ಮೈಸೂರಿನಲ್ಲಿ ಎರಡು ಅಂತಸ್ತಿನ ಮನೆ ಖರೀದಿಸಿದ ಯುಟ್ಯೂಬರ್. ಕಾಮಿಡಿ ವಿಡಿಯೋಗೆ ಇಷ್ಟೋಂದು ಹಣ ಬರುತ್ತಾ ಎಂದ ನೆಟ್ಟಿಗರು.....
ದಿನದಿಂದ ದಿನಕ್ಕೆ ಯುಟ್ಯೂಬ್‌ನಲ್ಲಿ ಕನ್ನಡ ವಿಡಿಯೋಗಳನ್ನು ಕ್ರಿಯೇಟ್ ಮಾಡುವ ಕ್ರಿಯೇಟಿವ್ ಮೈಂಡ್‌ಗಳು ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಸ್ನೇಹಿತರು, ಅಮ್ಮ ಮಗಳು, ಗಂಡ ಹೆಂಡತಿ ಅಥವಾ ಗರ್ಲ್ ಫ್ರೆಂಡ್ ಬಾಯ್‌ಫ್ರೆಂಡ್ ಸೇರ್ಕೊಂಡು ವಿಡಿಯೋ ಮಾಡ್ತಾರೆ...ಆದರೆ ಇಲ್ಲಿ ಅಣ್ಣ ತಂಗಿ ವಿಡಿಯೋ ಮಾಡಿ ಫೇಮಸ್ ಆಗಿದ್ದಾರೆ. ಬೇರೆಯವರ ಬಗ್ಗೆ ಅಪಹಾಸ್ಯ ಮಾಡುವ ಈ ಕಾಲದಲ್ಲಿ ತಮ್ಮ ಬಗ್ಗೆ ತಾವೇ ಹಾಸ್ಯ ಮಾಡಿಕೊಂಡು ಜನರು ನಗಿಸುತ್ತಾರೆ. ಕೊರೋನಾ ಲಾಕ್ ಡೌನ್ ಸಮಯದಲ್ಲಿ ನಿಖಿಲ್ ರವೀಂದ್ರ ಮತ್ತು ನಿಶಾ ರವೀಂದ್ರ ವಿಡಿಯೋಗಳು ಸಖತ್ ವೈರಲ್ ಆಯ್ತು. ಈಗ ಲಕ್ಷಾಂತ ಫಾಲೋವರ್ಸ್ ಹೊಂದಿದ್ದಾರೆ.
ಹೌದು! ಯುಟ್ಯೂಬ್‌ನಲ್ಲಿ ಸುಮಾರು 9 ಲಕ್ಷದ 55 ಸಾವಿರ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದು, ಇನ್‌ಸ್ಟಾಗ್ರಾಂನಲ್ಲಿ 1 ಲಕ್ಷ ಮೂವತ್ತು ಸಾವಿರ ಫಾಲೋವರ್ಸ್ ಇದ್ದಾರೆ. ಹೀಗಾಗಿ ಅಣ್ಣ ತಂಗಿ ಕ್ರಿಯೇಟ್ ಮಾಡುವ ಪ್ರತಿಯೊಂದು ವಿಡಿಯೋ ಮಿಲಿಯನ್ ಅಂದ್ರೆ 10 ಲಕ್ಷಕ್ಕೂ ಕಡಿಮೆ ವೀಕ್ಷಣೆ ಇರುವುದಿಲ್ಲ. ಈ ಆದಾಯದಿಂದ ಅಣ್ಣ ತಂಗಿ ಮೈಸೂರಿನಲ್ಲಿ ಎರಡು ಅಂತಸ್ತಿನ ಮನೆ ಖರೀದಿಸಿದ್ದಾರೆ. ಮನೆ ಪಕ್ಕದಲ್ಲಿ ಸಣ್ಣದಾಗಿ ಗಾರ್ಡನ್ ಮಾಡಿಕೊಂಡು ಎರಡು ನಾಯಿಗಳನ್ನು ಸಾಕುತ್ತಿದ್ದಾರೆ. ಇದನ್ನು ಹೊರತಾಗಿ ಫಾರ್ಮಸಿ ಕೂಡ ಹೊಂದಿದ್ದಾರೆ. ಸದ್ಯದಲ್ಲಿ ಬೆಂಗಳೂರಿನಲ್ಲಿ ಜಿಮ್ ಓಪನ್ ಮಾಡುವ ಪ್ಲ್ಯಾನ್ ಕೂಡ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ನಿಖಿಲ್ ಮತ್ತು ಯುಟ್ಯೂಬರ್ ಮಧು ಗೌಡ ನಿರ್ಶ್ಚಿತಾರ್ಥ ನಡೆದಿದೆ. ಕೆಲವೇ ತಿಂಗಳಿನಲ್ಲಿ ಮದುವೆ ನಡೆಯಲಿದೆ.
