
ʼಕರಿಮಣಿʼ ಧಾರಾವಾಹಿಯಲ್ಲಿ ʼಕಳೆದ 22 ಎಪಿಸೋಡ್‌ಗಳು ಸಾಹಿತ್ಯ ಹಾಗೂ ಕರ್ಣ ಮದುವೆ ಕುರಿತ ವಿಷಯವೇ ಪ್ರಸಾರ ಆಗಿದೆ. ಹೀಗಿದ್ರೂ ಇವರ ಮದುವೆಯೇ ಆಗಿಲ್ಲ. ಇಂದು ಪ್ರಸಾರ ಆಗಲಿರುವ ಎಪಿಸೋಡ್‌ನಲ್ಲಿ ಸಾಹಿತ್ಯ ಮದುವೆ ಆಯ್ತು, ಆದರೆ ಯಾರ ಜೊತೆ ಎನ್ನೋದು ದೊಡ್ಡ ಪ್ರಶ್ನ ಆಗಿದೆ.
ಕುತಂತ್ರ ಮಾಡಿದ ಸಿಂಚನಾ!
ಸಾಹಿತ್ಯಳನ್ನು ಕರ್ಣ ಪ್ರೀತಿ ಮಾಡಿದ್ದನು. ಆದರೆ ಕರ್ಣನ ಮೇಲೆ ಸಾಹಿತ್ಯಗೆ ಯಾವುದೇ ಪ್ರೀತಿಯ ಭಾವನೆ ಇರಲಿಲ್ಲ. ಸಾಹಿತ್ಯಳಿಗೆ ಒಳ್ಳೆಯದನ್ನು ಮಾಡಲು ಅವಳಿಗೆ ನಿಕ್ಕಿಯಾಗಿದ್ದ ಮದುವೆಯನ್ನು ಕರ್ಣ ತಡೆದಿದ್ದನು. ಇನ್ನು ಕರ್ಣನ ಕಂಡ್ರೆ ಅವನ ಅತ್ತೆ ಮಗಳು ಸಿಂಚನಾಗೆ ಸಖತ್ ಇಷ್ಟ. ಕರ್ಣನ ಅತ್ತೆ ಮಹಾ ದುಷ್ಟೆ. ಇನ್ನೊಂದು ಕಡೆ ಕರ್ಣ, ತನ್ನನ್ನು ಪ್ರೀತಿ ಮಾಡ್ತಿರುವ ವಿಷಯ ಸಾಹಿತ್ಯಗೂ ಗೊತ್ತಿರಲಿಲ್ಲ. ಹೇಗಾದರೂ ಮಾಡಿ ಕರ್ಣನನ್ನು ಪಡೆದುಕೊಳ್ಳಬೇಕು ಅಂತ ಸಿಂಚನಾ ಮಹಾ ಕುತಂತ್ರ ಮಾಡಿದಳು.
Karimani Serial: ಕರ್ಣನ ಮದುವೆಯಲ್ಲಿ ವೀಕ್ಷಕರಿಗೆ ಊಹಿಸದ ಟ್ವಿಸ್ಟ್; ಈಗಂತೂ ದೂರು ಹೇಳ್ಬೇಡಿ ಫ್ರೆಂಡ್ಸ್....!
ನಾಟಕ ಮಾಡಿದ್ದ ಸಾಹಿತ್ಯ!
“ನಾನು ಕರ್ಣನನ್ನು ಪ್ರೀತಿ ಮಾಡ್ತಿದ್ದೀನಿ. ಕರ್ಣ ಇಲ್ಲದೆ ನಾನು ಬದುಕೋದಿಲ್ಲ. ಕರ್ಣ ನನಗೆ ಬೇಕೇ ಬೇಕು, ನೀನು ಕರ್ಣನಿಂದ ದೂರ ಆಗಿಲ್ಲ ಅಂದ್ರೆ ಅವನು ನನಗೆ ಸಿಗೋದಿಲ್ಲ. ನನಗೆ ಕರ್ಣ ಸಿಕ್ಕಿಲ್ಲ ಅಂದ್ರೆ ನಾನು ಸಾಯ್ತೀನಿ” ಎಂದು ಸಿಂಚನಾ ಸಾಹಿತ್ಯ ಬಳಿ ಬೆದರಿಕೆ ಹಾಕಿದ್ದಳು. ಸಿಂಚನಾ ಮಾತಿಗೆ ಹೆದರಿ ಸಾಹಿತ್ಯ ಕರ್ಣನಿಂದ ದೂರ ಆಗುವ ನಾಟಕ ಮಾಡಿದಳು.
