Bigg Boss Kannada:ಬೇಸರದಲ್ಲಿ ಬಳಲಿದ ಭಾಗ್ಯಶ್ರೀ, ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗೆದ್ದಿದ್ದೇಕೆ ರಣಶಕ್ತಿ ತಂಡ

Published : Oct 23, 2023, 01:28 PM IST
Bigg Boss Kannada:ಬೇಸರದಲ್ಲಿ ಬಳಲಿದ ಭಾಗ್ಯಶ್ರೀ, ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗೆದ್ದಿದ್ದೇಕೆ ರಣಶಕ್ತಿ ತಂಡ

ಸಾರಾಂಶ

ಇಶಾನಿ ಮತ್ತು ಮೈಕಲ್ ಜೋಡಿ, ಸಂಗೀತಾ ಕಾರ್ತೀಕ್ ಜೋಡಿಯಂತೂ ಸಾಕಷ್ಟು ಗಮನಸೆಳೆದಿದ್ದಂತೂ ನಿಜ. ಕ್ಯಾಪ್ಟನ್ ಆಗುವ ಕನಸು ಕಂಡಿದ್ದ ರಣಶಕ್ತಿ ತಂಡಕ್ಕೆ ಕ್ಯಾಪ್ಟನ್ ಆಗುವ ಅವಕಾಶ ಸಿಗಲೇ ಇಲ್ಲ. ಬದಲಾಗಿ ಸ್ವಿಮ್ಮಿಂಗ್‌ ಫೂಲ್‌ನಲ್ಲಿ ಮುಳುಗೇಳಬೇಕಾಯ್ತಷ್ಟೆ.

ಬಿಗ್‌ಬಾಸ್‌ ಕನ್ನಡ ರಿಯಾಲಿಟಿ ಷೋ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಹಲವು ಬಗೆಯಲ್ಲಿ ರೋಚಕಗೊಳ್ಳುತ್ತಿದೆ. ಈ ವಾರದ ವೀಕೆಂಡ್ ಎಪಿಸೋಡ್‌ಗಳಲ್ಲಿ ಸುದೀಪ್‌ ಸ್ಪರ್ಧಿಗಳಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದೂ ಆಗಿದೆ. ಹಾಗಾದರೆ ಕಳೆದ ವಾರ ಬಿಗ್‌ಬಾಸ್‌ ಮನಯೊಳಗೆ ಏನೇನು ನಡೆಯಿತು? ಯಾವ ಸ್ಪರ್ಧಿಗಳು ಹೇಗೆ ನಡೆದುಕೊಂಡರು? ಮನರಂಜನೆಯ, ಭಾವುಕ ಕ್ಷಣಗಳು ಹೇಗಿದ್ದವು? ಈ ಎಲ್ಲವನ್ನೂ ರಿಕ್ಯಾಪ್ ಮಾಡಿ ನೋಡುವ ಅವಕಾಶ ಇದೀಗ JioCinemaದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಕನ್ನಡದ ‘ಬಿಗ್‌ ನ್ಯೂಸ್‌’ ಸೆಗ್ಮೆಂಟ್‌ನಲ್ಲಿ ಲಭ್ಯವಿದೆ.  

ಎರಡನೇ ವಾರ, ಮನೆ ಬಿಸಿ ಏರ್ತಾ ಇದೆ. ಒಬ್ಬರನ್ನೊಬ್ಬರು ಅರ್ಥ ಮಾಡ್ಕೊತಿದಾರೋ ಹತ್ರ ಮಾಡ್ಕೊತಿದಾರೋ ಗೊತ್ತಾಗ್ತಿಲ್ಲ. ಆದ್ರೆ ಒಬ್ರ ಮೇಲೊಬ್ರ ಸಗಣಿ ಅಲ್ಲಲ್ಲ ಕೆಸರು ಎರಚೋ ಆಟ ಅಂತೂ ಶುರುವಾದಂತಿದೆ. ಎಲ್ರೂ ಸೇರಿ ಸಂಗೀತಾ ಮೇಲೆ ಸೆಗಣಿ ಎರಚಿದ್ದೂ ಆಯ್ತು. ಬಿಗ್‌ಬಾಸ್‌ ಮೇಲೆ ಗೆಲುವು ಬೇಕು ಅಂದ್ರೆ, ಒಂದೋ ಬಲವಿರಬೇಕು, ಇಲ್ಲಾ ನಿಲುವಿರಬೇಕು. ಇಲ್ಲಾ ಒಲವಿರಬೇಕು. ಈ ವಾರ ಯಾವ ಸ್ಫರ್ಧಿಗಳಿಗೆ ಏನಿತ್ತು ಅಂತ ಪ್ರೇಕ್ಷಕರೇ ನಿರ್ಧಾರ ಮಾಡ್ಬೇಕು.

