ತಮಿಳುನಾಡು ಮಹಿಳೆಯೊಬ್ಬರು ಕನ್ನಡ ಹಾಡನ್ನು ಹಾಡಿ ಇನ್ಸ್‌ಸ್ಟಾಗ್ರಾಂ ರೀಲ್ಸ್ ಮಾಡಿದ್ದು, ಇನ್ನುಮುಂದೆ ಕನ್ನಡದ ಹಾಡು ಹಾಡದಂತೆ ಕನ್ನಡಿಗರು ತಾಕೀತು ಮಾಡಿದ್ದಾರೆ.
ಬೆಂಗಳೂರು (ಅ.23): ಸಾಮಾಜಿಕ ಜಾಲತಾಣದಲ್ಲಿ ಯಾವಾಗ ಯಾರು ಫೇಮಸ್ ಆಗುತ್ತಾರೋ ಗೊತ್ತಾಗುವುದಿಲ್ಲ. ಇತ್ತೀಚೆಗೆ ನಾನು ನಂದಿನಿ.. ಬೆಂಗಳೂರಿಗೆ ಬಂದೀನಿ ಸಾಂಗ್ ವೈರಲ್ ಆಗಿತ್ತು. ಅದೇ ರೀತಿ ತಮಿಳು ಮಹಿಳೆಯೊಬ್ಬಳು ಕನ್ನಡ ಹಾಡನ್ನು ಹಾಡಿ ರೀಲ್ಸ್ ಮಾಡಿದ್ದಾರೆ. ಆದರೆ, ಇದನ್ನು ವಿರೋಧಿಸಿದ ಕನ್ನಡಿಗರು ಇನ್ಮುಂದೆ ಕನ್ನಡ ಹಾಡನ್ನು ಹಾಡುವ ಪ್ರಯತ್ನ ಮಾಡಬೇಡಿ ಎಂದು ತಾಕೀತು ಮಾಡಿದ್ದಾರೆ.
ತಮಿಳುನಾಡು ಮೂಲದ ಕೌಸಿ ಆಂಟೋನಿ ಎನ್ನುವ ಮಹಿಳೆಯು ಹಾಡನ್ನು ಹಾಡುತ್ತಾ ರೀಲ್ಸ್ ಮಾಡುತ್ತಾರೆ. ಇವರು ಆರು ಸಾವಿರ ಫಾಲೋವರ್ಸ್‌ಗಳನ್ನು ಕೂಡ ಹೊಂದಿದ್ದಾರೆ. ಆದರೆ, ಇತ್ತೀಚೆಗೆ ಇವರು ಹಾಡಿದ ಕನ್ನಡ ಸಿನಿಮಾದ ಹಾಡು ವೈರಲ್ ಆಗುತ್ತಿದ್ದು, ಇನ್ನುಮುಂದೆ ಯಾವತ್ತೂ ಕನ್ನಡ ಹಾಡನ್ನು ಹಾಡಬೇಡಿ ಎಂದು ಕನ್ನಡಿಗರು ಸಲಹೆ ನೀಡಿದ್ದಾರೆ. ಜೀ ಕನ್ನಡದ ಸರಿಗಮಪ 20ನೇ ಸೀಸನ್‌ನಲ್ಲಿ ದೇಶ ಮಾತ್ರವಲ್ಲದೇ ಇಡೀ ಜಾಗತಿಕ ಮಟ್ಟದಲ್ಲಿನ ಎಲ್ಲರಿಗೂ ಕನ್ನಡ ಹಾಡನ್ನು ಹಾಡುವವರಿಗೆ ವೇದಿಕೆ ಕಲ್ಪಿಸಿಕೊಡಲಾಗಿದೆ. ಆದರೆ, ಕನ್ನಡಿಗರು ಈಗ ಯಾಕೆ ತಮಿಳುನಾಡು ಮಹಿಳೆಗೆ ಕನ್ನಡ ಹಾಡನ್ನು ಹಾಡಬೇಡಿ ಎಂದು ಹೇಳಿದ್ದಾರೆ ಎಂಬುದಕ್ಕೆ ಕಾರಣ ಇಲ್ಲಿದೆ ನೋಡಿ..