ಸತ್ಯ ಹೇಳಿದ ಸಿಂಚನಾ
ಸಾಹಿತ್ಯ, ಕರ್ಣ ಮದುವೆಯಾದರೆ ಅವನು ಉಳಿಯೋದಿಲ್ಲ ಎಂದು ಅವನ ತಾಯಿಗೆ ಓರ್ವ ಕಳ್ಳ ಸನ್ಯಾಸಿ ಸುಳ್ಳು ಹೇಳಿದ್ದನು. ಇದನ್ನು ನಂಬಿಕೊಂಡ ತಾಯಿ ಕರ್ಣನ ಜೊತೆ ಸಿಂಚನಾ ಮದುವೆ ಫಿಕ್ಸ್ ಮಾಡಿದಳು. ಕೊನೇ ಗಳಿಗೆಯಲ್ಲಿ ಕರ್ಣ ನನ್ನನ್ನು ಮದುವೆಯಾದ್ರೂ ಕೂಡ ಅವನ ಪ್ರೀತಿ ಸಿಗೋದಿಲ್ಲ ಅಂತ ಅವಳಿಗೆ ಅರ್ಥ ಆಯ್ತು. ಮದುವೆ ಮಂಟಪದಲ್ಲಿ ಕರ್ಣನಿಗೆ ಅವಳು ಎಲ್ಲ ನಾಟಕ, ಕುತಂತ್ರ, ಎಲ್ಲ ಸತ್ಯವನ್ನು ಹೇಳಿದಳು.
Karimani Serial: ಸಾಹಿತ್ಯ-ಕರ್ಣ ಮದುವೆ ಟೈಮ್‌ನಲ್ಲಿ ಸ್ಫೋಟಕ ಸತ್ಯ ಬಯಲು! ರೋಚಕ ಎಪಿಸೋಡ್ ಇದು!
ಅಷ್ಟೇ ಅಲ್ಲದೆ “ರಿಷಿ ಜೊತೆ ಸಾಹಿತ್ಯ ಮದುವೆ ನಡೆಯುತ್ತಿದೆ. ಈ ವಿಷಯ ಅವಳಿಗೂ ಗೊತ್ತಿಲ್ಲ. ನಿನಗೆ ಗೊತ್ತಿಲ್ಲದ ಹಾಗೆ ಅವಳ ಮದುವೆ ಮಾಡ್ತಿದ್ದಾರೆ” ಎಂದು ಕೂಡ ಕರ್ಣನಿಗೆ ಸಿಂಚನಾ ಹೇಳಿದಳು. ಈ ವಿಷಯ ಕೇಳಿ ಕರ್ಣ ಶಾಕ್ ಆದನು. ಆ ಮದುವೆ ತಡೆಯಬೇಕು ಅಂತ ಅವನು ಮದುವೆ ಮಂಟಪದತ್ತ ಹೊರಟಿದ್ದಾನೆ. ಆಗ ಒಂದಷ್ಟು ರೌಡಿಗಳು ಅವನನ್ನು ಮುತ್ತಿಕ್ಕಿದ್ದಾರೆ. ಎಲ್ಲರ ಜೊತೆ ಫೈಟ್ ಮಾಡಿ ಕೊನೆಗೂ ಕರ್ಣ ಮದುವೆ ಮಂಟಪಕ್ಕೆ ಬಂದಿದ್ದಾನೆ.
ಈಗ ಇರುವ ಟ್ವಿಸ್ಟ್ ಏನು?
ಮರೂನ್ ಬಣ್ಣದ ಕುರ್ತಾ ಧರಿಸಿದ ರಿಷಿ ಮದುವೆ ಮಂಟಪದಲ್ಲಿದ್ದಾನೆ. ಸಾಹಿತ್ಯ ಕೊರಳಿಗೆ ಅವನು ತಾಳಿ ಕಟ್ಟಿದ್ದಾನೆ ಎಂದು ಎಲ್ಲರೂ ಭಾವಿಸಿದ್ದಾರೆ. ಆದರೆ ಸತ್ಯ ಇದಲ್ಲ. ಸಾಹಿತ್ಯಳಿಗೆ ಕರ್ಣನೇ ತಾಳಿ ಕಟ್ಟಿದ್ದಾನೆ. ಇತ್ತೀಚೆಗೆ ಈ ಧಾರಾವಾಹಿಯ ಸಹಕಲಾವಿದರೊಬ್ಬರು ಮದುವೆ ಮಂಟಪದಲ್ಲಿ ಆಕ್ಷನ್ ಸೀನ್ ಹೇಗೆ ಮಾಡಿದ್ರು ಅಂತ ವಿಡಿಯೋವನ್ನು ಹಂಚಿಕೊಂಡಿದ್ದರು. ಅದರಲ್ಲಿ ಕರ್ಣ ಮರೂನ್ ಬಣ್ಣದ ಕುರ್ತಾ ಧರಿಸಿ ಫೈಟ್ ಮಾಡಿದ್ದನು. ಇನ್ನೊಂದು ಕಡೆ ವಾಹಿನಿಯು ರಿಲೀಸ್ ಮಾಡಿದ ಪ್ರೋಮೋದಲ್ಲಿ ಕರ್ಣನ ವಾಚ್, ರಿಂಗ್ ಕೂಡ ಕಾಣ್ತಿದೆ. ಇದನ್ನು ನೋಡಿ ಕೊನೆಗೂ ಸಾಹಿತ್ಯ, ಕರ್ಣನ ಮದುವೆ ಆಯ್ತು ಅಂತ ವೀಕ್ಷಕರು ಭಾವಿಸಿದ್ದಾರೆ.
ಮದುವೆ ಮಂಟಪಕ್ಕೆ ಕರ್ಣ ಹೇಗೆ ಬಂದ? ಅವನು ಹೇಗೆ ಡ್ರೆಸ್ ಬದಲಾಯಿಸಿ ಕೂತ ಎನ್ನೋದು ದೊಡ್ಡ ಪ್ರಶ್ನೆ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.