ಇಶಾನಿ ಮತ್ತು ಮೈಕಲ್ ಜೋಡಿ, ಸಂಗೀತಾ ಕಾರ್ತೀಕ್ ಜೋಡಿಯಂತೂ ಸಾಕಷ್ಟು ಗಮನಸೆಳೆದಿದ್ದಂತೂ ನಿಜ. ಕ್ಯಾಪ್ಟನ್ ಆಗುವ ಕನಸು ಕಂಡಿದ್ದ ರಣಶಕ್ತಿ ತಂಡಕ್ಕೆ ಕ್ಯಾಪ್ಟನ್ ಆಗುವ ಅವಕಾಶ ಸಿಗಲೇ ಇಲ್ಲ. ಬದಲಾಗಿ ಸ್ವಿಮ್ಮಿಂಗ್‌ ಫೂಲ್‌ನಲ್ಲಿ ಮುಳುಗೇಳಬೇಕಾಯ್ತಷ್ಟೆ. ರಣಶಕ್ತಿ ತಂಡಕ್ಕೆ ಕ್ಯಾಪ್ಟನ್ ಆಗುವ ಭಾಗ್ಯ ಇರ್ಲಿಲ್ಲ. ಆದ್ರೆ ಭಾಗ್ಯಶ್ರೀ ಇದ್ರಲ್ಲ…ಅವರು ಜಗಳ ಆಡ್ತಿದ್ದೋರನ್ನು ಸಂಧಾನ ಮಾಡಲು ಹೋಗಿ ಸಮಾಧಾನ ಕಳ್ಕೊಂಡು ರಾತ್ರಿಯಿಡೀ ಚಳಿಯಲ್ಲಿ ನಡುಗಬೇಕಾಯ್ತು. ವಿನಯ್ ಜೊತೆಗೆ ಹೀಟ್‌ ಮಾತುಕತೆಯಾಗಿ ಕಣ್ಣೀರಲ್ಲಿ ಕೊನೆಗೊಂಡಿತು.

ಗೌರೀಶ ಅಕ್ಕಿ ಅವರು ಮೌನ ಬಂಗಾರ ಅನ್ನೋ ಹಾಗೆಯೇ ಇದ್ದರು. ವರ್ತೂರ್ ಸಂತೋಷ್ ಅವರ ಮೈಮೇಲಿನ ಬಂಗಾರ ಮಾತ್ರ ಫಳಫಳ ಹೊಳೆಯಿತು.
ತುಕಾಲಿ ಸಂತೋಷ್‌ ಅವರು ವೇಟರ್ ಆದಾಗ ಸ್ಪರ್ಧಿಗಳು ಮಾಡಿದ ಆರ್ಡರ್‍‌ಗಳಂತೂ ಸಖತ್ ನಗು ತರಿಸುವಂತಿತ್ತು. 
ಸಂತೋಷ್‌ ಅವರ ಜೊತೆ ಜಿದ್ದಾಜಿದ್ದಿ ಜಗಳವಾಡಿದ ಇಶಾನಿ ಜೈಲು ಸೇರಬೇಕಾಯ್ತು. ಈ ನಡುವೆ ಬಂದಾವನ ತಂಡ ಬಿಗ್‌ಬಾಸ್‌ ಮನೆಯೊಳಗೆ ಬಂದಿದ್ದೊಂದು ವಿಶೇಷ ಗಳಿಗೆ. ಬಿಗ್‌ಬಾಸ್‌ ಮನೆಯೊಳಗೆ ಐವತ್ತಕ್ಕೂ ಹೆಚ್ಚು ಜನ ಸೇರಿದ್ದು ಒಂದು ದಾಖಲೆಯೇ ಆಗಿತ್ತು. ಅಲ್ಲಿ ಎಲ್ರೂ ಮಾಡಿದ ಸೆಲೆಬ್ರೇಷನ್‌ ಅಂತು ಕಣ್ಣು ಕೊರೈಸುವಂತಿತ್ತು.
ಫನ್‌ ಫ್ರೈಡೇ ರಿಸಲ್ಟ್‌ ಏನು?

