿದ್ಯಾ ಪಾತ್ರಕ್ಕೆ ಜೀವ ತುಂಬಿರುವ ನಟಿ 20 ವರ್ಷದ ಪ್ರತಿಮಾ ಠಾಕೂರ್ ಈ ಹಿಂದೆ ಸಪೋರ್ಟಿವ್ ರೂಲ್ ನಲ್ಲಿ ಕಾಣಿಸಿಕೊಲ್ತಿದ್ದರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ದೊರೆಸ್ವಾಮಿ ಸೀರಿಯಲ್ ನಲ್ಲಿ ನಾಯಕಿ ತಂಗಿಯಾಗಿ ಮಿಂಚಿದ್ದರು. ಅಂತರಪಟ ಸೀರಿಯಲ್ ನಲ್ಲೂ ಕಾಣಿಸಿಕೊಂಡಿದ್ದ ಪ್ರತಿಮಾ ತೆಲುಗಿನ ಸೀರಿಯಲ್ ನಲ್ಲಿ ಮೊದಲ ಬಾರಿ ನಾಯಕಿಯಾಗಿ ಮಿಂಚಿದ್ರು. ಆ ನಂತ್ರ ಕಲರ್ಸ್ ಕನ್ನಡದ ಮುದ್ದು ಸೊಸೆ ಸೀರಿಯಲ್ ಗೆ ಅವಕಾಶ ಸಿಕ್ತು. ಸೋಶಿಯಲ್ ಮೀಡಿಯಾದಲ್ಲೂ ಪ್ರತಿಮಾ ಪ್ರಸಿದ್ಧಿ ಪಡೆದಿದ್ದಾರೆ. ಅವರು ಮತ್ತು ಅವರ ಆಪ್ತ ಸ್ನೇಹಿತ ರೋಹನ್ ಮಾಡುವ ರೀಲ್ಸ್ ಸಿಕ್ಕಾಪಟ್ಟೆ ವೈರಲ್ ಆಗ್ತಿರುತ್ತದೆ. ಇವರಿಬ್ಬರು ಸ್ನೇಹಿತರಲ್ಲ, ಪ್ರೇಮಿಗಳು ಎನ್ನುವ ಸುದ್ದಿ ಸಾಕಷ್ಟು ಬಾರಿ ಚರ್ಚೆಯಾಗಿದೆ. ಅದ್ರೆ ಪ್ರತಿಮಾ ಇದು ಕೇವಲ ವದಂತಿ. ರೋಹನ್ ನನ್ನ ಆಪ್ತ ಸ್ನೇಹಿತ ಅಷ್ಟೆ ಅಂತ ಸಂಬಂಧದ ಬಗ್ಗೆ ಅನೇಕ ಬಾರಿ ಸ್ಪಷ್ಟನೆ ಕೂಡ ನೀಡಿದ್ದಾರೆ. ಇನ್ನು ತ್ರಿವಿಕ್ರಮ್ ವಿಷ್ಯಕ್ಕೆ ಬರೋದಾದ್ರೆ ಪದ್ಮಾವತಿ ಸೀರಿಯಲ್ ಜೊತೆ ಅನೇಕ ಸಿನಿಮಾದಲ್ಲಿ ನಟಿಸಿದ್ರೂ ಬಿಗ್ ಬಾಸ್ 11ರಲ್ಲಿ ತ್ರಿವಿಕ್ರಮ್ ಎಲ್ಲರ ಗಮನ ಸೆಳೆದಿದ್ದರು. ಅವರು ಮತ್ತು ಭವ್ಯ ಗೌಡ ಜೋಡಿಯನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದರು. ಈಗ ಮುದ್ದು ಸೊಸೆಯಲ್ಲಿ ಭದ್ರೇಗೌಡನಾಗಿ ತ್ರಿವಿಕ್ರಮ್ ನಟಿಸ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.