ಕುಸ್ತಿಯಲ್ಲಿ ಗೆದ್ದು ಗದೆ ಹಿಡಿದ ಕಂಠಿಗೆ ಹೆಂಡ್ತಿನೇ ಎಲ್ಲ! ಹೆತ್ತಮ್ಮನ್ನ ಮರೆತೆಯಾ ಕಂಠಿ ಅಂತಿದ್ದಾರೆ ವೀಕ್ಷಕರು

By Suvarna NewsFirst Published Nov 22, 2023, 12:02 PM IST
Highlights

ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಕುಸ್ತಿಯಲ್ಲಿ ಮಾರನನ್ನು ಮಣ್ಣು ಮುಕ್ಕಿಸಿ ಗದೆ ಹಿಡಿದಿದ್ದಾನೆ ಕಂಠಿ. ಆದರೆ ಗೆಲುವನ್ನು ಹೆಂಡತಿ ಸ್ನೇಹಾಗೆ ಸಮರ್ಪಿಸಿರೋದಕ್ಕೆ ವೀಕ್ಷಕರಿಗೆ ಅಸಮಾಧಾನ ಇದೆ.

ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಸದ್ಯ ಕುಸ್ತಿಯದೇ ಮಸ್ತಿ. ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ ಏಳೂವರೆಗೆ ಪ್ರಸಾರವಾಗೋ ಫೇಮಸ್ ಸೀರಿಯಲ್ ಪುಟ್ಟಕ್ಕನ ಮಕ್ಕಳು. ಟಿಆರ್‌ಪಿಯಲ್ಲಿ ಶುರುವಿಂದ ಇಲ್ಲೀವರೆಗೆ ಈ ಸೀರಿಯಲ್ಲೇ ನಂಬರ್ ಒನ್. ಈ ಸೀರಿಯಲ್‌ನಲ್ಲೀಗ ಕುಸ್ತಿಯ ಗೌಜಿ ಗಮ್ಮತ್ತು. ಕಂಠಿ ಹಾಗೂ ಮಾರನ ನಡುವೆ ಕುಸ್ತಿ ನಡೆಯುತ್ತೆ. ಹಾಗೆ ನೋಡಿದರೆ ಸ್ನೇಹಾ- ಬಂಗಾರಮ್ಮನ ಆಸೆಗೆ ವಿರುದ್ಧವಾಗಿ ಕಂಠಿ ಕುಸ್ತಿ ಅಖಾಡಕ್ಕೆ ಇಳಿದಿದ್ದಾನೆ. ಈತನ ವಿರುದ್ಧವಾಗಿ ಮಾರ ಕುಸ್ತಿಯಲ್ಲಿ ಭಾಗವಹಿಸಿದ್ದಾನೆ. ಆದರೆ ಕಂಠಿಗೆ ಮನೆಯಲ್ಲಿ ಯಾರ ಸಪೋರ್ಟ್ ಕೂಡ ಇಲ್ಲ. ಹೆಂಡತಿ ಹಾಗೂ ತಾಯಿ ಇಬ್ಬರು ಕೂಡ ಕುಸ್ತಿ ಆಟ ಆಡೋದೇ ಬೇಡ ಎಂದು ಹಠ ಹಿಡಿದಿದ್ದಾರೆ. ಆದರೆ ಪುಟ್ಟಕ್ಕ ಮಾತ್ರ ಕಂಠಿಗೆ ಧೈರ್ಯ ಹೇಳಿದ್ದಾರೆ .

