ಮಲಯಾಳಂ ಗಾಯಕ, ಮಾಜಿ ಬಿಗ್‌ಬಾಸ್ ಸ್ಪರ್ಧಿ ಕೊರೋನಾ ವೈರಸ್‌ಗೆ ಬಲಿ | ಏಷ್ಯಾನೆಟ್ ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಗಾಯಕ
ಜನಪ್ರಿಯ ಮಲಯಾಳಂ ಗಾಯಕ ಸೋಮದಾಸ್ ಚಥನೂರ್ ಹೃದಯಾಘಾತದಿಂದ ಭಾನುವಾರ ಮೃತಪಟ್ಟಿದ್ದಾರೆ. ಕೊಲ್ಲಂನ ಚಥನೂರು ಮೂಲದ 42 ವರ್ಷದ ಗಾಯಕ ಭಾನುವಾರ ಮುಂಜಾನೆ 3 ಗಂಟೆಗೆ ನಿಧನರಾಗಿದ್ದಾರೆ.
ಕೊರೋನಾ ವೈರಸ್‌ನಿಂದ ಉಂಟಾದ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಅವರು ಕೊಲ್ಲಂನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೊರೋನವೈರಸ್‌ನಿಂದ ಅವರು ಚೇತರಿಸಿಕೊಂಡು ಪರೀಕ್ಷೆಯಲ್ಲಿ ನೆಗೆಟಿವ್ ಬಂದಿತ್ತು. ಮೂತ್ರಪಿಂಡಗಳಿಗೆ ಕೊರೋನಾ ವೈರಸ್ ಸೋಂಕನ್ನುಂಟು ಮಾಡಿದ ಕಾರಣ ಆರೋಗ್ಯ ಸ್ಥಿತಿ ಬಿಗಡಾಯಿಸಿತ್ತು.
ರಾಬರ್ಟ್; ಸಭೆ ನಂತರ ತೆಲುಗು ವಾಣಿಜ್ಯ ಮಂಡಳಿ ಕೊಟ್ಟ ಪರಿಹಾರ
2008ರ ಏಷ್ಯಾನೆಟ್ ಸ್ಟಾರ್ ಸಿಂಗರ್ ಎಂಬ ಮ್ಯೂಸಿಕಲ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ನಂತರ ಸೋಮದಾಸ್ ಜನಪ್ರಿಯರಾಗಿದ್ದರು. ಮಿಸ್ಟರ್ ಪರ್ಫೆಕ್ಟ್ ಮತ್ತು ಮನ್ನಂಕಟ್ಟಾಯಂ ಕರಿಯಲಾಯಂ ಸೇರಿದಂತೆ ಕೆಲವು ಮಲಯಾಳಂ ಚಿತ್ರಗಳಲ್ಲಿಯೂ ಹಾಡಿದ್ದಾರೆ. ಸೋಮದಾಸ್ ಸ್ಟೇಜ್ ಶೋಗಳು ಬಹಳ ಜನಪ್ರಿಯವಾಗಿತ್ತು. ಅವರು ಅನೇಕ ಅಂತರಾಷ್ಟ್ರೀಯ ಪ್ರದರ್ಶನಗಳನ್ನೂ ನೀಡಿದ್ದರು.
2020 ಬಿಗ್ ಬಾಸ್ ಮಲಯಾಳಂನ ಸ್ಪರ್ಧಿಯೂ ಆಗಿದ್ದರು. ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ಅವರು ಕಾರ್ಯಕ್ರಮವನ್ನು ಮಧ್ಯದಲ್ಲಿಯೇ ತ್ಯಜಿಸಿದ್ದರು. ಅವರಿಗೆ ಅಧಿಕ ರಕ್ತದೊತ್ತಡ, ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಸಮಸ್ಯೆಯೂ ಇತ್ತು.