ಕನ್ನಡತಿ ಸೀರಿಯಲ್ ನಲ್ಲಿ ಒಂದು ಕಡೆ ಹರ್ಷ ಭುವಿ ಮದುವೆ ತಯಾರಿ ಜೋರಾದರೆ ಇನ್ನೊಂದೆಡೆ ಮದುವೆ ಅರೇಂಜ್‌ಮೆಂಟ್ ನೆವದಲ್ಲಿ ಮದ್ವೆಗೆ ವಿಘ್ನ ತರಲು ವರೂ ಸ್ಕೆಚ್ ಹಾಕ್ತಿರೋ ಹಾಗಿದೆ. ಆದರೆ ಇವೆರಡರ ನಡುವೆ ಭುವಿ, ಅಮ್ಮಮ್ಮನ ಮಧ್ಯೆ ಸಿಕ್ಕಿದ ಹರ್ಷನ್ನ ದೇವ್ರೇ ಕಾಪಾಡ್ಬೇಕು ಅನ್ನೋ ಹಾಗಾಗಿದೆ.
ಕನ್ನಡತಿ ಸೀರಿಯಲ್ (Kannadathi serial) ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದೆ. ಈ ಸೀರಿಯಲ್‌ನಲ್ಲಿ ಸದ್ಯ ಹರ್ಷ ಭುವಿಯ(Harsha- Bhuvi) ಮದುವೆ ತಯಾರಿ ಜೋರಾಗಿದೆ. ಇನ್ನೊಂದು ಕಡೆ ಇದನ್ನು ತಪ್ಪಿಸಲು ಹರ್ಷನ ತಮ್ಮನ ಹೆಂಡತಿ ಸಾನಿಯಾ(Saniya) ಮತ್ತವಳ ಮಾವನ ಸಂಚು ನಡೀತಿದೆ. ಇನ್ನೊಂದೆಡೆ ವರೂಧಿನಿಗೂ(Varushini) ಆಗಾಗ ಚುಚ್ಚಿಕೊಟ್ಟು ಅವಳಿಗೆ ಹೀರೋ ಬಗ್ಗೆ ಇರುವ ಪ್ರೀತಿಯನ್ನು ನೆನಪಿಸುತ್ತಾ ಅವಳಿಂದಲೂ ಮದುವೆಗೆ ವಿಘ್ನ ಉಂಟು ಮಾಡಲು ಸಾನಿಯಾ ಸ್ಕೆಚ್(sketch) ಹಾಕುತ್ತಿದ್ದಾಳೆ. ಆದರೆ ಇಲ್ಲಿವರೆಗಿನ ಎಪಿಸೋಡ್‌ಗಳನ್ನು ನೋಡಿದರೆ ಸಾನಿಯಾ ಪ್ಲಾನ್‌ಗಳನ್ನು ಇಂಡೈರೆಕ್ಟರ್ ಆಗಿ ವರೂ ನೇ ತಪ್ಪಿಸುತ್ತಿದ್ದಾಳೆ. ಸುಪಾರಿ ಹಂತಕರ ಮೂಲಕ ಭುವಿಯನ್ನು ಬೆಟ್ಟದಿಂದ ತಳ್ಳೋ ಪ್ಲಾನ್ ಅನ್ನು ಸಾನಿಯಾ ಮಾಡಿದಾಗ ವರೂನೇ ಅವಳನ್ನು ರಕ್ಷಿಸಿದ್ದಾಳೆ. ಆ ಸುಪಾರಿ ಹಂತಕನನ್ನೂ(supari killer) ಹುಡುಕಿ ತೆಗೆದಿದ್ದಾಳೆ. ಈಗ ಸಾನಿಯಾ ಗೇಮ್ ಪ್ಲಾನ್(Game plan) ಚೇಂಜ್ ಆಗಿದೆ. ತಾನು ಬುದ್ಧಿವಂತಿಕೆಯಿಂದಲೇ ಈ ಪ್ಲಾನ್ ಮುರಿಯಲು ಅವಳು ಸ್ಕೆಚ್ ಹಾಕಿದ್ದಾಳೆ. ಭುವಿ- ಹರ್ಷನ ನಡುವೆ ಕಂದಕ ಉಂಟಾಗುವಂತೆ ಮಾಡುವುದು, ವರೂ ಮತ್ತು ಹರ್ಷ, ಭುವಿ ನಡುವೆ ತಂದಿಡೋ ಕೆಲಸ ಮಾಡ್ತಿದ್ದಾಳೆ. ಆದರೆ ಒಂದು ಹಂತದವರೆಗೆ ಸರಾಗವಾಗಿ ಸಾಗುವ ಅವಳ ಪ್ಲಾನ್ ಒಂದು ಹಂತದಲ್ಲಿ ವಿಫಲವಾಗುತ್ತಲೇ ಬಂದಿದೆ.