'ನೀನು ಈ ಕುಸ್ತಿ ಆಟದಲ್ಲಿ ಆಡಲೇಬೇಕು ಹಾಗೆಯೇ ನೀನು ಕೊಟ್ಟಂತಹ ಮಾತನ್ನ ನಡೆಸಿಕೊಡಬೇಕು. ಈ ಕುಸ್ತಿ ಆಟದಲ್ಲಿ ನೀನು ಗೆದ್ದೇ ಗೆಲ್ಲುತ್ತೀಯ' ಎಂದೆಲ್ಲಾ ಪ್ರೋತ್ಸಾಹದ ಮಾತುಗಳನ್ನ ಹೇಳಿ ಪುಟ್ಟಕ್ಕ ಕಂಠಿಯನ್ನು ಹುರಿದುಂಬಿಸುತ್ತಾಳೆ. ಆದರೆ ಕಂಠಿ ಮಾತ್ರ ತನ್ನ ತಾಯಿ ಹಾಗೂ ಹೆಂಡತಿ ಇಬ್ಬರೂ ಕೂಡ ನನ್ನನ್ನು ಪ್ರೋತ್ಸಾಹಿಸುತ್ತಿಲ್ಲ ಎನ್ನುವ ಬೇಸರ ಕಾಡುತ್ತಿದೆ. ಏನು ಮಾಡುವುದು ಎಂದೆಲ್ಲ ಯೋಚನೆ ಮಾಡಿದಾಗ ತನ್ನ ಅತ್ತೆ ಹೇಳುತ್ತಿರುವುದು ಸತ್ಯ. ನಾನು ಕುಸ್ತಿ ಅಖಾಡಕ್ಕೆ ಇಳಿಯಬೇಕು ಹಾಗೆಯೇ ನಾನು ಉಸ್ತಾದ್‌ಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದೆಲ್ಲ ಯೋಚನೆ ಮಾಡುತ್ತಾನೆ. ಕಂಠಿ ಈ ಮೊದಲು ಮಾರನಿಗೆ ಸಾಕಷ್ಟು ಬಾರಿ ಧರ್ಮದೇಟು ಕೊಟ್ಟಿದ್ದಾನೆ. ಆದರೆ ಕಂಠಿಗೆ ಮಾರ ಕುಸ್ತಿ ಪಂದ್ಯಾಟದಲ್ಲಿ ಎದುರಾಳಿಯಾಗಿ ಸಿಗುತ್ತಾನೆ. ಆದರೆ ಈ ಬಗ್ಗೆ ಕಂಠಿಗೆ ಅಂದಾಜು ಇರುವುದಿಲ್ಲ. ಮಾರ ಕುಸ್ತಿ ಆಟದಲ್ಲಿ ಮೇಲುಗೈ ಹೊಂದಿರುತ್ತಾನೆ. ಆದರೆ ಇದೀಗ ಕಂಠಿಯನ್ನು ಕುಸ್ತಿ ಅಖಾಡದಲ್ಲಿ ನೋಡಿ ಹಳೆ ದ್ವೇಷವನ್ನು ತೀರಿಸಿಕೊಳ್ಳಲು ಇದೆ ಸರಿಯಾದ ಸಂದರ್ಭ ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾನೆ ಮಾರ.

Latest Videos

ಸೀರಿಯಲ್​ನಲ್ಲಿ ಮೆಸ್​ ನಡೆಸ್ತಿರೋ ಪುಟ್ಟಕ್ಕನ ಮಕ್ಕಳು ನಿಜವಾಗ್ಲೂ ಹೇಗೆ ಅಡುಗೆ ಮಾಡ್ತಾರೆ ನೋಡಿ...

ಇನ್ನೊಂದೆಡೆ ಪುಟ್ಟಕ್ಕ ಬಂಗಾರಮ್ಮನ ಮನೆಗೆ ಹೋಗುತ್ತಾಳೆ. ತನ್ನ ಅಳಿಯ ಮಾಡುತ್ತಿರುವ ಕೆಲಸದ ಬಗ್ಗೆ ಹೆಮ್ಮೆ ಪಡುತ್ತಾ ಬಂಗಾರಮ್ಮ ಹಾಗೂ ಸ್ನೇಹಾಗೆ ತಿಳಿ ಹೇಳುತ್ತಿದ್ದಾರೆ. ಯಾಕೆಂದರೆ ಸ್ನೇಹಾ ಈಗಾಗಲೇ ಸಾಕಷ್ಟು ಬಾರಿ ನೀನು ಈ ಕುಸ್ತಿ ಪಂದ್ಯವನ್ನು ಹಣಕ್ಕಾಗಿ ಆಡಬಾರದು. ಹಾಗೆ ನನಗೆ ಕುಸ್ತಿ ಪಂದ್ಯದ ಮೇಲೆ ಬಹಳ ಅಭಿಮಾನವಿದೆ ಎಂದು ಹೇಳುತ್ತಿರುತ್ತಾಳೆ. ಈ ವಿಚಾರವನ್ನು ಹಾಗೆ ಬಂಗಾರಮ್ಮನ ಬಳಿ ಕೂಡ ಹೇಳುತ್ತಾಳೆ ಸ್ನೇಹಾ. ತನ್ನ ತಾಯಿಯ ಒಪ್ಪಿಗೆ ಕೂಡ ಕಂಠಿಗೆ ಸಿಗುವುದಿಲ್ಲ. ಇನ್ನು ಪುಟ್ಟಕ್ಕ ಬಂಗಾರಮ್ಮ ಹಾಗೂ ಸ್ನೇಹಾಗೆ ತಿಳಿ ಹೇಳುತ್ತಾರೆ .ಕುಸ್ತಿ ಪಂದ್ಯವನ್ನ ಆಡಲೇಬೇಕೆನ್ನುವುದು ಕಂಠಿ ಆಸೆ ಅದನ್ನ ನೀವು ಇಬ್ಬರು ನೆರವೇರಿಸಿಕೊಡಬೇಕು. ಯಾಕೆಂದರೆ ಆತನಿಗೆ ನೀವು ಇಬ್ಬರು ಕೊಡುವ ಪ್ರೋತ್ಸಾಹ ಬಹಳ ಮುಖ್ಯ ಆದ ಕಾರಣ ನೀವಿಬ್ಬರೂ ಕೂಡ ಕುಸ್ತಿ ಆಟದ ಬಳಿ ಇದ್ದರೆ ಅಳಿಯಂದಿರಿಗೆ ಬಲ ಇದ್ದ ಹಾಗೆ ಎಂದು ಹೇಳುತ್ತಾಳೆ.

