Bigg Boss Kannada: ನಿನ್ನನ್ನು ಪರಿಚಯಿಸಲು ನಿನ್ನಪ್ಪ ಯಾಕೆ ಬಂದಿಲ್ಲ, ನಂಗೊತ್ತು ಆ ಗುಟ್ಟು ಎಂದ ಸುದೀಪ್

By Shriram Bhat  |  First Published Oct 23, 2023, 12:56 PM IST

ನಟ ಡಾಲಿ ಧನಂಜಯ ಜತೆ ಮಾತನಾಡುತ್ತ ಕಿಚ್ಚ ಸುದೀಪ್ " ನಿಮ್ಮ ಹೆಸರಲ್ಲೇ ಧನ ಇಟ್ಕೊಂಡಿದೀರಾ. ನಿಮ್ಮ ಪ್ರಕಾರ ಧನ ಎಷ್ಟು ಇಂಪಾರ್ಟೆಂಟ್ ಅಂತ ಕೇಳಿದ್ದಾರೆ. ಅದಕ್ಕೆ ಡಾಲಿ 'ಧನ ತುಂಬಾ ಮುಖ್ಯ' ಎನ್ನಲು ಸುದೀಪ್ 'ವಾಟ್ ಅಬೌಟ್ ಧನಲಕ್ಷ್ಮೀ ..? ಎಂದು ಕೇಳಿದ್ದಾರೆ. ಅದಕ್ಕೆ ಡಾಲಿ ನಾಚಿಕೊಳ್ಳುತ್ತ 'ಅದೂ ಕೂಡ ತುಂಬಾ ಇಂಪಾರ್ಟೆಂಟು ಸರ್' ಎಂದಿದ್ದಾರೆ. 


ನಿನ್ನೆ ಬಿಗ್ ಬಾಸ್ ಕನ್ನಡ ಸೀಸನ್ 10ನಲ್ಲಿ, ಸೂರ್ ಸಂಡೇ ವಿತ್ ಸುದೀಪ್ ಸಂಚಿಕೆ ಪ್ರಸಾರವಾಯಿತು. ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಗೌರೀಶ್ ಅಕ್ಕಿ ದೊಡ್ಮನೆಯಿಂದ ನಿರ್ಗಮಿಸಿದರು. ಎರಡು ವಾರಗಳು ಬಿಗ್ ಬಾಸ್ ಮನೆಯಲ್ಲಿದ್ದ ಗೌರೀಶ್ ಅಕ್ಕಿ ಎಲಿಮಿನೇಶನ್ ಅಗಿ ಹೊರಬಂದು ಮತ್ತೆ ಹಳೆಯ ಜೀವನವನ್ನು ಹೊಸದಾಗಿ ಶುರು ಮಾಡಿದ್ದಾರೆ. ನಿನ್ನೆ ರಾತ್ರಿಯೇ ಇನ್ನೊಬ್ಬರು ಸ್ಪರ್ಧಿ ವರ್ತೂರು ಸಂತೋಷ್ ಕೇಸ್ ಒಂದರ ಸಂಬಂಧ ಅರೆಸ್ಟ್ ಆಗಿದ್ದಾರೆ. ಮಿಕ್ಕ ಸ್ಪರ್ಧಿಗಳ ಬಿಗ್ ಬಾಸ್ ಪ್ರಯಾಣ ಕಂಟಿನ್ಯೂ ಆಗಿದೆ. 

ನಿನ್ನೆ ಸೂಪರ್ ಸಂಡೇ ವಿತ್ ಸುದೀಪ್ ಸಂಚಿಕೆಗೆ ಡಾಲಿ ಧನಂಜಯ್, ವಾಸುಕಿ ವೈಭವ್ ಮತ್ತು ಅಮ್ರತಾ ಪ್ರೇಮ್ ಆಗಮಿಸಿದ್ದರು. ಈ ತಿಂಗಳು 27ರಂದು (27 ಅಕ್ಟೋಬರ್ 2023) ಡಾಲಿ ಧನಂಜಯ್ ನಿರ್ಮಾಣದ 'ಟಗರು ಪಲ್ಯ' ಚಿತ್ರವು ಕರ್ನಾಟಕದಾದ್ಯಂತ ಬಿಡುಗಡೆಯಾಗಲಿದೆ. ಈ ಸಂಬಂಧ, ಚಿತ್ರತಂಡವು ಪ್ರಮೋಶನ್‌ಗೆ ಎಂಬಂತೆ ಬಿಗ್ ಬಾಸ್ ಮನೆಗೆ ಕಾಲಿಟ್ಟಿತ್ತು. ಕಿಚ್ಚ ಸುದೀಪ್ ಟಗರು ಪಲ್ಯ ಟೀಮ್ ಸ್ವಾಗತಿಸಿ ಅವರೊಂದಿಗೆ ಮಾತುಕತೆ ನಡೆಸಿದರು. 

