ಇದು ಕಾಕತಾಳೀಯ! ಲಕ್ಷ್ಮಿ ಬಾರಮ್ಮ ಖ್ಯಾತಿಯ ಚಿನ್ನು-ಗೊಂಬೆ ಇಬ್ಬರೂ ಮೊದಲ ಮಗುವಿನ ನಿರೀಕ್ಷೆಯಲ್ಲಿ!

By Gowthami K  |  First Published Jun 1, 2024, 5:55 PM IST

ಲಕ್ಷ್ಮಿ ಬಾರಮ್ಮ ಸೀರಿಯಲ್‌ ಮೂಲಕ ಖ್ಯಾತಿಗಳಿಸಿದ ಚಿನ್ನು ಮತ್ತು ಗೊಂಬೆ ಇಬ್ಬರೂ ನಟಿಯರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮೇ ತಿಂಗಳಿನಲ್ಲೇ ಗರ್ಭಿಣಿಯಾಗಿರುವ ಸಂತಸವನ್ನು ಹಂಚಿಕೊಂಡಿದ್ದಾರೆ.


ಬೆಂಗಳೂರು (ಜೂ.1): ಲಕ್ಷ್ಮಿ ಬಾರಮ್ಮ ಸೀರಿಯಲ್‌ ಮೂಲಕ ಖ್ಯಾತಿಗಳಿಸಿದ ಚಿನ್ನು ಮತ್ತು ಗೊಂಬೆ ಇಬ್ಬರೂ ನಟಿಯರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಚಿನ್ನು ಖ್ಯಾತಿಯ ಕವಿತಾ ಗೌಡ ಅವರು ಮೇ ತಿಂಗಳ ಮೊದಲ ವಾರದಲ್ಲಿ ತಾವು ತಾಯಿಯಾಗುತ್ತಿರುವ ಬಗ್ಗೆ ಸಂಭ್ರಮ ಹಂಚಿಕೊಂಡಿದ್ದರು. ಇದೀಗ ಗೊಂಬೆ ಖ್ಯಾತಿಯ ನೇಹಾ ಗೌಡ ಕೂಡ ಮೇ ತಿಂಗಳ ಕೊನೆಯ ವಾರದಲ್ಲಿ ತಮ್ಮ ಮೊದಲ ತಾಯ್ತತನದ ಬಗ್ಗೆ ಅಭಿಮಾನಿಗಳಲ್ಲಿ ಖುಷಿಯನ್ನು ಹಂಚಿಕೊಂಡಿದ್ದಾರೆ.

ನಟಿ ಕವಿತಾ ಮತ್ತು ನಟ ಚಂದನ್ ಕುಮಾರ್ ಮೇ ತಿಂಗಳ 5 ನೇ ತಾರೀಕಿನಂದು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದರು. ನಟರಾದ ಕವಿತಾ ಗೌಡ ಮತ್ತು ಚಂದನ್ ಕುಮಾರ್ ಈ ವರ್ಷದ ಅಕ್ಟೋಬರ್‌ನಲ್ಲಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ.

Tap to resize

Latest Videos

ಮೂಲ ಸೀರಿಯಲ್ ಕಥೆಯ ಪ್ರಕಾರ ಸಿಹಿಯ ಜನ್ಮರಹಸ್ಯ ಬಯಲು, ಸಿಹಿ ಹುಟ್ಟಿನ ಕಥೆ ಇದು!

ಇದೀಗ ಲಕ್ಷ್ಮಿ ಬಾರಮ್ಮದ ಗೊಂಬೆ ಅಲಿಯಾಸ್‌ ನೇಹಾ ಗೌಡ ಮತ್ತು ನಟ ಚಂದನ್‌ ಗೌಡ ಕೂಡ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಮೇ 31 ರಂದು ಅಭಿಮಾನಿಗಳ ಜೊತೆಗೆ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

