'ಧನಂಜಯ್ ಮುಗ್ಧ ಅಲ್ಲ ಸಿಕ್ಕಾಪಟ್ಟೆ ಪೋಲಿ' ಎಂದು ಕಾಂತಾರ ನಟಿ ಸಪ್ತಮಿ ಗೌಡ ಹೇಳಿದ್ದಾರೆ.
ಸ್ಯಾಂಡಲ್‌ವುಡ್ ಡಾಲಿ, ನಟ ರಾಕ್ಷಸ ಧನಂಜಯ್ ಕಿರುತೆರೆಯ ಜನಪ್ರಿಯ ಶೋ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಾಧಕರ ಕುರ್ಚಿಯಲ್ಲಿ ಕಾಣಿಸಿಕೊಂಡರು. ಧನಂಜಯ್ ಸಾಕಷ್ಟು ವಿಚಾರಗಳನ್ನು ಬಹಿರಂಗ ಪಡಿಸಿದರು. ಬಾಲ್ಯ, ಸಿನಿಮಾರಂಗದಲ್ಲಿ ಪಟ್ಟ ಕಷ್ಟ, ಸ್ಟಾರ್ ಆಗಿದ್ದು ಸೇರಿದ್ದಂತೆ ಅನೇಕ ವಿಚಾರಗಳ ಬಹಿರಂಗ ಪಡಿಸಿದರು. ಧನಂಜಯ್ ಸಂಚಿಕೆ ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಂಡಿದೆ. ಧನಂಜಯ್ ಅವರ ಬಗ್ಗೆ ಕಾಂತಾರ ಸಿನಿಮಾದ ಖ್ಯಾತ ನಟಿ ಸಪ್ತಮಿ ಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೀಕೆಂಡ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಪ್ತಮಿ ಗೌಡ ಧನಂಜಯ್ ಬಗ್ಗೆ ಇಂಟ್ರಸ್ಟಿಂಗ್ ವಿಚಾರ ಬಿಚ್ಚಿಟ್ಟರು.
ಧನಂಜಯ್ ಮತ್ತು ಸಪ್ತಮಿ ಗೌಡ ಇಬ್ಬರೂ ಕಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾ ಮೂಲಕ ಮೊದಲ ಬಾರಿಗೆ ಸಪ್ತಮಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಅಷ್ಟಕ್ಕೂ ಈ ಸಿನಿಮಾಗೂ ಮೊದಲೇ ಧನಂಜಯ್ ಮತ್ತು ಸಪ್ತಮಿ ಗೌಡ ಇಬ್ಬರೂ ಸ್ನೇಹಿತರು. ಕಾಲೇಜು ಕಾರ್ಯಕ್ರಮವೊಂದಕ್ಕೆ ಧನಂಜಯ್ ಅವರನ್ನು ಗೆಸ್ಟ್ ಆಗಿ ಕರೆದಿದ್ದರು. ಅಲ್ಲಿಂದ ಇಬ್ಬರೂ ಸ್ನೇಹಿತರು. ಬಳಿಕ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದರು. ಕಾರ್ಯಕ್ರಮಕ್ಕೆ ಬಂದ ಸಪ್ತಮಿ ಗೌಡ ನಟ ಧನಂಜಯ್ ಅಂದುಕೊಂಡಷ್ಟು ಮುಗ್ಧ ಅಲ್ಲ ಪೋಲಿ ಎಂದು ಹೇಳಿದರು.
ಧನಂಜಯ್ ಅದ್ಭುತ ನಟ ಎಂದಿರುವ ಸಪ್ತಮಿ ತಾನು ಬೆಳೆಯುವ ಜೊತೆಗೆ ಅವರ ಜೊತೆಯಲ್ಲಿರೋರನ್ನು ಬೆಳೆಸುತ್ತಾರೆ ಎಂದು ಹೇಳಿದರು. ಅಭಿಮಾನಿಯೊಬ್ಬರು ಡಾಲಿ ಎಂದು ಸೆಲ್ಫಿ ತೆಗೆದುಕೊಂಡರು ಆಗ ಧನಂಜಯ್ ಸಪ್ತಮಿ ಕೂಡ ಇದ್ದಾರೆ ಫೋಟೋ ತೆಗೆದುಕೊಳ್ಳಿ ಎಂದು ಹೇಳಿದರು. ನಂದು ಯಾಕೆ ಎಂದೇ ಆಗ ಎಲ್ಲಾ ನಮ್ಮ ಕುಟುಂಬದವರೇ ಎಂದು ಹೇಳಿದರು. ತುಂಬಾ ಒಳ್ಳೆಯ ಮನಸ್ಸಿದೆ ಎಂದು ಸಪ್ತಮಿ ಹೇಳಿದರು.
