
ಜನಪ್ರಿಯ ಕನ್ನಡ ಧಾರವಾಹಿ ಕನ್ನಡತಿ ನಟಿ ರಂಜನಿ ರಾಘವನ್ ತುಟಿಗೆ ಗಾಯವಾಗಿದೆ. ಪುಟ್ಟಗೌರಿ ಮದುವೆ ಖ್ಯಾತಿಯ ಪುಟ್ಟಗೌರಿ ಸದ್ಯ ಮಿಂಚುತ್ತಿರೋದು ಭುವನೇಶ್ವರಿಯಾಗಿ.
ನಟಿ ಭುವಿಯ ತುಟಿಗೆ ಚಿಕ್ಕದೊಂದು ಗಾಯ ಆಗಿದೆ. ಗಾಯದ ಫೋಟೋ ತೆಗೆದು ಫ್ಯಾನ್ಸ್ ಜೊತೆಗೆ ಶೇರ್ ಮಾಡಿದ್ದಾರೆ ರಂಜನಿ ರಾಘವನ್. ಹಾಗೆಯೇ ಗಾಯದ ಕಾರಣವನ್ನೂ ತಿಳಿಸಿದ್ದಾರೆ.
ಭುವಿ ಮನೆಯಲ್ಲೇ ಹರ್ಷನಿಗೆ ಜೈಲಿನ ದರ್ಶನ ಮಾಡಿಸಿದ ವರು
ಚಿಕ್ಕದಿರಲಿ, ದೊಡ್ಡದಿರಲಿ, ತುಟಿಗೇನಾದ್ರೂ ನೋವಾದ್ರೆ ಹಿಂಸೆ ಅನಿಸುತ್ತೆ ಅಲ್ವಾ..? ನಟಿ ಭುವಿಗೂ ಹಾಗೆ ಆಗಿದೆ. ಅಂದ ಹಾಗೆ ಈ ಗಾಯ ಆಗೋಕೆ ರೀಸನ್ ಸಖತ್ ಇಂಟ್ರೆಸ್ಟಿಂಗ್. ನಮಗೂ, ನಿಮಗೂ ಆಗಿರೋ ಅದೇ ಅನುಭವ ಭುವಿಗೂ ಅಗಿದೆ.
ಹೌದು.. ಮೇಲ್ಮುಖವಾಗಿ ಮಲಗಿ ಕೈಯಲ್ಲಿ ಮೊಬೈಲ್ ಹಿಡಿದು ಸಿನಿಮಾ ನೋಡ್ತಾ ನೋಡ್ತಾ ಮೊಬೈಲ್ ಕೈಜಾರಿ ಮುಖದ ಮೇಲೆ ಬಿದ್ದಿದೆ. ಅಬ್ಬಾ ಅದೊಂದು ಕ್ಷಣ ಹೇಗೆ ನೋವಾಗುತ್ತಲ್ವಾ ? ಸದ್ಯ ಭುವಿಗೂ ಅದೇ ಸ್ಥಿತಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.