
ಇದು ಬಿಗ್ ಬಾಸ್ ಮನೆಯ ಈಗಿನ ನಿಯಮವಲ್ಲ, ಸೀಸನ್ 1ರಿಂದಲೂ ಮನೆಯಲ್ಲಿರುವ ಯಾವ ವಸ್ತುವನ್ನಾದರೂ ಸದಸ್ಯರು ಹಾಳು ಮಾಡಿದರೆ ಅಥವಾ ಮುರಿದು ಹಾಕಿದರೆ ಶಿಕ್ಷೆಗೆ ಗುರಿಯಾಗುತ್ತಾರೆ. ಸೀಸನ್ 8ರ ಸದಸ್ಯರು ಹೆಚ್ಚಾಗಿ ಗಾಜಿನ ಲೋಟ ಹೊಡೆದು ಹಾಕುತ್ತಿದ್ದಾರೆ.
ಹೌದು! ಮಂಜು ಪಾವಗಡ, ಅರವಿಂದ್, ವೈಷ್ಣವಿ ನಂತರ ನಿಧಿ ಸುಬ್ಬಯ್ಯ ಬಿಬಿ ಮನೆಯಲ್ಲಿರುವ ಲೋಟ ಒಡೆದು ಹಾಕಿದ್ದಾರೆ. ಪ್ರತಿ ಸ್ಪರ್ಧಿಗೂ ತಕ್ಕ ಶಿಕ್ಷೆ ನೀಡುತ್ತಾರೆ. ನಿಧಿ ಸುಬ್ಬಯ್ಯಗೆ ಕೆಲ ಹಾಡುಗಳನ್ನು ನೀಡಲಾಗಿದೆ. ನಿಧಿ ನೀರು ಕುಡಿಬೇಕು ಅನಿಸಿದಾಗೆಲ್ಲಾ ಒಬ್ಬೊಬ್ಬ ಸ್ಪರ್ಧಿಯ ಬಳಿ ಹೋಗಿ ಸರಿಯಾಗಿ ಹಾಡು ಹೇಳಿದ ನಂತರ ಕೊಟ್ಟಿರುವ ಗ್ಲಾಸ್‌ನಲ್ಲಿ ನೀರು ಕುಡಿಯಬಹುದು. ಬಿಗ್ ಬಾಸ್ ಹೇಳಿರುವ ಪ್ರಕಾರ ನಿಧಿ ಇಂಪಾಗಿ ಹಾಡುತ್ತಿದ್ದಾರೆ. ನಿಧಿ ಧ್ವನಿಗೆ ಸದಸ್ಯರು ಫಿದಾ ಆಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ವೈಷ್ಣವಿ ಇಷ್ಟೊಂದು ವೋಟ್ ಪಡೆದು ಸೇಫ್ ಅಗುತ್ತಿರುವುದು ಈ ಕಾರಣಕ್ಕೆ?
ದಿವ್ಯಾ ಸುರೇಶ್ ಹಾಗೂ ಮಂಜು ಪವಗಡಗೆ 'ಮಡಿಕೇರಿ ಸಿಪಾಯಿ' ಹಾಡು ಹಾಡಿ ನೀರು ಕುಡಿಯುವ ಅವಕಾಶ ಪಡೆದುಕೊಂಡರು. ನಿಧಿ ಸರದಿ ನಂತರ ಯಾರು ಲೋಟ ಮುರಿದು ಹಾಕುತ್ತಾರೆ ಕಾದು ನೋಡಬೇಕಿದೆ.
ಬಿಗ್ ಬಾಸ್ ಮನೆಯ ಬೋಲ್ಡ್ ಹಾಗೂ ಸ್ಟ್ರೇಟ್ ವ್ಯಕ್ತಿ ನಿಧಿ ಸುಬ್ಬಯ್ಯ. ಏನೇ ತಪ್ಪಾದರೂ ಇನ್ನಿತರ ಸ್ಪರ್ಧಿಗಳ ಮುಖಕ್ಕೆ ಉತ್ತರ ನೀಡುತ್ತಾರೆ. ಈ ವಿಚಾರಕ್ಕೆ ನಿಧಿ ಅನೇಕರಿಗೆ ಅಚ್ಚು ಮೆಚ್ಚು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.