ಅಹಂ ಭಾವ ಹಠ ಬೇಕಂದ್ರೆ ಹಾಡುವುದರಲ್ಲಿ ತೋರಿಸಿ; ರಿಯಾಲಿಟಿ ಶೋ ಗಾಯಕಿರುವ ಸುಮಾ ಶಾಸ್ತ್ರಿ ಬುದ್ಧಿ ಮಾತು

By Vaishnavi Chandrashekar  |  First Published Jun 14, 2024, 10:13 AM IST

ರಿಯಾಲಿಟಿ ಶೋ ಗಾಯಕರಿಗೆ ಸಣ್ಣ ಕಿವಿ ಮಾತು ಹೇಳಿದ ಸುಮಾ ಶಾಸ್ತ್ರಿ. ಡೌನ್‌ ಟು ಅರ್ಥ ಇರುವುದು ಹೇಗೆ ಗೊತ್ತಾ?
 


ಕನ್ನಡ ಚಿತ್ರರಂಗದ ಜನಪ್ರಿಯ ಗಾಯಕ ಎಲ್‌ಎನ್‌ ಶಾಸ್ತ್ರಿ ಅವರ ಪತ್ನಿ ಗಾಯಕಿ ಸುಮಾ ಶಾಸ್ತ್ರಿ ಇತ್ತೀಚಿನ ದಿನಗಳಲ್ಲಿ ರಿಯಾಲಿಟಿ ಶೋಗಳ ಜ್ಯೂರಿ ಹಾಗೂ ಮೆಂಟರ್‌ ಆಗಿ ಕಾಣಿಸಿಕೊಂಡಿದ್ದರು. ಗಾಯನದ ಜೊತೆ ಒಂದೆರಡು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ದೊಡ್ಡ ಹೆಸರು ಮಾಡಿರುವ ಗಾಯಕರ ಎದುರು ರಿಯಾಲಿಟಿ ಶೋ ಮೂಲಕ ಬೆಳೆಯುತ್ತಿರುವ ಗಾಯಕರು ಹೇಗೆ ವರ್ತಿಸುತ್ತಾರೆ ಅವರು ಹೇಗೆ ಇದ್ದರೆ ಚಂದ ಎಂದು ಸುಮಾ ಶಾಸ್ತ್ರಿ ಹಂಚಿಕೊಂಡಿದ್ದಾರೆ.

'ಸುಮಾರು 10 ಜನ ಗಾಯಕರಿದ್ದರೆ ಅವರಲ್ಲಿ ಇಬ್ಬರನ್ನು ಹೊರತು ಪಡಿಸಿದರೆ 8 ಜನರಿಗೆ ಹೆಡ್‌ ವೇಟ್‌ ಇರುತ್ತದೆ. ಅವರನ್ನು ಅವರೇ ಸ್ಟಾರ್‌ಗಳು ಎಂದುಕೊಂಡಿದ್ದಾರೆ, ಅದು ಯಾವ ಕಾಲಕ್ಕೂ ಬರಬಾರದು. ಶ್ರೇಯಾ ಘೋಶಾಲ್ ಮತ್ತು ಅನುರಾದ ಭಟ್‌ ನೋಡಿ ಕಲಿತುಕೊಳ್ಳಿ. Down to earth ಯಾವಾಗ ಇರ್ತಿವೋ ಆಗ ಅವಕಾಶಗಳು ನಮ್ಮ ಬಾಗಿಲಿಗೆ ಬರುತ್ತದೆ. ನಮ್ಮ ಹೆಸರನ್ನು ಜನರು ಗುಣಗಾನ ಮಾಡಬೇಕು ಅಂದ್ರೆ ಮೊದಲು ನಾವು ಪ್ಯೂರ್ ಆಗಿರಬೇಕು. ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಹೆಸರು ಬಂತೋ ಬಿಡ್ತೋ ಅಲ್ಲಿಂದ ಹೊರ ಬಂದ ತಕ್ಷಣ ತಲೆನೇ ನಿಲ್ಲುವುದಿಲ್ಲ' ಎಂದು ರಘುರಾಮ್ ಯೂಟ್ಯೂಬ್‌ ಚಾನೆಲ್ ಸಂದರ್ಶನಲ್ಲಿ ಸುಮಾ ಶಾಸ್ತ್ರಿ ಮಾತನಾಡಿದ್ದಾರೆ.

