Karna Serial: ಕರ್ಣನ ತಂದೆಗೂ, ನಿಧಿ ಕುಟುಂಬಕ್ಕೂ ಇರೋ ರಕ್ತ ಸಂಬಂಧದ ನಂಟೇನು? ಗುಟ್ಟು ಬಯಲು!

Published : Sep 13, 2025, 12:17 PM IST
karna serial zee kannada

ಸಾರಾಂಶ

Karna Kannada Serial Today Episode: ಕರ್ಣ ಧಾರಾವಾಹಿಯಲ್ಲಿ ಕರ್ಣನ ತಂದೆ ಯಾರು? ನಿಧಿ ಕುಟುಂಬಕ್ಕೂ ಕರ್ಣನ ಕುಟುಂಬಕ್ಕೂ ಮೊದಲೇ ರಕ್ತ ಸಂಬಂಧ ಇರೋದು ನಿಜವೇ? 

ಕರ್ಣ ಧಾರಾವಾಹಿಯಲ್ಲಿ ಕರ್ಣನಿಗೂ, ಮಾರಿಗುಡಿಗೂ ಏನು ಸಂಬಂಧ ಎನ್ನೋದು ದೊಡ್ಡ ಪ್ರಶ್ನೆ ಆಗಿದೆ. ಹೀಗಿರುವಾಗ ನಿಧಿ ತಂದೆ-ತಾಯಿ ಹೇಗೆ ಸತ್ತರು ಎನ್ನೋದು ಕೂಡ ಇಲ್ಲಿ ಕಾಡುತ್ತಿರುವ ಇನ್ನೊಂದು ಪ್ರಶ್ನೆ. ಮಾರಿಗುಡಿಗೆ ಹೋದರೆ ಕರ್ಣನ ಜನ್ಮರಹಸ್ಯ ಏನು ಎನ್ನೋದು ಗೊತ್ತಾಗುತ್ತದೆ ಎಂದು ನಯನತಾರಾ ಆತಂಕದಲ್ಲಿದ್ದಾಳೆ.

ನಯನತಾರಾ ಕೊಲೆ ಮಾಡಿರ್ತಾಳಾ?

ಹೌದು, ಈ ಧಾರಾವಾಹಿಯಲ್ಲಿ ಕರ್ಣನ ಕುಟುಂಬಕ್ಕೂ, ನಿಧಿ ಕುಟುಂಬಕ್ಕೂ ಮೊದಲೇ ಸಂಬಂಧ ಇರುವಂತೆ ಕಾಣುತ್ತಿದೆ. ನಿಧಿ, ನಿತ್ಯಾ ಜೊತೆಗೆ ಇನ್ನೋರ್ವ ಹುಡುಗ ಇರುವ ಫೋಟೋವನ್ನು ಅಜ್ಜಿ ನೋಡಿ ಕಣ್ಣೀರು ಹಾಕಿದ್ದಳು. ಹೀಗಾಗಿ ಇಲ್ಲಿ ಬೇರೆ ಏನೋ ಕಥೆ ಇರುವಂತೆ ಕಾಣುತ್ತಿದೆ. ರಮೇಶ್‌ ಬಹುಶಃ ಅಜ್ಜಿಯ ಮಗಳನ್ನು ಪ್ರೀತಿ ಮಾಡಿ ಗರ್ಭಿಯಾಗುವಂತೆ ಮಾಡಿರಬಹುದು. ಆ ಹೆಣ್ಣನ್ನು ನಯನತಾರಾ ಕೊಲೆ ಮಾಡಿರಬಹುದು. ಆ ಮಗುವೇ ಕರ್ಣ ಆಗಿರುವ ಸಾಧ್ಯತೆ ಇದೆ. ಆ ಮಗುವನ್ನು ನಯನತಾರಾ ತೊಟ್ಟಿಯೊಂದರಲ್ಲಿ ಬಿಟ್ಟಿದ್ದರೂ ಕೂಡ ಆಶ್ಚರ್ಯ ಇಲ್ಲ.

ಕುತೂಹಲದಿಂದ ಕೂಡಿದೆ!

ಬಹುಶಃ ನಿಧಿ ತಂದೆ-ತಾಯಿ ಕೊಲೆಗೂ, ನಯನತಾರಾಗೂ ಸಂಬಂಧ ಇರುವಂತೆ ಕಾಣುತ್ತಿದೆ. ಈ ಸತ್ಯ ಯಾವಾಗ ರಿವೀಲ್‌ ಆಗತ್ತೋ ಏನೋ! ಯಾರಿಗೆ ಹುಟ್ಟಿದವನೋ ಏನೋ, ಇವನ ತಾಯಿ ಪತಿವ್ರತೆಯೇ ಅಲ್ಲ ಅಂತ ಕರ್ಣನಿಗೆ ರಮೇಶ್‌ ಟೀಕಿಸುತ್ತಿರುತ್ತಾನೆ. ಒಂದು ವೇಳೆ ಕರ್ಣ ತನ್ನ ಮಗ ಎನ್ನೋದು ರಮೇಶ್‌ಗೆ ಗೊತ್ತಾದರೆ ಅವನು ಹೇಗೆ ರಿಯಾಕ್ಟ್‌ ಮಾಡ್ತಾನೆ? ಕರ್ಣನಿಗೆ ತನಗೂ ಮನೆಯಿದೆ, ನಾನಿರೋ ಮನೆಯೇ ನನ್ನ ನಿಜವಾದ ಮನೆ ಎಂದು ಗೊತ್ತಾಗಬಹುದು. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿವೆ.