ಪುಟ್ಟಕ್ಕನ ಪ್ರಯತ್ನದಿಂದ ಬಂಗಾರಮ್ಮ ಮಗನ ಬೆಂಬಲಕ್ಕೆ ನಿಂತಿದ್ದಾಳೆ. 'ಬಂಗಾರಮ್ಮನ ಮಗನಿಗೆ ಸೋಲೆಂಬುದೇ ಇಲ್ಲ' ಅಂದಿದ್ದಾಳೆ. ಪತ್ನಿ (wife) ಸ್ನೇಹಾಳೂ ಕಂಠಿಯನ್ನು ಉತ್ತೇಜಿಸಿದ್ದಾಳೆ. ಊಹೆಯಂತೇ ಕಂಠಿ ಮಾರನನ್ನು ಮಣ್ಣು ಮುಕ್ಕಿಸಿ ಗೆಲುವಿನ ಗದೆ ಎತ್ತಿ ಹಿಡಿದಿದ್ದಾನೆ. ಇದು ಉಸ್ತಾದ್ ಸೇರಿ ಎಲ್ಲರಿಗೂ ಖುಷಿ (happiness) ಕೊಟ್ಟಿದೆ. ಆದರೆ ಕಂಠಿ ತನ್ನ ಗೆಲುವನ್ನು ಪತ್ನಿ ಸ್ನೇಹಾಗೆ ಅರ್ಪಿಸುತ್ತಾನೆ. ನನ್ನ ಈ ಗೆಲುವಿಗೆ ಕಾರಣ ನಮ್ಮೋರು. ತನ್ನ ಮಗನ ಸಾಧನೆ (achievement) ಬಗ್ಗೆ ಹೆಮ್ಮೆಯಿಂದ ಇದ್ದ ಬಂಗಾರಮ್ಮನ ಮುಖ ಚಿಕ್ಕದಾಗುತ್ತದೆ. ಮುಂದೆ ಕಂಠಿ, 'ಉಸ್ತಾದ್ ನೀವು ಹೆಣ್ಮಕ್ಕಳಿಂದ ದೂರ ಇರಬೇಕು, ಅವರು ಜೊತೆಗಿದ್ರೆ ಕುಸ್ತಿ ಮೇಲೆ ಆಸಕ್ತಿ ಇರಲ್ಲ ಅಂದಿದ್ರಿ. ಆದರೆ ಇದು ನನ್ನ ವಿಚಾರದಲ್ಲಿ ಸುಳ್ಳು. ಹೆಣ್ಣುಮಕ್ಕಳೇ ನನ್ನ ಬದುಕಿನ (life) ಆಧಾರ ಸ್ತಂಭ' ಎನ್ನುತ್ತಾನೆ. ತನ್ನ ಬದುಕಿಗೆ ಆಧಾರ ಸ್ತಂಭವಾದ ಪತ್ನಿ ಸ್ನೇಹಾ, ತಾಯಿ ಬಂಗಾರಮ್ಮ, ಅತ್ತೆ ಪುಟ್ಟಕ್ಕನನ್ನು ಸ್ಮರಿಸುತ್ತಾನೆ.

ಆದರೆ ತನ್ನ ಉಸಿರೇ ಮಗ ಅಂದುಕೊಂಡಿರುವ ಬಂಗಾರಮ್ಮನ ಬಗ್ಗೆ ಕಂಠಿ ಹೆಚ್ಚು ಗೌರವ (respect)  ನೀಡದೇ ಇರುವುದು ವೀಕ್ಷಕರಿಗೆ ಬೇಸರ ತರಿಸಿದೆ. ಹೆಂಡತಿ ಬಂದಮೇಲೆ ತಾಯಿನ ಮರೀಬೇಡ ಕಂಠಿ ಎಂದು ಅವರು ಬುದ್ಧಿವಾದ ಹೇಳಿದ್ದಾರೆ.

ಮಾವನನ್ನು ಕೊಂದು ಮುಗಿಸಿದಳೇ ವೈಶಾಖಾ, ಕಂಡು ಜೋರಾಗಿ ಕಿರುಚಿದ ಚಾರುಗೆ ಮುಂದೇನು ಗತಿ..?

click me!