Tap to resize

Latest Videos

ಮಳೆ ನೀರು ಬಿದ್ದ ಹಲಸಿನ ಹಣ್ಣು ತಿಂದಿದ್ದಕ್ಕೆ ಲಿವರ್ ಕ್ಯಾನ್ಸರ್‌; ಶಾಸ್ತ್ರಿ ಸಾವಿನ ಸತ್ಯ ಬಿಚ್ಚಿಟ್ಟ ಪತ್ನಿ

'ಅರ್ಜುನ್ ಜನ್ಯಾ ಅಥವಾ ಹರಿಕೃಷ್ಣ ಅವರಂತೆ ಹೆಸರಾಂತ ಮ್ಯೂಸಿಕ್ ಡೈರೆಕ್ಟರ್‌ಗಳು ಹಾಡಿದೆ ಬಂದು ಹಾಡಿ ಎಂದು ಕೇಳುತ್ತಾರೆ ಅದಕ್ಕೆ ತಕ್ಷಣ ಅವರಿಂದ ಬರುವ ಉತ್ತರವೇ ನಾವು ಟ್ರ್ಯಾಕ್‌ ಎಲ್ಲಾ ಹಾಡುವುದಿಲ್ಲ ನಾವು ಬ್ಯಾಕ್‌ ಸಿಂಗರ್‌ಗಳು ಅಲ್ಲ ನಮ್ದು ಡೈರೆಕ್ಟ್‌ ಆಗಿ ಇಡುತ್ತೀರಾ? ನಾವು ಬಂದು ಹಾಡುತ್ತೀವಿ. ಆಮೇಲೆ ಅವರು ಹೇಳಿದ ಟೈಮ್‌ಗೆ ಶುರು ಮಾಡಬೇಕು ಅಂತಾರಂತೆ. ಇದೆಲ್ಲವೂ ನನ್ನ ಕಿವಿ ಬಿದ್ದಿರುವುದು. ಅಷ್ಟೇ ಅಲ್ಲ ಕಾರ್ಯಕ್ರಮಗಳಿಗೆ ಹೋದರೆ ಅವರಿಗೆಲ್ಲಾ ಬೇರೆ ಕಾರು ಕೊಡಬೇಕು ಅವರದ್ದೇ ಸ್ಪೆಷಲ್ ಎಂಟ್ರಿ ಕೊಡಬೇಕು ಅಂತಾರೆ. ಒಂದೆರಡು ಹಾಡು ಸರಿಯಾಗಿ ಹಾಡಿರುವುದಿಲ್ಲ ಅದು ಹಿಟ್ ಕೂಡ ಆಗಿರುವುದಿಲ್ಲ. ಡೌನ್‌ ಟು ಅರ್ಥ ಇರುವುದು ಹೇಗೆ ಎಂದು ಪ್ರತಿಯೊಬ್ಬ ಸಿಂಗರ್ ಅರ್ಥ ಮಾಡಿಕೊಳ್ಳಬೇಕು. ನಿಮಗೆ ಅಹಂ ಭಾವ ಮತ್ತು ಹಠ ಬೇಕಾ? ಅದನ್ನು ಹಾಡುವುದರಲ್ಲಿ ತೋರಿಸಿ' ಎಂದು ಸುಮಾ ಶಾಸ್ತ್ರಿ ಹೇಳಿದ್ದಾರೆ.  

ನಿದ್ರೆಯಲ್ಲಿ ಜರ್ಕ್‌ ಅಥವಾ ಬೆಚ್ಚಿ ಬೀಳುವವರಿಗೆ ಪರಿಹಾರ ಕೊಟ್ಟ ಕಿರುತೆರೆ ನಟಿ ಕಾವ್ಯಾ ಶಾಸ್ತ್ರಿ

'ರಿಯಾಲಿಟಿ ಶೋ ಗಾಯಕರಿಗೆ ಸಿನಿಮಾದಲ್ಲಿ ಹಾಡಲು ಅವಕಾಶ ಸಿಗುತ್ತೋ ಇಲ್ವೋ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿ ಬಿಡುತ್ತಾರೆ. ಅನೇಕ ಹಳೆ ಗಾಯಕರು ಹೆಸರು ದುಡ್ಡು ಮಾಡಿದ್ದು ಶೋಗಳ ಮೂಲಕವೇ. ಶೋಗಳಲ್ಲಿ ಹಾಡಿ ಯಶಸ್ವಿಯಾದ ವ್ಯಕ್ತಿ ಎಲ್ಲಿ  ಬೇಕಿದ್ದರೂ ಹಾಡಬಹುದು' ಎಂದಿದ್ದಾರೆ ಸುಮಾ ಶಾಸ್ತ್ರಿ. 

click me!