ಎಕ್ಸರ್‌ಸೈಜ್ ಮೂಲಕವೇ 25 ಕೆಜಿ ತೂಕ ಇಳಿಸಿದ ಗೀತಾ ಭಟ್, ಸಾವಿಗೀಡಾದ ಚೇತನಾ ಅಂಥವರಿಗೆ ಯಾಕೆ ಸ್ಫೂರ್ತಿ ಆಗಲ್ಲ?
ಹರ್ಷ-ಭುವಿ ಮದುವೆಯ ಅರೇಂಜ್‌ಮೆಂಟ್ಸ್‌ಗಳ ಉಸ್ತುವಾರಿಯನ್ನು ಭುವಿ ವರೂಧಿನಿಗೆ ಒಪ್ಪಿಸಿದ್ದಾಳೆ. ಆದರೆ ಇನ್ನೊಂದು ಕಡೆ ಹರ್ಷ ಇದನ್ನು ಬೇರೆಯವ್ರಿಗೆ ಒಪ್ಪಿಸಿದ್ದಾನೆ. ಇದನ್ನು ಸಾನಿಯಾ ವರೂ ಗಮನಕ್ಕೆ ತಂದು ಮತ್ತೆ ಕೆಣಕಿದ್ದಾಳೆ. ಲಗ್ನ ಪತ್ರಿಕೆ ಕೊಡಲೆಂದು ಮನೆಗೆ ಬಂದ ಹರ್ಷ ಮತ್ತು ಭುವಿಯನ್ನು ತಾನು ಮನೆಯಲ್ಲಿದ್ದರೂ ಇಲ್ಲ ಅಂತ ವಾಪಾಸ್ ಕಳಿಸಿದ್ದಾಳೆ ವರೂ. ಇಂಥಾ ಹೊತ್ತಲ್ಲಿ ಭುವಿ ಹರ್ಷನನ್ನು ಒಪ್ಪಿಸಿ ಮದುವೆಯ ಉಸ್ತುವಾರಿಯನ್ನು ವರೂಗೆ ವಹಿಸಿದ್ದಾಳೆ. ಇಲ್ಲೂ ಒಂಚೂರು ಡ್ರಾಮಾ(Drama) ನಡೆದಿದೆ. ಹರ್ಷ ಯಾವತ್ತೂ ಭುವಿಯ ಪರ ಇರೋದು, ಅವಳಿಲ್ಲದೇ ಏನನ್ನೂ ಮಾಡದೇ ಇರೋದು ವರೂಗೆ ನುಂಗಲಾರದ ತುತ್ತಾಗಿದೆ.
ಈ ಎಲ್ಲ ಸಮಸ್ಯೆ, ಗೊಂದಲಗಳ ನಡುವೆ ಹಾಯಿ ಗಾಳಿಯಂತೆ ಬಂದಿರೋದು ಭುವಿ ಅಮ್ಮಮ್ಮನ ನಡುವೆ ಸಿಕ್ಕಿ ಒದ್ದಾಡುವ ಹರ್ಷನ ಕತೆ ಇರೋ ಎಪಿಸೋಡ್(Episode). ಹರ್ಷ ಅಮ್ಮಮ್ಮ ಹಾಗೂ ಭುವಿಯ ಜೊತೆಗೆ ಸಿಂಗಧೂರಿಂದ(Sigandhuru) ಬೆಂಗಳೂರಿಗೆ ಬರ್ತಿರುವಾಗ ಅಮ್ಮಮ್ಮನಿಗೆ ಟೀ ಕುಡೀಬೇಕು ಅಂತಾಗಿದೆ. ಹರ್ಷ ಇದಕ್ಕಾಗಿ ಒಂದು ಕಡೆ ಕಾರು ನಿಲ್ಲಿಸಿದ್ದಾನೆ. ಒಂದು ಕಡೆ ಅಮ್ಮಮ್ಮ ಟೀಗಾಗಿ ಒತ್ತಡ ಹಾಕ್ತದ್ದರೆ, ಭುವಿ ಟೀ ಬೇಡ ಅಂತಿದ್ದಾಳೆ. ಅಮ್ಮಮ್ಮ ಹಾಗೂ ಭುವಿ ಇಬ್ಬರೂ ಇನ್ ಡೈರೆಕ್ಟಾಗಿ ಒಬ್ಬರನ್ನೊಬ್ಬರು ವಿರೋಧಿಸುತ್ತಾ ಡೈಲಾಗ್ ಹೊಡೀತಾರೆ. ಇಷ್ಟೊತ್ತಿಗೆ ಟೀ ಕುಡಿದ್ರೆ ಪಿತ್ತ ಆಗುತ್ತೆ ಅಂತ ಭುವಿ ಹೇಳಿದ್ರೆ, ಆಯ್ತು ಬಿಡಿ, ನಂಗೆ ಟೀನೂ ಬೇಡ, ಏನೂ ಬೇಡ ಅಂತ ಅಮ್ಮಮ್ಮ ಸಿಟ್ಟಲ್ಲಿ ಹೇಳ್ತಾರೆ. ಎಷ್ಟು ಹೊತ್ತು ಕಾದರೂ ಟೀ ಮಾಡುವವ ಬರೋದೆ ಇಲ್ಲ. ಹರ್ಷನಿಗೆ ಟೆನ್ಶನ್. ಅಪ್ಪ ಮಗಳಿಗಿಂತ ಹೆಚ್ಚಾಗಿದ್ದ ಭುವಿ, ಅಮ್ಮಮ್ಮಂಗೆ ಇದ್ದಕ್ಕಿದ್ದಂತೆ ಏನಾಯ್ತು, ಇಬ್ಬರೂ ಪಕ್ಕಾ ಅತ್ತೆ ಸೊಸೆ ಥರ ಆಡ್ತಿದ್ದಾರಲ್ಲಾ ಅಂತ. ಈ ಇಬ್ಬರ ನಡುವೆ ಸಿಕ್ಕಿಕೊಂಡ ತನ್ನ ಕತೆ ನೆನೆಸಿ ಗಾಬರಿಯಾಗ್ತಾನೆ.
ಸ್ಟಾರ್ ಸುವರ್ಣದಲ್ಲಿ ಹೊಸ ಶೋ ಅರ್ಧಾಂಗಿ!
ಕೊನೆಗೆ ಹರ್ಷನೇ ಹೋಗಿ ಮೂರೂ ಜನಕ್ಕೂ ಟೀ(Tea) ಮಾಡ್ಕೊಂಡು ಬರ್ತಾನೆ. ಆಗ ಅಮ್ಮಮ್ಮ ಮತ್ತು ಭುವಿ ಮುಕ್ತವಾಗಿ ನಗುತ್ತಾರೆ. ಆಗ ಹರ್ಷನಿಗೆ ಇದು ಅತ್ತೆ ಸೊಸೆ ಪ್ರಾಂಕ್ (prank)ಅಂತ ಗೊತ್ತಾಗುತ್ತೆ. ಹೋದ ಜೀವ ಬಂದ ಹಾಗಾಗುತ್ತೆ.
ಇಂಥಾ ಸೀಕ್ವೆನ್ಸ್ ಬಂದಾಗ ಜನ ಕನ್ನಡತಿಯನ್ನು ಇಷ್ಟ ಪಟ್ಟು ನೋಡ್ತಾರೆ. ಮುಂದೇನಾಗ್ಬಹುದು ಅಂತ ಕಾತರದಿಂದ ಕಾಯ್ತಾರೆ.
ಭುವಿ ಪಾತ್ರದಲ್ಲಿ ರಂಜನಿ ರಾಘವನ್(Ranjini Raghavan), ಹರ್ಷನ ಪಾತ್ರದಲ್ಲಿ ಕಿರಣ್‌ರಾಜ್(Kirn raj) ಹಾಗೂ ಅಮ್ಮಮ್ಮನ ಪಾತ್ರದಲ್ಲಿ ಚೀತ್ಕಳಾ ಬಿರಾದಾರ್(Chithkala biradar) ನಟಿಸಿದ್ದಾರೆ.
Jothe Jotheyali : ಆರ್ಯವರ್ಧನ್ ಆಸ್ತಿಯೆಲ್ಲ ಹರ್ಷವರ್ಧನ್ ಪಾಲಾಗುತ್ತಾ? ಅನು ರೂಪದ ರಾಜನಂದಿನಿ ಮಹಿಮೆ ಇದು!