ಮದುವೆಯಾಗೋದು ಯಾರು?

ಕರ್ಣನಿಗೆ ನಿಧಿ ಕಂಡರೆ ಇಷ್ಟ, ನಿಧಿಗೆ ಕರ್ಣನನ್ನು ಕಂಡರೆ ಪಂಚಪ್ರಾಣ. ಇನ್ನೊಂದು ಕಡೆ ಕರ್ಣನನ್ನು ಕಂಡರೆ ನಿತ್ಯಾಗೆ ಅಭಿಮಾನ. ಇವರಿಬ್ಬರು ಪ್ರೀತಿಯಲ್ಲಿದ್ದಾರೆ ಎನ್ನೋದು ನಿತ್ಯಾಗೆ ಗೊತ್ತಾಗಿಲ್ಲ. ಮುಂದೆ ಕರ್ಣ ಹಾಗೂ ನಿತ್ಯಾ ಮದುವೆ ಆದರೂ ಆಶ್ಚರ್ಯವಿಲ್ಲ. ನಿತ್ಯಾ ಹಾಗೂ ತೇಜಸ್‌ ಮದುವೆ ನಿಲ್ಲೋ ಸಾಧ್ಯತೆ ಜಾಸ್ತಿ ಇದೆ. ಆ ವೇಳೆ ಹಸೆಮಣೆಯಲ್ಲಿ ಕೂತ ನಿತ್ಯಾಳನ್ನು ಕರ್ಣ ಮದುವೆ ಆಗಲೂಬಹುದು. ಕರ್ಣನ ಮೇಲೆ ನಿತ್ಯಾಗೆ ಅಭಿಮಾನ ಇದೆ, ಹೀಗಾಗಿ ಮುಂದೆ ಇವರಿಬ್ಬರು ಪ್ರೀತಿಸಿ ಅನ್ಯೋನ್ಯವಾಗಿದ್ದರೂ ಕೂಡ ಆಶ್ಚರ್ಯವಿಲ್ಲ.

ಮುಂದೆ ಏನಾಗಬಹುದು?

ನಿತ್ಯಾ ಕಂಡರೆ ನಿಧಿಗೆ ತುಂಬ ಇಷ್ಟ, ನಿಧಿ ಅಂದರೆ ನಿತ್ಯಾಗೆ ಸಿಕ್ಕಾಪಟ್ಟೆ ಪ್ರೀತಿ. ಕರ್ಣ ಹಾಗೂ ನಿತ್ಯಾ ಮದುವೆ ಆದರೆ ನಿಧಿ ಅದನ್ನು ಹೇಗೆ ಸಹಿಸಿಕೊಳ್ತಾಳೋ ಏನೋ! ಒಟ್ಟಿನಲ್ಲಿ ಈ ಲವ್‌ಸ್ಟೋರಿ ತ್ರಿಕೋನ ಪ್ರೇಮಕಥೆ ಆಗಿ ಯಾವೆಲ್ಲ ತಿರುವು ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.

ಪಾತ್ರಧಾರಿಗಳು

ಕರ್ಣ ಪಾತ್ರದಲ್ಲಿ ಕಿರಣ್‌ ರಾಜ್‌, ನಿಧಿ ಪಾತ್ರದಲ್ಲಿ ಭವ್ಯಾ ಗೌಡ, ನಿತ್ಯಾ ಪಾತ್ರದಲ್ಲಿ ನಮ್ರತಾ ಗೌಡ ನಟಿಸುತ್ತಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದುಬೈನಲ್ಲಿ ಮೋಸದಿಂದ 'ಬಾರ್​ ಗರ್ಲ್'​ ಆದೆ, ಆದ್ರೆ ಆ ಅನುಭವವೇ ಸೂಪರ್​: ರಾಧಾ ಕಲ್ಯಾಣ ನಟಿ ಮಾತು ಕೇಳಿ
BBK 12: ಕಳ್ಳಿಯಂತೆ ಹೋಗಿ ಕ್ಷಮೆಯಾಚಿಸಿದ ಚೈತ್ರಾ ಕುಂದಾಪುರ; ಎಲ್ಲರ ಮುಂದೆ ರಿವೀಲ್ ಮಾಡಿದ ಗಿಲ್ಲಿನಟ!