ಮನ ಮೆಚ್ಚಿದ ಹುಡುಗಿ ಹಾಡು ಹಾಡಿದ ಕೌಸಿ: ನಟ ಶಿವರಾಜ್ ಕುಮಾರ್ ಹಾಗೂ ಸುಧಾರಾಣಿ ಅಭಿನಯದ ಮನ ಮೆಚ್ಚಿದ ಹುಡುಗಿ ಸಿನಿಮಾದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಎಸ್. ಜಾಕಿ ಹಾಡಿದ 'ನಿನ್ನಾಣೆ ನಾನು ಕತ್ತಲಲ್ಲೂ ಬೆಳಕ ಕಂಡೆನು.. ನನ್ನಾಣೆ ನಾನು ಮತ್ತಿನಲ್ಲೂ ಸುಖವ ಕಂಡೆನು' ಹಾಡು ಭಾರಿ ಟ್ರೆಂಡ್ ಸೃಷ್ಟಿಸಿತ್ತು. ಆದರೆ, ಮೂರ್ನಾಲ್ಕು ದಶಕಗಳು ಕಳೆದರೂ ಕೂಡ ಈ ಹಾಡಿಗೆ ತುಂಬಾ ಬೇಡಿಕೆಯಿದೆ. ಆದರೆ, ಈಗ ಈ ಹಾಡಿನ ಎರಡು ಸಾಲನ್ನು ತಮಿಳುನಾಡಿನ ಕೌಸಿ ಆಂಟೋನಿ ಎನ್ನುವವರೂ ಕೂಡ ಹಾಡಿದ್ದು, ಅವರ ಧ್ವನಿಯಿಂದ ಭಾರಿ ವೈರಲ್ ಆಗುತ್ತಿದೆ.
ವಿಚಿತ್ರ ಧ್ವನಿಯಿಂದ ಹಾಡಿದ ಕೌಸಿ ಆಂಟೋನಿ: ದೇಶ ಕಂಡ ಪ್ರಸಿದ್ಧ ಗಾಯಕಿ ಎಸ್. ಜಾನಕಿ ಅವರು ಹಾಡಿದ ಹಾಡನ್ನು ತಮಿಳಿನ ಕೌಸಿ ಆಂಟೋನಿ ಎನ್ನುವವರು ವಿಚಿತ್ರ ಧ್ವನಿಯಲ್ಲಿ ಹಾಡಿ ರೀಲ್ಸ್ ಮಾಡಿದ್ದಾರೆ. ಇದು ಕೇಳಲು ವಿಚಿತ್ರವಾಗಿದ್ದು, ಕನ್ನಡದ ಹಾಡನ್ನು ಅಣಕಿಸುವಂತೆ ಕಾಣುತ್ತಿದೆ. ಆದ್ದರಿಂದ, ಕೌಸಿ ಆಂಟೋನಿ ಹಾಡಿನ ರೀಲ್ಸ್‌ಗೆ ಕಮೆಂಟ್ ಮಾಡಿದ ಕನ್ನಡಿಗರು, ಕನ್ನಡದವರು ಅಲ್ಲದಿದ್ದರೂ ನೀವು ಕನ್ನಡ ಹಾಡನ್ನು ಹಾಡಲು ಪ್ರಯತ್ನ ಮಾಡಿದ್ದಕ್ಕೆ ನಿಮಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಣೆ ಮಾಡಿದ್ದಾರೆ. ಆದರೆ, ಇನ್ನು ಮುಂದೆ ಯಾವುದೇ ಕಾರಣಕ್ಕೂ ಕನ್ನಡದ ಹಾಡನ್ನು ಹಾಡದಂತೆ ಸಲಹೆ ನೀಡಿದ್ದಾರೆ.
3 ವರ್ಷಗಳ ಹಿಂದೆ ಹುಲಿ ಉಗುರು ಖರೀದಿಸಿದ ಬಗ್ಗೆ ಬಿಗ್‌ಬಾಸ್ ವರ್ತೂರ್ ಸಂತೋಷ್ ತಪ್ಪೊಪ್ಪಿಗೆ
ಐದು ಭಾಷೆಯಲ್ಲಿ ಹಾಡು ಹಾಡುವ ಪ್ರಯತ್ನ: ಯಾರು ಏನೇ ಕಮೆಂಟ್ ಮಾಡಿದರೂ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಕೌಸಿ ಆಂಟೋನಿ 5 ಭಾಷೆಗಳನ್ನು ಹಾಡನ್ನು ಹಾಡಿದ್ದಾರೆ. ಅದು ಪಷ್ಪ ಸಿನಿಮಾದ ಊ ಅಂಟಾವಾ ಮಾವಾ.. ಊಹೂ ಅಂಟಾವಾ ಮಾವಾ ಹಾಡನ್ನು ತಮಿಳು, ಹಿಂದಿ, ಕನ್ನಡ, ಮಲೆಯಾಳಂ ಹಾಗೂ ತೆಲುಗು ಭಾಷೆಯಲ್ಲಿ ಹಾಡಿ ರೀಲ್ಸ್ ಮಾಡಿದ್ದಾರೆ.