
ಇದೇ ತಿಂಗಳು 13ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದ ಕಿರುತೆರೆ ನಟಿ ಕಾವ್ಯ ಗೌಡ ಕೆಲ ದಿನಗಳ ಹಿಂದೆ ದುಬೈನ ಐಷಾರಾಮಿ ಸ್ಥಳಗಳಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ. ಒಂದೊಂದು ಫೋಟೋಗಳನ್ನು ರಿವೀಲ್ ಮಾಡುವ ಮೂಲಕ ಭಾವಿ ಪತಿ ಸೋಮಶೇಖರ್‌ರನ್ನು ಅಭಿಮಾನಿಗಳಿಗೆ ಪರಿಚಯಿಸಿಕೊಟ್ಟಿದ್ದಾರೆ. ಆದರೆ ಕೊರೋನಾ ಸಂಕಷ್ಟದಲ್ಲಿ ಸಮಯದಲ್ಲಿ ಮದುವೆ ಆಗುವುದು ಬೇಡ ಎಂದು ಕಾವ್ಯ ಹಾಗೂ ಸೋಮಶೇಖರ್ ನಿರ್ಧರಿಸಿದ್ದಾರೆ.
ಹೌದು! ತಮ್ಮ ಮದುವೆ ದಿನಾಂಕವನ್ನು ಮುಂದೂಡಿರುವುದರ ಬಗ್ಗೆ ಕಾವ್ಯ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. 'ಮದುವೆ ಎಂಬುದು ಎಲ್ಲರ ಜೀವನದಲ್ಲೂ ತುಂಬಾ ಮುಖ್ಯವಾದ ಗಟ್ಟ. ನನ್ನ ಎಲ್ಲಾ ಆಪ್ತರು ಹಾಗೂ ಇಡೀ ಕುಟುಂಬಸ್ಥರು ಈ ಶುಭ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಬಯಸುತ್ತೇನೆ. ನನ್ನ ಜೀವನದ ಜರ್ನಿಯಲ್ಲಿ ಅದ್ಭುತ ವ್ಯಕ್ತಿಗಳನ್ನು ಭೇಟಿ ಮಾಡಿರುವೆ. ಅವರೆಲ್ಲಾ ನನ್ನ ಜೀವನ ಮತ್ತೊಂದು ಹೊಸ ಜರ್ನಿಗೆ ಸಾಕ್ಷಿಯಾಗಬೇಕು ಎಂಬುದು ನನ್ನ ಆಸೆ. ಅನಿವಾರ್ಯವಾಗಿ ಈಗಿನ ಪರಿಸ್ಥಿತಿ ಕಂಡು ನಾವು ಮದುವೆಯನ್ನು ಮುಂದೂಡಬೇಕಾಗಿದೆ. ಮಾನವೀಯತೆ ದೃಷ್ಠಿಯಿಂದ ನೋಡಿದೆ ಈ ಸಮಯದಲ್ಲಿ ಸಮಾರಂಭ ಮಾಡುವುದು ಸರಿ ಅಲ್ಲ. ಅದೆಷ್ಟೋ ಜನರು ಸಂಕಷ್ಟದಲ್ಲಿದ್ದಾರೆ. ಪರಿಸ್ಥಿರಿ ಆದಷ್ಟು ಬೇಗ ಸುಧಾರಿಸಬೇಕು, ದೇವರಲ್ಲಿ ಪ್ರಾರ್ಥಿಸುತ್ತೇನೆ' ಎಂದು ಕಾವ್ಯ ಬರೆದುಕೊಂಡಿದ್ದಾರೆ.
ಬಾಳ ಸಂಗಾತಿಯನ್ನು ಪರಿಚಯಿಸಿಕೊಟ್ಟ ನಟಿ ಕಾವ್ಯ ಗೌಡ; ದುಬೈನಲ್ಲಿ ಪೋಟೋ ಶೂಟ್!
'ಒಬ್ಬ ಸೆಲೆಬ್ರಿಟಿ ಆಗಿ ಈಗಿನ ಪರಿಸ್ಥಿತಿ ಬಗ್ಗೆ ಚಿಂತಿಸಿ ನೀವು ಇಂತಹ ನಿರ್ಧಾರ ತೆಗೆದುಕೊಂಡಿರುವುದು ನಿಮ್ಮ ಒಳ್ಳೆಯ ಗುಣವನ್ನು ಎತ್ತು ತೋರಿಸುತ್ತದೆ.ನಿಮಗೆ ಸರಿಯಾದ ವ್ಯಕ್ತಿ ಜೋಡಿಯಾಗುತ್ತಿದ್ದಾರೆ. ಮದುವೆ ಕಡವಾದರೂ ಚಿಂತೆ ಇಲ್ಲ. ಆರೋಗ್ಯ ಮುಖ್ಯ' ಎಂದು ನೆಟ್ಟಿಗರು ಕಾವ್ಯ ಪೋಸ್ಟ್‌ಗೆ ಕಾಮೆಂಟ್ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.