ನೇಹಾ ಗೌಡ ಮತ್ತು ಕವಿತಾ ಗೌಡ ಇಬ್ಬರೂ ಕೂಡ ಉತ್ತಮ ಗೆಳತಿಯರಾಗಿದ್ದು ಕಾಕತಾಳಿಯ ಎಂಬಂತೆ ಇಬ್ಬರ ಗಂಡನ ಹೆಸರು ಕೂಡ ಚಂದನ್‌ ಗೌಡ. ಇಬ್ಬರೂ ಕೂಡ ನಟರೇ ಆಗಿದ್ದಾರೆ. ಲಕ್ಷ್ಮಿ ಬಾರಮ್ಮ ಸೀರಿಯಲ್‌ ನಲ್ಲಿ ಗಂಡನ ಪಾತ್ರದಲ್ಲಿ ಮಿಂಚಿದ್ದ ಚಂದನ್‌ ಗೌಡ ಅವರನ್ನೇ ನಟಿ ಕವಿತಾ ಮದುವೆಯಾಗಿದ್ದಾರೆ. 2021 ಮೇ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ರಿಯಲ್‌ ಲೈಫ್‌ ನಲ್ಲಿ ವಿಕ್ರಮ್‌ -ವೇದಾ ಮಧ್ಯೆ ಸಂಥಿಂಗ್... ಸಂಥಿಂಗ್..., ಲೈಲಾ ಮಜ್ನು ಎಂದ ಫ್ಯಾನ್ಸ್!

ಇನ್ನು ನೇಹಾ ಮತ್ತು ಚಂದನ್‌ ಅವರದ್ದು 30 ವರ್ಷಗಳ ಪ್ರೀತಿ ಬಾಲ್ಯದ ಗೆಳೆಯರೇ ಮದುವೆಯಾಗಿದ್ದಾರೆ. ನೇಹಾ - ಚಂದನ್ ಫೆಬ್ರವರಿ 18, 2018ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಮದುವೆಯಾದ 6 ವರ್ಷಗಳ ಬಳಿಕ ಇದೀಗ ನೇಹಾ - ಚಂದನ್ ದಂಪತಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನೇಹಾ ಪತಿ ಚಂದನ್‌ ಕೂಡ ಈಗ ಕಲರ್ಸ್ ಕನ್ನಡದಲ್ಲಿ ಅಂತರಪಟ ಸೀರಿಯಲ್‌ ನಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. 

ವಿಶೇಷವೆಂದರೆ ಲಕ್ಷ್ಮಿ ಬಾರಮ್ಮ ಸೀರಿಯಲ್‌ ನಲ್ಲಿಇಬ್ಬರೂ ಒಟ್ಟಿಗೇ ನಟಿಸಿದ್ದರು ಚಿನ್ನು (ಲಚ್ಚಿ) ಪಾತ್ರದಲ್ಲಿ ಕವಿತಾ ಗೌಡ ನಟಿಸಿದ್ದರೆ ಗೊಂಬೆ (ಶ್ರುತಿ)  ಪಾತ್ರದಲ್ಲಿ ನೇಹಾ ಗೌಡ ಬಣ್ಣ ಹಚ್ಚಿದ್ದರು. 2013ರಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಬಹುದೊಡ್ಡ ಮತ್ತು ಅತ್ಯಂತ ಹೆಚ್ಚು ಟಿಆರ್‌ಪಿ ತಂದುಕೊಟ್ಟ ಸೀರಿಯಲ್‌ ಆಗಿತ್ತು. ಅಲ್ಲೂ ಸಹ ಚಿನ್ನು ಮತ್ತು ಗೊಂಬೆ ಗಂಡನ ಹೆಸರು ಚಂದನ್‌ ಆಗಿತ್ತು.

ಕಾಕತಾಳೀಯ ಎಂಬಂತೆ ಇಬ್ಬರ ನಿಜ ಜೀವನದಲ್ಲೂ ಚಂದನ್‌ ಎಂಬುವರೇ ಗಂಡನಾಗಿದ್ದಾರೆ. ಒಂದೇ ತಿಂಗಳಲ್ಲಿ ಪೋಷಕರಾಗುತ್ತಿರುವ ಸಂಭ್ರಮ ಹಂಚಿಕೊಂಡಿದ್ದಾರೆ. ಈಗ ಇಬ್ಬರೂ ಒಂದೇ ವರ್ಷದಲ್ಲಿ ತಾಯಿಯಾಗುತ್ತಿದ್ದಾರೆ. ಇದು ದೇವರ ಆಶೀರ್ವಾದವಲ್ಲದೆ ಮತ್ತೇನೂ ಅಲ್ವಾ. 

click me!