ಶಾಕ್ ಕೊಟ್ಟ ಬಿಗ್‌ಬಾಸ್; ಫೈನಲ್ ಗೆಲ್ತಾನೆ ಅಂತಿದ್ದ ಸ್ಪರ್ಧಿ ಔಟ್!

Published : Apr 25, 2021, 10:25 PM ISTUpdated : Apr 25, 2021, 10:27 PM IST
ಶಾಕ್ ಕೊಟ್ಟ ಬಿಗ್‌ಬಾಸ್; ಫೈನಲ್ ಗೆಲ್ತಾನೆ ಅಂತಿದ್ದ ಸ್ಪರ್ಧಿ ಔಟ್!

ಸಾರಾಂಶ

ಮನೆಯಿಂದ ಹೊರಬಂದ ರಾಜೀವ್/  ಪ್ರಶಾಂತ್ ಮತ್ತು ರಾಜೀವ್ ಕೊನೆಯಲ್ಲಿ ಉಳಿದುಕೊಂಡಿದ್ದರು/  ಗೋಲ್ಡನ್ ಪಾಸ್ ಇದ್ದರೂ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ/ ಈ ವಾರವೂ ಕಿಚ್ಚ ಸುದೀಪ್ ನಡೆಸಿಕೊಡಲಿಲ್ಲ

ಬೆಂಗಳೂರು(ಏ. 25)  ಬಿಗ್ ಬಾಸ್ ಮನೆಯಿಂದ ರಾಜೀವ್ ಹೊರಗೆ ಬಂದಿದ್ದಾರೆ. ಕ್ರೀಡಾಳು ಎಂದು  ಹೇಳಿಕೊಂಡಿದ್ದ ರಾಜೀವ್ ನಿಧಿ ಮತ್ತು ಶುಭಾ ಜತೆ ಕ್ಲೋಸ್ ಆಗಿದ್ದರು.. 

ಕೊನೆಯಲ್ಲಿ ರಾಜೀವ್ ಮತ್ತು ಪ್ರಶಾಂತ್ ಉಳಿದುಕೊಂಡಿದ್ದರು. ಈ ಬಾರಿ ಸಹ ಬಿಗ್ ಬಾಸ್  ವಾರದ ಕತೆ ಮಾಮೂಲಾಗಿಯೇ ನಡೆಯಿತು. ಕಿಚ್ಚ ಸುದೀಪ್ ನಡೆಸಿಕೊಡಲು ಸಾಧ್ಯವಾಗಲಿಲ್ಲ.

ಮನೆಯಿಂದ ಹೊರಟ ರಾಜೀವ್ ತಮ್ಮ ಬಳಿ ಇದ್ದ ಗೋಲ್ಡನ್ ಪಾಸ್ ನ್ನು ಶುಭಾ ಪೂಂಜಾ ಅವರಿಗೆ ನೀಡಿದ್ದಾರೆ. ಪ್ರಶಾಂತ್ ಮತ್ತು ಚಕ್ರವರ್ತಿ ಈ ಹಿಂದೆಯೇ ಎಲಿಮಿನೇಶನ್ ಬಗ್ಗೆ ಮಾತನಾಡಿದ್ದರು. ನಾನು ಹೋದರೆ ನನ್ನ ಸ್ಥಾನ ನೀನು ಟೇಕ್ ಓವರ್ ಮಾಡಿಕೊಳ್ಳಬೇಕು ಎಂದು ಪ್ರಶಾಂತ್ ಚಕ್ರವರ್ತಿಗೆ ಹೇಳಿದ್ದರು. ಆದರೆ ರಾಜೀವ್ ಎಲಿಮಿನೇಟ್ ಆಗಿದ್ದಾರೆ.

ಬಿಗ್ ಬಾಸ್ ಗೆ ಕಿಚ್ಚ ಪಡೆಯುವ ಸಂಭಾವನೆ ಎಷ್ಟು?

ಬಿಗ್ ಬಾಸ್ ನಲ್ಲಿ ಎಂಟು ವಾರಗಳನ್ನು ಕಳೆದ ರಾಜೀವ್ ಹೊರಗೆ ಬಂದಿದ್ದಾರೆ. ತುಪ್ಪಕ್ಕಾಗಿ, ಚಪಾತಿಗಾಗಿ ಕೊನೆಗೆ ಮೊಟ್ಟೆಗಾಗಿ  ಜಗಳ ನಡೆಯಿತು ಆ  ಜಗಳಕ್ಕೆ ಕಾರಣ ಪ್ರಶಾಂತ್ ಎಂಬುದು   ವೀಕ್ಷಕರ ಕರೆಯಲ್ಲಿ ಮತ್ತೆ  ಸಾಬೀತಾಯಿತು.

ರಾಜೀವ್ ಬಳಿ ನಾಮಿನೇಶನ್ ನಿಂದ ಬಚಾವಾಗಲು ಗೋಲ್ಡನ್ ಪಾಸ್ ಸಹ ಲಭ್ಯ ಇತ್ತು. ಆದರೆ ಅದನ್ನು ಬಳಸಿಕೊಳ್ಳಲಿಲ್ಲ. ಈಗ ರಾಜೀವ್  ಮನೆಯಿಂದ ಹೊರಕ್ಕೆ ಬಂದಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?