Tap to resize

Latest Videos

ಅಮ್ರತಾ ಪ್ರೇಮ್ ಜತೆ ಮಾತನಾಡುತ್ತ ಸುದೀಪ್ "ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿರುವ ನಿನಗೆ ಹೃತ್ಪೂರ್ವಕ ಸ್ವಾಗತ. ನಿನ್ನ ಅಪ್ಪ ಪ್ರೇಮ್ ಇಲ್ಲಿ ನಿನ್ನನ್ನು ಪರಿಚಯಿಸಲು ನಿನ್ನ ಜತೆ ಯಾಕೆ ಬಂದಿಲ್ಲ? ಅವರು ಯಾಕೆ ಬಂದಿಲ್ಲ ಎಂದು ನನಗೆ ಗೊತ್ತು! ತಮಗೆ ಇಷ್ಟು ದೊಡ್ಡ ಮಗಳು ಇದ್ದಾರೆಂದು ಗೊತ್ತಾದರೆ ಎಲ್ಲರ ಮುಂದೆ ತಮ್ಮ ವಯಸ್ಸು ರಿವೀಲ್ ಆಗುತ್ತದೆ ಎಂಬ ಕಾರಣಕ್ಕೆ" ಎಂದು ಹೇಳಿ ಸುದೀಪ್ ನೆನಪಿರಲಿ ಪ್ರೇಮ್ ಕಾಲೆಳೆದಿದ್ದಾರೆ. ವೇದಿಕೆ ಮೇಲೆ ಇಲ್ಲದಿದ್ದರೂ ನಟ ಪ್ರೇಮ್ ಅಲ್ಲಿ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದರು ಎನಿಸುವಂತಿತ್ತು, ಸುದೀಪ್ ನೋಟ.

Bigg Boss Kannada ಹೆಸರಲ್ಲೇ ಧನ ಇಟ್ಕೊಂಡಿದೀರಾ, ವಾಟ್ ಅಬೌಟ್ ಧನಲಕ್ಷ್ಮೀ ಸರ್: ಧನಂಜಯ್ ಕಾಲೆಳೆದ ಸುದೀಪ್

ನಟ ಡಾಲಿ ಧನಂಜಯ ಜತೆ ಮಾತನಾಡುತ್ತ ಕಿಚ್ಚ ಸುದೀಪ್ " ನಿಮ್ಮ ಹೆಸರಲ್ಲೇ ಧನ ಇಟ್ಕೊಂಡಿದೀರಾ. ನಿಮ್ಮ ಪ್ರಕಾರ ಧನ ಎಷ್ಟು ಇಂಪಾರ್ಟೆಂಟ್ ಅಂತ ಕೇಳಿದ್ದಾರೆ. ಅದಕ್ಕೆ ಡಾಲಿ 'ಧನ ತುಂಬಾ ಮುಖ್ಯ' ಎನ್ನಲು ಸುದೀಪ್ 'ವಾಟ್ ಅಬೌಟ್ ಧನಲಕ್ಷ್ಮೀ ..? ಎಂದು ಕೇಳಿದ್ದಾರೆ. ಅದಕ್ಕೆ ಡಾಲಿ ನಾಚಿಕೊಳ್ಳುತ್ತ 'ಅದೂ ಕೂಡ ತುಂಬಾ ಇಂಪಾರ್ಟೆಂಟು ಸರ್' ಎಂದಿದ್ದಾರೆ. ಎಲ್ಲರೂ ನಗೆಗಡಲಿನಲ್ಲಿ ತೇಲಿದ್ದಾರೆ. ಡಾಲಿ ನಿರ್ಮಾಣದ 'ಟಗರು ಪಲ್ಯ'ಕ್ಕೆ ಶುಭಕೋರಿ ಸುದೀಪ್ ಆ ಟೀಮ್‌ಅನ್ನು ಬೀಳ್ಕೊಟ್ಟಿದ್ದಾರೆ. 

ಹುಲಿ ಉಗುರು ಧರಿಸಿದ್ಧ ವರ್ತೂರು ಸಂತೋಷ್ ಬಂಧನ, ಬಿಗ್ ಬಾಸ್ ಇತಿಹಾಸದಲ್ಲೇ ಇದು ಮೊದಲು!

ಅಂದಹಾಗೆ, ಬಿಗ್ ಬಾಸ್ ಮನೆಯಲ್ಲಿ ಏನಾಗುತ್ತಿದೆ ಎಂದು ತಿಳಿಯಬೇಕಾದರೆ 'JioCinema'ದಲ್ಲಿ ಬಿಗ್‌ಬಾಸ್‌ ಕನ್ನಡ ನೇರಪ್ರಸಾರ ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು 'JioCinema'ದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು 'Colors Kannada'ದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00ಕ್ಕೆ ವೀಕ್ಷಿಸಬಹುದು.

click me!