ಜಿಯೊ ಸಿನಿಮಾದಿಂದ ನಡೆಸಿದ ಫನ್‌ ಫ್ರೈಡೆ ಎಂಬ ಮೋಜಿನ ಆಟದಲ್ಲಿ ಎಲ್ಲರೂ ಉತ್ಸಾಹದಿಂದಲೇ ಭಾಗವಹಿಸಿದರು. ಆದರೆ ಗೆದ್ದೋರು ಯಾರು? 
ಇದಕ್ಕೆ ಉತ್ತರ ಇನ್ನೂ ಸಿಕ್ಕಿಲ್ಲ. ಈ ಆಟದ ತೀರ್ಪನ್ನು ನೀಡುವ ಅಧಿಕಾರವನ್ನು ಬಿಗ್‌ಬಾಸ್‌ ಪ್ರೇಕ್ಷಕರಿಗೇ ನೀಡಿದ್ದಾರೆ. ಇಂದು ಅಂದರೆ ಅಕ್ಟೋಬರ್ 23ರ ರಾತ್ರಿ 9 ಗಂಟೆಯವರೆಗೂ ಜನರು JioCinemaದಲ್ಲಿ ‘ನೀವೀಗ ಬಾಸ್‌’ ಸೆಗ್ಮೆಂಟ್‌ನಲ್ಲಿ ವೋಟ್ ಹಾಕಿ ನಿಮ್ಮಿಷ್ಟದ ಸ್ಪರ್ಧಿಯನ್ನು ಫನ್‌ ಫ್ರೈಡೆ ಟಾಸ್ಕ್‌ನಲ್ಲಿ ಗೆದ್ದ ಸ್ಪರ್ಧಿಯನ್ನಾಗಿಸುವ ಅವಕಾಶ ವೀಕ್ಷಕರಿಗೆ ಇದೆ. 

ವಾರದ ಕೊನೆಯ ವೀಕೆಂಡ್ ಎಪಿಸೋಡ್‌ಗಳು ನಗು-ನಲಿವು ಮತ್ತು ಕಿಚ್ಚನ ಖಡಕ್ ಕ್ಲಾಸ್‌ನ ಮಿಶ್ರಣವಾಗಿದ್ದವು. ಕೊನೆಗೂ ಈ ವಾರ ಗೌರೀಶ ಅಕ್ಕಿ ಮನೆಯಿಂದ ಹೊರಬಿದ್ದಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಹೊಸದೊಂದು ವಾರ ಕಣ್ಬಿಟ್ಟಿದೆ. ಈ ವಾರದಲ್ಲಿ ಏನೇನು ಆಗಲಿವೆ? ಯಾವ್ಯಾವ ಸರ್ಪೈಸ್‌ಗಳು ಕಾದಿವೆ. ಎಂಬುದನ್ನು ತಿಳಿದುಕೊಳ್ಳುದಕ್ಕಾಗಿ JioCinemaದಲ್ಲಿ ಬಿಗ್‌ಬಾಸ್‌ ಕನ್ನಡ ಉಚಿತ ನೇರಪ್ರಸಾರ ವೀಕ್ಷಿಸುತ್ತಿರಿ. 

ವಾರದ ಹೈಲೈಟ್‌ಗಳನ್ನು ನೋಡಲು ಈ ಕೆಳಗಿನ ಲಿಂಕ್‌ ಕ್ಲಿಕ್ ಮಾಡಿ: https://jiocinema.onelink.me/fRhd/9n41xkpg/ ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ದೈನಂದಿನ ಎಪಿಸೋಡ್‌ಗಳನ್ನು Colors Kannada ದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ಹಾಗೂ ಶನಿವಾರ-ಭಾನುವಾರ ರಾತ್ರಿ 9.00ಕ್ಕೆ ವೀಕ್ಷಿಸಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಪ್ಲ್ಯಾನ್‌ ಬದಲಾಯಿಸಿದ ಜಯದೇವ್;‌ ಇನ್ನೊಂದು ಅವಾಂತರ ಆಗಲಿದೆಯಾ?
ಡೂಡಲ್ ಫೋಟೊ ಮೂಲಕ ಅವಿ ಬರ್ತ್ ಡೇಗೆ ವಿಶ್ ಮಾಡಿದ Divya Uruduga… ಫ್ಯಾನ್ಸ್’ಗೆ ಮದ್ವೆ ಚಿಂತೆ