ಬೆಂಗಳೂರಿನ ಕುಬೇರನ ಮೂಲೆಯಲ್ಲಿ ಸೈಟ್ ಖರೀದಿಸಿದ ಮಧು ಗೌಡ-ನಿಖಿಲ್; ನೆಟ್ಟಿಗರು ಕಣ್ಣು ಬಿತ್ತು!
ಇನ್ನು ಯುಟ್ಯೂಬ್‌ನಿಂದ ಇಷ್ಟೋಂದು ದುಡಿಮೆ ಮಾಡ್ಬೋದಾ? ಖಂಡಿತಾ ಮಾಡ್ಬೋದು ವೀಕ್ಷಣೆ ಪಡೆದಷ್ಟು ಹಣ ಬರುತ್ತದೆ ಅಲ್ಲ ಅನೇಕ ಖಾಸಗಿ ಬ್ರ್ಯಾಂಡ್‌ಗಳ ಜಾಹೀರಾತುಗಳು ಪ್ರಚಾರಕ್ಕೆ ಸಂಪರ್ಕ ಮಾಡಿದಾಗ ಕನಿಷ್ಟ ಅಂದ್ರು 15 ರಿಂದ 20 ಸಾವಿರ ಪಡೆಯುತ್ತಾರೆ. ನಿಖಿಲ್ ಮತ್ತು ನಿಶಾ ಆದಾಯದ ಬಗ್ಗೆ ಎಲ್ಲೂ ರಿವೀಲ್ ಆಗಿಲ್ಲ. ಇದು ಏನಿದ್ದರೂ ನೆಟ್ಟಿಗರ ಲೆಕ್ಕಾಚಾರವಾಗಿದೆ. ನಿಖಿಲ್ ತಮ್ಮ ಬ್ಯುಸಿನೆಸ್ ನೋಡಿಕೊಳ್ಳುತ್ತಿದ್ದಾರೆ, ನಿಶಾ ಈಗ ಎಂಬಿಎ ಸೇರಿಕೊಂಡಿದ್ದಾರೆ. ತಂದೆ ಇಲ್ಲದ ಕಾರಣ ಚಿಕ್ಕ ವಯಸ್ಸಿಗೆ ಜವಾಬ್ದಾರಿಯನ್ನು ತೆಗೆದುಕೊಂಡು ಮನೆ ನಡೆಸುತ್ತಿದ್ದಾರೆ. ಇನ್ನು ನಿಖಿಲ್ ಮತ್ತು ಮಧು ಮದುವೆಗೂ ಮುನ್ನವೆ ಬೆಂಗಳೂರಿನ ರಾಜ ರಾಜೇಶ್ವರಿ ನಗರದ ಸಮೀಪ ಇರುವ ಲೇಔಟ್‌ನಲ್ಲಿ ಸೈಟ್ ಖರೀದಿಸಿದ್ದಾರೆ. ಒಟ್ಟಾರೆ ಕೊರೋನಾ ಸಮಯದಲ್ಲಿ ಸೋಷಿಯಲ್ ಮೀಡಿಯಾದಿಂದ ಬದುಕು ಕಟ್ಟಿಕೊಂಡರವು ಹಲವರು.
ನಿಶ್ಚಿತಾರ್ಥ ಆದ್ಮೇಲೆ ಮಾತನಾಡೋಕೆ ಭಯ ಶುರುವಾಗಿದೆ; ಕಣ್ಣೀರಿಟ್ಟ ಯುಟ್ಯೂಬರ್ ಮಧು- ನಿಶಾ!