
ಕರಿಮಣಿ ಧಾರಾವಾಹಿಯಲ್ಲಿ ( Karimani Serial ) ರಾಜೇಂದ್ರ ಪ್ರಸಾದ್ ಹಾಗೂ ಅನುರಾಧಾ ಪ್ರೀತಿಸಿ ಮದುವೆಯಾಗಿರುತ್ತಾರೆ. ಆದರೆ ರಾಜೇಂದ್ರನನ್ನು ಪ್ರೀತಿಸಿದ ಅರುಂಧತಿ ಅವನನ್ನೇ ಮದುವೆ ಆಗಿ, ಅನುಳನ್ನು ಮನೆಯಿಂದ ಹೊರಗಡೆ ಹಾಕಿರುತ್ತಾಳೆ. ಈ ವಿಷಯ ರಾಜೇಂದ್ರನಿಗೆ ಗೊತ್ತೇ ಇರೋದಿಲ್ಲ. ಹೆಂಡತಿ ಬದುಕಿಲ್ಲ ಎಂದು ಅವನು ನಂಬಿರುತ್ತಾನೆ. ಈಗ ಅನುರಾಧಾ ಎಲ್ಲರ ಮುಂದೆ ಬಂದಿದ್ದಾಳೆ.
ಅರುಂಧತಿ ಅಸಲಿ ಮುಖ ಯಾರೂ ನೋಡಿಲ್ಲ!
ರಾಜೇಂದ್ರ ಪ್ರಸಾದ್ ಹಾಗೂ ಅನುರಾಧಾ ಮಗ ಕರ್ಣನಿಗೆ ಹೆತ್ತ ತಾಯಿ ಕಂಡರೆ ಆಗೋದೇ ಇಲ್ಲ. ನನ್ನನ್ನು ಪಾಲನೆ ಮಾಡಿದವಳು, ಊಟ ಮಾಡಿ ಮುದ್ದು ಮಾಡಿದವಳು ಅರುಂಧತಿ ಅಂತ ಕರ್ಣ ನಂಬಿದ್ದನು. ಕರ್ಣನಿಗೆ ಹೆತ್ತ ತಾಯಿ ಬಗ್ಗೆಯೇ ಕೋಪ, ದ್ವೇಷ ಬರುವಂತೆ ಅರುಂಧತಿ ಮಾಡಿದ್ದಳು. ಆದರೆ ಇದು ಯಾರಿಗೂ ಗೊತ್ತೇ ಆಗಲಿಲ್ಲ.
ರಾಜೇಂದ್ರ ಪ್ರಸಾದನಿಗೆ ತಿಳಿದ ಅರುಂಧತಿ ಕರ್ಮಕಾಂಡ
ಈಗ ಕರ್ಣನ ಹೆಂಡ್ತಿ ಸಾಹಿತ್ಯಾಳಿಂದ ಅರುಂಧತಿ ಸತ್ಯ ಎಲ್ಲರಿಗೂ ಗೊತ್ತಾಗುವ ಹಾಗೆ ಆಗಿದೆ. ಇಷ್ಟುದಿನಗಳಿಂದ ತನಗೆ, ತನ್ನ ಕುಟುಂಬಕ್ಕೆ ತೊಂದರೆ ಕೊಡ್ತಿದ್ದ ಬ್ಲ್ಯಾಕ್ ರೋಸ್‌ಗೆ ತನ್ನ ಮನೆಯಲ್ಲಿರೋ ಪ್ರಸನ್ನ ಮಾವನೇ ಸಹಾಯ ಮಾಡ್ತಿದ್ದ ಅಂತ ಕರ್ಣನಿಗೆ ಗೊತ್ತಾಗಿತ್ತು. ಬಾಲ್ಯದಲ್ಲಿ ಪ್ರಸನ್ನನ ಜೊತೆ ಇರೋ ಹುಡುಗಿ ಈಗ ಹೇಗೆ ಆಗಿರಬಹುದು ಎಂದು ಕರ್ಣ ಸ್ಕೆಚ್ ಮಾಡಿಸಿದ್ದನು. ಆ ಫೋಟೋ ರಾಜೇಂದ್ರ ಪ್ರಸಾದ್‌ಗೆ ಸಿಕ್ಕಿದೆ. ಪ್ರಸನ್ನ ಹಾಗೂ ಅರುಂಧತಿ ಅಕ್ಕ ತಮ್ಮ ಎಂದು ರಾಜೇಂದ್ರನಿಗೆ ಗೊತ್ತಾಗಿದೆ. ಅದರ ಜೊತೆಗೆ ಅನುರಾಧಾ ಹಾಗೂ ಪಾಪಮ್ಮ ಕೂಡ ಅರುಂಧತಿ ಹಣೆಬರಹ ಏನು ಎಂದು ಅವನಿಗೆ ಹೇಳಿದ್ದಾರೆ.
ಇನ್ನು ಅರುಂಧತಿ ಹಾಗೂ ರಾಜೇಂದ್ರ ಪ್ರಸಾದ್ ಮುಖಾಮುಖಿಯಾಗಿದ್ದಾರೆ. ಯಾಕೆ ಈ ರೀತಿ ಮಾಡಿದೆ ಅಂತ ರಾಜೇಂದ್ರ ಅವಳಿಗೆ ಪ್ರಶ್ನೆ ಮಾಡಿದ್ದಾನೆ. ತನ್ನ ಮನೆಯವರಿಗೆ ತನ್ನ ಅಸಲಿ ಮುಖವನ್ನು ರಾಜೇಂದ್ರ ಪ್ರಸಾದ್ ರಿವೀಲ್ ಮಾಡ್ತಾನೆ ಅಂತ ಈಗ ಅರುಂಧತಿಯೇ ಅವನಿಗೆ ಗುಂಡೇಟು ಹಾರಿಸಿದ್ದಾಳೆ. ಇನ್ನು ಜೈಲಿನಲ್ಲಿದ್ದ ಪ್ರಸನ್ನ ಕೂಡ ತಪ್ಪಿಸಿಕೊಂಡು, ಅರುಂಧತಿಗೆ ಸಾಥ್ ಕೊಟ್ಟಿದ್ದಾನೆ. ಬ್ಲ್ಯಾಕ್‌ರೋಸ್ ಹುಡುಕಿಕೊಂಡು ಕರ್ಣ ಕೂಡ ಬರುತ್ತಿದದಾನೆ. ನಿಜಕ್ಕೂ ರಾಜೇಂದ್ರ ಪ್ರಸಾದ್ ಸಾಯುತ್ತಾನಾ? ಅಥವಾ ಅಲ್ಲಿಗೆ ಕರ್ಣ ಬರುತ್ತಾನಾ? ಇಷ್ಟು ಬೇಗ ಅರುಂಧತಿ ಮುಖವಾಡ ಕಳಚಿಬೀಳುತ್ತಾ ಎಂದು ಕಾದು ನೋಡಬೇಕಿದೆ.
ಈ ಪ್ರೋಮೋ ರಿಲೀಸ್ ಆಗಿದ್ದು, ಭಾರೀ ಕುತೂಹಲ ಮೂಡಿಸಿದೆ. ವೀಕ್ಷಕರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.