ಸಪ್ತಮಿ ಬಗ್ಗೆ ಧನಂಜಯ್ ಕೂಡ ಸಂತಸ ಹಂಚಿಕೊಂಡರು. ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದೀರಾ. ನಿಮ್ಮನ್ನು ಈಗ ಇಡೀ ಭಾರತದಲ್ಲಿ ಗುರುತಿಸುತ್ತಾರೆ ಎಂದು ಹೇಳಿದರು. ಡಾಲಿ ಧನಂಜಯ್ ಅವರು ನನಗೆ ಒಳ್ಳೆ ಫ್ರೆಂಡ್ ಎಂದು ಸಪ್ತಮಿ ಗೌಡ, ಎಲ್ಲರೂ ಅವರನ್ನು ಸಖತ್ ಮುಗ್ದರು ಎಂದುಕೊಂಡಿದ್ದಾರೆ. ಆದ್ರೆ ಅವರು ಹಾಗಿಲ್ಲ ಸಿಕ್ಕಾಪಟ್ಟೆ ಪೋಲಿ ಎಂದು ಸಪ್ತಮಿ ಗೌಡ ಹೇಳಿದರು.
ಆಕೆಯನ್ನು ಜಗತ್ತಿಗೆ ತೋರಿಸಲು ಇಷ್ಟ ಇರ್ಲಿಲ್ಲ; ಅಕ್ಕನನ್ನು ನೋಡಿ ಕಣ್ಣೀರಿಟ್ಟ ಧನಂಜಯ್
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಸಪ್ತಮಿ ಗೌಡ ಬಂದಿದ್ದೆ ನನಗೆ ಸರ್ಪ್ರೈಸ್, ಇವರು ಬರ್ತಾರೆ ಎಂಬ ನಿರೀಕ್ಷೆ ನನಗಿರಲಿಲ್ಲ ಎಂದು ಧನಂಜಯ್ ಹೇಳಿದ್ರು. ಇದೇ ಸಮಯದಲ್ಲಿ ಧನಂಜಯ್ ಹೆಸರನ್ನು ತನ್ನ ಫೋನಿನಲ್ಲಿ ಏನೆಂದು ಸೇವ್ ಮಾಡಿಕೊಂಡಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಿದರು. ದಕ್ಷಿಣ ಪತೇಶ್ವರ ಎಂದು ಧನಂಜಯ್ ಫೋನ್ ನಂಬರ್ ಸೇವ್ ಆಗಿದೆ ಎಂದರು. ಬದಲಾಯಿಸುತ್ತೇನೆ ಎಂದಾಗ ಧನಂಜಯ್ ಬೇಡ ಹೀಗೆ ಇರ್ಲಿ ಅಂದರು. ಹಾಗಾಗಿ ಹಾಗೆ ಇದೆ ಎಂದು ಸಪ್ತಮಿ ಗೌಡ ವಿವರಿಸಿದರು.
ಐರನ್ ಲೆಗ್ ಅಂತ ಕೆಟ್ಟ ಪದಗಳಲ್ಲಿ ಬೈದಿದ್ದಾರೆ, ನಿಜವಾದ ಕೊಡಲಿಯಿಂದ ಪೆಟ್ಟುಬಿದ್ದಿದೆ: ಭಾವುಕರಾದ ಧನಂಜಯ್
ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ಸಪ್ತಮಿ ಗೌಡ ನಟ ಧನಂಜಯ್ ಪತ್ನಿಯಾಗಿ ಕಾಣಿಸಿಕೊಂಡಿದ್ದರು. ಆ ಪಾತ್ರ ಕೂಡ ಸಪ್ತಮಿ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತ್ತು. ಖಡಕ್ ಪಾತ್ರ ಆದಾಗಿತ್ತು. ನಿರ್ದೇಶಕ ಸೂರಿ ಅವರ ಸಾರಥ್ಯದಲ್ಲಿ ಸಿನಿಮಾ ಮೂಡಿ ಬಂದಿತ್ತು. ಟಗರು ಬಳಿಕ ಧನಂಜಯ್ ಮತ್ತು ಸೂರಿ ಇಬ್ಬರ ಕಾಂಬಿನೇಷನ್‌ನಲ್ಲಿ ಬಂದ ಸಿನಿಮಾವಾಗಿತ್ತು. ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಸಿನಿಮಾವಾಗಿದೆ.