14 ತಿಂಗಳ ಗ್ಯಾಪ್‌ನಲ್ಲಿ ಎರಡನೇ ಮಗು: ಟೂ ಫಾಸ್ಟ್ ಅಂತ ಟ್ರೋಲ್ ಮಾಡಿದ್ರು ಜನ

Suvarna News   | Asianet News
Published : Feb 02, 2021, 11:32 AM ISTUpdated : Feb 02, 2021, 12:03 PM IST
14 ತಿಂಗಳ ಗ್ಯಾಪ್‌ನಲ್ಲಿ ಎರಡನೇ ಮಗು: ಟೂ ಫಾಸ್ಟ್ ಅಂತ ಟ್ರೋಲ್ ಮಾಡಿದ್ರು ಜನ

ಸಾರಾಂಶ

ಮೊನ್ನೆ ಮೊನ್ನೆ ಡಿಸೆಂಬರ್‌ನಲ್ಲಿ ಮೊದಲ ಮಗುವಿನ ಮೊದಲ ಬರ್ತ್‌ಡೇ ಆಚರಿಸಿದ್ದ ಕಪಿಲ್ ಶರ್ಮಾ ಎರಡೇ ತಿಂಗಳ ಗ್ಯಾಪಲ್ಲಿ ಮತ್ತೊಂದು ಮಗುವನ್ನು ಸ್ವಾಗತಿಸಿದ್ದಾರೆ. ಈ ಬಗ್ಗೆ ನೆಟ್ಟಿಗರು ಕಪಿಲ್ ಅವ್ರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ.

ಕಪಿಲ್ ಶರ್ಮಾ ಎರಡನೇ ಮಗುವನ್ನು ಸ್ವಾಗತಿಸಿದ್ದಾರೆ. ಸೋಮವಾರ ಬೆಳಗ್ಗೆ ಫ್ಯಾನ್ಸ್ ಜೊತೆ ಈ ಸುದ್ದಿಯನ್ನು ಶೇರ್ ಮಾಡಿಕೊಂಡಿದ್ದಾರೆ. ಪತ್ನಿ ಗಿನ್ನಿ ಚತ್ರತ್ ಎರಡನೇ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಸುರಕ್ಷಿತವಾಗಿದ್ದಾರೆ. ನಿಮ್ಮ ಪ್ರಾರ್ಥನೆ ಮತ್ತು ಆಶಿರ್ವಾದಗಳಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದರು.

2018ರಲ್ಲಿ ವಿವಾಹಿತರಾದ ಕಪಿಲ್ ಶರ್ಮಾ ಮತ್ತು ಗಿನ್ನಿ2019 ಡಿಸೆಂಬರ್‌ನಲ್ಲಿ ಮೊದಲ ಮಗು ಅನೈರಾಳನ್ನು ವೆಲ್‌ಕಂ ಮಾಡಿದ್ದರು. ತಮ್ಮ ಕುಟುಂಬ ಇನ್ನಷ್ಟು ದೊಡ್ಡದಾಗುತ್ತಿದೆ ಎಂದು ಕಪಿಲ್ ಶೇರ್ ಮಾಡಿದ್ದಕ್ಕೆ ಟೂ ಕ್ವಿಕ್ ಎಂದಿದ್ದಾರೆ ಜನರು.

ಕಪಿಲ್ ಶರ್ಮಾ ಶೋ ಬಂದ್; ಕಾರಣ ಬಹಿರಂಗ ಮಾಡಿದ ಕಾಮಿಡಿಯನ್!

ಮಕ್ಕಳ ನಡುವೆ ಗ್ಯಾಪ್ ಇಲ್ಲ, ಅಷ್ಟೊಳ್ಳೆ ಅಭ್ಯಾಸವಲ್ಲ ಎಂದು ಕಮೆಂಟ್ ಮಾಡಿದ್ದಾರೆ ನೆಟ್ಟಿಗರು. ಇದೂ ತುಂಬಾ ಬೇಗ ಆಯ್ತು, ಕಳೆದ ವರ್ಷವಷ್ಟೇ ಹೆಣ್ಮಗುವನ್ನು ಸ್ವಾಗತಿಸಿದ್ರಲ್ಲಾ ಎಂದಿದ್ದಾರೆ.

ಕಪಿಲ್ ಶರ್ಮಾಗೆ ಕರೆ ಮಾಡಿದ ಮುಂಬೈ ಪೊಲೀಸರು.. ಯಾವ ಪ್ರಕರಣ!

ಫ್ಯಾಮಿಲಿಗೆ ಫೋಕಸ್ ಮಾಡೋ ಉದ್ದೇಶದಿಂದ ಕಪಿಲ್ ಶರ್ಮಾ ದಿ ಕಪಿಲ್ ಶರ್ಮಾ ಶೋದಿಂದ ಸಣ್ಣ ಗ್ಯಾಪ್ ತೆಗೆದುಕೊಂಡಿದ್ದಾರೆ. ಈ ಪಾಪ್ಯುಲರ್ ಶೋ ಮತ್ತೊಮ್ಮೆ ಸೆಕೆಂಡ್ ಸೀಸನ್ ಆಗಿ ಮೂಡಿ ಬರಲಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!